ಮಾತು, ಮನಸ್ಸು ಮತ್ತು ಕರ್ಮಗಳಿಂದ ಯಾವ ಜೀವಿಗೂ ನೋವನ್ನುಂಟುಮಾಡದಿರುವುದು. ದುಃಖಿಗಳ ದುಃಖಗಳನ್ನು ಕಂಡು ಮರುಗುವುದಲ್ಲದೇ ಅವರ ದುಃಖಗಳನ್ನು ದೂರ ಮಾಡಲು ನಮ್ಮ ಶಕ್ತಿಯನ್ನು ಮೀರಿ ಪ್ರಯತ್ನಿಸುವುದು ‘ದಯೆ’ ಎಂದೆನಿಸುವುದು. ಇಂಥ ದಯಾಗುಣವು ಧರ್ಮಕ್ಕೆ ಆಧಾರ ಸ್ವರೂಪವಾಗಿದೆ. ದಯೆಯಿಲ್ಲದ ಧರ್ಮವನ್ನು ಕಲ್ಪಿಸಿಕೊಳ್ಳುವುದೂ ಸಾಧ್ಯವಿಲ್ಲ.

ಒಂದು ವೇಳೆ ಅಂಥ ಧರ್ಮವಿದ್ದರೂ ಅದು ಪ್ರಯೋಜನಕಾರಿಯಾದ ಧರ್ಮವಲ್ಲ. ಈ ಕಾರಣಕ್ಕಾಗಿಯೇ ಬಸವಣ್ಣನವರು ‘ದಯವಿಲ್ಲದ ಧರ್ಮ ಅದೇವುದಯ್ಯ?’ ಎಂದು ಕೇಳುತ್ತಾರೆ. ದಯೆ ಇಲ್ಲದ ಧರ್ಮವು ಏನು ತಾನೆ ಮಾಡಬಲ್ಲುದು? ದಯೆ ಇಲ್ಲದೆ ತಾವು ಧರ್ಮಿಗಳೆಂದು ಬಡಾಯಿ ಕೊಚ್ಚಿಕೊಳ್ಳುವವರನ್ನು ಭಗವಂತನೂ ಮೆಚ್ಚಲಾರನು. ಆದ್ದರಿಂದ ದಯವೇ ಧರ್ಮದ ಮೂಲವೆಂದು ಅವರು ಸ್ಪಷ್ಟಪಡಿಸುತ್ತಾರೆ.

ಇತರರ ದುಃಖಗಳನ್ನು ಕಂಡು ಸಂತಸಪಡುವುದು ಮನಸ್ಸಿನ ಮಾಲಿನ್ಯದ ಸಂಕೇತವಾಗಿದೆ. ಈ ರೀತಿಯ ಮನಸ್ಥಿತಿ ಹೊಂದಿರುವ ಯಾವ ಮನುಷ್ಯನೂ ಮಾನಸಿಕವಾಗಿ ನೆಮ್ಮದಿಯನ್ನು ಹೊಂದಲು ಸಾಧ್ಯವಿಲ್ಲ. ಆದ್ದರಿಂದ ಬದುಕಿನಲ್ಲಿ ಸುಖಶಾಂತಿಗಳನ್ನು ಬಯಸುವವರು ತಮ್ಮ ಹೃದಯವನ್ನು ದಯೆಯಿಂದ ತುಂಬಿಕೊಳ್ಳಬೇಕು. ಇತರರ ದುಃಖಗಳನ್ನು ಕಂಡು ಮನಸ್ಸು ಕರಗಬೇಕು ಮತ್ತು ಇತರರ ಸುಖವನ್ನು ಕಂಡು ಮನಸ್ಸು ಪ್ರಸನ್ನವಾಗಬೇಕು.

ಈ ರೀತಿಯ ಮನಸ್ಸುಳ್ಳವರೇ ನಿಜವಾದ ಧರ್ಮಿಗಳು ಮತ್ತು ಜ್ಞಾನಿಗಳು ಎನಿಸುವರು. ‘ಆತ್ಮವತ್ ಸರ್ವಭೂತೇಷು ಯಃ ಪಶ್ಯತಿ ಸಪಂಡಿತಃ’ ಎಂಬ ಸುಭಾಷಿತದ ಆಶಯವೂ ಕೂಡ ತನ್ನಂತೆ ಇತರರನ್ನು ಕಾಣುವ, ಇತರರ ಬಗ್ಗೆ ಸಂವೇದನಶೀಲನಾಗಿರುವ ವ್ಯಕ್ತಿಯೇ ನಿಜವಾದ ಜ್ಞಾನಿ ಎಂಬುದನ್ನು ಶ್ರುತಪಡಿಸುತ್ತದೆ. ಇಂಥ ಜ್ಞಾನಿಗಳು ಸಕಲ ಜೀವರಾಶಿಗಳಿಗೆ ದಯೆಯನ್ನು ತೋರುವರಷ್ಟೇ ಅಲ್ಲ, ಸಕಲ ಜೀವಿಗಳಲ್ಲಿ ತನ್ನನ್ನು ಕಂಡುಕೊಳ್ಳುವ ಮೂಲಕ ಆತ್ಮದರ್ಶನ ಮಾಡಿಕೊಳ್ಳುವರು.

ದಯೆಯು ಕೂಡ ಅನುಭಾವಿಗಳ ಸಂಗದಂತೆ ಮನಸ್ಸಿನ ಮಲಿನತೆಯನ್ನು ದೂರಮಾಡುವ ಸಾಧನವಾಗಿದೆ. ಅಧ್ಯಾತ್ಮ ಸಾಧಕರು ಸದಾ ದಯಾಭಾವವುಳ್ಳವರಾಗಿರುತ್ತಾರೆ. ಸಕಲ ಜೀವಿಗಳಲ್ಲಿ ದಯೆಯನ್ನು ಹೊಂದಿದ ಅವರ ಮನಸ್ಸು ಪರಿಶುದ್ಧವಾಗಿರುತ್ತದೆ. ಇತರರ ದುಃಖವನ್ನು ಕಂಡು ಅವರು ಕೇವಲ ಅಳುತ್ತ ಕುಳಿತುಕೊಳ್ಳುವವರಲ್ಲ. ನೆರೆಮನೆಯ ದುಃಖಕ್ಕೆ ಬರೀ ಅಳುವವರನ್ನು ಭಗವಂತನೂ ಮೆಚ್ಚಲಾರ ಎನ್ನುತ್ತಾರೆ ಬಸವಣ್ಣನವರು.

ಆದ್ದರಿಂದ ಜ್ಞಾನಿಗಳು, ಅಧ್ಯಾತ್ಮ ಸಾಧಕರು ದುಃಖಿತರಿಗೆ ಬರೀ ಶಾಬ್ದಿಕ ಸಾಂತ್ವನ ತೋರದೆ ಅವರ ದುಃಖವನ್ನು ದೂರಮಾಡುವ ಎಲ್ಲ ಪ್ರಯತ್ನಗಳನ್ನು ಮಾಡಿ ಭಗವಂತನಿಗೆ ಪ್ರಿಯರೆನಿಸುತ್ತಾರೆ. ದಯೆ ಅಥವಾ ಅಹಿಂಸೆಯೇ ಪ್ರಧಾನವಾಗಿರುವ ಧರ್ಮವನ್ನು ಶ್ರೇಷ್ಠ ಧರ್ಮವೆಂದು ಕರೆಯಲಾಗಿದೆ. ಜಗತ್ತಿನ ಎಲ್ಲ ಪ್ರಮುಖ ಧರ್ಮಗಳು ಸಕಲ ಜೀವಿಗಳಲ್ಲಿ ದಯೆಯ ಭಾವವನ್ನು ಹೊಂದಿರಬೇಕು ಎಂಬುದನ್ನೇ ಬೋಧಿಸುತ್ತವೆ. ಯಾರೂ ಯಾರೊಡನೆಯೂ ದ್ವೇಷಭಾವವುಳ್ಳವರಾಗಬಾರದು.

‘ಮಜಹಬ ನಹೀಂ ಸಿಖಾತಾ ಆಪಸಮೆ ವೈರ ರಖನಾ’ ಎಂಬ ಕವಿವಾಣಿ ಬದುಕಿನ ಸೂತ್ರವಾಗಬೇಕು. ಏಕೆಂದರೆ ಜೀವಿಯೇ ಮತ್ತೊಂದು ಜೀವಿಯ ಸಹಾಯಕ್ಕೆ ಬರಲು ಸಾಧ್ಯ. ಆದ್ದರಿಂದ ವೈರವನ್ನು ಸಾಧಿಸದೇ ಜೀವಿಗಳಲ್ಲಿ ದಯಾಭಾವವುಳ್ಳವರಾಗಬೇಕು. ಎಲ್ಲ ಜೀವಿಗಳನ್ನು ತನ್ನ ಪ್ರಾಣಕ್ಕಿಂತ ಹೆಚ್ಚು ಪ್ರೀತಿಸಬೇಕು. ಇದುವೇ ‘ದಯವೇ ಧರ್ಮದ ಮೂಲ’ ಎಂಬ ಬಸವಣ್ಣನವರ ವಚನದ ಆಶಯವಾಗಿದೆ. ಈ ಆಶಯದಂತೆ ನಡೆಯುವುದೇ ನಿಜವಾದ ಧರ್ಮವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.