25 ವರ್ಷಗಳ ಹಿಂದೆ | ಶನಿವಾರ, 2–9–1995

ಪಕ್ಷದ ಅಧ್ಯಕ್ಷರಾಗಿ ನಾಯ್ಡು ಆಯ್ಕೆ: ಎನ್‌ಟಿಆರ್ ಅಸಮ್ಮತಿ
ಹೈದರಾಬಾದ್, ಸೆ. 1 (ಪಿಟಿಐ)– ತೆಲುಗುದೇಶಂ ಪಕ್ಷದ ಅಧ್ಯಕ್ಷರಾಗಿ ಎನ್.ಚಂದ್ರಬಾಬು ನಾಯ್ಡು ಆಯ್ಕೆ ಶಾಸನ ಸಮ್ಮತವಲ್ಲ ಎಂದು ಮಾಜಿ ಮುಖ್ಯಮಂತ್ರಿ ಎನ್.ಟಿ.ರಾಮರಾವ್ ಇಂದು ಇಲ್ಲಿ ಹೇಳಿದ್ದಾರೆ.
‘ಅವರು ಅಧ್ಯಕ್ಷರಾಗಿ ಆಯ್ಕೆಯಾಗಬೇಕಾದುದು ಪಕ್ಷದ ದ್ವೈವಾರ್ಷಿಕ ಸಭೆಯಲ್ಲಿ. ಕಳೆದ ಸಭೆಯಲ್ಲಿ ನಾನು ಅವಿರೋಧವಾಗಿ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ. ಪಕ್ಷದ ಸಂವಿಧಾನದ ಪ್ರಕಾರ ಮುಂದಿನ ಸಭೆಯವರೆಗೂ ನಾನೇ ಅಧ್ಯಕ್ಷ’ ಎಂದು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಬೇಅಂತ್ ಅಂತ್ಯಕ್ರಿಯೆ ಇಂದು ಸಿಬಿಐನಿಂದ ತನಿಖೆ ಆರಂಭ
ನವದೆಹಲಿ, ಸೆ. 1 (ಯುಎನ್‌ಐ, ಪಿಟಿಐ)– ಕಾಲೇಜು ವಿದ್ಯಾರ್ಥಿಗಳಂತೆ ಕಾಣುತ್ತಿದ್ದ ಇಬ್ಬರು ಯುವಕರು ಪಂಜಾಬ್ ಮುಖ್ಯಮಂತ್ರಿ ಬೇಅಂತ್ ಸಿಂಗ್ ಅವರ ಹತ್ಯೆಯ ಪ್ರಮುಖ ಆರೋಪಿಗಳಾಗಿರುವ ಸಾಧ್ಯತೆಗಳಿವೆ ಎಂದು ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿರುವ ಕೇಂದ್ರ ತನಿಖಾ ದಳ (ಸಿಬಿಐ) ಇಂದು ಹೇಳಿದೆ. ಈ ಇಬ್ಬರು ಯುವಕರ ಕಂಪ್ಯೂಟರ್ ಭಾವಚಿತ್ರಗಳನ್ನು ಅದು ಸಿದ್ಧಪಡಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.