ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ : ಗುರುವಾರ, ಫೆಬ್ರುವರಿ 2, 1995

25 years back
Last Updated 1 ಫೆಬ್ರುವರಿ 2020, 18:55 IST
ಅಕ್ಷರ ಗಾತ್ರ

4 ವರ್ಷದಲ್ಲಿ 4,000 ಮೆಗಾವಾಟ್ ವಿದ್ಯುತ್–ಪಟೇಲ್ ಭರವಸೆ

ಬೆಂಗಳೂರು ಫೆ. 1– ಮುಂದಿನ ನಾಲ್ಕು ವರ್ಷಗಳಲ್ಲಿ ಐದು ಖಾಸಗಿ ವಿದ್ಯುತ್ ಯೋಜನೆಗಳಿಂದ ರಾಜ್ಯದಲ್ಲಿ ಹೊಸದಾಗಿ 4,000 ಮೆಗಾವಾಟ್ ವಿದ್ಯುತ್ ಉತ್ಪಾದನೆ ಆಗಲಿದೆ ಎಂದು ವಿದ್ಯುತ್ ಖಾತೆಯನ್ನು ಹೊಂದಿರುವ ಉಪ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಇಂದು ಇಲ್ಲಿ ತಿಳಿಸಿದರು.

ಹೊಸ ಒಪ್ಪಂದಗಳನ್ನು ಮಾಡಿಕೊಳ್ಳದೆ, ಈಗಾಗಲೇ ಆಗಿರುವ ಒಪ್ಪಂದ (ಎಂಓಯು)ಗಳನ್ನು ಕಾರ್ಯಗತಗೊಳಿಸಲು ಕ್ರಮ ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಇನ್ನು ಹದಿನೈದು ದಿನದಲ್ಲಿ ಈ ಐದು ಖಾಸಗಿ ಸಂಸ್ಥೆಗಳೊಂದಿಗೆ ಒಪ್ಪಂದವನ್ನು ಪೂರ್ಣಗೊಳಿಸಲಿದ್ದೇವೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಗರ್ಭಪಾತ ಅವಧಿಯಲ್ಲಿ ರಜೆ, ವೇತನ ಸೌಲಭ್ಯ

ನವದೆಹಲಿ, ಫೆ.1 (ಪಿಟಿಐ)– ಸಣ್ಣ ಕುಟುಂಬ ಪ್ರೋತ್ಸಾಹಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಹೆರಿಗೆ ಸೌಲಭ್ಯ ಕಾಯ್ದೆಯಲ್ಲಿ ಕೆಲವು ಮಹತ್ವದ ಬದಲಾವಣೆ ಮಾಡಿದೆ. ಇದರನ್ವಯ ಗರ್ಭಪಾತದ ಅವಧಿಯಲ್ಲಿ ರಜೆ, ವೇತನ ಸೌಲಭ್ಯ ದೊರೆಯಲಿದೆ.

ಮಹಿಳಾ ಉದ್ಯೋಗಿಗಳು ವೈದ್ಯಕೀಯ ಗರ್ಭಪಾತಕ್ಕೆ ಒಳಗಾದರೆ ಆರು ವಾರಗಳ ರಜೆ, ಗರ್ಭಪಾತ ಅಥವಾ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆಯಿಂದ ಅಸ್ವಸ್ಥರಾದರೆ ಗರಿಷ್ಠ ಒಂದು ತಿಂಗಳ ವೇತನ ಸಹಿತ ರಜೆಗೆ ಅರ್ಹರಾಗುತ್ತಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT