ವನ್ಯಜೀವಿ ಹಾಗೂ ಮಾನವ ಸಂಘರ್ಷದ ಬಗೆಗಿನ ಬಹುತೇಕ ಚಿತ್ರಣಗಳು ಏಕಮುಖವಾಗಿವೆ. ಈ ಸಂಘರ್ಷದಲ್ಲಿ ಪ್ರಾಣಿಗಳ ಬಗೆಗಿನ ಕರುಣೆಯಂತೆಯೇ ಬಾಧಿತರನ್ನೂ ಸಹಾನುಭೂತಿಯಿಂದ ನೋಡಬೇಕಾಗಿದೆ. ‘ಸಹಬಾಳ್ವೆ’ಯ ಪ್ರಯತ್ನ ಹಾಗೂ ವಿಶ್ಲೇಷಣೆಗಳು ವಸ್ತುಸ್ಥಿತಿಯ ಆಧಾರದಲ್ಲಿ ನಡೆಯಬೇಕೇ ಹೊರತು, ಭಾವುಕತೆಯನ್ನು ಆಧರಿಸಿ ಅಲ್ಲ.

ಆ ಭಾನುವಾರದ (ಫೆಬ್ರುವರಿ 7, 2016) ಮಧ್ಯಾಹ್ನ, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯಿಂದ ಬಂದ ಒಂದು ಕರೆ ನನ್ನನ್ನು ಬೆಂಗಳೂರಿನ ಐ.ಟಿ ಕೇಂದ್ರವಾದ ವೈಟ್ಫೀಲ್ಡ್ನ ವಿಬ್ಗ್ಯೋರ್ ಶಾಲೆಗೆ ಕರೆದೊಯ್ದಿತು. ಶಾಲೆಯನ್ನು ಪ್ರವೇಶಿಸಿದ್ದ ಚಿರತೆಯೊಂದನ್ನು ಹಿಡಿಯುವ ಕಾರ್ಯಾಚರಣೆಯಲ್ಲಿ ಇಲಾಖೆಗೆ ನೆರವಾಗುವಂತೆ ನನ್ನನ್ನು ಕೋರಲಾಗಿತ್ತು. ಕಾರ್ಯಾಚರಣೆಯ ವೇಳೆ ತೀವ್ರ ಒತ್ತಡದಲ್ಲಿದ್ದ ಚಿರತೆಯಿಂದ ನನಗೆ ಗಂಭೀರ ವಾದ ಗಾಯಗಳಾದವು. ಹಲವು ಶಸ್ತ್ರಚಿಕಿತ್ಸೆಗಳು, ತಿಂಗಳುಗಳ ಕಾಲದ ಪುನಶ್ಚೇತನದ ಚಿಕಿತ್ಸೆ ಮತ್ತು ಭಾರೀ ಆರ್ಥಿಕ ಹೊರೆಯೊಂದಿಗೆ ಗುಣಮುಖನಾದೆ.

ಘಟನೆಯ ನಂತರ ವರ್ಷವಾದರೂ, ಟ್ಯಾಕ್ಸಿ ಚಾಲಕರು, ‘ಸರ್, ಚಿರತೆ ನುಗ್ಗಿದ್ದ ಶಾಲೆಯಲ್ಲಿದ್ದವರು ನೀವೇನಾ?’ ಎಂದು ಕೇಳುತ್ತಿದ್ದರು. ‘ಹೌದು’ ಎಂದಾಗ, ‘ಬುಕಿಂಗ್ನಲ್ಲಿ ನಿಮ್ಮ ಹೆಸರನ್ನು ನೋಡಿದಾಗಲೇ ನನಗೆ ಗೊತ್ತಾಯಿತು’ ಎಂದು ಹೇಳುತ್ತಿದ್ದರು. ಆ ಘಟನೆ ಸಾರ್ವಜನಿಕ ನೆನಪಿನಲ್ಲಿ ಅಷ್ಟು ಆಳವಾಗಿ ನೆಲಸಿತ್ತು. ಇಂದಿಗೂ ಕೆಲವರು, ‘ಓಹ್, ಶಾಲೆಯಲ್ಲಿ ಈಜುಕೊಳದ ಬಳಿ ಚಿರತೆಯಿಂದ ಗಾಯ ಗೊಂಡವರು ನೀವೇನಾ?’ ಎಂದು ಕೇಳುತ್ತಾರೆ. ಈಗ ಆ ಘಟನೆ ಜನರ ನೆನಪಿನಿಂದ ನಿಧಾನವಾಗಿ ಮಾಯವಾಗುತ್ತಿರಬಹುದು. ಆದರೆ, ಅದು ನನಗೆ ಮಾನವ ಮತ್ತು ವನ್ಯಜೀವಿ ಸಂಘರ್ಷದ ಕಠಿಣ ವಾಸ್ತವ
ಗಳನ್ನು– ವಿಶೇಷವಾಗಿ ಬದುಕುಳಿದವರು ಅನುಭವಿ ಸುವ ನೋವು ಮತ್ತು ಅದರ ದೀರ್ಘಕಾಲೀನ ಪರಿಣಾಮಗಳನ್ನು ಸ್ಪಷ್ಟವಾಗಿ ತಿಳಿಸಿತು.

ಈಗ ನಾನು ಚಿರತೆ ಸಂಘರ್ಷದಿಂದ ಬಳಲುವ ಸಮುದಾಯಗಳೊಂದಿಗೆ ಚರ್ಚಿಸುವಾಗ, ಅವರು ನನ್ನ ಮಾತುಗಳನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ಅವರ ಆತಂಕ, ನಷ್ಟ ಮತ್ತು ಅನಿಶ್ಚಿತತೆಯ ಬಗ್ಗೆ ನನಗೆ ಚೆನ್ನಾಗಿ ಅರಿವಿದೆ ಎಂದು ಹೇಳುತ್ತಾರೆ. ಈ ಅನುಭವವೇ ಮಾನವ–ವನ್ಯಜೀವಿ ಸಂಘರ್ಷಕ್ಕೆ ಒಳಗಾಗುವವರಿಗೆ ನಾವು ಹೆಚ್ಚು ಮಾನವೀಯ ಮತ್ತು ಸಹಾನುಭೂತಿಯ ಪ್ರತಿಕ್ರಿಯೆ ನೀಡಬೇಕು ಎಂಬುದರ ಪರವಾಗಿ ನನ್ನನ್ನು ದೃಢವಾದ ವಕ್ತಾರನನ್ನಾಗಿ ಮಾಡಿದೆ. ವನ್ಯಜೀವಿಗಳಿಂದ ನಷ್ಟ ಅನುಭವಿಸುವ ಕುಟುಂಬಗಳಿಗೆ ಸರ್ಕಾರ ಮತ್ತು ಅಧಿಕಾರಿಗಳು ಹೆಚ್ಚು ದಯಾಳು ಮತ್ತು ಉದಾರ ಆಗಿರಬೇಕು ಎಂದು ನಿರಂತರವಾಗಿ ಹೇಳುತ್ತಿರುತ್ತೇನೆ.

ಚಿರತೆಯಿಂದ ಗಾಯಗೊಂಡ ಘಟನೆಯ ನಂತರ ನನ್ನ ಆರೋಗ್ಯದ ಮೇಲೆ ತೀವ್ರವಾದ ಪರಿಣಾಮ ಗಳಾದವು. ದೀರ್ಘಕಾಲ ನನಗೆ ನಡೆದಾಡುವುದೇ ಒಂದು ಸವಾಲಾಗಿ ಪರಿಣಮಿಸಿತು. ಸಕ್ರಿಯ ಜೀವನ ನಡೆಸುತ್ತಿದ್ದವನು ಸ್ವಲ್ಪ ದೂರ ನಡೆಯುವುದಕ್ಕೂ ಹೋರಾಡುವ ಸ್ಥಿತಿ ಎದುರಾಯಿತು. ಇದರ ಪರಿಣಾಮ ದೇಹದ ಮೇಲಷ್ಟೇ ಅಲ್ಲ, ಮಾನಸಿಕ ಆರೋಗ್ಯದ ಮೇಲೂ ಉಂಟಾಯಿತು. ವೈದ್ಯಕೀಯ ವಿಜ್ಞಾನದಲ್ಲಿನ ಪ್ರಗತಿ ಮತ್ತು ನನ್ನ ಕುಟುಂಬದ ಅಚಲ ಬೆಂಬಲದಿಂದಾಗಿ, 2022ರಲ್ಲಿ ನಾನು ಯಥಾಸ್ಥಿತಿಗೆ ಮರಳಲು ಸಾಧ್ಯವಾಯಿತು.

ನನ್ನ ಚೇತರಿಕೆ ಅಳೆಯಲು ವೈಯಕ್ತಿಕ ಗುರಿಯನ್ನು ನಿಗದಿಪಡಿಸಿಕೊಂಡಿದ್ದೆ. ಪಶ್ಚಿಮ ಘಟ್ಟಗಳಲ್ಲಿರುವ, ನನ್ನ ಪ್ರೀತಿಯ ಕುದುರೆಮುಖ ಶಿಖರವನ್ನು ಏರುವ ಗುರಿಯದು. 2023ರ ನವೆಂಬರ್ನಲ್ಲಿ ಕೊನೆಗೂ ಆ ಶಿಖರದ ಮೇಲೆ ನಿಂತೆ. ಆ ಕ್ಷಣ ಉಲ್ಲಾಸಭರಿತವಾಗಿತ್ತು. ಕೇವಲ ದೈಹಿಕ ಸಾಧನೆಯಷ್ಟೇ ಅಲ್ಲ, ಅನಿರೀಕ್ಷಿತ ಸಂಕಷ್ಟಗಳನ್ನೂ ದೃಢತೆಯಿಂದ ಎದುರಿಸಬಹುದು ಎಂದು ಮನದಟ್ಟಾಯಿತು. ವಿಚಿತ್ರವೆಂದರೆ, ದೃಢತೆಯ ಜೀವನತತ್ತ್ವವನ್ನು ನನಗೆ ಕಲಿಸಿದ್ದು ಒಂದು ಚಿರತೆ. ಆದರೆ, ಅದೇ ಪ್ರಭೇದದ ಹಾಗೂ ಅನೇಕ ಇತರ ವನ್ಯಜೀವಿಗಳ ಭವಿಷ್ಯ ಇಂದು ಹೆಚ್ಚು ಕತ್ತಲೆಯಾಗಿದೆ.

ಚಿರತೆಗಳೊಂದಿಗಿನ ಮಾನವನ ಸಂಘರ್ಷ ಹಲವು ಪಟ್ಟು ಹೆಚ್ಚಾಗಿದೆ. ನೂರಾರು ಚಿರತೆಗಳನ್ನು ಹಿಡಿದು ಸ್ಥಳಾಂತರಿಸಲಾಗಿದೆ ಅಥವಾ ಪುನರ್ವಸತಿ ಕೇಂದ್ರಗಳಿಗೆ ಸಾಗಿಸಲಾಗಿದೆ. ಕೆಲವು ಜನರು ಪ್ರಾಣ ಕಳೆದುಕೊಂಡಿದ್ದಾರೆ; ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಸಂಘರ್ಷದ ಕಾರಣಗಳು ಎಲ್ಲರಿಗೂ ತಿಳಿದಿರುವುದೇ: ಆವಾಸಸ್ಥಾನಗಳ ನಾಶ, ಬಲಿಪ್ರಾಣಿಗಳ ಬೇಟೆ, ಮತ್ತು ಮಾನವ–ಚಿರತೆ ಸಂಘರ್ಷದ ಬಗ್ಗೆ ಅರಿವಿನ ಅಭಾವ. ಆದರೆ, ಪರಿಸ್ಥಿತಿ ಬದಲಾಗುತ್ತಿಲ್ಲ.

ಬಾಧಿತರಲ್ಲಿ ಹೆಚ್ಚಿನವರು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಸಮುದಾಯಗಳು. ಅವರ ಅಸಹಾಯಕತೆಯಿಂದಾಗಿ ಪ್ರತೀಕಾರದ ಕ್ರಮಗಳನ್ನು ಕೈಗೊಳ್ಳಲು ಹೆದರುತ್ತಾರೆ. ಕಳವಳಕಾರಿಯಾದ ವಿಷಯವೆಂದರೆ, ಈ ಅಸಹಾಯಕತೆಯನ್ನು ಕೆಲವು ಎನ್ಜಿಒಗಳು ‘ಮಾನವ–ವನ್ಯಜೀವಿ ಸಹಬಾಳ್ವೆ’ ಎಂಬ ನಾಮಕರಣ ಮಾಡಿ ಅನುದಾನ, ಪ್ರಶಸ್ತಿಗಳು, ಮತ್ತು ಅಂತರರಾಷ್ಟ್ರೀಯ ಮಟ್ಟದ ಮನ್ನಣೆಗೆ ಉಪಯೋಗಿಸಿಕೊಳ್ಳುತ್ತಿವೆ. ಈ ಕಥಾನಕ ಚಿರತೆಗಳಿಗೆ ಮಾತ್ರ ಸೀಮಿತವಲ್ಲ; ಆನೆ, ಹುಲಿ, ಕರಡಿ, ಮೊಸಳೆ ಇನ್ನಿತರ ಹಲವು ವನ್ಯಜೀವಿಗಳ ಸಂಘರ್ಷವನ್ನು ಇದೇ ರೀತಿಯಲ್ಲಿ ಚಿತ್ರಿಸಲಾಗುತ್ತಿದೆ.

ಸಕಲೇಶಪುರ ತಾಲ್ಲೂಕಿನಲ್ಲಿ ಕೆಲಸ ಮಾಡುವ ಸಂಸ್ಥೆಯೊಂದು ಅಲ್ಲಿ ಸಂಘರ್ಷದ ಕಾರಣಕ್ಕೆ ಹಿಡಿಯುತ್ತಿದ್ದ ಆನೆಗಳ ಬಗ್ಗೆ ಸಾಕ್ಷ್ಯಚಿತ್ರವೊಂದನ್ನು ನಿರ್ಮಿಸಿತು. ಅದರಲ್ಲಿ ಆನೆಗಳಿಗೆ ಆಗುತ್ತಿದ್ದ ಹಿಂಸೆ ಯನ್ನು ಬಹು ಹೃದಯಸ್ಪರ್ಶಿಯಾಗಿ ವಿವರಿಸಲಾಗಿತ್ತು, ಮತ್ತು ಆನೆಗಳನ್ನು ಹಿಡಿಯಲೇಬಾರದು ಎಂದು ವಾದಿಸಲಾಗಿತ್ತು. ಆ ಸಂಸ್ಥೆಗೆ ಸಕಲೇಶಪುರ ತಾಲ್ಲೂಕಿನಲ್ಲಿ ಮಾನವ–ಆನೆ ಸಂಘರ್ಷದ ಬಗ್ಗೆ ಕೆಲಸ ಮಾಡಲು ವಿದೇಶಗಳಿಂದ ಹಣ ಬರಲು ಪ್ರಾರಂಭ ವಾದೊಡನೆ ಆನೆಗಳ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿ ಬಿಟ್ಟಿತು. ಅಲ್ಲೀಗ ಹತ್ತಾರು ಆನೆಗಳನ್ನು ಹಿಡಿದರೂ, ವಿದ್ಯುತ್ ಬೇಲಿಯಿಂದ, ಗುಂಡೇಟಿನಿಂದ, ಹಲವು ಅನೈಸರ್ಗಿಕ ಕಾರಣಗಳಿಂದ ಆನೆಗಳು ಸಾಯುತ್ತಿದ್ದರೂ ಆನೆಗಳ ಬಗ್ಗೆ ಇದ್ದ ಅವರ ಪ್ರೀತಿ ಯಾಕೋ ಬತ್ತಿಹೋಗಿಬಿಟ್ಟಿದೆ. ಒಂದೆಡೆ ಆನೆಗಳು ಯಾತನಾಸ್ಥಿತಿಯಲ್ಲಿವೆ, ಅವುಗಳ ಆವಾಸಸ್ಥಾನ ಕಾಣೆ ಯಾಗುತ್ತಿದೆ, ಇನ್ನೊಂದೆಡೆ ಜನರೂ ಸಾಯುತ್ತಿದ್ದಾರೆ. ಆದರೆ, ಆ ಸಂಸ್ಥೆ ಈ ಸನ್ನಿವೇಶವನ್ನು ಆನೆ–ಮಾನವ ಸಹಬಾಳ್ವೆ ಎಂದು ಬಿಂಬಿಸಿ ರಾಷ್ಟ್ರೀಯ, ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ ‘ಒಗ್ಗರಣೆ ಎಣ್ಣೆ ಪಾತ್ರೆ ಮುನ್ನೆಲೆಗೆ ಬಂದ ಹಾಗೆ’ ಡೋಲು, ತುತ್ತೂರಿ ಊದಿಸಿಕೊಳ್ಳುತ್ತಿದೆ. ಈ ಮಧ್ಯೆ ಸಮುದಾಯಗಳು ಮತ್ತು ಆನೆಗಳು ಬೆಲೆ ತೆರುತ್ತಲೇ ಇವೆ.

ಇತ್ತೀಚೆಗೆ ಮಹಾರಾಷ್ಟ್ರದ ಜುನ್ನಾರ್ ವಿಧಾನ ಸಭಾ ಕ್ಷೇತ್ರದ ಶಾಸಕ ಶರದ್ ಸೋನಾವನೆ ಅವರು ಚಿರತೆಯ ಉಡುಗೆಯನ್ನು ತೊಟ್ಟು ಶಾಸಕಾಂಗ ಸಭೆಗೆ ಬಂದಿದ್ದರು. ಅವರ ಕ್ಷೇತ್ರದಲ್ಲಿ ಚಿರತೆ ಸಂಘರ್ಷ ಅತಿಯಾಗಿದೆಯೆಂದು ಪ್ರತಿಭಟನೆ ವ್ಯಕ್ತಪಡಿಸಿದರು. ಜುನ್ನಾರ್ ತಾಲ್ಲೂಕಿನಲ್ಲಿ ಬಹುತೇಕ ಚಿರತೆಗಳಿ ರುವುದು ಕಬ್ಬಿನ ಗದ್ದೆಗಳಲ್ಲಿ ಮತ್ತು ಅವುಗಳಿಗೆ ಹೆಚ್ಚಾಗಿ ಜಾನುವಾರುಗಳು ಮತ್ತು ನಾಯಿಗಳೇ ಆಹಾರ. ದುರದೃಷ್ಟವಶಾತ್, ಆ ಪರಿಸರದಲ್ಲಿ ಅತಿಯಾದ ಜಾನುವಾರು ನಷ್ಟ, ಪ್ರಾಣಹಾನಿ ಆಗುತ್ತಲೇ ಇದೆ. ವನ್ಯಜೀವಿ ವಿಜ್ಞಾನಿಯೊಬ್ಬರು ಅಲ್ಲಿ ಅಧ್ಯಯನ ನಡೆಸಿ, ಚಿರತೆಗಳು ಮಾನವರೊಡನೆ ಯಾವ ತೊಂದರೆ ಇಲ್ಲದೆ ಸಹಬಾಳ್ವೆ ನಡೆಸುತ್ತಿದ್ದಾರೆಂದು ಏಕಪಕ್ಷೀಯ ವಾಗಿ ಘೋಷಿಸಿಬಿಟ್ಟರು. ಅವರಿಗೆ ಅಂತರರಾಷ್ಟ್ರೀಯ ಮಟ್ಟದ ಹಾರ–ತುರಾಯಿಗಳ, ಸಹಾಯಧನದ ಜೇನಿನ ಹೊಳೆ ಹರಿದುಬಂತು. ಕೆಲವೇ ತಿಂಗಳುಗಳಲ್ಲಿ ಆ ವಿಜ್ಞಾನಿ ‘ಜೇನು ಕಿತ್ತ ಮೇಲೆ ನಂದೇನ್ ಕೆಲ್ಸ’ ಎನ್ನುವಂತೆ ಇನ್ನೊಂದು ಜೇನುಗೂಡಿಗೆ ಹಾರಿಬಿಟ್ಟರು. ಇಂದು ಜುನ್ನಾರ್ ತಾಲ್ಲೂಕು ದೇಶದಲ್ಲೇ ಮಾನವ–ಚಿರತೆ ಸಂಘರ್ಷಕ್ಕೆ ಅಪಖ್ಯಾತಿ ಪಡೆದಿದೆ. ಭಯ ಮತ್ತು ಅಸಹಾಯಕತೆಯನ್ನು ಸಹಬಾಳ್ವೆ ಎಂದು ಕರೆಯುವುದು ಘೋರ ಅಪರಾಧ.

ಸರ್ಕಾರದ ಪ್ರತಿಕ್ರಿಯೆಗಳು ಸಾಮಾನ್ಯವಾಗಿ ತಡವಾಗುತ್ತವೆ; ಕ್ರಮ ಕೈಗೊಳ್ಳುವ ಹೊತ್ತಿಗೆ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿರುತ್ತದೆ. ಕೆಲವು ಎನ್ಜಿಒಗಳು ಗೆದ್ದೆತ್ತಿನ ಬಾಲ ಹಿಡಿಯುತ್ತಿವೆ. ಸಂಘರ್ಷ ಹೆಚ್ಚಿದಂತೆವನ್ಯಜೀವಿ ಸಂರಕ್ಷಣೆಗೆ ಸ್ಥಳೀಯ ಸಮುದಾಯಗಳ ಬೆಂಬಲ ಕುಸಿದಿದೆ, ಪ್ರತೀಕಾರದ ಹೊಗೆಯಾಡುತ್ತಿದೆ. ವನ್ಯಜೀವಿ ಸಂರಕ್ಷಣೆ ಎಂದರೆ ಶಾಸಕಾಂಗ ತಿರಸ್ಕಾರದ ಪ್ರತಿಕ್ರಿಯೆ ತೋರುತ್ತಿದೆ. ಒತ್ತಡಗಳಿಂದ ವನ್ಯಜೀವಿಗಳ ಪರವಾಗಿ ಪ್ರಬಲವಾದ ನಿಲುವು ಗಳನ್ನು ಕಾರ್ಯಾಂಗ ತೆಗೆದುಕೊಳ್ಳುತ್ತಿಲ್ಲ. ಮಾಧ್ಯಮಗಳು ಜನರಲ್ಲಿ ಅರಿವು ಮೂಡಿಸುವ ಬದಲು ಭಯದ ವಾತಾವರಣ ನಿರ್ಮಿಸುವ ಹಾಗೆ ಸುದ್ದಿಗಳನ್ನು ಬಿತ್ತರಿಸುತ್ತಿವೆ. ಈ ಎಲ್ಲ ಗೊಂದಲಗಳ ಮಧ್ಯೆ,ಅತಿದೊಡ್ಡ ನಷ್ಟ ಅನುಭವಿಸುತ್ತಿರುವುದು ವನ್ಯಜೀವಿಗಳು.

ಆ ದಿನದ ಗಾಯದ ಗುರುತುಗಳು ಈಗ ನನ್ನ ಜೀವನದ ಶಾಶ್ವತ ಭಾಗವಾಗಿವೆ. ಕೆಲವು ಕಾಣಿಸುವಹಾಗಿವೆ, ಕೆಲವು ಅಡಗಿವೆ. ಆದರೆ, ನನಗೆ ಹೆಚ್ಚಿನನೋವು ತಂದಿರುವುದು ಆ ದಿನದ ಘಟನೆಯಲ್ಲ, ಪ್ರಸ್ತುತ ದೇಶದಲ್ಲಿ ಮಾನವ–ವನ್ಯಜೀವಿ ಸಂಘರ್ಷ ಸಾಗುತ್ತಿರುವ ದಿಕ್ಕು. ಗಾಯದ ಗುರುತುಗಳನ್ನು ನನ್ನ ವೈಫಲ್ಯದ ಸಂಕೇತಗಳೆಂದು ನೋಡಬಹುದಿತ್ತು. ಆದರೆ, ಅವು ನಾನು ಬದುಕಿ ಉಳಿದ ಸಾಕ್ಷ್ಯಗಳು. 7ನೇ ಫೆಬ್ರುವರಿ 2016 ನನ್ನ ಅಂತಿಮ ದಿನವಾಗಿರಲಿಲ್ಲ, ಅದು ನನ್ನ ಉಳಿದ ಜೀವನದ ಮೊದಲ ದಿನವಾಗಿದೆ. ಆ ದೃಷ್ಟಿಕೋನವೇ ನನ್ನನ್ನು ಮಾನವ–ವನ್ಯಜೀವಿ ಸಂಘರ್ಷದ ಬಗ್ಗೆ ಮಾತನಾಡುವಂತೆ ಮಾಡುತ್ತದೆ.

ನಮಗೆ ನಿಜವಾಗಿಯೂ ಸಹಬಾಳ್ವೆಯಲ್ಲಿ ನಂಬಿಕೆ ಇದ್ದರೆ, ಘೋಷಣೆಗಳನ್ನು ಮೀರಿ ನಿಲ್ಲಬೇಕು. ಮಾನವ–ವನ್ಯಜೀವಿ ಸಂಘರ್ಷವನ್ನು ಎದುರಿಸಲು ಸಹಾನುಭೂತಿ, ಸಮಯೋಚಿತ ಪ್ರತಿಕ್ರಿಯೆ, ಬಾಧಿತ ಸಮುದಾಯಗಳೊಂದಿಗೆ ಪ್ರಾಮಾಣಿಕ ಸಂವಹನ ಮತ್ತು ಸಂಘರ್ಷದ ಮೂಲ ಕಾರಣಗಳನ್ನು ಎದುರಿಸುವ ಪ್ರಾಮಾಣಿಕ ಪ್ರಯತ್ನಗಳು ಅಗತ್ಯ. ಆಗ ಮಾತ್ರ ಸಹಬಾಳ್ವೆಗೆ ನಿಜವಾದ ಅವಕಾಶ (ಘೋಷಣೆಯಾಗಿ ಅಲ್ಲ) ನೀಡಲು ಸಾಧ್ಯವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.