ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25ವರ್ಷಗಳ ಹಿಂದೆ | ಎಲ್ಲ ಶಿಕ್ಷಣ ಸಂಸ್ಥೆಗಳಿಗೂ ಏಕರೂಪ ಪ್ರವೇಶ ನೀತಿ: ರಾಜ್ಯದ ವಾದ

ಶನಿವಾರ, 15–7–1995
Last Updated 14 ಜುಲೈ 2020, 19:45 IST
ಅಕ್ಷರ ಗಾತ್ರ

ಶೇಷನ್‌ ಪರಮಾಧಿಕಾರಕ್ಕೆಸುಪ್ರೀಂ ಕೋರ್ಟ್‌ ಕಡಿವಾಣ
ನವದೆಹಲಿ, ಜುಲೈ 14 (ಪಿಟಿಐ, ಯುಎನ್‌ಐ)–
ಇತರ ಇಬ್ಬರು ಚುನಾವಣಾ ಕಮಿಷನರ್‌ಗಳಿಗೂ ಮುಖ್ಯ ಚುನಾವಣಾ ಕಮಿಷನರ್‌ ಅವರಷ್ಟೇ ಅಧಿಕಾರ ಹಾಗೂ ಸ್ಥಾನಮಾನಗಳಿವೆ ಎಂದು ಸುಪ್ರೀಂ ಕೋರ್ಟ್‌ ಇಂದು ತೀರ್ಪು ನೀಡುವ ಮೂಲಕ ಚುನಾವಣಾ ಆಯೋಗದಲ್ಲಿ ತನ್ನ ಪರಮಾಧಿಕಾರವನ್ನು ಉಳಿಸಿಕೊಳ್ಳಲು ಮುಖ್ಯ ಚುನಾವಣಾ ಕಮಿಷನರ್‌ ಟಿ.ಎನ್‌.ಶೇಷನ್‌ ಅವರು ಕಳೆದ ಸುಮಾರು ಎರಡು ವರ್ಷಗಳಿಂದ ನಡೆಸಿದ ಹೋರಾಟದಲ್ಲಿ ಸೋತುಹೋದರು.

ಚುನಾವಣಾ ಆಯೋಗವನ್ನು ಬಹುಸದಸ್ಯ ಸಂಸ್ಥೆಯನ್ನಾಗಿ ಮಾಡಿದ ಹಾಗೂ ಎಂ.ಎಸ್‌.ಗಿಲ್‌ ಮತ್ತು ಜಿ.ವಿ.ಜಿ. ಕೃಷ್ಣಮೂರ್ತಿ ಅವರನ್ನು ಚುನಾವಣಾ ಕಮಿಷನರ್‌ಗಳಾಗಿ ನೇಮಿಸಿದ 1993ನೇ ಅಕ್ಟೋಬರ್‌ ಒಂದರ ರಾಷ್ಟ್ರಪತಿಗಳ ಎರಡು ಆದೇಶಗಳನ್ನು ಸುಪ್ರೀಂಕೋರ್ಟಿನ ಐವರು ಸದಸ್ಯರ ಸಂವಿಧಾನ ನ್ಯಾಯಪೀಠ ಇಂದು ಎತ್ತಿಹಿಡಿಯಿತು. ಈ ಆದೇಶಗಳನ್ನು ಟಿ.ಎನ್‌.ಶೇಷನ್‌ಅವರು ರಿಟ್‌ ಅರ್ಜಿಯ ಮೂಲಕ ಪ್ರಶ್ನಿಸಿದ್ದರು.

ಎಲ್ಲ ಶಿಕ್ಷಣ ಸಂಸ್ಥೆಗಳಿಗೂ ಏಕರೂಪ ಪ್ರವೇಶ ನೀತಿ: ರಾಜ್ಯದ ವಾದ
ಬೆಂಗಳೂರು, ಜುಲೈ 14–
ವೈದ್ಯಕೀಯ, ದಂತ ವೈದ್ಯಕೀಯ, ನರ್ಸಿಂಗ್‌ ಮತ್ತು ಎಂಜಿನಿಯರಿಂಗ್‌ ಶಿಕ್ಷಣದ ಪ್ರವೇಶದಲ್ಲಿ ಎಲ್ಲ ಶಿಕ್ಷಣ ಸಂಸ್ಥೆಗಳಿಗೂ ಅನ್ವಯವಾಗುವಂತೆ ಏಕರೂಪದ ಪ್ರವೇಶ ನೀತಿ ರೂಪಿಸಬೇಕೆಂಬ ಸಲಹೆಯನ್ನು ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ ಮುಂದೆ ಮಂಡಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT