ಹೌದು ಅನುಮಾನವೇನೂ ಇಲ್ಲ, ಸರ್ಕಾರಕ್ಕೆ ರಾಜಕೀಯ ಉದ್ದೇಶವಿತ್ತು. ಅದಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ಈಗಲೇ ಚುನಾವಣೆ ಮಾಡುವುದು ಬೇಕಿರಲಿಲ್ಲ. ‘ಹದಗೆಟ್ಟು ಹೋಗಿರುವ’ ಪಾಲಿಕೆಯ ಆಡಳಿತದಲ್ಲಿ ಸುಧಾರಣೆ ತರಬೇಕು ಎಂಬುದು ಅದರ ಉದ್ದೇಶವಾಗಿತ್ತೋ ಅಥವಾ ‘ಸಂಭವನೀಯ ಸೋಲ’ನ್ನು ತಪ್ಪಿಸಿಕೊಳ್ಳಬೇಕಿತ್ತೋ ಹೇಳುವುದು ಕಷ್ಟ. ಆದರೆ, ಚುನಾವಣೆ ಮುಂದೂಡಲು ಒಂದು ನೆಪ ಹುಡುಕಬೇಕಿತ್ತು. ಬಿಬಿಎಂಪಿ ಯನ್ನು ತರಾತುರಿಯಲ್ಲಿ ಮೂರು ಭಾಗ ಮಾಡಲು ಒಂದು ಮಸೂದೆ ಸಿದ್ಧ ಮಾಡಿತು.

ಅದನ್ನು ಅಂಗೀಕರಿಸಲು ವಿಶೇಷ ಅಧಿವೇಶನ ಕರೆಯಿತು. ಅದು ವಿಶೇಷ ಅಧಿವೇಶನದಲ್ಲಿ ಅಂಗೀಕರಿಸಬೇಕಿದ್ದ ತುರ್ತು ಮಸೂದೆಯೇ? ಹಾಗೇನೂ ಇರಲಿಲ್ಲ. ಬಿಜೆಪಿಯವರೂ ಬಿಬಿಎಂಪಿಯನ್ನು ವಿಭಜನೆ ಮಾಡಬೇಕು ಎಂದಿದ್ದರು. ಕಾಂಗ್ರೆಸ್ಸಿನವರೂ ಹೇಳಿದ್ದರು. ಹಾಗಿದ್ದರೆ ಇನ್ನೇನು ನಾಳೆ ಚುನಾವಣೆ ನಡೆಯಬೇಕು ಎನ್ನುವಾಗ ವಿಶೇಷ ಅಧಿವೇಶನ ಕರೆದು, ಮಸೂದೆ ಮಂಡಿಸಿ, ಬಿಬಿಎಂಪಿಯನ್ನು ವಿಭಜಿಸಬೇಕಾದ ಅನಿವಾರ್ಯತೆ ಏನಿತ್ತು? ಇದನ್ನು ಸರ್ಕಾರ ಯಾವಾಗಲೋ ಮಾಡಬಹುದಿತ್ತು. ಬಜೆಟ್ ಅಧಿವೇಶನದಲ್ಲಿ ಅಂಗೀಕಾರವಾದ ಹಲವು ಮಸೂದೆಗಳ ಜತೆಗೆ ಇದನ್ನೂ ಮಂಡಿಸಬಹುದಿತ್ತು.

ಶಾಸಕರ ಸಂಬಳ ಹೆಚ್ಚಳದ ಮಸೂದೆ ಜತೆಗೆ ಇದನ್ನೂ ಇಟ್ಟಿದ್ದರೂ ಆಗಬಹುದಿತ್ತು! ಆಗ ಯಾರಿಗೂ ಈಗ ಬಂದ ಹಾಗೆ ಅನುಮಾನ ಬರುತ್ತಿರಲಿಲ್ಲ. ಒಂದು ಸಾರಿ, ಸರ್ಕಾರ ಇಲ್ಲಿ ಏನೋ ರಾಜಕಾರಣ ಮಾಡುತ್ತಿದೆ ಎಂದು ಅನಿಸಿದರೆ ವಿರೋಧ ಪಕ್ಷಗಳೂ ಅದನ್ನೇ ಮಾಡುತ್ತವೆ. ತಾವು ವಿರೋಧ ಪಕ್ಷದವರು ವಿರೋಧ ಮಾಡದಿದ್ದರೆ ಹೇಗೆ ಎಂದು ಹಟಕ್ಕೆ ಬಿದ್ದು ವಿರೋಧ ಮಾಡುತ್ತವೆ! ವಿಧಾನಸಭೆಯಲ್ಲಿ ಈ ಮಸೂದೆಯನ್ನು ವಿರೋಧ ಪಕ್ಷಗಳು ಎಷ್ಟೇ ವಿರೋಧ ಮಾಡಿದರೂ ಸರ್ಕಾರಕ್ಕೆ ಬಹುಮತವಿತ್ತು, ಹೆಚ್ಚು ಚರ್ಚೆಯಾಗದೇ ಅಲ್ಲಿ ಅದು ಅಂಗೀಕಾರವಾಯಿತು. ಹಿರಿಯರು ಇರುವ ಮೇಲ್ಮನೆಗೆ ಮಸೂದೆ ಬಂತು.

ಅಲ್ಲಿ ಅದು ಅಂಗೀಕಾರವಾಗುವುದು ಸಾಧ್ಯವಿಲ್ಲ ಎಂದು ಎಲ್ಲರಿಗೂ ಗೊತ್ತಿತ್ತು. ಏಕೆಂದರೆ ಕೆಳಮನೆಯಲ್ಲಿ ಇರುವ ಸಂಖ್ಯಾಬಲ ಇಲ್ಲಿ ಸರ್ಕಾರಕ್ಕೆ ಇರಲಿಲ್ಲ. ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವೆ ಹಗ್ಗ ಜಗ್ಗಾಟ ಶುರುವಾಯಿತು. ಮಸೂದೆಯನ್ನು ಪಾಸು ಮಾಡದೇ ಸರ್ಕಾರಕ್ಕೆ ಮುಜುಗರ ಮಾಡಬೇಕು ಎಂಬ ಉದ್ದೇಶ ಬಿಟ್ಟರೆ ವಿರೋಧ ಪಕ್ಷಗಳಿಗೆ ಬೇರೆ ಯಾವ ಘನ ಉದ್ದೇಶಗಳೂ ಇದ್ದಂತೆ ಕಾಣಲಿಲ್ಲ. ಬೆಂಗಳೂರು ಪಾಲಿಕೆಯನ್ನು ಮೂರು ಭಾಗ ಮಾಡಿದರೆ ಬೆಂಗಳೂರು ಎಂಬ ಬ್ರ್ಯಾಂಡಿಗೆ ಧಕ್ಕೆಯಾಗುತ್ತದೆ ಎಂಬಂಥ ಭಾವನಾತ್ಮಕ ಸಂಗತಿಗಳನ್ನು ಬಿಟ್ಟರೆ ಮಸೂದೆಯ ಒಳ್ಳೆಯ ಅಥವಾ ಕೆಟ್ಟ ಅಂಶಗಳ ಕುರಿತು ಯಾವುದೇ ಚರ್ಚೆ ಆಗಲಿಲ್ಲ.

ವಾಸ್ತವವಾಗಿ ಅದು ಆ ಮನೆಯ ಕೆಲಸವಾಗಿತ್ತು. ಹೆಚ್ಚು ಚರ್ಚೆ ಮಾಡದೆ ಅಂಗೀಕರಿಸಿ ತನ್ನ ಪರಾಮರ್ಶೆಗೆ ಕಳುಹಿಸಿಕೊಟ್ಟ ಮಸೂದೆ ಕುರಿತು ಮೇಲ್ಮನೆ ಸದಸ್ಯರು ಆಳವಾಗಿ ಚರ್ಚಿಸಬೇಕಿತ್ತು. ಮೇಲ್ಮನೆಯ ಕೆಲಸವೇ ಅದು. ಅದು ಪ್ರತಿಫಲನದ ಕೆಲಸ. ಆದರೆ, ಮೇಲ್ಮನೆ, ಕೆಳಮನೆಯ ಪ್ರತಿಬಿಂಬದಂಥ ಕೆಲಸ ಮಾಡಿತು. ‘ಕೆಳಮನೆಯಲ್ಲಿ ನಿಮಗೆ ಬಹುಮತವಿದೆ ಎಂದು ಅಂಗೀಕರಿಸಿಕೊಂಡ ಮಸೂದೆಯನ್ನು ಮೇಲ್ಮನೆಯಲ್ಲಿ ಅದು ಹೇಗೆ ಅಂಗೀಕರಿಸಿಕೊಳ್ಳುತ್ತೀರಿ ನಾವೂ ನೋಡುತ್ತೇವೆ’ ಎಂಬ ಜಿದ್ದು ಬಿಟ್ಟರೆ ಅಲ್ಲಿ ಬೇರೇನೂ ಇರಲಿಲ್ಲ. ಅವರು ತಮ್ಮ ವಿವೇಕದ ಅನುಸಾರ ಈ ಮಸೂದೆ ಅಂಗೀಕರಿಸಲು ಯೋಗ್ಯವಾದುದು ಅಲ್ಲ ಎಂದು ಅಂದುಕೊಂಡಿದ್ದರೆ ಅದಕ್ಕೆ ಪೂರಕವಾದ ಕಾರಣಗಳು ಏನು ಎಂದು ಚರ್ಚೆಯಲ್ಲಿ ಹೇಳಬೇಕಿತ್ತು. ಹಾಗೆ ಆದಂತೆ ಕಾಣಲಿಲ್ಲ.

ರಾಜ್ಯದ ಒಟ್ಟು ವರಮಾನದ ಶೇಕಡಾ 80ರಷ್ಟು ಪಾಲು ಬೆಂಗಳೂರು ಒಂದರಿಂದಲೇ ಬರುತ್ತದೆ. ಪಾಲಿಕೆಯನ್ನು ವಿಭಜಿಸಿದರೆ ಅದರ ಮೇಲೆ ಏನು ಪರಿಣಾಮ ಆಗುತ್ತದೆ, ಜನರ ಜೀವನದ ಮೇಲೆ ಏನು ಅಡ್ಡ ಪರಿಣಾಮ ಆಗುತ್ತದೆ, ಈಗ ಇರುವ ಸಮಸ್ಯೆಗಳು ಪರಿಹಾರ ಆಗುತ್ತವೆಯೇ ಅಥವಾ ಇನ್ನೂ ಉಲ್ಬಣಗೊಳ್ಳುತ್ತವೆಯೇ, ಈಗ ಬೆಂಗಳೂರು ಎದುರಿಸುತ್ತಿರುವ ಸಂಚಾರದ, ಮಾಲಿನ್ಯದ, ದಟ್ಟಣೆಯ ಸಮಸ್ಯೆಗಳಿಗೆಲ್ಲ ಪಾಲಿಕೆ ವಿಭಜನೆ ಉತ್ತರವೇ ಅಲ್ಲವೇ, ವಿಭಜನೆ ಮಾಡಿದರೆ ಪಾಲಿಕೆಯ ವರಮಾನದಲ್ಲಿ ಏರುಪೇರು ಆಗುತ್ತದೆಯೇ ಅಥವಾ ಹೀಗೆಯೇ ಇರುತ್ತದೆಯೇ, ಒಂದು ವೇಳೆ ಏರುಪೇರು ಆದರೆ ಸರ್ಕಾರದ ಬಳಿ ಏನು ಪರಿಹಾರ ಇದೆ, ವಿಭಜನೆ ಮಾಡಲೇಬೇಕು ಎನ್ನುವುದಾದರೆ ಬೇರೆ ಎಲ್ಲಿಯಾದರೂ ಪರಿಹಾರಗಳು ಇವೆಯೇ.

ಇದ್ದರೆ ಅವು ಬೆಂಗಳೂರಿಗೆ ಸ್ವೀಕಾರಾರ್ಹವೇ, ಸರ್ಕಾರಕ್ಕೆ ಬೆಂಗಳೂರು ಪಾಲಿಕೆಯನ್ನು ಮಾತ್ರ ವಿಭಜಿಸಿ ಆಡಳಿತ ಸುಧಾರಣೆ ತರುವ ಕಡೆ ಏಕೆ ಗಮನ, ಬೆಳಗಾವಿ ಜಿಲ್ಲೆಯ ವಿಭಜನೆಯನ್ನು ಅದು ಏಕೆ ಮಾಡುತ್ತಿಲ್ಲ, ಬಿಜೆಪಿ ಸರ್ಕಾರದ ಕೊನೆಯ ದಿನಗಳಲ್ಲಿ 43 ಹೊಸ ತಾಲ್ಲೂಕುಗಳ ರಚನೆಗೆ ನಿರ್ಧರಿಸಲಾಗಿತ್ತು, ಅದು ಇನ್ನೂ ಏಕೆ ಕಾರ್ಯಗತವಾಗಿಲ್ಲ... ಪ್ರಶ್ನೆಗಳು ಒಂದೇ ಎರಡೇ? ವಿರೋಧ ಪಕ್ಷಗಳು ಸರ್ಕಾರಕ್ಕೆ ಮುಜುಗರ ಮಾಡಲೇಬೇಕು ಅಥವಾ ಅದಕ್ಕೆ ಇದ್ದಿರಬಹುದಾದ ದುರುದ್ದೇಶವನ್ನು ಬಯಲು ಮಾಡಬೇಕು ಎನ್ನುವುದಾಗಿದ್ದರೆ ಇಂಥ ಬೇಕಾದಷ್ಟು ಪ್ರಶ್ನೆಗಳನ್ನು ಕೇಳಬಹುದಿತ್ತು. ಕೇಳಲಿಲ್ಲ.

ಸರ್ಕಾರಕ್ಕೆ ಚುನಾವಣೆ ಮುಂದಕ್ಕೆ ಹೋಗುವುದು ಬೇಕಿತ್ತು. ವಿರೋಧ ಪಕ್ಷಗಳಿಗಾದರೂ ಚುನಾವಣೆ ಕೂಡಲೇ ಆಗುವುದು ಬೇಕಿತ್ತೇ? ಯಾವ ಸರ್ಕಾರವೂ ವಿರೋಧ ಪಕ್ಷಗಳು ಹೇಳಿದ ಹಾಗೆ ಆಡಳಿತ ಮಾಡುವುದಿಲ್ಲ. ನೀವು ಹೇಳುವುದನ್ನು ಹೇಳಿ, ನಾವು ಮಾಡುವುದನ್ನು ಮಾಡುತ್ತೇವೆ ಎಂದೇ ಅಲ್ಲವೇ ಎಲ್ಲ ಸರ್ಕಾರಗಳು ಹೇಳುವುದು? (Opposition has the say, Government has the way.) ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತ ಇದೆ. ಅದು ಬಿಬಿಎಂಪಿಯನ್ನು ಎರಡೋ ಮೂರೋ ಭಾಗ ಮಾಡಬೇಕು ಎನ್ನುತ್ತಿದೆ. ‘ಮಾಡಲಿ’ ಎಂದು ಮಸೂದೆಯನ್ನು ಅಂಗೀಕರಿಸಿ ಪಾಲಿಕೆಗೆ ಚುನಾವಣೆ ಆಗುವಂತೆ ಮಾಡಿ ಅದೇ ವಿಷಯವನ್ನು ಇಟ್ಟುಕೊಂಡು ವಿರೋಧ ಪಕ್ಷಗಳು ಜನರನ್ನು ಎದುರಿಸ ಬಹುದಿತ್ತಲ್ಲ?

ಪಾಲಿಕೆಯನ್ನು ಮೂರು ಭಾಗ ಮಾಡುವುದರಿಂದ ಬ್ರ್ಯಾಂಡ್ ಬೆಂಗಳೂರಿಗೆ ಧಕ್ಕೆ ಆಗುತ್ತದೆಯೇ ಇಲ್ಲವೇ ಎಂದು ಜನರು ಬಹುಶಃ ತೀರ್ಮಾನ ಮಾಡುತ್ತಿದ್ದರು. ಆಡಳಿತ ಪಕ್ಷಕ್ಕೆ ಸೋಲಾಗಿದ್ದರೆ ವಿರೋಧ ಪಕ್ಷಗಳಿಗೆ ಅದಕ್ಕಿಂತ ಸಂತೋಷದ ಸಂಗತಿ ಇನ್ನೇನು ಇತ್ತು? ವಿಧಾನ ಪರಿಷತ್ತಿನಲ್ಲಿ ಒಂದಲ್ಲ ಎರಡಲ್ಲ ಮೂರು ದಿನ ‘ಚರ್ಚೆ’ ನಡೆಯಿತು. ಅಲ್ಲಿ ಸರ್ಕಾರವನ್ನು ಹತಾಶೆಗೊಳಿಸುವ ಯತ್ನಗಳು ಬಿಟ್ಟರೆ ಫಲಪ್ರದ ಎನಿಸುವಂಥದು ಮತ್ತೇನೂ ನಡೆಯಲಿಲ್ಲ. ಮೇಲ್ಮನೆಯ ಕೆಲಸ ಏನು ಎಂದರೆ, ‘ಸಾರ್ವಜನಿಕರಿಗೆ ಮಾಹಿತಿ ನೀಡುವುದು ಮತ್ತು ಸರ್ಕಾರದ ಕ್ರಿಯೆಗಳ ಕುರಿತು ಚರ್ಚೆ ಮಾಡುವುದು.’ ಆದರೆ, ಸರ್ಕಾರದ ನಿರ್ಣಯಕ್ಕೆ ಸಡ್ಡು ಹೊಡೆಯುವುದೇ ತಮ್ಮ ಕೆಲಸ ಎನ್ನುವಂತೆ ವಿರೋಧ ಪಕ್ಷಗಳು ನಡೆದುಕೊಂಡವು. ಮಸೂದೆಯ ಕುರಿತು ಸಾರ್ವಜನಿಕರ ಈಗಿರುವ ತಿಳಿವಳಿಕೆ ಯಾವ ರೀತಿಯಲ್ಲಿಯೂ ಹೆಚ್ಚಲಿಲ್ಲ.

ಇದು ಬರೀ ಕರ್ನಾಟಕದ ಮೇಲ್ಮನೆಯ ಸಮಸ್ಯೆಯಲ್ಲ. ಹಾಗೂ ಇಂದು ಅಥವಾ ನಿನ್ನೆ ಹುಟ್ಟಿಕೊಂಡ ಸಮಸ್ಯೆಯೂ ಅಲ್ಲ. ಕೆಳಮನೆಯಲ್ಲಿ ಒಂದು ಪಕ್ಷ ಅಧಿಕಾರ ಹಿಡಿದುಕೊಂಡ ಸಂದರ್ಭದಲ್ಲಿ ಅದಕ್ಕೆ ಮೇಲ್ಮನೆಯಲ್ಲಿ ಸಾಮಾನ್ಯವಾಗಿ ಬಹುಮತ ಇರುವುದಿಲ್ಲ. ಅದು ಅಧಿಕಾರ ಕಳೆದುಕೊಳ್ಳುವ ವೇಳೆಗೆ ಅದಕ್ಕೆ ಮೇಲ್ಮನೆಯಲ್ಲಿ ಬಹುಮತ ಸಿಕ್ಕಿರುತ್ತದೆ! ಆಗ ಕೆಳಮನೆಯಲ್ಲಿ ಬೇರೆ ಪಕ್ಷಕ್ಕೆ ಅಧಿಕಾರ ಒಲಿದಿರುತ್ತದೆ. ಈ ಇರಿಸು ಮುರಿಸು ನಿರಂತರವಾಗಿ ಮುಂದುವರಿಯುತ್ತಲೇ ಇರುತ್ತದೆ. ಇದು ನಮ್ಮ ದೇಶದ ಕಥೆ ಮಾತ್ರವಲ್ಲ. ವಿಶ್ವದಾದ್ಯಂತ ಎಲ್ಲೆಲ್ಲಿ ಮೇಲ್ಮನೆಗಳು ಇವೆಯೋ ಅಲ್ಲೆಲ್ಲ ಇದೇ ಆಗಿದೆ. ಇಟಲಿ ಹಾಗೂ ಆಸ್ಟ್ರೇಲಿಯಗಳ ಮೇಲ್ಮನೆಯ ಕಾರ್ಯವೈಖರಿ ಕುರಿತು ದೊಡ್ಡ ಅಧ್ಯಯನವೇ ನಡೆದಿದೆ. ಆಸ್ಟ್ರೇಲಿಯದ ಮೇಲ್ಮನೆಗೆ ಉಳಿದೆಲ್ಲ ದೇಶಗಳ ಮೇಲ್ಮನೆಗಳಿಗೆ ಇರುವುದಕ್ಕಿಂತ ಹೆಚ್ಚಿನ ಅಧಿಕಾರ ಇದೆ.

ಜನರಿಂದ ನೇರವಾಗಿ ಚುನಾಯಿತರಲ್ಲದ, ಸರ್ಕಾರದ ಆಗು ಹೋಗುಗಳಿಗೆ ಕೆಳಮನೆಯಷ್ಟು ನೇರವಾಗಿ ಜವಾಬ್ದಾರಿ ಯಲ್ಲದ ಮೇಲ್ಮನೆಯ ಸದಸ್ಯರು ಕೆಳಮನೆಗಿಂತ ತಾವೇನು ಕಡಿಮೆ ಎನ್ನುವಂತೆ ಪೈಪೋಟಿ ಮಾಡುವಂತೆ ಕಾಣುತ್ತದೆ. ಹೀಗಾಗಿಯೇ ಕೆಳಮನೆಯಲ್ಲಿ ‘ಅಕಾಲಿಕ ಮಳೆ’ ಕುರಿತು ಚರ್ಚೆಯಾದರೆ ಮೇಲ್ಮನೆಯಲ್ಲಿಯೂ ಅದೇ ವಿಷಯದ ಕುರಿತು ಚರ್ಚೆ ಆಗುತ್ತದೆ. ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ, ಬಜೆಟ್ ಮೇಲೆ ಚರ್ಚಿಸುವ ಸಮಯದಲ್ಲಿ ಕೆಳಮನೆಗೂ ಮೇಲ್ಮನೆಗೂ ಅಂಥ ವ್ಯತ್ಯಾಸ ಇದೆ ಎಂದು ಅನಿಸುವುದಿಲ್ಲ. ಹಾಗೆ ನೋಡಿದರೆ ಮೇಲ್ಮನೆಯಲ್ಲಿ ಸಮಯದ ಪರಿವೆಯೇ ಇರುವುದಿಲ್ಲ ಎಂದು ಅನೇಕ ಸಾರಿ ಅನಿಸುತ್ತ ಇರುತ್ತದೆ.

ತಾವೆಲ್ಲ ಹಿರಿಯರು ಎಂಬ ಭಾವನೆ ಮೇಲ್ಮನೆಯ ಸದಸ್ಯರಲ್ಲಿ ಯಾವಾಗಲೂ ಜಾಗೃತವಾಗಿ ಇರುವಂತೆಯೂ ತೋರುತ್ತದೆ. ಅಂದರೆ ತಮಗೆ ಯಾರೂ ಏನೂ ಹೇಳಬಾರದು ಎಂದು ಅವರು ಅಂದುಕೊಂಡಂತಿರುತ್ತದೆ ಎಂದು ನಾವು ಅರ್ಥ ಮಾಡಿಕೊಳ್ಳಬಹುದು! ಕೆಳಮನೆಯ ಪ್ರತಿಬಿಂಬ ಅಥವಾ ಪ್ರತಿಸ್ಪರ್ಧಿ ಎನ್ನುವಂತೆ ಮೇಲ್ಮನೆಯ ಕಲಾಪ ನಡೆಯುತ್ತ ಇದ್ದರೆ ಸಾರ್ವಜನಿಕರಿಗೆ ಅದರಿಂದ ಏನು ಉಪಯೋಗ? ಅವರು ನಾವು ಕೊಡುವ ತೆರಿಗೆಯ ಹಣದಲ್ಲಿ ಅಲ್ಲವೇ ಕಲಾಪ ಮಾಡುವುದು? ಸಂಬಳ ಸಾರಿಗೆ ತೆಗೆದುಕೊಳ್ಳುವುದು? ಹೀಗೆಲ್ಲ ಕೇಳಿದ ಕೂಡಲೇ ಸದನದ ಹಕ್ಕುಚ್ಯುತಿಯ ಬೆದರಿಕೆ ಬರುತ್ತದೆ.

ಕಟಕಟೆಯಲ್ಲಿ ನಿಲ್ಲಿಸಿ ಛೀಮಾರಿ ಹಾಕುವ ತಯಾರಿ ಕಾಣಿಸುತ್ತದೆ. ನ್ಯಾಯಾಂಗ ನಿಂದನೆಯ ಕಾನೂನೇ ಅಡುಗೂಲಜ್ಜಿ ಕಾಲದ್ದು, ಅದು ಇರಬಾರದು ಎಂದು ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿಗಳೇ ಈಗ ಹೇಳುತ್ತಿರುವಾಗ ಜನಪ್ರತಿನಿಧಿಗಳು ಟೀಕೆಗೆ ಅಷ್ಟೇಕೆ ಅಳುಕಬೇಕು? ಅವರು ಸೂಕ್ಷ್ಮ ಆಗಿರಬೇಕಾದುದು ಬೇರೆ ಕಾರಣಗಳಿಗೆ ಅಲ್ಲವೇ? ವಿಧಾನಪರಿಷತ್ತು ರದ್ದಾಗಬೇಕು ಎಂದು ಯಾರಾದರೂ ಅಕಸ್ಮಾತ್ ಹೇಳಿದರೂ ಅವರ ವಿರುದ್ಧ ಹಕ್ಕುಚ್ಯುತಿಯ ಬೆದರಿಕೆ ಬರುತ್ತದೆ. ಪರಿಷತ್ತು ಎಷ್ಟೇ ಉನ್ನತವಾಗಿದ್ದರೂ ಅದು ವಿಧಾನಸಭೆಯ ಸೃಷ್ಟಿ. ವಿಧಾನಸಭೆ ಬೇಕು ಎಂದರೆ ಪರಿಷತ್ತು ಇರುತ್ತದೆ. ಇಲ್ಲವಾದರೆ ಅದಕ್ಕೆ ಅಸ್ತಿತ್ವ ಇರುವುದಿಲ್ಲ.

ಅದೆಲ್ಲ ವೇಳೆ ಹಿಡಿಯುವ ಮಾತು ಆಗಿರಬಹುದು. ದೇಶದಲ್ಲಿ ಕೇವಲ ಏಳೆಂಟು ರಾಜ್ಯಗಳಲ್ಲಿ ಮೇಲ್ಮನೆ ಎಂಬುದು ಇದೆ. ಉಳಿದ ಕಡೆಗಳಲ್ಲಿ ಅದು ಇಲ್ಲ. 1970ರ ದಶಕದಲ್ಲಿ ಆಗಿನ ಸಚಿವ ಬಿ.ಬಸವಲಿಂಗಪ್ಪ ಅವರೂ ಪರಿಷತ್ತನ್ನು ರದ್ದು ಮಾಡಬೇಕು ಎಂಬ ಚರ್ಚೆ ಹುಟ್ಟು ಹಾಕಿದ್ದರು. ‘ಕನ್ನಡ ಸಾಹಿತ್ಯವೆಲ್ಲ ಬೂಸಾ’ ಎಂದಿದ್ದ ಅವರಿಗೆ ಮೇಲ್ಮನೆ ಸದಸ್ಯರು ಛೀಮಾರಿ ಹಾಕಿದ್ದರು. ಅದಕ್ಕೆ ಪ್ರತಿಯಾಗಿ ಬಂಡಾಯಗಾರ ಬಸವಲಿಂಗಪ್ಪ ಮೇಲ್ಮನೆಯನ್ನು ರದ್ದು ಮಾಡಬೇಕು ಎಂದಿದ್ದರು. ಆ ಮೇಲೆ ಅಷ್ಟು ಧೈರ್ಯದಿಂದ ಯಾರೂ ಮಾತನಾಡಿಲ್ಲ. ಹಾಗೆಂದು ಮೇಲ್ಮನೆಯ ಉಪಯುಕ್ತತೆ ಹೆಚ್ಚಿದೆ ಎಂದು ನಮಗೇನೂ ಅನಿಸಿಲ್ಲ.

ಈಗಂತೂ ಅದು ಸರ್ಕಾರದ ಬೆಂಬಲಿಗರಿಗೆ, ವಿಧಾನಸಭೆ ಚುನಾವಣೆಗಳಲ್ಲಿ ಸೋತ ಅಥವಾ ಗೆಲ್ಲಲಾಗದ ಹಿರಿಯ ನಾಯಕರಿಗೆ ರಾಜಕೀಯ ಪುನರ್ವಸತಿ ಕಲ್ಪಿಸುವ ಗಂಜೀ ಕೇಂದ್ರವಾಗಿ ಪರಿಣಮಿಸಿದೆ. ವಿಧಾನಸಭೆಗೆ ನಡೆಯುವ ಚುನಾವಣೆಗೂ ಮೇಲ್ಮನೆಗೆ ನಡೆಯುವ ಚುನಾವಣೆಗೂ ಅಂಥ ವ್ಯತ್ಯಾಸವೂ ಇಲ್ಲ ಎಂದು ಅನಿಸುತ್ತಿದೆ. ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಿಂದ ನಡೆದ ಚುನಾವಣೆಗಳಲ್ಲಿ ನಾವು ಇದನ್ನು ನೋಡಿದ್ದೇವೆ. ವಿಧಾನಸಭೆಗೆ ಎಲ್ಲ ರೀತಿಯಿಂದ ಪಡಿಯಚ್ಚಿನಂತೆ ತೋರುತ್ತಿರುವ ಇನ್ನೊಂದು ಮನೆ ಇರಬಾರದು. ಇರುವುದಾದರೆ ನಿಜವಾಗಿಯೂ ತಾನು ಮೇಲುಮಟ್ಟದ ತಿಳಿವಳಿಕೆಯ ಮನೆ ಎಂದು ಅದು ತೋರಿಸಿಕೊಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.