ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಂತರಂಗ: ಹಾಸ್ಟೆಲ್‌ಗೆ ಬಂದಿರುವೆ. ಮನೆ ನೆನಪು ಹೆಚ್ಚು ಬರುತ್ತದೆ.. ಏನು ಮಾಡೋದು?

ಅಂತರಂಗ ಅಂಕಣ ಅಕ್ಷರ್ ದಾಮ್ಲೆ ಅವರಿಂದ
ಅಕ್ಷರ್ ದಾಮ್ಲೆ
Published 6 ಜುಲೈ 2024, 0:14 IST
Last Updated 6 ಜುಲೈ 2024, 0:14 IST
ಅಕ್ಷರ ಗಾತ್ರ

l→ಪದವಿ ಓದಲು ಮನೆಯಿಂದ ಹಾಸ್ಟೆಲ್‌ಗೆ ಬಂದಿರುವೆ. ಆದರೆ ಮನೆಯ ನೆನಪು ಹೆಚ್ಚು ಬರುತ್ತದೆ. ಓದಲು ಆಗುತ್ತಿಲ್ಲ. ಏನು ಮಾಡುವುದು?

ಈ ಪ್ರಶ್ನೆಯನ್ನು ನೋಡಿದಾಗ ನನಗೆ ನನ್ನ ಕಾಲೇಜಿನ ದಿನಗಳ ನೆನಪಾಯಿತು. 12ನೇ ತರಗತಿಯವರೆಗೆ ಮನೆಯಿಂದಲೇ ಹೋಗುತ್ತಿದ್ದ ನನಗೆ ಪದವಿ ಓದಲು ದೂರದ ಊರಿಗೆ ಹೋದಾಗ ಮನೆಯ ನೆನಪಾದದ್ದು ಸುಳ್ಳಲ್ಲ. ಕೆಲವೊಂದು ಬಾರಿ ಕರೆ ಮಾಡಿ ಅತ್ತಿದ್ದೂ ಇದೆ. ಅಥವಾ ಕರೆಯಾಗುವಷ್ಟು ಹೊತ್ತು ಧ್ವನಿಯನ್ನು ದೃಢವಾಗಿಟ್ಟುಕೊಂಡು ಆಮೇಲೆ ಗದ್ಗದಿತನಾದದ್ದೂ ಇದೆ. ನನ್ನ ಜೊತೆಗಿದ್ದ ನನ್ನ ಸೀನಿಯರ್ ಇದನ್ನು ಗಮನಿಸಿದರೂ ಅದನ್ನು ಕೆದಕದೆ ಇನ್ನೇನೋ ಮಾತಿಗೆ ಎಳೆಯುತ್ತಿದ್ದ. ಬಹುಷಃ ಅದು ನನಗೆ ಈ ನೆನಪಿನಿಂದ ಹೊರಬರುವುದಕ್ಕೆ ಒಂದಷ್ಟು ಸಹಾಯ ಮಾಡಿತು. ಜೊತೆಗೆ ಇನ್ನೊಂದು ವಿಚಾರ ನನಗೆ ಅರ್ಥವಾದದ್ದು ಏನೆಂದರೆ, ಉತ್ತಮ ಶಿಕ್ಷಣ ಬೇಕೋ, ಮನೆಯಿಂದ ದೂರ ಹೋಗಲೇ ಬೇಕು ಎಂಬ ಸತ್ಯ. ಆದರೆ ಸಮಸ್ಯೆ ಆಗುವುದೆಲ್ಲಿ ಅಂದರೆ, ಈ ಸತ್ಯವನ್ನು ಅರಿತಿದ್ದರೂ ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ನಾವು ಮನೆಯಲ್ಲೇ ಸಿಕ್ಕಿ ಹಾಕಿಕೊಂಡಿರುತ್ತೇವೆ. ಇದಕ್ಕೆ ಒಂದು ನಮ್ಮ ಮನೆಯವರೊಂದಿಗಿನ ಭಾವನಾತ್ಮಕ ಬೆಸುಗೆ. ಇನ್ನೊಂದು ನಮಗೆ ಮನೆಯಲ್ಲಿ ಸಿಗುವ ಅನುಕೂಲಗಳು. ಮನೆಯಲ್ಲಿದ್ದಾಗ ತಂದೆ- ತಾಯಿಯರು ಮಾಡುವ ಅನೇಕ ಕೆಲಸಗಳು ನಮ್ಮ ಗಮನಕ್ಕೂ ಬಂದಿರುವುದಿಲ್ಲ. ಅಥವಾ ಅವನ್ನು ನಾವು ಅಸಡ್ಡೆಯಿಂದ ಸ್ವೀಕರಿಸಿರುತ್ತೇವೆ. ಅಥವಾ ಹೆತ್ತವರನ್ನು ‘taken for granted’ ಆಗಿ ಪರಿಗಣಿಸಿರುತ್ತೇವೆ. ಆದರೆ ಹಾಸ್ಟೆಲ್ ಗೆ ಹೋದ ಮೇಲೆ ಎಲ್ಲಾ ಕೆಲಸಗಳೂ ನಮ್ಮ ಹೊಣೆಯೇ ಆಗುತ್ತದೆ. ನಮ್ಮ ಜೀವನದ ಜವಾಬ್ದಾರಿ ನಮ್ಮ ಕೈಯಲ್ಲೇ ಇರುತ್ತದೆ. ಅಚಾನಕ್ಕಾಗಿ ಹಾಗಾದಾಗ ಒಂದು ರೀತಿಯ ಅಸಹಾಯಕತೆ ನಮ್ಮಲ್ಲಿ ಮೂಡುತ್ತದೆ. ಕಾರಣವೇನೆಂದರೆ, ಅಲ್ಲಿಯವರೆಗೆ ಇದ್ದಂತಹ support structure ಈಗಿರುವುದಿಲ್ಲ.

ಇದನ್ನು ನಾವು ಯಾವಾಗ ಅರಿಯುತ್ತೇವೆಯೋ ಮತ್ತು ಮನಸ್ಸನ್ನು ನಮ್ಮ ಜೀವನದ ಗುರಿಯತ್ತ ನೆಟ್ಟು ದೃಢಪಡಿಸುತ್ತೇವೆಯೋ, ಆವಾಗ ನಮಗೆ ಮನೆಯ ನೆನಪು ಮತ್ತು ಅದರಿಂದ ಅಧ್ಯಯನಕ್ಕೆ ಆಗುವ ತೊಂದರೆಯನ್ನು ಮೆಟ್ಟಿ ನಿಲ್ಲಲು ಸಾಧ್ಯವಾಗುತ್ತದೆ. ಒಂದಷ್ಟು ದಿನ ನೆನಪುಗಳು ಕಾಡಬಹುದು. ಅಂತಹ ಸಂದರ್ಭಗಳಲ್ಲಿ ಯಾವುದಾದರೂ ಆಸಕ್ತಿಕರ ಚಟುವಟಿಕೆಗಳಲ್ಲಿ ಭಾಗವಹಿಸಿ ಅಥವಾ ತೊಡಗಿಸಿಕೊಳ್ಳಿ. ಉದಾಹರಣೆಗೆ, ಕೊಠಡಿಯನ್ನು ಸ್ವಚ್ಛಗೊಳಿಸುವುದೋ ಅಥವಾ ಬಟ್ಟೆ ಒಗೆಯುವುದೋ ಅಥವಾ ಪುಸ್ತಕಗಳನ್ನು ಜೋಡಿಸುವುದೋ ಅಥವಾ ಬೈಂಡ್ ಹಾಕಿಕೊಳ್ಳುವುದೋ ಅಥವಾ ರೆಕಾರ್ಡ್ ಬರೆಯುವುದೋ... ಹೀಗೆ ನಿಮ್ಮ ಮನಸ್ಸನ್ನು ಸೆಳೆಯಬಲ್ಲಂತಹ ಚಟುವಟಿಕೆಗಳನ್ನು ನೀವು ಆಯ್ಕೆ ಮಾಡಿಕೊಂಡಾಗ ನಿಮಗೆ ನಿಮ್ಮ comfort zone ನಿಂದ ಹೊರಗೆ ಬರುವುದಕ್ಕೆ ಸಾಧ್ಯವಾಗುತ್ತದೆ. ಮತ್ತು ಜೀವನದ ಸವಾಲುಗಳನ್ನು ಮೆಟ್ಟಿ ನಿಲ್ಲಲು ಬಲ ಬರುತ್ತದೆ.⇒v

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT