ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ | ಭಾನುವಾರ, 16–4–1995

Last Updated 15 ಏಪ್ರಿಲ್ 2020, 19:41 IST
ಅಕ್ಷರ ಗಾತ್ರ

ಮಂಗಳೂರು ವಿದ್ಯುತ್‌ ಸ್ಥಾವರ ಕಾರ್ಯ ವಾರದೊಳಗೆ ಆರಂಭ

ನವದೆಹಲಿ, ಏ. 15– ಮಂಗಳೂರಿನ 1,000 ಮೆಗಾವಾಟ್‌ ಸಾಮರ್ಥ್ಯದ ವಿದ್ಯುತ್‌ ಸ್ಥಾವರದ ಕಾರ್ಯ ಶೀಘ್ರವೇ ಆರಂಭಗೊಳ್ಳಲಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ.ದೇವೇಗೌಡ ಅವರು ಇಂದು ಇಲ್ಲಿ ತಿಳಿಸಿದರು. ಕೇಂದ್ರ ವಿದ್ಯುತ್‌ ಸಚಿವಾಲಯವು ವಾರದೊಳಗೆ ಈ ಯೋಜನೆಗೆ ಒಪ್ಪಿಗೆ ನೀಡಲಿದೆ ಎಂದರು.

ಪ್ರಧಾನಿ ಪಿ.ವಿ.ನರಸಿಂಹರಾವ್‌ ಮತ್ತು ಕೇಂದ್ರ ವಿದ್ಯುತ್‌ ಸಚಿವ ಎನ್‌.ಕೆ.ಪಿ. ಸಾಳ್ವೆ ಅವರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ದೇವೇಗೌಡರು ಈ ವಿಷಯ ಪ್ರಕಟಿಸಿದರು.

ಪ್ರದೇಶ ಕಾಂಗೈ ಸಮಿತಿ ಪುನರ್‌ರಚನೆ ಕಾರ್ಯ ಆರಂಭ

ನವದೆಹಲಿ, ಏ. 15 (ಪಿಟಿಐ)– ಕೆಲವು ಪ್ರದೇಶ ಕಾಂಗೈ ಸಮಿತಿಗಳನ್ನು ಪುನರ್‌ ರಚಿಸುವ ಕಾರ್ಯವನ್ನು ಕಾಂಗ್ರೆಸ್‌ (ಐ) ಹೈಕಮಾಂಡ್‌ ಆರಂಭಿಸಿದೆ. ಈ ಉದ್ದೇಶಕ್ಕಾಗಿ ಪಕ್ಷದ ಇಬ್ಬರು ಪ್ರಧಾನ ಕಾರ್ಯದರ್ಶಿಗಳು ಮಹಾರಾಷ್ಟ್ರ ಹಾಗೂ ಕರ್ನಾಟಕಕ್ಕೆ ತೆರಳುವರು.

ಏಪ್ರಿಲ್‌ 19ರಂದು ಜನಾರ್ದನ ಪೂಜಾರಿ ಅವರು ಮುಂಬೈಗೆ ತೆರಳಿದರೆ, ಮಾಧವ ಸಿನ್ಹಾ ಸೋಳಂಕಿ ಅವರು ಏಪ್ರಿಲ್‌ 20ರಂದು ಬೆಂಗಳೂರಿಗೆ ಹೋಗುವರು. ಈ ವಿಷಯವನ್ನು ಈ ಇಬ್ಬರು ಪ್ರಧಾನ ಕಾರ್ಯದರ್ಶಿಗಳು ಪ್ರತ್ಯೇಕವಾಗಿ ಪ್ರಕಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT