ಶನಿವಾರ, ಸೆಪ್ಟೆಂಬರ್ 18, 2021
30 °C

ಶುಕ್ರವಾರ, 6–5–1994

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರತಿಪಕ್ಷಗಳೆಲ್ಲ ಒಂದಾದರೆ ಕಾಂಗೈಗೆ ಕಷ್ಟ– ಮೊಯಿಲಿ
ನವದೆಹಲಿ, ಮೇ 5– ಕರ್ನಾಟಕದಲ್ಲಿ ಈಗ ಕಾಂಗೈಗೆ ಜನತಾದಳವೇ ಪ್ರಮುಖ ವಿರೋಧ ಪಕ್ಷವಾಗಿದೆ. ಕಾನ್ಶಿರಾಂ ಪಕ್ಷವಾಗಲೀ ಬಂಗಾರಪ್ಪ ಅವರ ಕರ್ನಾಟಕ ಕಾಂಗ್ರೆಸ್ ಪಕ್ಷವಾಗಲೀ ಅಲ್ಲ. ಆದರೆ ವಿರೋಧ ಪಕ್ಷಗಳೆಲ್ಲ ಒಂದಾದರೆ ಕಾಂಗೈಗೆ ಕಷ್ಟವಾಗುತ್ತದೆ ಎಂದು ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರು ಇಂದು ಇಲ್ಲಿ ಅಭಿಪ್ರಾಯಪಟ್ಟರು.

ಕಾನ್ಶಿರಾಂ ಅವರ ವಿಚಾರ ಕರ್ನಾಟಕದಲ್ಲಿ ಅಸಂಗತವಾದದ್ದು. ಅಲ್ಲದೆ ಬಂಗಾರಪ್ಪ ಅವರು ಹಿಂದುಳಿದ ವರ್ಗಗಳ ವೆಂಕಟಸ್ವಾಮಿ ಆಯೋಗದ ವರದಿಯನ್ನು ವಿರೋಧಿಸಿದವರಲ್ಲಿ ಮೊದಲಿಗರು. ಆದ್ದರಿಂದ ಅವರು ಎಷ್ಟರ ಮಟ್ಟಿಗೆ ಹಿಂದುಳಿದವರ ಪ‍ರ ಎಂಬುದನ್ನು ತಿಳಿಯುವ ವಿಷಯ ನಿಮಗೇ ಬಿಟ್ಟದ್ದು ಎಂದು ಮಾತನಾಡುತ್ತ ತಿಳಿಸಿದರು.

ಅಣ್ವಸ್ತ್ರ ಒಪ್ಪಂದ: ಪ್ರಧಾನಿ ಹೇಳಿಕೆಗೆ ಆಗ್ರಹ
ನವದೆಹಲಿ, ಮೇ 5 (ಪಿಟಿಐ) – ಅಗ್ನಿ ಕ್ಷಿಪಣಿ ಅಭಿವೃದ್ಧಿ ಮತ್ತು ಅದನ್ನು ಸೇನಾಪಡೆಯಲ್ಲಿ ನಿಯೋಜಿಸುವ ದೇಶದ ಕಾರ್ಯಕ್ರಮದಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ಪ್ರಧಾನಿ ಪಿ.ವಿ. ನರಸಿಂಹರಾವ್ ಅವರು ಅಮೆರಿಕ ಪ್ರವಾಸ ಆರಂಭಿಸುವ ಮುನ್ನ ಸಂಸತ್ತಿಗೆ ಭರವಸೆ ನೀಡಬೇಕು ಎಂದು ಬಿಜೆಪಿ ಒತ್ತಾಯಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು