‘ಮಾಫಿಯಾ’ ಕೂಟ ನಿಗ್ರಹಕ್ಕೆ ವಿಶೇಷ ಘಟನೆ ರಚನೆಗೆ ಸಲಹೆ

ನವದೆಹಲಿ, ಆಗಸ್ಟ್ 1– ದೇಶದ ವಿವಿಧ ಭಾಗಗಳಲ್ಲಿ ಅಪರಾಧಿ ತಂಡಗಳು, ಭೂಗತ ಮಾಫಿಯಾಗಳು, ಪೊಲೀಸರು, ರಾಜಕಾರಣಿಗಳು ಮತ್ತು ಅಧಿಕಾರಶಾಹಿ ಮಧ್ಯೆ ಬೆಳೆದಿರುವ ಅಪವಿತ್ರ ಮೈತ್ರಿಯ ಭಯಾನಕ ಸ್ವರೂಪ ಹೊರಗೆಡಹಿದ ವೋರಾ ಸಮಿತಿ ವರದಿಯನ್ನು ಇಂದು ಸಂಸತ್ತಿನ ಉಭಯ ಸದನಗಳಲ್ಲಿ ಮಂಡಿಸಲಾಯಿತು.

ರಾಜಕಾರಣಿಗಳು ಮಾಫಿಯಾ ಪ್ರಭಾವಕ್ಕೆ ಒಳಗಾಗಲು ಹೆಚ್ಚುತ್ತಿರುವ ಚುನಾವಣಾ ವೆಚ್ಚ ಮುಖ್ಯ ಕಾರಣ ಎಂದು ಹೇಳಿರುವ ಸಮಿತಿ, ಈ ಕೂಟಗಳ ಚಟುವಟಿಕೆಯನ್ನು ನಿರ್ದಾಕ್ಷಿಣ್ಯವಾಗಿ ಹತ್ತಿಕ್ಕಲು ಮತ್ತು ಇವುಗಳ ಜತೆ ಸರ್ಕಾರಿ ಸಿಬ್ಬಂದಿ, ರಾಜಕಾರಣಿಗಳು ಇಟ್ಟುಕೊಳ್ಳುವ ಸಂಬಂಧವನ್ನು ಪತ್ತೆ ಮಾಡಲು ಗೃಹ ಖಾತೆಯಲ್ಲಿ ‘ವಿಶೇಷ ಘಟಕ’ ಸ್ಥಾಪನೆಗೆ ಸಲಹೆ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.