ಮನುಷ್ಯವಿರೋಧಿ ಕೃತ್ಯಗಳನ್ನು ಅಡಗಿಸಿಡುವ ವಿದ್ಯಮಾನಗಳ ಭಾಗವಾಗಿ ಪ್ಯಾಲೆಸ್ಟೀನ್‌ನ ಸಂಕಟಗಳನ್ನು ಅನಾವರಣಗೊಳಿಸುವ ಕಲಾ ಅಭಿವ್ಯಕ್ತಿಗಳ ಪ್ರದರ್ಶನಕ್ಕೆ ಅವಕಾಶ ನಿರಾಕರಿಸಲಾಗುತ್ತಿದೆ. ಆದರೆ, ಈ ನಿರ್ಬಂಧಕ್ಕೆ ಕೇರಳದ ಬರಹಗಾರರು ಹಾಗೂ ಕಲಾವಿದರು ಕಂಡುಕೊಂಡ ಸೃಜನಶೀಲ ಪ್ರತಿರೋಧದ ದಾರಿ ‘ಅಳಿಸುವ ಪ್ರಯತ್ನವನ್ನು ಅಳಿಸಿಹಾಕು’ವಂತಿತ್ತು.