‘ಮಲಯಾಳಂ ಭಾಷಾ ಮಸೂದೆ 2025’ ವಿವಾದಕ್ಕೆ ಗುರಿಯಾಗಿದೆ. ಒಂದೆಡೆ, ಕರ್ನಾಟಕ ಹಾಗೂ ಕೇರಳ ರಾಜ್ಯದ ಮುಖ್ಯಮಂತ್ರಿಗಳ ನಡುವೆ ವಾಗ್ವಾದ ನಡೆಯುತ್ತಿದ್ದರೆ, ಮತ್ತೊಂದೆಡೆ ಕರ್ನಾಟಕ ಗಡಿನಾಡ ಅಭಿವೃದ್ಧಿ ಪ್ರಾಧಿಕಾರವು ಕೇರಳದ ರಾಜ್ಯಪಾಲರನ್ನು ಭೇಟಿಯಾಗಿದೆ; ಕನ್ನಡ ಭಾಷಿಕರಿಗೆ ಮತ್ತು ಕನ್ನಡ ಮಾಧ್ಯಮದ ಮಕ್ಕಳಿಗೆ ಮಾರಕವಾಗುವ ಅಂಶಗಳನ್ನು ಕೈಬಿಡಲು ಒತ್ತಾಯಿಸಿದೆ. ಈ ಬೆಳವಣಿಗೆಗಳನ್ನು, ರಾಜಕೀಯ ಸಂಘರ್ಷಕ್ಕಿಂತ ಸಂವಿಧಾನದ ಹಾಗೂ ಭಾಷಾ ಕಲಿಕೆಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ರೂಪಿಸಿದ ‘ಕನ್ನಡ ಭಾಷಾ ಕಲಿಕಾ ಅಧಿನಿಯಮ 2015’ರ ಹಿನ್ನೆಲೆಯಲ್ಲಿ ವಿಶ್ಲೇಷಿಸಬೇಕಿದೆ.

ಭಾರತೀಯ ಸಂವಿಧಾನವು ದೇಶದ ಭಾಷಾ ವೈವಿಧ್ಯ ಗುರ್ತಿಸಿ, ಪ್ರಜಾಸತ್ತಾತ್ಮಕ ಚೌಕಟ್ಟಿನಲ್ಲಿ ಭಾಷಾ
ಹಕ್ಕುಗಳನ್ನು ವ್ಯವಸ್ಥಿತಗೊಳಿಸಿದೆ. ರಾಜ್ಯಗಳಿಗೆ ತಮ್ಮ ಪ್ರಾದೇಶಿಕ ಭಾಷೆಗಳನ್ನು ಅಧಿಕೃತ ಭಾಷೆಗಳಾಗಿ ಘೋಷಿಸಿಕೊಳ್ಳಲು ಸಂವಿಧಾನವು ಅವಕಾಶಗಳನ್ನು ನೀಡಿದ್ದರೂ, ಅದಕ್ಕೆ ಮಿತಿಗಳನ್ನೂ ವಿಧಿಸಿದೆ.

ಸಂವಿಧಾನದ ವಿಧಿ 345ರ ಪ್ರಕಾರ, ಯಾವುದೇ ರಾಜ್ಯವು ತನ್ನ ಶಾಸನಮಂಡಳಿಯ ಮೂಲಕ ಒಂದು ಅಥವಾ ಹೆಚ್ಚು ಭಾಷೆಗಳನ್ನು ತನ್ನ ಅಧಿಕೃತ ಭಾಷೆಗಳಾಗಿ ಘೋಷಿಸಬಹುದು. ಇದು ರಾಜ್ಯಗಳಿಗೆ ತಮ್ಮ ಭಾಷಾ ಅನನ್ಯತೆಯನ್ನು ಕಾನೂನಾತ್ಮಕವಾಗಿ ಸ್ಥಾಪಿಸುವ ಅಧಿಕಾರ ನೀಡುತ್ತದೆ. ಈ ಅವಕಾಶವನ್ನು ಬಳಸಿಕೊಂಡು ತಮಿಳುನಾಡು, ಕರ್ನಾಟಕ ಹಾಗೂ ಕೇರಳ ತಂತಮ್ಮ ಭಾಷೆಗಳನ್ನು ಅಧಿಕೃತ ಭಾಷೆಗಳೆಂದು ಕ್ರಮವಾಗಿ 1956, 1962 ಮತ್ತು 1969ರಲ್ಲಿಯೇ ಘೋಷಿಸಿಕೊಂಡಿವೆ.

ಸಂವಿಧಾನದ ವಿಧಿ 346, ರಾಜ್ಯ ಮತ್ತೊಂದು ರಾಜ್ಯದ ಜೊತೆ ಮತ್ತು ಕೇಂದ್ರ ಸರ್ಕಾರದ ನಡುವೆ ಸಂವಹನಕ್ಕೆ ಬಳಸಬೇಕಾದ ಭಾಷೆಯ ಬಗ್ಗೆ ಪ್ರಸ್ತಾಪಿಸುತ್ತ, ಎರಡು ಅಥವಾ ಮೂರು ರಾಜ್ಯಗಳು ಹಿಂದಿಯನ್ನು ಅಧಿಕೃತ ಸಂವಹನ ಭಾಷೆಯಾಗಿ ಒಪ್ಪುವುದಾದರೆ, ಆ ಭಾಷೆಯನ್ನು ಸಂವಹನ ಭಾಷೆಯನ್ನಾಗಿ ಬಳಸಬಹುದೆಂದು ಹೇಳುತ್ತದೆ. ಸಾಮಾನ್ಯವಾಗಿ ಇಂಗ್ಲಿಷ್ ಅಥವಾ ಹಿಂದಿಯನ್ನು ಸಂಪರ್ಕ ಭಾಷೆಯನ್ನಾಗಿ ಬಳಸುವ ಅವಕಾಶವನ್ನು ಇದು ಒದಗಿಸುತ್ತದೆ.

ವಿಧಿ 347ರ ಪ್ರಕಾರ ಸಂವಿಧಾನದಲ್ಲಿರುವ ಮತ್ತೊಂದು ಪ್ರಮುಖ ಅಂಶ, ಯಾವುದೇ ರಾಜ್ಯದಲ್ಲಿ, ರಾಜ್ಯದ ಅಧಿಕೃತ ಭಾಷೆಯನ್ನು ಹೊರತುಪಡಿಸಿ ಮತ್ತೊಂದು ಭಾಷೆ ಮಾತನಾಡುವ ದೊಡ್ಡ ಜನಸಂಖ್ಯೆಯಿದ್ದಲ್ಲಿ, ಅಗತ್ಯವಾದರೆ ರಾಷ್ಟ್ರಪತಿ ಅವರು ಅಂತಹ ಭಾಷೆಗೆ ರಾಜ್ಯದಲ್ಲಿ ಅಥವಾ ನಿರ್ದಿಷ್ಟ ಭೌಗೋಳಿಕ ಪ್ರದೇಶದಲ್ಲಿ ಅಧಿಕೃತ ಭಾಷೆಯ ಸ್ಥಾನ ನೀಡಲು ನಿರ್ದೇಶಿಸಬಹುದು. ಇದು ಭಾಷಾ ಅಲ್ಪಸಂಖ್ಯಾತರ ರಕ್ಷಣೆಗೆ ಸಂವಿಧಾನದಲ್ಲಿನ ಒಂದು ಪ್ರಮುಖ ವ್ಯವಸ್ಥೆಯಾಗಿದೆ. ಇದರಿಂದ 8ನೇ ಶೆಡ್ಯೂಲ್ನಲ್ಲಿರುವ 22 ಭಾಷೆಗಳಿಗೂ ರಾಷ್ಟ್ರೀಯ ಮಟ್ಟದಲ್ಲಿ ಸಾಂವಿಧಾನಿಕ ಮಾನ್ಯತೆ ದೊರೆಯುತ್ತದೆ. ವಿಧಿ 345ರಲ್ಲಿರುವ ಸಂವಿಧಾನಾತ್ಮಕ ಸ್ವಾತಂತ್ರ್ಯ ಮತ್ತು ಅವಕಾಶ ಬಳಸಿಕೊಂಡು, ರಾಜ್ಯಗಳು ತಮ್ಮ ಭಾಷೆಗಳನ್ನು ಆಡಳಿತ, ಶಿಕ್ಷಣ, ನ್ಯಾಯಾಂಗ, ಇತ್ಯಾದಿ ಕ್ಷೇತ್ರಗಳಲ್ಲಿ ಅಧಿಕೃತ ಭಾಷೆಯಾಗಿ ಅಳವಡಿಸಿಕೊಳ್ಳಬಹುದು. ಈ ಸ್ವಾತಂತ್ರ್ಯ ಕನ್ನಡ, ತಮಿಳು, ತೆಲುಗು, ಮಲಯಾಳ, ಮುಂತಾದ ಭಾಷೆಗಳ ಅಭಿವೃದ್ಧಿಗೆ ದೊಡ್ಡಮಟ್ಟದಲ್ಲಿ ನೆರವಾಗಿದೆ.

ರಾಜ್ಯಗಳಿಗಿರುವ ಈ ಸಂವಿಧಾನಾತ್ಮಕ ಅವಕಾಶದ ಬಗ್ಗೆ ಮಾತನಾಡುವಾಗ ಇತಿಮಿತಿಗಳ ಬಗ್ಗೆಯೂ ತಿಳಿಯಬೇಕಾಗುತ್ತದೆ. ಸಂವಿಧಾನದ ವಿಧಿ 29 ಮತ್ತು 30ರ ಅನ್ವಯ, ಭಾಷಾ ಮತ್ತು ಧಾರ್ಮಿಕ ಅಲ್ಪಸಂಖ್ಯಾತರು ತಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸಿಕೊಳ್ಳುವ ಮೂಲಭೂತ ಹಕ್ಕನ್ನು ಹೊಂದಿದ್ದಾರೆ. ರಾಜ್ಯಗಳು ಅಧಿಕೃತ ಭಾಷೆಯನ್ನು ಕಡ್ಡಾಯಗೊಳಿಸುವಾಗ ಈ ಹಕ್ಕುಗಳಿಗೆ ಧಕ್ಕೆಯಾಗದಂತೆ ನೀತಿ–ಕಾನೂನುಗಳನ್ನು ರೂಪಿಸಬೇಕಾಗುತ್ತದೆ. ಜೊತೆಗೆ, ವಿಧಿ 350ಎ ಭಾಷಾ ಅಲ್ಪಸಂಖ್ಯಾತ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲಿ ಒದಗಿಸಲು ರಾಜ್ಯಗಳು ಮತ್ತು ಸ್ಥಳೀಯ ಸಂಸ್ಥೆಗಳಿಗೆ ನಿರ್ದೇಶಿಸುತ್ತದೆ. ವಿಧಿ 350ಬಿ ಭಾಷಾ ಅಲ್ಪಸಂಖ್ಯಾತರ ಹಿತರಕ್ಷಣೆಗಳನ್ನು ತನಿಖೆ ಮಾಡಲು ಮತ್ತು ವರದಿ ಮಾಡಲು ರಾಷ್ಟ್ರಪತಿ ಅವರು ವಿಶೇಷ ಅಧಿಕಾರಿಯನ್ನು ನೇಮಿಸಲು ಅವಕಾಶ ನೀಡುತ್ತದೆ. ಇದು ಭಾಷಾವೈವಿಧ್ಯ ಮತ್ತು ಸಮಾನತೆಯನ್ನು ಖಾತರಿಗೊಳಿಸುತ್ತದೆ; ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಅವರ ಮಾತೃಭಾಷೆಯಲ್ಲಿ ಶಿಕ್ಷಣ ದೊರೆಯಬೇಕೆಂಬ ನೈತಿಕ ಜವಾಬ್ದಾರಿಯನ್ನು ರಾಜ್ಯಗಳಿಗೆ ವಿಧಿಸುತ್ತದೆ. ಒಟ್ಟಾರೆ, ರಾಜ್ಯಗಳು ರೂಪಿಸುವ ಭಾಷಾನೀತಿಗಳು ದೇಶ ಅಥವಾ ಪ್ರಾದೇಶಿಕ ಸಂಘರ್ಷಗಳಿಗೆ ಕಾರಣವಾಗಬಾರದು ಎಂಬುದು ಸಂವಿಧಾನದ ಮೂಲತತ್ತ್ವ ಹಾಗೂ ಆಶಯ. ಈ ಹಿನ್ನೆಲೆಯಲ್ಲಿ, ರಾಜ್ಯಗಳು ಭಾಷಾನೀತಿ ರೂಪಿಸುವಾಗ ಪ್ರಾದೇಶಿಕ ಸಹಕಾರ, ಸಾಮರಸ್ಯ, ಕೊಡು–ಕೊಳ್ಳುವಿಕೆ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ದಕ್ಷಿಣ ಭಾರತದಲ್ಲಿ ಅನಾದಿಕಾಲದಿಂದಲೂ ನಡೆದುಬಂದಿರುವ ಭ್ರಾತೃತ್ವವನ್ನು ಗಮನದಲ್ಲಿ ಇರಿಸಿಕೊಳ್ಳಬೇಕಾಗಿದೆ.

ತಮಿಳುನಾಡಿನ ‘ತಮಿಳು ಭಾಷಾ ಕಲಿಕಾ ಕಾಯ್ದೆ’ (2006), ಕರ್ನಾಟಕದ ‘ಕನ್ನಡ ಭಾಷಾ ಕಲಿಕಾ
ಕಾಯ್ದೆ’ (2015) ಮತ್ತು ಕೇರಳ ತರಲು ಹೊರಟಿರುವ ‘ಮಲಯಾಳಂ ಭಾಷಾ ಮಸೂದೆ 2025’ರಲ್ಲಿ ಕೆಲವು ಮೂಲಭೂತ ಸಾಮ್ಯತೆಗಳಿವೆ. ತಮ್ಮ ಭಾಷೆಯ ಅನನ್ಯತೆಯನ್ನು ಸಂರಕ್ಷಿಸುವ ಮೂಲಕ ಶಿಕ್ಷಣದಲ್ಲಿ ತಮ್ಮ ಭಾಷೆಗಳನ್ನು ಕನಿಷ್ಠ ಒಂದು ಭಾಷೆಯನ್ನಾಗಿಯಾದರೂ ಕಲಿಸುವ ಮೂಲಕ, ಇಂದಿನ ಆಂಗ್ಲಭಾಷೆಯ ಯಜಮಾನಿಕೆಯ ಶಿಕ್ಷಣದ ಖಾಸಗೀಕರಣದ ಜಗತ್ತಿನಲ್ಲಿ ತಮ್ಮ ನುಡಿಯನ್ನು ಉಳಿಸಿ ಬೆಳೆಸುವ ಕಳಕಳಿ ಇದೆ. ತಾಯ್ನುಡಿ ಕಲಿಕೆಯು, ಭಾಷೆಯನ್ನು ಉಳಿಸಿ ಬೆಳೆಸುವಲ್ಲಿ ಮತ್ತು ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಅಗತ್ಯವಾದ ಸಾಧನವೆಂದು ಪರಿಗಣಿಸಲಾಗಿದೆ. ಸಾಮಾನ್ಯವಾಗಿ ಈ ಅಂಶಗಳ ಬಗ್ಗೆಯೂ ಯಾರಿಗೂ ತಕರಾರಿಲ್ಲ.

ತಕರಾರಿರುವುದು, ನಮ್ಮ ಭಾಷೆಯನ್ನು ಉಳಿಸಿ ಬೆಳೆಸುವ ಭರದಲ್ಲಿ, ಸಂವಿಧಾನದ ಮಾನ್ಯತೆ ಇರುವ ಉಳಿದೆಲ್ಲ ಭಾಷೆ ಅಥವಾ ರಾಜ್ಯದ ಉಳಿದ ಭಾಷಾ ಸಮುದಾಯಗಳ ನಿರ್ದಿಷ್ಟ ಭಾಷೆಗಳನ್ನು, ಭಾಷಾ ಶ್ರೇಷ್ಠತೆ ಅಥವಾ ಭಾಷಾ ದುರಭಿಮಾನದ ನೆಲೆಯಲ್ಲಿ ಮೂಲೆಗುಂಪಾಗಿಸುವ ಪ್ರಯತ್ನದ ಬಗ್ಗೆ. ಉದ್ದೇಶಿತ ಮಲಯಾಳಂ ಭಾಷಾ ಮಸೂದೆಯ ಬಗ್ಗೆ ಕರ್ನಾಟಕದ ಪ್ರಮುಖ ತಕರಾರು ಇದಾಗಿದೆ. ಕೇರಳದ ಗಡಿ ಜಿಲ್ಲೆಗಳಲ್ಲಿರುವ ಭಾಷಾ ಅಲ್ಪಸಂಖ್ಯಾತರ (ಕೆಲವು ಜಿಲ್ಲೆಯಲ್ಲಿ ಅವರೇ ಬಹು ಸಂಖ್ಯಾತರು) ಮಕ್ಕಳ ಶಿಕ್ಷಣದ ಹಕ್ಕನ್ನು ಕಾಪಾಡುವ ವಿಷಯದಲ್ಲಿ ಮಸೂದೆ ಗೊಂದಲಮಯವಾಗಿದೆ.

ಉದ್ದೇಶಿತ ಮಸೂದೆಯ ಪ್ರಕರಣ 6(1)ರ ಅನ್ವಯ, ಹತ್ತನೇ ತರಗತಿಯವರೆಗೆ ಕೇರಳದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಲಯಾಳ ಕಡ್ಡಾಯ ಪ್ರಥಮ ಭಾಷೆಯಾಗಿದೆ. ಪ್ರಕರಣ 6(3)ರ ಅಡಿಯಲ್ಲಿ, ಮಲಯಾಳ ಹೊರತುಪಡಿಸಿ ಬೇರೆ ಯಾವುದೇ ಭಾಷೆಯನ್ನು ಮಾತೃಭಾಷೆಯಾಗಿ ಹೊಂದಿರುವ ವಿದ್ಯಾರ್ಥಿಗಳಿಗೆ ಅವರ ಮಾತೃಭಾಷೆಯ ಜೊತೆಗೆ ಮಲಯಾಳ ಕಲಿಯಲು ಅವಕಾಶ ನೀಡಲಾಗುವುದೆಂದು ಹೇಳುತ್ತದೆ. ಅಂದರೆ, ಕನ್ನಡ ಭಾಷೆಯ ಮಕ್ಕಳು ಮಲಯಾಳ ಭಾಷೆಯನ್ನು ಕಡ್ಡಾಯ ಪ್ರಥಮ ಭಾಷೆಯಾಗಿ ಕಲಿಯಬೇಕೆ ಅಥವಾ ಕನ್ನಡ ಭಾಷೆಯನ್ನು ಪ್ರಥಮ ಭಾಷೆಯನ್ನಾಗಿ ಕಲಿಯುವ ಮೂಲಕ ಮಲಯಾಳ ಭಾಷೆಯನ್ನು ಕಲಿಯಲು ಅವಕಾಶವಿದೆಯೇ ಎಂಬ ಗೊಂದಲವಿದೆ. ಅಂದರೆ, ಕನ್ನಡವೂ ಸೇರಿದಂತೆ ಇತರೆ ಭಾಷಾ ಅಲ್ಪಸಂಖ್ಯಾತ ಶಾಲೆಗಳಲ್ಲಿ, ಶಿಕ್ಷಣ ಮಾಧ್ಯಮ ಮಾತೃಭಾಷೆ ಆಗಿದ್ದಾಗ್ಯೂ, ಮಕ್ಕಳು ತಮ್ಮ ತಾಯ್ನುಡಿಯನ್ನು ಪ್ರಥಮ ಭಾಷೆಯನ್ನಾಗಿ ಕಲಿಯುವ ಅವಕಾಶವನ್ನು ಕಸಿಯುವ ಆತಂಕವನ್ನು ಮಸೂದೆ ಸೃಷ್ಟಿಸಿದೆ. ಇದು ಸಂವಿಧಾನದ ಮೂಲತತ್ತ್ವಕ್ಕೆ ವಿರುದ್ಧ.

ಇದೇ ವಿಷಯಕ್ಕೆ ಸಂಬಂಧಿಸಿದಂತೆ, ಕನ್ನಡ ಭಾಷಾ ಕಲಿಕಾ ಅಧಿನಿಯಮ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಯುವ ಅವಕಾಶವನ್ನು ನೀಡುತ್ತದೆ. ಜೊತೆಗೆ, ತಾಯ್ನುಡಿ ಕನ್ನಡವಲ್ಲದ ವಿದ್ಯಾರ್ಥಿಗಳಿಗೆ ತಮ್ಮ ತಾಯ್ನುಡಿಯನ್ನು ಮೂರನೇ ಭಾಷೆಯಾಗಿ ಕಲಿಯಲು ಅವಕಾಶ ನೀಡುತ್ತದೆ. ಉದಾಹರಣೆಗೆ, ಕರ್ನಾಟಕದಲ್ಲಿ ಮಲಯಾಳ, ತಮಿಳು, ತೆಲುಗು, ಉರ್ದು, ಇತ್ಯಾದಿ ಮಾಧ್ಯಮದಲ್ಲಿ ಕಲಿಯುತ್ತಿರುವ ಮಕ್ಕಳು ತಮ್ಮ ಮಾತೃಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಕಲಿಯುವ ಅವಕಾಶವನ್ನು ಕಲ್ಪಿಸುತ್ತದೆ. ಉದಾಹರಣೆಗೆ, ಕರ್ನಾಟಕದಲ್ಲಿ ಮಲಯಾಳ ಮಾಧ್ಯಮದಲ್ಲಿ ಕಲಿಯುತ್ತಿರುವ ಕೇರಳದ ಮಕ್ಕಳು, ತಮ್ಮ ತಾಯ್ನುಡಿ ಮಲಯಾಳ ಅನ್ನು ಮೊದಲ ಭಾಷೆಯಾಗಿ ತೆಗೆದುಕೊಂಡರೆ, ಕನ್ನಡ ಭಾಷೆಯನ್ನು ಎರಡನೇ ಭಾಷೆಯನ್ನಾಗಿ ಅಥವಾ ಕನ್ನಡವನ್ನು ಮೊದಲ ಭಾಷೆಯಾಗಿ ತೆಗೆದುಕೊಂಡರೆ ಮಲಯಾಳವನ್ನು ಎರಡನೇ ಭಾಷೆಯಾಗಿ ತೆಗೆದುಕೊಳ್ಳುವ ಅವಕಾಶವನ್ನು ಕಾಯ್ದೆ ಕಲ್ಪಿಸಿದೆ. ಕನ್ನಡ ಕಲಿಕಾ ಅಧಿನಿಯಮವು ಬಹುಭಾಷಿಕತೆಯ ನೆಲೆಯಲ್ಲಿ ಒಳಗೊಳ್ಳುವಿಕೆಯ ತತ್ತ್ವವನ್ನು ಪ್ರತಿಪಾದಿಸಿದರೆ, ಮಲಯಾಳಂ ಮಸೂದೆಯು ಭಾಷಾ ಪ್ರಾಬಲ್ಯವನ್ನು ಮೆರೆದು ಉಳಿದ ಭಾಷೆಗಳನ್ನು ಹೊರದೂಡುವ ತತ್ತ್ವವನ್ನು ಒಳಮಾಡಿಕೊಂಡಿದೆ.

ಭಾಷಾನೀತಿಗಳು ಒಳಗೊಳ್ಳುವಿಕೆಯ ನೀತಿಗಳಾಗಬೇಕೇ ಹೊರತು ಹೊರಗಿಡುವ ಸ್ವರೂಪ ಹೊಂದಬಾರದು. ಈ ಹಿನ್ನೆಲೆಯಲ್ಲಿ, ಕರ್ನಾಟಕದ ಮುಖ್ಯಮಂತ್ರಿ ಸಾಂವಿಧಾನಿಕ ಮತ್ತು ಭಾಷಾ ಸಮಾನತೆಯ ನೆಲೆಯಲ್ಲಿ ಎತ್ತಿರುವ ಪ್ರಶ್ನೆಗಳನ್ನು ಕೇರಳದ ಮುಖ್ಯಮಂತ್ರಿ ರಾಜಕೀಯ ಪ್ರತಿಷ್ಠೆಯಾಗಿ ನೋಡದೆ, ಕರ್ನಾಟಕದಲ್ಲಿ ನೆಲೆಸಿರುವ ಮಲಯಾಳಿಗಳು ಮತ್ತು ಕೇರಳದಲ್ಲಿ ನೆಲೆಸಿರುವ ಕನ್ನಡಿಗರ ನಡುವಿನ ಶಾಂತಿ, ಸಹಬಾಳ್ವೆ ಮತ್ತು ಸಾಮರಸ್ಯದ ವಿಷಯವನ್ನಾಗಿ ನೋಡುವುದು ಹಾಗೂ ಉದ್ದೇಶಿತ ಮಸೂದೆಗೆ ಸೂಕ್ತ ತಿದ್ದುಪಡಿ ತರುವುದು ಸಾಂವಿಧಾನಿಕ ನಡೆಯಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.