ಸೋಮವಾರ, ಅಕ್ಟೋಬರ್ 26, 2020
20 °C

ಪ್ರಜಾವಾಣಿ 25 ವರ್ಷಗಳ ಹಿಂದೆ: ಶುಕ್ರವಾರ, 6–10–1995

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಷ್ಟ್ರೀಯ ರಂಗದಿಂದ ಸ್ಥಿರ ಸರ್ಕಾರ: ಬೊಮ್ಮಾಯಿ

ನವದೆಹಲಿ, ಅ. 5– ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ರಂಗ ಮತ್ತು ಎಡಪಕ್ಷಗಳ ಒಕ್ಕೂಟವು ಭಾರಿ ಬಹುಮತ ಪಡೆದು ಕೇಂದ್ರದಲ್ಲಿ ಸ್ಥಿರ ಸರ್ಕಾರ ರಚಿಸುವ ಪೂರ್ಣ ವಿಶ್ವಾಸ ತಮಗಿರುವುದಾಗಿ ಜನತಾ ದಳದ ಅಧ್ಯಕ್ಷ ಎಸ್‌.ಆರ್‌. ಬೊಮ್ಮಾಯಿ ಇಂದು ಇಲ್ಲಿ ಹೇಳಿದರು.

ಈ ಬಗೆಗೆ ಈಗಾಗಲೇ ಸಮಾನ ಮನಸ್ಕ ಪಕ್ಷಗಳ ಜತೆ ಹೊಂದಾಣಿಕೆಯ ಮಾತುಕತೆಗಳು ನಡೆಯುತ್ತಿದ್ದು ಸದ್ಯದಲ್ಲಿಯೇ ಈ ಸಂಬಂಧ ಒಂದು ಸ್ಪಷ್ಟ ಚಿತ್ರ ಮೂಡಿ ಬರಲಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. 

ವಾಣಿಜ್ಯ ತೆರಿಗೆ: 420 ಕೋಟಿ ಹೆಚ್ಚು ಸಂಗ್ರಹ

ಬೆಂಗಳೂರು, ಅ. 5– ರಾಜ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿ ಸಮಾಧಾನಕರವಾಗಿದ್ದು, ಕೇವಲ ವಾಣಿಜ್ಯ ತೆರಿಗೆ ಬಾಬ್ತಿನಲ್ಲೇ ಕಳೆದ ಸಾಲಿಗಿಂತ ಈ ವರ್ಷದ ಮೊದಲ ಐದು ತಿಂಗಳಲ್ಲಿ 420 ಕೋಟಿ ರೂಪಾಯಿ ಹೆಚ್ಚಿಗೆ ಸಂಗ್ರಹಿಸಲಾಗಿದೆ ಎಂದು ಹಣಕಾಸು ಸಚಿವ ಸಿದ್ದರಾಮಯ್ಯ ಇಂದು ಇಲ್ಲಿ ತಿಳಿಸಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು