ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯವು ಈಗ ನೂರು ವರ್ಷಗಳನ್ನು ಪೂರೈಸುತ್ತಿದೆ. ನೂರು ವರ್ಷಗಳ ಈ ಪ್ರಯಾಣದಲ್ಲಿ ಅನೇಕ ಜನರು ಸಹಕಾರಿಗಳಾಗಿ, ಸಹಭಾಗಿಗಳಾಗಿ ಹಾಗೂ ಹಿತೈಷಿಗಳಾಗಿ ಜೊತೆಗೂಡಿದರು. ಈ ಪ್ರಯಾಣವು ಪರಿಶ್ರಮಪೂರಕ ಮತ್ತು ಕೆಲವು ಸವಾಲುಗಳಿಂದ ಕೂಡಿದ್ದರೂ ಜನಸಾಮಾನ್ಯರಿಂದ ದೊರೆತ ಬೆಂಬಲದಿಂದ ಯಶಸ್ವಿಯಾಗಿ ಸಾಗಿಬಂತು. ಸಂಘದ ನೂರನೇ ವರ್ಷದ ಇಂದಿನ ಸಂದರ್ಭದಲ್ಲಿ ಈ ಪ್ರಯಾಣದ ಯಶಸ್ಸಿಗಾಗಿ ತಮ್ಮನ್ನು ತಾವು ಸಂಪೂರ್ಣವಾಗಿ ಸಮರ್ಪಿಸಿಕೊಂಡ ಅನೇಕ ವ್ಯಕ್ತಿಗಳು ಹಾಗೂ ಅಂತಹ ಅನೇಕ ಪ್ರಸಂಗಗಳು ನೆನಪಿನ ಭಿತ್ತಿಯಲ್ಲಿ ಮೂಡಿಬರುತ್ತವೆ.

ಪ್ರಾರಂಭದ ದಿನಗಳಲ್ಲಿ ದೇಶದಾದ್ಯಂತ ಯುವ ಕಾರ್ಯಕರ್ತರು ದೇಶಪ್ರೇಮದಿಂದ ಓತಪ್ರೋತಗೊಂಡ ಓರ್ವ ಯೋಧನಂತೆ ಸಂಘಕಾರ್ಯಕ್ಕಾಗಿ ತಯಾರಾದರು. ಅಪ್ಪಾಜಿ ಜೋಶಿ ಅವರಂತಹ ಗೃಹಸ್ಥ ಕಾರ್ಯಕರ್ತರಾಗಲೀ ಅಥವಾ ದಾದಾರಾವ್ ಪರಮಾರ್ಥ್, ಬಾಳಾಸಾಹೇಬ್ ಮತ್ತು ಭಾವುರಾವ್ ದೇವರಸ್ ಸಹೋದರರು, ಯಾದವರಾವ್ ಜೋಶಿ, ಏಕನಾಥ ರಾನಡೆ ಮುಂತಾದ ಪ್ರಚಾರಕರಾಗಲೀ ಸಂಘ ಸಂಸ್ಥಾಪಕ ಡಾ.ಹೆಡಗೇವಾರರ ಸಂಪರ್ಕಕ್ಕೆ ಬಂದು ರಾಷ್ಟ್ರಸೇವೆಯ ಜೀವನವ್ರತವಾಗಿ ಸಂಘಕಾರ್ಯವನ್ನು ಸ್ವೀಕರಿಸಿ ಜೀವನಪರ್ಯಂತ ಮುನ್ನಡೆದರು.

ಸಮಾಜದ ನಿರಂತರ ಬೆಂಬಲದಿಂದಲೇ ಸಂಘಕಾರ್ಯ ಮುಂದೆ ಸಾಗುತ್ತಾ ಹೋಯಿತು. ಸಂಘದ ಕೆಲಸವು ಜನಸಾಮಾನ್ಯರ ಭಾವನೆಗಳಿಗೆ ಅನುರೂಪವಾಗಿರುವ ಕಾರಣದಿಂದ ಸಂಘಕಾರ್ಯಕ್ಕೆ ಸಮಾಜದಲ್ಲಿ ಮತ್ತೆ ಮತ್ತೆ ಸ್ವೀಕೃತಿ ಹೆಚ್ಚುತ್ತಾ ಸಾಗಿತು. ಸ್ವಾಮಿ ವಿವೇಕಾನಂದರು ವಿದೇಶ ಪ್ರವಾಸದಲ್ಲಿದ್ದಾಗ ಅವರನ್ನು ಯಾರೋ ಕೇಳಿದರು “ನಿಮ್ಮ ಭಾರತ ದೇಶದ ಹೆಚ್ಚಿನ ಜನರು ಅನಕ್ಷರಸ್ಥರು, ಅವರಿಗೆ ಇಂಗ್ಲಿಷ್ ತಿಳಿದಿಲ್ಲ. ಹೀಗಿರುವಾಗ ನೀವು ಹೇಳುವ ದೊಡ್ಡ ದೊಡ್ಡ ಚಿಂತನೆಗಳು ಭಾರತದ ಜನರನ್ನು ಹೇಗೆ ತಲುಪುತ್ತವೆ?”. ಸ್ವಾಮೀಜಿ ಉತ್ತರಿಸುತ್ತಾ “ಸಕ್ಕರೆಯನ್ನು ಪತ್ತೆ ಹಚ್ಚಲು ಇರುವೆಗಳು ಇಂಗ್ಲಿಷ್ ಕಲಿಯಬೇಕಾಗಿಲ್ಲ! ಅದೇ ರೀತಿ ನನ್ನ ಭಾರತದ ಜನರು, ತಮ್ಮ ಆಧ್ಯಾತ್ಮಿಕ ಜ್ಞಾನದಿಂದಾಗಿ, ಯಾವುದೇ ಮೂಲೆಯಲ್ಲಿ ನಡೆಯುತ್ತಿರುವ ಸಾತ್ವಿಕ ಕೆಲಸವನ್ನು ಗಮನಿಸಿ ತಕ್ಷಣವೇ ಅರ್ಥಮಾಡಿಕೊಳ್ಳುತ್ತಾರೆ. ಆದ್ದರಿಂದ ಅವರು ನನ್ನ ಮಾತುಗಳನ್ನು ಖಂಡಿತವಾಗಿಯೂ ಅರ್ಥೈಸುತ್ತಾರೆ” ಎಂದಿದ್ದರು. ಇದು ಸತ್ಯವೆಂದು ಸಾಬೀತಾಗಿದೆ. ಅದೇ ರೀತಿ ನಿಧಾನವೇ ಆಗಿದ್ದರೂ ಸಂಘದ ಈ ಸಾತ್ವಿಕ ಕಾರ್ಯಕ್ಕೆ ಜನಸಾಮಾನ್ಯರಿಂದ ನಿರಂತರ ಸ್ವೀಕೃತಿ ಮತ್ತು ಬೆಂಬಲ ದೊರೆಯುತ್ತಾ ಬಂದಿದೆ.

ಸಂಘಕಾರ್ಯದ ಆರಂಭದಿಂದಲೂ, ಸಂಘದ ಸಂಪರ್ಕದಲ್ಲಿದ್ದ ಮತ್ತು ಹೊಸದಾಗಿ ಸಂಪರ್ಕಕ್ಕೆ ಬಂದ ಸಾಮಾನ್ಯ ಕುಟುಂಬಗಳಿಂದ ಸಂಘದ ಕಾರ್ಯಕರ್ತರಿಗೆ ಆಶೀರ್ವಾದ ಮತ್ತು ಆಶ್ರಯ ಪ್ರಾಪ್ತವಾಗುತ್ತಲೇ ಇದೆ. ಸ್ವಯಂಸೇವಕರ ಕುಟುಂಬಗಳೇ ಸಂಘಕಾರ್ಯದ ಸಂಚಾಲನೆಯ ಕೇಂದ್ರಗಳಾಗಿವೆ. ಎಲ್ಲಾ ತಾಯಂದಿರು ಮತ್ತು ಸಹೋದರಿಯರ ಸಹಕಾರದಿಂದಲೇ ಸಂಘದ ಕಾರ್ಯಕ್ಕೆ ಪೂರ್ಣತೆ ಪ್ರಾಪ್ತವಾಗಿದೆ. ದತ್ತೋಪಂತ್ ಠೇಂಗಡಿ, ಯಶವಂತರಾವ್ ಕೇಳ್ಕರ್, ಬಾಳಾಸಾಹೇಬ್ ದೇಶಪಾಂಡೆ, ಏಕನಾಥ್ ರಾನಡೆ, ದೀನದಯಾಳ್ ಉಪಾಧ್ಯಾಯ, ದಾದಾಸಾಹೇಬ್ ಆಪ್ಟೆ ಮೊದಲಾದ ಮಹನೀಯರು ಸಂಘದ ಪ್ರೇರಣೆಯಿಂದ ಸಮಾಜ ಜೀವನದ ವಿವಿಧ ಕ್ಷೇತ್ರಗಳಲ್ಲಿ ಸಂಘಟನೆ-ಸಂಸ್ಥೆಗಳನ್ನು ಕಟ್ಟುವಲ್ಲಿ ಪ್ರಮುಖ ಪಾತ್ರವಹಿಸಿದರು. ವರ್ತಮಾನದ ಸಂದರ್ಭದಲ್ಲಿ ಈ ಎಲ್ಲಾ ಸಂಘಟನೆ ಅಥವಾ ಸಂಸ್ಥೆಗಳು ತಮ್ಮ ವ್ಯಾಪಕ ವಿಸ್ತರಣೆಯ ಜೊತೆಜೊತೆಗೆ ಆಯಾ ಕ್ಷೇತ್ರಗಳಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರುವಲ್ಲಿ ಸಕ್ರಿಯ ಪಾತ್ರವನ್ನು ವಹಿಸುತ್ತಿವೆ. ರಾಷ್ಟ್ರ ಸೇವಿಕಾ ಸಮಿತಿಯ ಮೂಲಕ ಸಮಾಜದ ಸಹೋದರಿಯರನ್ನು ಈ ರಾಷ್ಟ್ರೀಯ ಕಾರ್ಯಕ್ಕಾಗಿ ಸಂಘಟಿಸುವಲ್ಲಿ ಮೌಶೀಜೀ ಕೇಳ್ಕರ್ ಅವರಿಂದ ಮೊದಲ್ಗೊಂಡು ಪ್ರಮೀಳಾತಾಯಿ ಮೇಢೆ ಮೊದಲಾದವರ ಮಾತೃಶಕ್ತಿಯ ಪಾತ್ರವು ಬಹಳ ಮಹತ್ವದ್ದಾಗಿದೆ.

ರಾಷ್ಟ್ರೀಯ ಹಿತಾಸಕ್ತಿಯ ಅನೇಕ ವಿಷಯಗಳನ್ನು ಸಂಘವು ಕಾಲಕಾಲಕ್ಕೆ ಎತ್ತುತ್ತಲೇ ಬಂದಿದೆ. ಅವೆಲ್ಲವುಗಳಿಗೂ ಸಮಾಜದ ಭಿನ್ನಭಿನ್ನ ಜನರ ಬೆಂಬಲ ದೊರೆತಿದೆ; ಸಾರ್ವಜನಿಕವಾಗಿ ವಿರೋಧಿಗಳಂತೆ ಕಾಣಿಸುವವರೂ ಬೆಂಬಲಿಸಿದ್ದಾರೆ. ಸಮಸ್ತ ಹಿಂದೂ ಹಿತಾಸಕ್ತಿಯ ವಿಷಯಗಳಲ್ಲಿ ಎಲ್ಲರ ಸಹಕಾರವನ್ನು ಪಡೆಯುವುದೇ ಸಂಘದ ಪ್ರಯತ್ನವಾಗಿದೆ. ರಾಷ್ಟ್ರದ ಏಕತೆ, ಸುರಕ್ಷೆ, ಸಾಮಾಜಿಕ ಸೌಹಾರ್ದತೆ ಹಾಗೂ ಪ್ರಜಾಪ್ರಭುತ್ವ ಮತ್ತು ಧರ್ಮ-ಸಂಸ್ಕೃತಿಗಳನ್ನು ರಕ್ಷಿಸುವ ಕಾರ್ಯದಲ್ಲಿ ಅಸಂಖ್ಯಾತ ಸ್ವಯಂಸೇವಕರು ಅವರ್ಣನೀಯ ಕಷ್ಟಗಳನ್ನು ಎದುರಿಸಿದ್ದಾರೆ. ನೂರಾರು ಸ್ವಯಂಸೇವಕರ ಬಲಿದಾನವಾಗಿದೆ. ಈ ಎಲ್ಲ ಸಂದರ್ಭಗಳಲ್ಲಿ ಸಮಾಜದ ಸಹಾಯಹಸ್ತವು ಸದಾ ಸಂಘದ ಜೊತೆಗಿತ್ತು.

1981ರಲ್ಲಿ ತಮಿಳುನಾಡಿನ ಮೀನಾಕ್ಷಿಪುರಂನಲ್ಲಿ ಕೆಲವು ಹಿಂದುಗಳನ್ನು ಭ್ರಮೆಪಡಿಸಿ ಮತಾಂತರಿಸಲಾಯಿತು. ಈ ಪ್ರಮುಖ ಘಟನೆಗೆ ಸಂಬಂಧಿಸಿದಂತೆ ಹಿಂದೂಜಾಗೃತಿಗಾಗಿ ಆಯೋಜಿಸಲಾಗಿದ್ದ ಸುಮಾರು ಐದು ಲಕ್ಷ ಜನರು ಭಾಗವಹಿಸಿದ್ದ ಬೃಹತ್ ಸಮಾವೇಶದ ಅಧ್ಯಕ್ಷತೆಯನ್ನು ಆಗ ಕಾಂಗ್ರೆಸ್ಸಿನ ಹಿರಿಯ ನಾಯಕರಾಗಿದ್ದ ಡಾ. ಕರಣ್ ಸಿಂಗ್ ವಹಿಸಿದ್ದರು. 1964ರಲ್ಲಿ ವಿಶ್ವ ಹಿಂದೂ ಪರಿಷತ್ತಿನ ಸ್ಥಾಪನೆಯಲ್ಲಿ ಪ್ರಸಿದ್ಧ ಸಂತರಾದ ಸ್ವಾಮಿ ಚಿನ್ಮಯಾನಂದ, ಮಾಸ್ಟರ್ ತಾರಾ ಸಿಂಗ್, ಜೈನ ಮುನಿ ಸುಶೀಲ್ ಕುಮಾರ್, ಬೌದ್ಧ ಭಿಕ್ಷು ಕುಶೋಕ್ ಬಕುಲಾ ಮತ್ತು ನಾಮಧಾರಿ ಸಿಖ್ ಸದ್ಗುರು ಜಗಜೀತ್ ಸಿಂಗ್ ಇವರೆಲ್ಲರ ಗಣನೀಯ ಸಹಯೋಗ ದೊರಕಿತು. “ಹಿಂದೂ ಶಾಸ್ತ್ರಗ್ರಂಥಗಳಲ್ಲಿ ಅಸ್ಪೃಶ್ಯತೆಗೆ ಯಾವುದೇ ಸ್ಥಾನವಿಲ್ಲ” ಎಂಬುದನ್ನು ಪುನಃಸ್ಥಾಪಿಸುವ ಉದ್ದೇಶದಿಂದ ಶ್ರೀ ಗುರೂಜಿ ಗೋಳ್ವಲ್ಕರ್ ಅವರ ಉಪಕ್ರಮದ ಮೇರೆಗೆ 1969ರಲ್ಲಿ ಉಡುಪಿಯಲ್ಲಿ ನಡೆದ ವಿಶ್ವ ಹಿಂದೂ ಸಮ್ಮೇಳನದಲ್ಲಿ ಪೂಜ್ಯ ಧರ್ಮಾಚಾರ್ಯರು ಸೇರಿದಂತೆ ಎಲ್ಲಾ ಸಂತ-ಮಹಂತರ ಉಪಸ್ಥಿತಿ ಮತ್ತು ಆಶೀರ್ವಾದವಿತ್ತು. 1966ರಲ್ಲಿ ಪ್ರಯಾಗದಲ್ಲಿ ನಡೆದ ಸಂತಸಮ್ಮೇಳನವು “ನ ಹಿಂದೂ ಪತಿತೋ ಭವೇತ್” (ಯಾವ ಹಿಂದುವೂ ಪತಿತನಾಗಲು ಸಾಧ್ಯವಿಲ್ಲ) ಎನ್ನುವ ನಿರ್ಣಯವನ್ನು ಅಂಗೀಕರಿಸಿದಂತೆಯೇ ಉಡುಪಿಯ ಸಮ್ಮೇಳನದ ಘೋಷಣೆಯು 'ಹಿಂದವಃ ಸೋದರಾಃ ಸರ್ವೇ" (ಎಲ್ಲಾ ಹಿಂದುಗಳು ಸಹೋದರರು, ಭಾರತಮಾತೆಯ ಪುತ್ರರು) ಎಂಬುದಾಗಿತ್ತು. ಇವೆಲ್ಲವುಗಳಲ್ಲಿ ಹಾಗೂ ಗೋಹತ್ಯೆ ನಿಷೇಧ, ರಾಮ ಜನ್ಮಭೂಮಿ ಅಭಿಯಾನ ಮುಂತಾದವುಗಳಲ್ಲಿ ಸಂತರ ಆಶೀರ್ವಾದವು ಸಂಘದ ಸ್ವಯಂಸೇವಕರಿಗೆ ಸದಾ ಪ್ರಾಪ್ತವಾಗಿದೆ.

ಸ್ವಾತಂತ್ರ್ಯಾನಂತರ, ಅಂದಿನ ಸರ್ಕಾರವು ರಾಜಕೀಯ ಕಾರಣಗಳಿಂದಾಗಿ ಸಂಘದ ಕಾರ್ಯವನ್ನು ನಿಷೇಧಿಸಿದಾಗ ಸಾಮಾನ್ಯ ಜನರೊಂದಿಗೆ ಸಮಾಜದ ಗಣ್ಯವ್ಯಕ್ತಿಗಳು ಅತ್ಯಂತ ಪ್ರತಿಕೂಲ ಪರಿಸ್ಥಿತಿಗಳಲ್ಲಿಯೂ ಸಂಘದ ಪರವಾಗಿ ನಿಂತು ಸಂಘಕಾರ್ಯಕ್ಕೆ ಶಕ್ತಿ ನೀಡಿದರು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲೂ ಇದು ಅನುಭವಕ್ಕೆ ಬಂದಿತು. ಇದೇ ಕಾರಣದಿಂದ ಹಲವು ಅಡೆತಡೆಗಳ ಹೊರತಾಗಿಯೂ ಸಂಘದ ಕಾರ್ಯವು ನಿರಂತರವಾಗಿ ಮುನ್ನಡೆಯುತ್ತಿದೆ. ಈ ಎಲ್ಲಾ ಸಂದರ್ಭಗಳಲ್ಲಿ ಸಂಘಕಾರ್ಯವನ್ನು ಮತ್ತು ಸ್ವಯಂಸೇವಕರನ್ನು ಸಂಭಾಳಿಸುವ ಜವಾಬ್ದಾರಿಯನ್ನು ನಮ್ಮ ತಾಯಂದಿರು ಮತ್ತು ಸಹೋದರಿಯರು ಬಹಳ ಕುಶಲತೆಯಿಂದ ನಿರ್ವಹಿಸಿದರು. ಇವೆಲ್ಲ ಸಂಗತಿಗಳು ಸಂಘಕಾರ್ಯದ ಸ್ಫೂರ್ತಿಯ ಸೆಲೆಯಾಗಿ ಸದಾ ಪ್ರೇರಣೆ ನೀಡುತ್ತವೆ.

ಮುಂದಿನ ದಿನಗಳಲ್ಲಿ ರಾಷ್ಟ್ರಸೇವೆಯಲ್ಲಿ ಸಮಾಜದ ಎಲ್ಲಾ ಜನರ ಸಹಕಾರಕ್ಕಾಗಿ ಹಾಗೂ ಭಾಗವಹಿಸುವಿಕೆಗಾಗಿ ಸಂಘಶತಾಬ್ದಿಯ ಸಂದರ್ಭದಲ್ಲಿ ಸ್ವಯಂಸೇವಕರು ಮನೆ-ಮನೆ ಸಂಪರ್ಕದ ಮೂಲಕ ವಿಶೇಷ ಪ್ರಯತ್ನಗಳನ್ನು ಮಾಡಲಿದ್ದಾರೆ. ದೇಶದಾದ್ಯಂತ ದೊಡ್ಡ ನಗರಗಳಿಂದ ಹಿಡಿದು ದೂರದ ಹಳ್ಳಿಗಳವರೆಗೆ ಸಮಾಜದ ಎಲ್ಲಾ ವರ್ಗಗಳನ್ನು ತಲುಪುವುದು ಇದರ ಮುಖ್ಯ ಗುರಿಯಾಗಿರಲಿದೆ. ಸಂಪೂರ್ಣ ಸಜ್ಜನಶಕ್ತಿಯ ಸಮನ್ವಿತ ಪ್ರಯತ್ನಗಳಿಂದಾಗಿ ರಾಷ್ಟ್ರದ ಸರ್ವಾಂಗೀಣ ವಿಕಾಸದ ಮುಂದಿನ ಯಾತ್ರೆಯು ಸುಗಮವೂ ಮತ್ತು ಯಶಸ್ವಿಯೂ ಆಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.