‘ಪರಿಭಾವಿತ ಅರಣ್ಯ’ ಪ್ರದೇಶವನ್ನು ‘ಅರಣ್ಯ’ದ ಪರಿಕಲ್ಪನೆಯಿಂದ ಹೊರಗಿಡುವ ಪ್ರಯತ್ನಗಳು ರಾಜ್ಯದಲ್ಲಿ ನಡೆಯುತ್ತಿವೆ. ಕಾಡನ್ನು ಒತ್ತುವರಿ ಮಾಡಿಕೊಳ್ಳುವ ಪ್ರಯತ್ನಗಳಿಗೆ ಪಕ್ಷಾತೀತ ಬೆಂಬಲವಿದೆ. ಸುಪ್ರೀಂ ಕೋರ್ಟ್ ತೀರ್ಪಿಗೆ ವಿರುದ್ಧವಾದ ಇಂಥ ಬೆಳವಣಿಗೆಗಳ ಬಗ್ಗೆ ಸರ್ಕಾರ ಎಚ್ಚರಿಕೆ ವಹಿಸಬೇಕು.

ಮಲೆನಾಡಿನಲ್ಲಿ ಒತ್ತುವರಿ ದಂಧೆ ಜೋರಾಗಿಯೇ ನಡೆಯುತ್ತಿದೆ. ಅತಿಹೆಚ್ಚು ಅರಣ್ಯ ಒತ್ತುವರಿಯಾದ ಜಿಲ್ಲೆ ಶಿವಮೊಗ್ಗ ಎಂದು ಅಂಕಿಅಂಶಗಳು ಹೇಳುತ್ತವೆ. ಈ ಪ್ರಮಾಣದ ಒತ್ತುವರಿಗೆ ಓಟು ಆಧಾರಿತ ರಾಜಕಾರಣವೇ ಮುಖ್ಯ ಕಾರಣ ಎಂಬುದು ಗುಟ್ಟಾಗಿ ಉಳಿದಿಲ್ಲ. ಒತ್ತುವರಿ ಹೇಗೆಲ್ಲಾ ಆಗಬಹುದು ಎನ್ನುವುದಕ್ಕೆ ಉತ್ತಮ ಉದಾಹರಣೆ, ಸೊಪ್ಪಿನಗುಡ್ಡದ್ದು.

ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಕುಪ್ಪಗಡ್ಡೆ ಹೋಬಳಿಯ ನಿಟ್ಟಕ್ಕಿ ಗ್ರಾಮದ ಸರ್ವೆ ನಂಬರ್ 33, 145 ಎಕರೆಯ ಅತ್ಯಂತ ನಿಬಿಡ ಅರಣ್ಯಪ್ರದೇಶವಾಗಿತ್ತು. ಕಂದಾಯ ದಾಖಲೆಯಲ್ಲಿ ಅದು ಸೊಪ್ಪಿನಬೆಟ್ಟವೆಂದು ನಮೂದಾಗಿತ್ತು. ಆ ಪ್ರದೇಶವನ್ನು ಪರಿಭಾವಿತ ಅರಣ್ಯವಾಗಿ ಪರಿಗಣಿಸ
ಬೇಕು ಎಂದು ಅರಣ್ಯ ಇಲಾಖೆ ಶಿಫಾರಸು ಮಾಡಿತ್ತು. ಆದರೆ, ಆ ಪರಿಸರದಲ್ಲಿ 29 ಜನರು 87 ಎಕರೆ
ಯಷ್ಟು ಪ್ರದೇಶವನ್ನು ಅನಧಿಕೃತವಾಗಿ ಸಾಗುವಳಿ ಮಾಡುವ ಸಲುವಾಗಿ ಅರಣ್ಯ ನಾಶ ಮಾಡಿದ್ದರು. ಪಹಣಿಯಲ್ಲಿಯೂ ಕೆಲವರ ಹೆಸರು ದಾಖಲಾಗಿತ್ತು. ಅನಧಿಕೃತ ಸಾಗುವಳಿ ಪ್ರದೇಶವನ್ನು ತೆರವುಗೊಳಿಸುವ ಪ್ರಕ್ರಿಯೆಗೆ ಅರಣ್ಯ ಇಲಾಖೆ ಮುಂದಾದಾಗ, ಅನಧಿಕೃತ ಸಾಗುವಳಿದಾರರು ಹಾಗೂ ಅರಣ್ಯ ಇಲಾಖೆ ನಡುವೆ ಜಟಾಪಟಿ ಶುರುವಾಯಿತು.

ಮುಂದಿನ ಕಥೆ ಕೇಳಿ. ಅರಣ್ಯ ಇಲಾಖೆ ಕಾನೂನು ಹೋರಾಟಕ್ಕೆ ಮುಂದಾಯಿತು. ಅಕ್ರಮವಾಗಿ ಒತ್ತು
ವರಿ ಮಾಡಿಕೊಂಡ ಪ್ರದೇಶವು ಅರಣ್ಯ ಇಲಾಖೆಗೆ ಸೇರಿದ್ದೇ? ಅರಣ್ಯವನ್ನು ಒತ್ತುವರಿ ಮಾಡಿ ಕಾನೂನು
ಉಲ್ಲಂಘನೆ ಮಾಡಲಾಗಿದೆಯೆ? ಒತ್ತುವರಿದಾರರಿಗೆ ಸದರಿ ಭೂಮಿಯ ಮೇಲೆ ಹಕ್ಕು ಇದೆಯೆ? ಒತ್ತುವರಿ
ದಾರರಿಗೆ ಸಮಜಾಯಿಷಿ ನೀಡಲು ಸೂಕ್ತ ಅವಕಾಶ ನೀಡಲಾಗಿದೆಯೆ? ಈ ನಾಲ್ಕು ಅಂಶಗಳನ್ನು ಪ್ರಾಥಮಿಕವಾಗಿ ಪರಿಗಣಿಸಲಾಯಿತು. ಅರಣ್ಯ ಹಾಗೂ ಪರಿಸರ ಸಂರಕ್ಷಣೆಯು ಸಾರ್ವಜನಿಕ ಹಿತಾಸಕ್ತಿಯ ವಿಷಯವಾಗಿದೆ, ಬಹುಸಂಖ್ಯೆಯ ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡಲ್ಲಿ, ವೈಯಕ್ತಿಕ
ಹಿತಾಸಕ್ತಿಯನ್ನು ಪರಿಗಣಿಸಲು ಸಾಧ್ಯವಿಲ್ಲವೆಂಬ ಅಭಿಪ್ರಾಯಕ್ಕೆ ಬರಲಾಯಿತು. ಇಲ್ಲಿ ಮುಖ್ಯವಾಗಿ
ಗಮನಿಸಬೇಕಾದ ಅಂಶವೆಂದರೆ, ಒತ್ತುವರಿದಾರರು ತೀರಾ ಇತ್ತೀಚೆಗೆ ಒತ್ತುವರಿ ಮಾಡಿರುತ್ತಾರೆ ಎಂಬು
ದನ್ನು ‘ಗೂಗಲ್ ಚಿತ್ರಗಳು’ ಸಾಬೀತುಪಡಿಸಿವೆ.

ಮೊಕದ್ದಮೆ ಕರ್ನಾಟಕ ಮೇಲ್ಮನವಿ ನ್ಯಾಯಮಂಡಳಿಯ ಮುಂದೆ ಹೋಯಿತು. ಸೊಪ್ಪಿನಬೆಟ್ಟ ಅಥವಾ ಯಾವುದೇ ರೀತಿಯ ಸರ್ಕಾರಿ ಸ್ವತ್ತನ್ನು ಖಾಸಗಿ ವ್ಯಕ್ತಿಗಳಿಗೆ ಮಂಜೂರು ಮಾಡುವುದಕ್ಕಾಗಲಿ, ಅನಧಿಕೃತ ಸಾಗುವಳಿ ಮಾಡುವುದಕ್ಕಾಗಲಿ ಅವಕಾಶವಿಲ್ಲ ಎಂದು ತೀರ್ಪು ಬಂದಿತು. ಇದನ್ನು ಪ್ರಶ್ನಿಸಿದ ಒತ್ತುವರಿದಾರರು ಹೈಕೋರ್ಟ್ ಮೊರೆ ಹೋದರು. ಅಲ್ಲಿಯೂ ಅವರಿಗೆ ಜಯ ಲಭಿಸಲಿಲ್ಲ.

ಸುಪ್ರೀಂ ಕೋರ್ಟ್ನ ರಿಟ್ ಅರ್ಜಿ ಸಂಖ್ಯೆ 202/1995ರ ವಿಚಾರಣೋತ್ತರ ಆದೇಶ ಡಿ.12, 1996ರ ಪ್ರಕಾರ, ಅರಣ್ಯಗಳನ್ನು ಗುರ್ತಿಸಲು ತಜ್ಞರ ಸಮಿತಿಯೊಂದನ್ನು ರಚಿಸಬೇಕು; ಅರಣ್ಯಗಳ ವಿಸ್ತೀರ್ಣದ ಬಗ್ಗೆ ನ್ಯಾಯಾಲಯದ ಮುಂದೆ ವಸ್ತುಸ್ಥಿತಿ ಕುರಿತ ಪ್ರಮಾಣಪತ್ರ ಸಲ್ಲಿಸಬೇಕು ಎಂಬ ನಿರ್ದೇಶನವನ್ನು ಎಲ್ಲಾ ರಾಜ್ಯ ಸರ್ಕಾರಗಳಿಗೂ ನೀಡಲಾಗಿದೆ. ಈ ಪ್ರಕಾರವಾಗಿ ಕರ್ನಾಟಕ ಸರ್ಕಾರವೂ ತಜ್ಞರ ಸಮಿತಿಯನ್ನು ರಚಿಸಿ, ಸಮಿತಿ ನೀಡಿದ ವರದಿಯನ್ನು ಪರಿಶೀಲಿಸಿದ ಸಚಿವ ಸಂಪುಟದ ಅನುಮೋದನೆಯೊಂದಿಗೆ 1997ರ ಏಪ್ರಿಲ್ 2 ಮತ್ತು ಸೆ. 25ರ ದಿನಾಂಕಗಳಲ್ಲಿ ಎರಡು ಪ್ರಮಾಣಪತ್ರಗಳನ್ನು ಸಲ್ಲಿಸಿತು. ಸದರಿ ಪ್ರಮಾಣ ಪತ್ರದಲ್ಲಿ ಅರಣ್ಯ ಇಲಾಖೆಯ ಸುಪರ್ದಿಯಲ್ಲಿರುವ ‘ಅರಣ್ಯ’ಗಳ ಸರ್ವೆ ಮತ್ತು ಗಡಿ ಗುರುತಿಸುವಿಕೆ ಮುಕ್ತಾಯಗೊಂಡಿದ್ದು, ಅರಣ್ಯವೆಂದು ಪರಿಗಣಿಸಬೇಕಾದ ಜಿಲ್ಲಾವಾರು, ತಾಲ್ಲೂಕುವಾರು ಮತ್ತು ಗ್ರಾಮವಾರು ಸರ್ವೆ ನಂಬರ್ಗಳನ್ನು ಗುರ್ತಿಸಬೇಕಾಗಿರುತ್ತದೆ. ಶಾಸನಬದ್ಧ ಅರಣ್ಯ ಪ್ರದೇಶಗಳನ್ನು ಹೊರತುಪಡಿಸಿ, ಇತರೆ ಹೆಚ್ಚುವರಿ ಅರಣ್ಯ ಪ್ರದೇಶಗಳನ್ನು ಗುರುತಿಸಲು ಇನ್ನೂ ಕಾಲಾವಕಾಶ ಬೇಕೆಂದು ಕೇಳಿಕೊಳ್ಳಲಾಗಿತ್ತು.

ಭಾರತದಲ್ಲಿ ಅರಣ್ಯ ಸಂರಕ್ಷಣೆಗೆ ಕಾನೂನುಬದ್ಧ ಬಲ ನೀಡಿದ ಐತಿಹಾಸಿಕ ತೀರ್ಪುಗಳಲ್ಲಿ ಟಿ.ಎನ್. ಗೋದಾವರ್ಮನ್ ತಿರುಮಲಪಾಡ್ ಮೊಕದ್ದಮೆ ಅತ್ಯಂತ ಪ್ರಮುಖವಾದದ್ದು. ಆ ಪ್ರಕರಣದಲ್ಲಿ ಅರಣ್ಯ ಎಂದರೆ ಸರ್ಕಾರ ಅಧಿಸೂಚಿಸಿದ ಭೂಭಾಗ ಮಾತ್ರವಲ್ಲ; ನಿಘಂಟಿನಲ್ಲಿ ವಿವರಿಸಿದ ಅರ್ಥದಲ್ಲಿ ಅರಣ್ಯವೆಂದು ಪರಿಗಣಿಸಬಹುದಾದ ಎಲ್ಲ ಪ್ರದೇಶಗಳೂ ಅರಣ್ಯಗಳೇ ಎಂಬುದನ್ನು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಆ ತೀರ್ಪು, ಅರಣ್ಯ ಸಂರಕ್ಷಣಾ ಕಾಯ್ದೆ 1980ಕ್ಕೆ ಬಲ ತುಂಬಿದ್ದಷ್ಟೇ ಅಲ್ಲ, ರಾಜ್ಯ ಸರ್ಕಾರಗಳ ಅರಣ್ಯ ನೀತಿಗೆ ಸ್ಪಷ್ಟ ಮಾರ್ಗಸೂಚಿಯನ್ನೂ ನೀಡಿದೆ.

ಗೋದಾವರ್ಮನ್ ತೀರ್ಪಿನ ಹಿನ್ನೆಲೆಯಲ್ಲಿ, ದೇಶದ ಎಲ್ಲ ರಾಜ್ಯಗಳು ಪರಿಭಾವಿತ ಅರಣ್ಯಗಳನ್ನು (ಡೀಮ್ಡ್ ಫಾರೆಸ್ಟ್) ಗುರ್ತಿಸುವ ಹೊಣೆಯನ್ನು ಹೊರಬೇಕಾಯಿತು. ಕರ್ನಾಟಕದಲ್ಲಿ ಈ ಪ್ರಕ್ರಿಯೆ ಪ್ರಾರಂಭವಾಗಿ, ರಾಜ್ಯದ ಅರಣ್ಯ ಇಲಾಖೆ 9,94,881.11 ಹೆಕ್ಟೇರ್ ಪ್ರದೇಶವನ್ನು ಪರಿಭಾವಿತ ಅರಣ್ಯವೆಂದು ಪ್ರಾಥಮಿಕವಾಗಿ ಗುರ್ತಿಸಿತು. ಮರಗಳ ಸಾಂದ್ರತೆ, ನೈಸರ್ಗಿಕ ಅರಣ್ಯ ಸ್ವರೂಪ, ಜೀವವೈವಿಧ್ಯ, ಪರಿಸರ ವ್ಯವಸ್ಥೆಯ ಪಾತ್ರಗಳನ್ನು ಗಮನದಲ್ಲಿಟ್ಟುಕೊಳ್ಳಲಾಗಿತ್ತು. ವಿಶೇಷವಾಗಿ, ಒಂದು ಹೆಕ್ಟೇರ್ ಪ್ರದೇಶದಲ್ಲಿ 50ಕ್ಕಿಂತ ಹೆಚ್ಚು ಮರಗಳಿರುವ ಭೂಭಾಗಗಳನ್ನು ಪರಿಭಾವಿತ ಅರಣ್ಯಗಳೆಂದು ಗುರ್ತಿಸಲಾಗಿತ್ತು.

ಅರಣ್ಯ ಇಲಾಖೆ ಗುರ್ತಿಸಿದ ಪ್ರದೇಶಗಳಲ್ಲಿ ಶಾಲೆಗಳು, ಬಸ್ ನಿಲ್ದಾಣಗಳು, ಗ್ರಾಮೀಣ ವಸತಿಗಳು, ಧಾರ್ಮಿಕ ಕ್ಷೇತ್ರಗಳು ಹಾಗೂ ಖಾಸಗಿ ಜಮೀನುಗಳಿವೆ ಎಂಬ ಕಾರಣಗಳನ್ನು ಮುಂದಿಟ್ಟುಕೊಂಡ ರಾಜ್ಯ ಸರ್ಕಾರ, ಅರಣ್ಯ ಇಲಾಖೆಯ ಪರಿಭಾವಿತ ಅರಣ್ಯದ ಶಿಫಾರಸನ್ನು ತಿರಸ್ಕರಿಸಿತು. ವಾಸ್ತವವಾಗಿ, ಅರಣ್ಯಗಳ ಒಳಗೆ ಮಾನವ ವಾಸಸ್ಥಾನಗಳು ಇರುವುದು ಅಪರೂಪದ ಸಂಗತಿಯಲ್ಲ. ಭಾರತದಲ್ಲಿ ಶತಮಾನಗಳಿಂದ ಕಾಡು ಮತ್ತು ಗ್ರಾಮಗಳ ನಡುವೆ ಸಹಜ ಸಂಬಂಧವಿದೆ. ಈ ಸತ್ಯವನ್ನು ಅರಿತೇ ಸುಪ್ರೀಂ ಕೋರ್ಟ್ ನಿಘಂಟಿನ ಅರ್ಥದಲ್ಲಿನ ಅರಣ್ಯ ಪರಿಕಲ್ಪನೆಯನ್ನು ಮುಂದಿಟ್ಟಿತ್ತು.

ಸರ್ವೆ ನಂಬರ್ಗಳ ಪುನರಾವರ್ತನೆ, ಸರ್ವೆ ನಂಬರಿನಲ್ಲಿ ಲಭ್ಯವಿಲ್ಲದ ಸರ್ಕಾರಿ ಪ್ರದೇಶಗಳು, ಖಾಸಗಿ ಪಟ್ಟಾ, ಮೀಸಲು ಅರಣ್ಯ, ಕೆರೆತೀರ, ಸಾಂಸ್ಥಿಕ ಮತ್ತು ಶಾಲಾ ನೆಡುತೋಪು, 2 ಹೆಕ್ಟೇರಿಗಿಂತ ಕಡಿಮೆ ಇರುವ ಪ್ರದೇಶ, ಪ್ರತಿ ಹೆಕ್ಟೇರಿಗೆ 50 ಮರಗಳಿಗಿಂತ ಕಡಿಮೆ ಇರುವುದು, ಇತರೆ ಇಲಾಖೆಗಳಿಗೆ ವರ್ಗಾಯಿಸಿದ ಜಾಗ ಮತ್ತು ವಿವಿಧ ಶಾಸನಬದ್ಧ ನಿಬಂಧನೆಗಳ ಪ್ರಕಾರ ಅರಣ್ಯವಾಗಿರುವುದು, ಇತ್ಯಾದಿ ಕಾರಣಗಳನ್ನು ಮುಂದಿಟ್ಟುಕೊಂಡು 7,73,326 ಹೆಕ್ಟೇರ್ ವ್ಯಾಪ್ತಿಯನ್ನು ಕೈ ಬಿಟ್ಟು, 2,21,554 ಹೆಕ್ಟೇರ್ ಪ್ರದೇಶವನ್ನು ಪರಿಭಾವಿತ ಅರಣ್ಯವೆಂದು ಪರಿಗಣಿಸಿತು. ಜೊತೆಗೆ ಪರಿಭಾವಿತ ಮಾನದಂಡಗಳಿಗೆ ಅನುಗುಣವಾಗಿದ್ದ 1,08,632 ಹೆಕ್ಟೇರ್ ಪ್ರದೇಶವನ್ನು ಸೇರಿಸಿ ಮರುವರದಿಯನ್ನು ಸಲ್ಲಿಸಲಾಗಿದೆ. ಈ ಕಡಿತ ಯಾವ ಸಾರ್ವಜನಿಕ ಚರ್ಚೆಯಿಲ್ಲದೆ, ಯಾವ ಸ್ವತಂತ್ರ ಪರಿಸರ ವಿಜ್ಞಾನಿಗಳ ಸಮಿತಿಯ ಪರಿಶೀಲನೆಯಿಲ್ಲದೆ ನಡೆದಿರುವುದು ಅನುಮಾನಕ್ಕೆ ಕಾರಣವಾಗಿದೆ. ಅರಣ್ಯ ಸಂರಕ್ಷಣೆಯಂತಹ ಸೂಕ್ಷ್ಮ ವಿಷಯದಲ್ಲಿ ಈ ರೀತಿಯ ಕಚೇರಿ ಮಟ್ಟದ ಏಕಮುಖ ನಿರ್ಧಾರಗಳು, ಪರಿಸರ ಸಂರಕ್ಷಣೆಗೆ ಮಾಡುವ ಅಪಚಾರ.

ಗೋದಾವರ್ಮನ್ ತೀರ್ಪು ‘ಅರಣ್ಯ’ ಎಂಬ ಪದಕ್ಕೆ ಕಾನೂನು ಅಧಿಸೂಚನೆಯ ಮಿತಿ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಅರಣ್ಯದ ಲಕ್ಷಣಗಳಿರುವ, ಮರಗಳ ಸಾಂದ್ರತೆ ಇರುವ, ಪರಿಸರ ವ್ಯವಸ್ಥೆಯ ಅವಿಭಾಜ್ಯವಾದ ಭೂಭಾಗಗಳನ್ನು ಕಂದಾಯ ದಾಖಲೆಗಳ ಆಧಾರದ ಮೇಲೆ ಹೊರಗಿಡುವಂತಿಲ್ಲ. ಕರ್ನಾಟಕದಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶಗಳು, ಒಂದು ಹೆಕ್ಟೇರ್ಗೆ 50ಕ್ಕಿಂತ ಹೆಚ್ಚು ಮರಗಳಿದ್ದರೂ, ಪರಿಭಾವಿತ ಅರಣ್ಯದ ವ್ಯಾಪ್ತಿಗೆ ಸೇರಿಲ್ಲ.

ಪ್ರಸ್ತುತ ಅಂತಿಮಗೊಂಡಿರುವ 3,30,186 ಹೆಕ್ಟೇರ್ ಪರಿಭಾವಿತ ಅರಣ್ಯ ಪ್ರದೇಶವನ್ನು ಆ ಚೌಕಟ್ಟಿನಿಂದ ಕೈಬಿಡಬೇಕೆನ್ನುವುದು ಪಕ್ಷಾತೀತವಾದ ಒತ್ತಡವಾಗಿದೆ. ಅರಣ್ಯ–ಕಂದಾಯ ಇಲಾಖೆಗಳು ಜಂಟಿ ಸರ್ವೆ ಮಾಡಿ ಅಂತಿಮಗೊಳಿಸಬೇಕಾಗಿದೆ. ಇಲ್ಲಿ ಒಂದು ಮೂಲಭೂತ ಪ್ರಶ್ನೆಯಿದೆ. ಈಗಾಗಲೇ ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳನ್ನು ಪಾಲನೆ ಮಾಡದ ಸರ್ಕಾರ, ಜಂಟಿ ಸರ್ವೆಯಲ್ಲಿ ನ್ಯಾಯಯುತ ಮತ್ತು ಪಾರದರ್ಶಕ ಕ್ರಮ ಅನುಸರಿಸುತ್ತದೆ ಎಂದು ಹೇಗೆ ನಂಬುವುದು? ಅರಣ್ಯವನ್ನು ರಕ್ಷಿಸಬೇಕಾದ ವ್ಯವಸ್ಥೆಯೇ ಅರಣ್ಯವನ್ನು ಕುಗ್ಗಿಸುವ ಸಾಧನವಾಗುತ್ತಿರುವುದು ಅಪಾಯಕಾರಿ ಬೆಳವಣಿಗೆ.

ಪರಿಭಾವಿತ ಅರಣ್ಯಗಳನ್ನು ಸರಿಯಾಗಿ ಗುರ್ತಿಸಿ, ರಕ್ಷಿಸದಿದ್ದಲ್ಲಿ ಆಗುವ ದೂರಗಾಮಿ ಪರಿಣಾಮಗಳು ಅನೇಕ. ಈ ಪ್ರದೇಶಗಳು ಅರಣ್ಯ ಸಂರಕ್ಷಣಾ ಕಾಯ್ದೆಯ ವ್ಯಾಪ್ತಿಗೆ ಬಾರದ ಕಾರಣ, ಗಣಿಗಾರಿಕೆ, ದೊಡ್ಡ ಮೂಲಸೌಕರ್ಯ ಯೋಜನೆಗಳು, ವಿದ್ಯುತ್ ಮಾರ್ಗಗಳು, ಕೈಗಾರಿಕಾ ವಿಸ್ತರಣೆ ಮತ್ತು ರಿಯಲ್ ಎಸ್ಟೇಟ್ ಲಾಬಿಗಳಿಗೆ ಸುಲಭವಾಗಿ ಬಲಿಯಾಗಲಿವೆ. ಪರಿಣಾಮ, ನೀರಿನ ಮೂಲಗಳು ಒಣಗುತ್ತವೆ; ಮಣ್ಣಿನ ಸವಕಳಿ ಹೆಚ್ಚುತ್ತದೆ, ಜೀವವೈವಿಧ್ಯ ನಾಶವಾಗುತ್ತದೆ, ಮಾನವ–ವನ್ಯಜೀವಿ ಸಂಘರ್ಷ ಹೆಚ್ಚುತ್ತದೆ.

ಕರ್ನಾಟಕ ಸರ್ಕಾರ ತಕ್ಷಣವೇ ತನ್ನ ನಿರ್ಧಾರವನ್ನು ಮರುಪರಿಶೀಲಿಸಬೇಕು. ಗೋದಾವರ್ಮನ್ ತೀರ್ಪಿನಂತೆ ಅರಣ್ಯ ಪರಿಕಲ್ಪನೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸ್ವತಂತ್ರ ವೈಜ್ಞಾನಿಕ ಸಮಿತಿಯ ಮೂಲಕ, ಸಾರ್ವಜನಿಕ ಭಾಗವಹಿಸುವಿಕೆಯನ್ನು ಒಳಗೊಂಡು ಪರಿಭಾವಿತ ಅರಣ್ಯಗಳನ್ನು ಮರು ಗುರ್ತಿಸಬೇಕು. ಅರಣ್ಯ ಪ್ರದೇಶದ, ಅದು ಪರಿಭಾವಿತ ಅರಣ್ಯವಾಗಿದ್ದರೂ, ಅದರ ವ್ಯಾಪ್ತಿಯನ್ನು ಕಡಿತಗೊಳಿಸುವುದು ಭವಿಷ್ಯದ ಪೀಳಿಗೆಗಳ ಜೀವಿಸುವ ಹಕ್ಕನ್ನು ಕಸಿದುಕೊಂಡಂತೆ ಆಗುತ್ತದೆ. ಸೊರಬ ತಾಲ್ಲೂಕಿನ ನಿಟ್ಟಕ್ಕಿ ಪ್ರಕರಣ ಅಕ್ರಮ ಒತ್ತುವರಿ ಪ್ರಕ್ರಿಯೆಗೆ ಎಚ್ಚರಿಕೆಯ ಪಾಠವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.