ನಮ್ಮ ಯಶಸ್ಸಿಗೆ ದೈಹಿಕ ಆರೋಗ್ಯ ಮತ್ತು ದೇಹ ರಚನೆ ಪೂರಕವಾಗಬಹುದೇ ವಿನಾ ಅವೇ ಎಲ್ಲವನ್ನೂ ನಿರ್ಧಾರ ಮಾಡುವುದಿಲ್ಲ ಎನ್ನುತ್ತಾರೆ ಮನಃಶಾಸ್ತ್ರಜ್ಞ ಅಕ್ಷರ ದಾಮ್ಲೆ

ಸಪೂರ ದೇಹ ಹಾಗೂ ಕುಳ್ಳಗಿರುವ ಕಾರಣಕ್ಕೆ ವಿಪರೀತ ಎನ್ನುವಷ್ಟು ಕೀಳರಿಮೆಯನ್ನು ಬೆಳೆಸಿಕೊಂಡಿದ್ದೇನೆ. ಇದು ನನ್ನ ಬೆಳವಣಿಗೆಗೆ ದೊಡ್ಡ ಕುತ್ತಾಗಿದೆ. ಇದರಿಂದ ಹೊರಬರುವುದು ಹೇಗೆ ಎಂದು ತಿಳಿಸಿ ಸರ್.

–ಶ್ರೇಯಾ, ಬೆಂಗಳೂರು

ದೇಹ–ಮನಸ್ಸು ಒಂದಕ್ಕೊಂದು ಬಹಳ ಆಪ್ತವಾದಂತಹವು. ನಮ್ಮ ದೈಹಿಕ ಆಕಾರವು ನಮ್ಮ ಮಾನಸಿಕ ಸ್ಥೈರ್ಯದ ಮೇಲೆ ಪ್ರಭಾವವನ್ನು ಬೀರು ತ್ತದೆ. ಮಾತ್ರವಲ್ಲ, ಎಲ್ಲರಿಗೂ ತಾವು ಚಂದವಾಗಿ ಕಾಣಬೇಕೆಂಬ ಹಂಬಲವೂ ಇರುತ್ತದೆ. ಆದರೆ ಅದರೊಂದಿಗೆ ಗಮನಿಸಬೇಕಾದ ಇನ್ನೊಂದು ಮುಖ್ಯ ಅಂಶವೆಂದರೆ, ನಮ್ಮ ದೈಹಿಕ ಆಕಾರದ ಮೇಲೆ ನಮ್ಮೊಳಗಿರುವ ಜೀವತಂತುಗಳ ಆಧಿಪತ್ಯ ಇರುತ್ತದೆ. ಅಂದರೆ, ನಿಮ್ಮ ದೇಹ ರಚನೆಯ ಹಿಂದೆ ನೀವು ತಂದೆ-ತಾಯಿಯಿಂದ ಪಡೆದುಕೊಂಡು ಬಂದಿರುವಂಥ ಗುಣಲಕ್ಷಣಗಳು ಹೆಚ್ಚಿರುತ್ತವೆ. ಕೆಲವೊಮ್ಮೆ, ನೀವು ಸರಿಯಾಗಿ ಪೌಷ್ಟಿಕಾಂಶಯುಕ್ತ ಆಹಾರವನ್ನು ತಿನ್ನದಿರುವುದೂ ಕುಬ್ಜ ಶರೀರಕ್ಕೆ ಕಾರಣವಾಗಿರಬಹುದು. ಹಾಗಿದ್ದೂ ನೀವು ನಿಮ್ಮ ಸ್ಥೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬಹುದು. ದೈಹಿಕವಾಗಿ ನೀವು ಹೇಗೆ ಕಾಣಿಸುತ್ತಿದ್ದೀರಿ ಎಂಬುದಕ್ಕಿಂತ ಮಾನಸಿಕವಾಗಿ ಹೇಗೆ ನಿಮ್ಮನ್ನು ನೀವು ರೂಪಿಸಿಕೊಂಡಿದ್ದೀರಿ ಎಂಬುದು ಮುಖ್ಯ. ಹಾಗಾಗಿ, ನಮ್ಮ ಯಶಸ್ಸಿಗೆ ದೈಹಿಕ ಆರೋಗ್ಯ ಮತ್ತು ದೇಹ ರಚನೆ ಪೂರಕವಾಗಬಹುದೇ ವಿನಾ ಅವೇ ಎಲ್ಲವನ್ನೂ ನಿರ್ಧಾರ ಮಾಡುವುದಿಲ್ಲ.

12ನೇ ತರಗತಿ ಓದುತ್ತಿದ್ದ ಹುಡುಗಿಯೊಬ್ಬಳು ಒಮ್ಮೆ ನನ್ನ ಬಳಿ ಚಿಕಿತ್ಸೆಗೆ ಬಂದಿದ್ದಳು. ಉದ್ದವಾಗಿ ಇದ್ದುದೇ ಅವಳ ಸಮಸ್ಯೆಯಾಗಿತ್ತು. ತನ್ನ ಉದ್ದದ ಕಾರಣದಿಂದ ಆಕೆಯಲ್ಲಿ ಎಷ್ಟರಮಟ್ಟಿಗೆ ಕೀಳರಿಮೆ ತುಂಬಿಕೊಂಡಿತ್ತು ಅಂದರೆ, ಬೇರೆಯವರೊಡನೆ ಬೆರೆಯುವುದನ್ನೇ ಅವಳು ನಿಲ್ಲಿಸಿದ್ದಳು. ಎಷ್ಟೋ ದಿನ ಕಾಲೇಜಿಗೆ ಹೋಗುವುದಕ್ಕೂ ಹಿಂಜರಿಯುತ್ತಿದ್ದಳು. ತಂದೆ- ತಾಯಿ ಬಹಳ ಎತ್ತರ ಇದ್ದವರು. ಹಾಗಾಗಿ, ಆಕೆಗೆ ದಕ್ಕಿದ್ದ ಎತ್ತರ ಸಹಜವಾಗಿ ಬಂದದ್ದು. ಆದರೆ ಅವಳಿಗೆ ಅದನ್ನು ಒಪ್ಪಿಕೊಳ್ಳುವುದು ಕಷ್ಟವಾಗಿತ್ತು.

ಇದು ದೇಹ ರಚನೆಗಷ್ಟೇ ಸೀಮಿತವಲ್ಲ. ಚರ್ಮದ ಬಣ್ಣದ ಕಾರಣದಿಂದಾಗಿಯೂ ಎಷ್ಟೋ ಬಾರಿ ಜನ ಕೀಳರಿಮೆ ಅನುಭವಿಸುತ್ತಾರೆ. ಆದರೆ, ಜೀವನದಲ್ಲಿ ಔನ್ನತ್ಯಕ್ಕೆ ಏರಲು ದೈಹಿಕ ಸೌಂದರ್ಯಕ್ಕಿಂತಲೂ ಮುಖದಲ್ಲಿ ಬೆಳಕಿರುವುದು ಮುಖ್ಯ. ಆ ಬೆಳಕು ನಿಮ್ಮ ಅಂತಃಸತ್ವದ ಕಾರಣದಿಂದ ಬರುತ್ತದೆಯೇ ಹೊರತು ಬಾಹ್ಯ ಸೌಂದರ್ಯದಿಂದ ಅಲ್ಲ. ಎತ್ತರ ಕಡಿಮೆ ಇದ್ದರೇನಾಯ್ತು, ಸಾಧನೆ ಮಾಡುವುದಕ್ಕೆ ಮೆಟ್ಟಿಲು
ಗಳನ್ನು ನಾವೇ ಸೃಷ್ಟಿ ಮಾಡಿಕೊಳ್ಳಬಹುದಲ್ಲಾ!

ವಿಶ್ವದಲ್ಲಿ ಅನೇಕ ಸಾಧಕರು ಕುಬ್ಜರಾಗಿದ್ದರೂ ದೇಹರಚನೆಯು ತಮ್ಮ ಗುರಿ ಸಾಧನೆಗೆ ಅಡಚಣೆಯಾಗದಂತೆ ಮೆಟ್ಟಿ ನಿಂತವರು. ಉದಾಹರಣೆಗೆ, ಸಚಿನ್ ತೆಂಡೂಲ್ಕರ್ ಅವರನ್ನು ಕ್ರಿಕೆಟ್ ಜಗತ್ತು ಕೊಂಡಾಡುತ್ತದೆ. ಆದರೆ, ಕ್ರಿಕೆಟ್ ಕ್ಷೇತ್ರದಲ್ಲಿ ಇತರ ಆಟಗಾರರಿಗೆ ಹೋಲಿಸಿದರೆ ಅವರು ಕುಳ್ಳಗೆ ಇದ್ದರು. ಅದು ಅವರ ಸಾಧನೆಗೆ ಅಡ್ಡಿಯಾಗಲಿಲ್ಲ. ರಾಷ್ಟ್ರಪತಿ ಅಬ್ದುಲ್ ಕಲಾಂ ತುಂಬಾ ಎತ್ತರದವರಾಗಿರಲಿಲ್ಲ. ಆದರೆ ಅವರ ಸಾಧನೆಗಳು ಬಾನೆತ್ತರಕ್ಕೆ ಏರಿದಂತಹವು. ವಿಶ್ವವಿಖ್ಯಾತ ಹಾಡುಗಾರ್ತಿ, 14 ಗ್ರ್ಯಾಮಿ ಪ್ರಶಸ್ತಿಗಳನ್ನು ಪಡೆದಂತಹ ಲೇಡಿ ಗಾಗಾ ಅವರೂ ಕುಬ್ಜರೇ! ಆದರೆ ಅವರ ಕುಬ್ಜತೆ ಅವರ ಜೀವನದಲ್ಲಿ ಮೈಲಿಗಲ್ಲುಗಳನ್ನು ಸ್ಥಾಪಿಸುವಲ್ಲಿ ಅಡ್ಡಿ ಬರಲಿಲ್ಲ. ಹಾಗಾಗಿ, ನಾನು ಕುಬ್ಜಳಾಗಿದ್ದೇನೆ ಎಂದು ನಿಮಗೆ ನೀವೇ ಹೇಳಿಕೊಂಡು ಮಾನಸಿಕ ಕುಬ್ಜತೆಯನ್ನು ತಂದುಕೊಳ್ಳುವ ಬದಲು, ನೀವು ಏನನ್ನು ಸಾಧಿಸಬೇಕೋ ಅದರ ಕಡೆ ಗಮನಹರಿಸಿ. ಸಾಧಿಸಿದ ಮೇಲೆ, ಈಗ ಕಾಣುತ್ತಿರುವ ಎಲ್ಲ ಸಮಸ್ಯೆಗಳೂ ಕುಬ್ಜವಾಗಿ ಕಾಣಿಸುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.