ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ | ಗುರುವಾರ, 20–7–1995

Last Updated 19 ಜುಲೈ 2020, 15:50 IST
ಅಕ್ಷರ ಗಾತ್ರ

ಒತ್ತೆಯಾಳು ಬಿಡುಗಡೆಗೆಪಾಕ್‌ ‘ದೂತ’

ನವದೆಹಲಿ, ಜುಲೈ 19 (ಯುಎನ್‌ಐ)– ವಿದೇಶಿ ಒತ್ತೆಯಾಳುಗಳ ಬಿಡುಗಡೆಗಾಗಿ ಅಲ್‌ ಫರಾನ್‌ ಭಯೋತ್ಪಾದಕ ಗುಂಪಿನ ಮನವೊಲಿಸುವಂತೆ ಪಾಕಿಸ್ತಾನದ ಜಮಾತ್– ಉಲ್‌– ಉಲೇಮಾ ನಾಯಕ ಫಜ್ಲುರ್‌ ರೆಹಮಾನ್‌ ಅವರನ್ನು ಅಮೆರಿಕ ಹಾಗೂ ಬ್ರಿಟನ್‌ಗಳು ಕೋರಿದ್ದು, ರೆಹಮಾನ್‌ ಅವರು ಭಾರತಕ್ಕೆ ಬರಲು ಭಾರತ ಸರ್ಕಾರ ವೀಸಾ ನೀಡಿದೆ.

ರೆಹಮಾನ್‌ ಅವರು ಎಂದು ಬರುವರು ಎಂಬುದು ಖಚಿತವಾಗಿಲ್ಲ. ವೀಸಾ ನೀಡಿರುವ ವಿಷಯವನ್ನು ವಿದೇಶಾಂಗ ಖಾತೆಯ ವಕ್ತಾರರು ಇಂದು ತಿಳಿಸಿದರು. ರೆಹಮಾನ್‌ ಅವರದ್ದು ಖಾಸಗಿ ಭೇಟಿಯಾಗಿರುತ್ತದೆ ಎಂದರು.

ನೋವಿನಲ್ಲೂ ನಗಿಸಿದ ‘ಅಭಿಮಾನಿ’ ಬಾಲಣ್ಣ ಕಣ್ಮರೆ

ಬೆಂಗಳೂರು, ಜುಲೈ 19– ಹಲವಾರು ದಶಕಗಳ ಕಾಲ ಕನ್ನಡದ ಪ್ರೇಕ್ಷಕರನ್ನು ನಗಿಸಿ, ರಂಜಿಸಿದ ಕನ್ನಡ ಚಿತ್ರರಂಗದ ಖ್ಯಾತ ನಟ ಟಿ.ಎನ್‌.ಬಾಲಕೃಷ್ಣ ಇನ್ನಿಲ್ಲ.

ವೈವಿಧ್ಯಮಯ ಪಾತ್ರಗಳಿಂದ ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಕನ್ನಡ ಕಲಾಪ್ರೇಮಿಗಳನ್ನು ರಂಜಿಸಿದ ಬಾಲಕೃಷ್ಣ ಇಂದು ರಾತ್ರಿ ಇಲ್ಲಿ ನಿಧನರಾದರು.

‘ಬಾಲಣ್ಣ’ ಎಂದೇ ಅಭಿಮಾನಿಗಳು ಪ್ರೀತಿಯಿಂದ ಕರೆಯುತ್ತಿದ್ದ ಬಾಲಕೃಷ್ಣ ಕಳೆದ ಕೆಲವು ದಿನಗಳಿಂದ ಶ್ವಾಸಕೋಶ ಕ್ಯಾನ್ಸರ್‌ನಿಂದ ನರಳುತ್ತಿದ್ದು, ಚಿತ್ರರಂಗಕ್ಕೆ ವಿದಾಯ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT