'ಪ್ಲಾಸ್ಟಿಕ್ ಮಾಲಿನ್ಯವನ್ನು ಕೊನೆಗೊಳಿಸುವುದು'. 2025ರ ವಿಶ್ವ ಪರಿಸರ ದಿನದ ಥೀಮ್ "ಪ್ಲಾಸ್ಟಿಕ್ ಮಾಲಿನ್ಯದ ಅಂತ್ಯ" ಎನ್ನುವುದು ಪ್ಲಾಸ್ಟಿಕ್ ತ್ಯಾಜ್ಯದಿಂದ ಉಂಟಾಗುತ್ತಿರುವ ಪರಿಸರ ಮತ್ತು ಆರೋಗ್ಯ ಸಂಕಷ್ಟವನ್ನು ಎದುರಿಸುವ ಅಗತ್ಯದ ಕುರಿತು ಜಾಗತಿಕ ಒಗ್ಗಟ್ಟಿನ ಅಭಿವ್ಯಕ್ತಿಯಾಗಿದೆ.

ಪ್ರತಿವರ್ಷ 400 ಮಿಲಿಯನ್ ಟನ್ಗೂ ಹೆಚ್ಚು ಪ್ಲಾಸ್ಟಿಕ್ ಉತ್ಪಾದನೆಯಾಗುತ್ತಿದ್ದು, ಅದರಲ್ಲೂ ಸುಮಾರು 11 ಮಿಲಿಯನ್ ಟನ್ ಪ್ಲಾಸ್ಟಿಕ್ ಸಮುದ್ರಗಳಲ್ಲಿ ಸೇರುತ್ತಿದೆ ಎಂಬ ಅಂದಾಜು ಇದೆ.

ಈ ಕಾರಣದಿಂದ ಪ್ಲಾಸ್ಟಿಕ್ ಮಾಲಿನ್ಯ ನಮ್ಮ ಕಾಲದ ಗಂಭೀರ ಪರಿಸರ ಸಮಸ್ಯೆಯಾಗಿದೆ. ಈ ಥೀಮ್ನ ಉದ್ದೇಶ ವ್ಯಕ್ತಿಗಳು, ಸಮುದಾಯಗಳು, ಕೈಗಾರಿಕೆಗಳು ಹಾಗೂ ಸರ್ಕಾರಗಳು ಪ್ಲಾಸ್ಟಿಕ್ ಉತ್ಪಾದನೆ, ಬಳಕೆ ಮತ್ತು ತ್ಯಜಿಸುವ ವಿಧಾನಗಳ ಬಗ್ಗೆ ಪುನರಾಲೋಚನೆ ಮಾಡಲು ಪ್ರೇರೇಪಿಸುವುದಾಗಿದೆ.

2025ರ ವೇಳೆಗೆ, ಭಾರತವು ಗಂಭೀರವಾದ ಪ್ಲಾಸ್ಟಿಕ್ ಮಾಲಿನ್ಯದ ಸಂಕಷ್ಟವನ್ನು ಎದುರಿಸುತ್ತಿದೆ. ಪ್ರತಿ ವರ್ಷ 3.5 ಮಿಲಿಯನ್ ಟನ್ಗೂ ಹೆಚ್ಚು ಪ್ಲಾಸ್ಟಿಕ್ ತ್ಯಾಜ್ಯವನ್ನು ಉತ್ಪಾದಿಸಲಾಗುತ್ತಿದ್ದು, ಇದರ ಬಹುಪಾಲು ಸಂಗ್ರಹವಾಗದೇ ಅಥವಾ ತಕ್ಕಮಟ್ಟಿಗೆ ನಿರ್ವಹಣೆ ಆಗದೆ ಉಳಿಯುತ್ತದೆ.

ವಿಶೇಷವಾಗಿ ನಗರ ಪ್ರದೇಶಗಳು ಏಕಬಾರಿಯ ಪ್ಲಾಸ್ಟಿಕ್ನಿಂದ ನೀರಿನ ಕಾಲುವೆಗಳು ತಡೆದುಕೊಳ್ಳುವುದು, ಜಲಮೂಲಗಳು ಮಾಲಿನ್ಯಗೊಳ್ಳುವುದು ಮತ್ತು ವನ್ಯಜೀವಿಗಳಿಗೆ ಹಾನಿಯುಂಟಾಗುವುದು ಮೊದಲಾದ ಸಮಸ್ಯೆಗಳನ್ನು ಎದುರಿಸುತ್ತಿವೆ. ಕೆಲವೊಂದು ಏಕಬಾರಿ ಪ್ಲಾಸ್ಟಿಕ್ ವಸ್ತುಗಳ ದೇಶವ್ಯಾಪ್ತಿ ನಿಷೇಧ ಮತ್ತು ಜಾಗೃತಿ ಹೆಚ್ಚಾದರೂ, ಪಾಲನೆಯಲ್ಲಿನ ಅಸ್ಥಿರತೆ ಮತ್ತು ಪುನರ್ ಬಳಕೆಗೆ ಮೂಲಸೌಕರ್ಯದ ಕೊರತೆ ದೊಡ್ಡ ಸಮಸ್ಯೆಯಾಗಿ ಉಳಿದಿವೆ.

ಗಂಗಾ ನದಿ ಮತ್ತು ಆಹಾರದ ಸರಪಳಿಗಳಲ್ಲಿ ಮೈಕ್ರೋ ಪ್ಲಾಸ್ಟಿಕ್ ಕಂಡುಬಂದಿದ್ದು, ಇದು ಸಾರ್ವಜನಿಕ ಆರೋಗ್ಯಕ್ಕೆ ತೀವ್ರ ಸಮಸ್ಯೆ ಉಂಟುಮಾಡಿದೆ. ಭಾರತದಲ್ಲಿ ಪ್ಲಾಸ್ಟಿಕ್ ಮಾಲಿನ್ಯವನ್ನು ತಡೆಯಲು ತ್ಯಾಜ್ಯ ವಿಂಗಡಣೆ, ಉತ್ಪಾದಕರ ಹೊಣೆಗಾರಿಕೆ, ಸಾರ್ವಜನಿಕರ ಭಾಗವಹಿಸುವುದು ಮತ್ತು ಪರ್ಯಾಯ ಶಾಶ್ವತ ವಸ್ತುಗಳ ಅಳವಡಿಸಿಕೊಳ್ಳುಲು ತುರ್ತಾಗಿ ಸುಧಾರಣೆ ಅಗತ್ಯವಿದೆ.

ನಿರ್ದಿಷ್ಟ ಪರಿಸರ ಸಮಸ್ಯೆಯನ್ನು ಹೈಲೈಟ್ ಮಾಡಲು ಪ್ರತಿವರ್ಷ ವಿಶ್ವ ಪರಿಸರ ದಿನಾಚರಣೆಗೆ ನಿರ್ದಿಷ್ಟ ಥೀಮ್ ಅನ್ನು ಆಯ್ಕೆ ಮಾಡಲಾಗುತ್ತದೆ. 2025 ರ ವಿಶ್ವ ಪರಿಸರ ದಿನದ ಥೀಮ್ 'ಪ್ಲಾಸ್ಟಿಕ್ ಮಾಲಿನ್ಯವನ್ನು ಕೊನೆಗೊಳಿಸುವುದು'. 2025 ರ ವಿಶ್ವ ಪರಿಸರ ದಿನದ ಘೋಷವಾಕ್ಯವೆಂದರೆ ಪ್ಲಾಸ್ಟಿಕ್ ಮಾಲಿನ್ಯವನ್ನು ಕೊನೆಗೊಳಿಸಿ ಸುಸ್ಥಿರತೆಯನ್ನು ಅಳವಡಿಸಿಕೊಳ್ಳುವುದು.

ಮಣ್ಣಿನ ಸವಕಳಿ, ಸಾಗರ ಮಾಲಿನ್ಯ, ಜಾಗತಿಕ ತಾಪಮಾನ ಏರಿಕೆ, ವನ್ಯಜೀವಿ ಅಪರಾಧ, ಅಧಿಕ ಜನಸಂಖ್ಯೆ ಮತ್ತು ಸುಸ್ಥಿರ ಅಭಿವೃದ್ಧಿಯಂತಹ ತುರ್ತು ಪರಿಸರ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸಲು ಜಾಗತಿಕ ವೇದಿಕೆಯನ್ನು ಒದಗಿಸಲು ಪ್ರತಿ ವರ್ಷ ಜೂನ್ 5 ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಪ್ರತಿ ವರ್ಷ ವಿವಿಧ ರಾಷ್ಟ್ರಗಳು ವಿಭಿನ್ನ ಬ್ಯಾನರ್ಗಳ ಅಡಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸುತ್ತವೆ ಮತ್ತು ರಚನಾತ್ಮಕ ರೂಪಾಂತರವನ್ನು ಉತ್ತೇಜಿಸಲು ಪ್ರಪಂಚದಾದ್ಯಂತ 150 ಕ್ಕೂ ಹೆಚ್ಹು ದೇಶಗಳನ್ನು ಒಟ್ಟುಗೂಡಿಸುತ್ತವೆ.

ಈ ದಿನದಂದು, ಜನರು ಪರಿಸರ ಕ್ರಿಯೆಯನ್ನು ಮತ್ತು ಹೆಚ್ಚು ಸುಸ್ಥಿರ ಜಗತ್ತನ್ನು ನಿರ್ಮಿಸುವ ವ್ಯಕ್ತಿಗಳು, ತಜ್ಞರು, ನಿಗಮಗಳು ಮತ್ತು ಸರ್ಕಾರಗಳ ಸಾಮರ್ಥ್ಯವನ್ನು ಆಚರಿಸುತ್ತಾರೆ . 1973 ರಲ್ಲಿ ಪ್ರಾರಂಭವಾದಾಗಿನಿಂದ ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (UNEP) ಈ ಕಾರ್ಯಕ್ರಮವನ್ನು ಮುನ್ನಡೆಸುತ್ತಿದೆ. 2025 ರಲ್ಲಿ, ವಿಶ್ವ ಪರಿಸರ ದಿನವನ್ನು ಕೊರಿಯಾ ಗಣರಾಜ್ಯದಲ್ಲಿ, ವಿಶೇಷವಾಗಿ ಜೆಜು ದ್ವೀಪದಲ್ಲಿ ನಡೆಸಲಾಗುತ್ತದೆ. ಈ ದಿನದ ಥೀಮ್ ಪ್ಲಾಸ್ಟಿಕ್ ಮಾಲಿನ್ಯವನ್ನು ಕೊನೆಗೊಳಿಸುವುದಾಗಿದೆ.

ವಿಶ್ವ ಪರಿಸರ ದಿನದ ಇತಿಹಾಸ

ವಿಶ್ವ ಪರಿಸರ ದಿನವನ್ನು ಮೊದಲ ಬಾರಿಗೆ ಜೂನ್ 5, 1973 ರಂದು ಆಚರಿಸಲಾಯಿತು. ಜಾಗತಿಕ ಪರಿಸರ ಮತ್ತು ಸುಸ್ಥಿರ ಜಾಗೃತಿಯ ಕುರಿತಾದ ಹೆಗ್ಗುರುತು ಶೃಂಗಸಭೆಯಾದ 1972 ರ ಮಾನವ ಪರಿಸರದ ಕುರಿತಾದ ಸ್ಟಾಕ್ಹೋಮ್ ಸಮ್ಮೇಳನವನ್ನು ಗೌರವಿಸಲು ವಿಶ್ವಸಂಸ್ಥೆಯ ನಿರ್ಧಾರವನ್ನು ಈ ದಿನಾಂಕವು ಗುರುತಿಸುತ್ತದೆ. ಪರಿಸರ ಕ್ರಿಯೆ ಮತ್ತು ಜಾಗೃತಿಗಾಗಿ ಒಂದು ದಿನವನ್ನು ಗೊತ್ತುಪಡಿಸುವ ಪರಿಕಲ್ಪನೆಯನ್ನು ಅಂದಿನ ಚೆರ್ಚೆಯ ಸಮಯದಲ್ಲಿ ತೀರ್ಮಾನಿಸಲಾಗಿತ್ತು. 'ಒಂದೇ ಒಂದು ಭೂಮಿ' ಎಂಬ ಘೋಷಣೆಯಡಿಯಲ್ಲಿ ಉದ್ಘಾಟನಾ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಅಂದಿನಿಂದ, ಇದು ಪರಿಸರ ಜಾಗೃತಿಗಾಗಿ ವಿಶ್ವದಾದ್ಯಂತ ನಡೆಯುವ ಅತಿದೊಡ್ಡ ವಾರ್ಷಿಕ ಕಾರ್ಯಕ್ರಮಗಳಲ್ಲಿ ಒಂದಾಗಿ ಬೆಳೆದಿದೆ.

ವಿಶ್ವ ಪರಿಸರ ದಿನವನ್ನು ಆಚರಿಸುವ ಉದ್ದೇಶಗಳು

ವಿಶ್ವ ಪರಿಸರ ದಿನವನ್ನು ಪ್ರತಿ ವರ್ಷ ಜೂನ್ 5 ರಂದು ಪ್ರಪಂಚದಾದ್ಯಂತ ಜನರು ಆಚರಿಸುತ್ತಾರೆ. ಪರಿಸರ ಸಮಸ್ಯೆಗಳನ್ನು ಗುರುತಿಸಲು ವಿಶ್ವಸಂಸ್ಥೆ (UN) ಈ ಜಾಗತಿಕ ಉಪಕ್ರಮವನ್ನು ಮುನ್ನಡೆಸುತ್ತಿದೆ. ಇದು ಜಾಗೃತಿ ಮೂಡಿಸುತ್ತದೆ ಮತ್ತು ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಜಾಗತಿಕ ಭವಿಷ್ಯವನ್ನು ಬೆಂಬಲಿಸುವ ಕ್ರಮವನ್ನು ಪ್ರೇರೇಪಿಸುತ್ತದೆ. ವಿಶ್ವ ಪರಿಸರ ದಿನವನ್ನು ಆಚರಿಸುವುದು ಸಮುದಾಯಗಳು ಒಗ್ಗೂಡಿ ಪರಿಸರ ಸವಾಲುಗಳನ್ನು ಎದುರಿಸಲು ಒಂದು ವೇದಿಕೆಯನ್ನು ನೀಡುತ್ತದೆ. ಈ ದಿನದ ಪ್ರಮುಖ ಉದ್ದೇಶಗಳು; ವಿಶ್ವ ಪರಿಸರ ದಿನದ ಪ್ರಮುಖ ಗುರಿ ಪರಿಸರ ಸಮಸ್ಯೆಗಳ ಬಗ್ಗೆ ಸಾರ್ವಜನಿಕ ಜಾಗೃತಿ ಮೂಡಿಸುವುದು. ನಮ್ಮ ಗ್ರಹವನ್ನು ರಕ್ಷಿಸಲು ತ್ಯಾಜ್ಯವನ್ನು ಶಕ್ತಿಯನ್ನಾಗಿ ಪರಿವರ್ತಿಸುವುದು WED ನ ಪ್ರಮುಖ ಗಮನಗಳಲ್ಲಿ ಒಂದಾಗಿದೆ. ವಿಶ್ವ ಪರಿಸರ ದಿನದ ಉದ್ದೇಶವೆಂದರೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪರಿಸರ ಸಂರಕ್ಷಣೆಯನ್ನು ಕೈಗೊಳ್ಳಲು ಜನರನ್ನು ಪ್ರೇರೇಪಿಸುವುದು. ಇದು ನೀತಿ ಸುಧಾರಣೆಗಳಿಗೆ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಸ್ಥಳೀಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪರಿಸರ ನೀತಿಗಳ ಪ್ರಚಾರವನ್ನು ಪ್ರೋತ್ಸಾಹಿಸುತ್ತದೆ. ಪರಿಸರ ಯೋಜನೆಗಳಲ್ಲಿ ಯುವಜನರು ಮತ್ತು ಸಮುದಾಯಗಳನ್ನು ತೊಡಗಿಸಿಕೊಳ್ಳುವುದು ಈ ದಿನದ ಗುರಿಯಾಗಿದೆ. ಈ 2025 ರ ವಿಶ್ವ ಪರಿಸರ ದಿನದಂದು, ಭೂ ಪುನಃಸ್ಥಾಪನೆಗೆ ಸಂಬಂಧಿಸಿದ ಪರಿಸರ ಸಮಸ್ಯೆಗಳನ್ನು ಪರಿಹರಿಸಲು ಜಾಗತಿಕವಾಗಿ ಸಹಕರಿಸಲು ದೇಶಗಳನ್ನು ಒತ್ತಾಯಿಸಲಾಗುತ್ತದೆ. ಇದು ದೇಶಗಳು ಒಟ್ಟಾಗಿ ಕೆಲಸ ಮಾಡಲು ಮತ್ತು ಪರಿಣತಿಯನ್ನು ಹಂಚಿಕೊಳ್ಳಲು ಪ್ರೇರಣೆ ನೀಡುತ್ತದೆ.

ವಿಶ್ವ ಪರಿಸರ ದಿನ 2025: -ಪರಿಸರ ಸಂರಕ್ಷಣೆಯ ನವ ಚಿಂತನೆಗಳು, ಪರಿಸರ ನೀತಿಗಳ ಬದಲಾವಣೆಯ ಅಗತ್ಯತೆ

ಇಂದಿನ ದಿನಗಳಲ್ಲಿ ಮಾನವ ಚಟುವಟಿಕೆಗಳಿಂದ ಉಂಟಾಗುತ್ತಿರುವ ಪರಿಸರ ಹಾನಿಯ ಪ್ರಮಾಣ ಹೆಚ್ಚುತ್ತಿರುವುದರಿಂದ, ನವೀನ ಹಾಗೂ ಪರಿಣಾಮಕಾರಿ ಪರಿಸರ ನೀತಿಗಳ ಅಗತ್ಯವೇನು ಎಂಬ ಪ್ರಶ್ನೆಗೆ ನಾವು ತಕ್ಷಣ ಉತ್ತರ ಹುಡುಕಬೇಕಾಗಿದೆ. ಭಾರತದಲ್ಲಿ ಹಾಗೂ ಕರ್ನಾಟಕದಂತಹ ರಾಜ್ಯಗಳಲ್ಲಿ ಪರಿಸರ ಸಂಬಂಧಿತ ನೀತಿಗಳನ್ನು ಸಮಗ್ರವಾಗಿ ಪರಿಗಣಿಸಿ, ಶಾಶ್ವತ ಸುಸ್ಥಿರ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ರೂಪಿಸಬೇಕಾಗಿದೆ. ಪಶುಪಕ್ಷಿ, ಹಕ್ಕಿಗಳು, ಸಸ್ಯ ಸಂಪತ್ತುಗಳ ನಾಶವು ವೇಗವಾಗಿ ನಡೆಯುತ್ತಿದೆ. ಕರ್ನಾಟಕದ ಅರಣ್ಯ ಪ್ರದೇಶಗಳು, ಅರಣ್ಯ ಪ್ರದೇಶಗಳು ಮತ್ತು ನದೀ ತೀರಗಳ ಬಳಿಯ ಜೈವ ವೈವಿಧ್ಯತೆ ಅತ್ಯಂತ ಅಪಾಯದಲ್ಲಿದೆ. ದೇಶದ ಮಟ್ಟದಲ್ಲಿ ಸುಮಾರು 25% ಜೈವವೈವಿಧ್ಯತೆ ಕೊರತೆಯು ಕಂಡುಬರುತ್ತಿದ್ದು, ಜಾಗತಿಕ ಮಟ್ಟದಲ್ಲಿ ಈ ಪ್ರಮಾಣವು ಇನ್ನಷ್ಟು ಭಯಾನಕವಾಗಿದೆ. ನಾವು ತಕ್ಷಣ ಇವುಗಳ ಸಂರಕ್ಷಣೆಗೆ ಮುಂದಾಗದೆ ಹೋದರೆ ಪರಿಸರ ಸಮತೋಲನವೇ ಕುಸಿಯಬಹುದು.

ನಗರೀಕರಣ ಮತ್ತು ಶಾಶ್ವತ ಅಭಿವೃದ್ಧಿ

ಬೆಂಗಳೂರು ನಗರದ ಜನಸಂಖ್ಯೆ 1.5 ಕೋಟಿಯನ್ನು ಮೀರುತ್ತಿದೆ ನಗರ BBMP ವ್ಯಾಪ್ತಿಯಲ್ಲಿ 800 ಚದರ ಕಿಲೋಮೀಟರ್ನಿಂದ 1000 ಚದರ ಕಿಲೋಮೀಟರ್ವರೆಗೆ ವಿಸ್ತಾರಗೊಳ್ಳುವ ಗ್ರೇಟರ್ ಬೆಂಗಳೂರು ವಿನ್ಯಾಸದ ಅಡಿಯಲ್ಲಿ, ಜಿಎಕೆವಿಕೆ (GKVK) ಮತ್ತು ಜ್ಞಾನಭಾರತಿಯಂತಹ ಜೀವವೈವಿದ್ಯ ಅರಣ್ಯ ಪ್ರದೇಶಗಳನ್ನು ಬೆಂಗಳೂರು ನಗರದಲ್ಲಿ ವಾಸವಾಗಿರುವ ಜನರ ಆರೋಗ್ಯದ ಹಿತ ದೃಷ್ಟಿಯಿಂದ ಸಂರಕ್ಷಿಸುವ ಅವಶ್ಯಕತೆ ಅತ್ಯಂತ ತೀವ್ರವಾಗಿದೆ. ಲಾಲ್ಬಾಗ್ಗಷ್ಟೇ ಸಮಾನವಾದ ಪ್ರಕೃತಿಯ ಶ್ವಾಸಕೋಶ ಹಾಗೂ ಜೀವವೈವಿಧ್ಯದ ಪ್ರಮುಖ ಕೇಂದ್ರಗಳಾಗಿರುವ ಈ ಕ್ಯಾಂಪಸ್ಗಳು ನಗರ ಮಾಲಿನ್ಯವನ್ನು ಕಡಿಮೆ ಮಾಡುವಲ್ಲಿ, ಸೂಕ್ಷ್ಮ ಹವಾಮಾನವನ್ನು ನಿಯಂತ್ರಣ ಮಾಡುವಲ್ಲಿ, ಅಂತರಜಲ ಮತ್ತು ಸ್ಥಳೀಯ ಸಸ್ಯಜೀವಿ, ಪ್ರಾಣಿ ಜೀವಿಗಳನ್ನು ಉಳಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ವೇಗವಾಗಿ ಸಾಗುತ್ತಿರುವ ನಗರೀಕರಣದ ಹಿನ್ನಲೆಯಲ್ಲಿ ಇಂತಹ ಹಸಿರು ಪ್ರದೇಶಗಳನ್ನು ರಕ್ಷಿಸುವುದು ಪರಿಸರ ಸಮತೋಲನ, ತೀರ್ಮಾನಾತ್ಮಕ ನಗರ ಜೀವನ ಮತ್ತು ಸಾರ್ವಜನಿಕ ಆರೋಗ್ಯಕ್ಕಾಗಿ ಅತ್ಯಗತ್ಯವಾಗಿದೆ.

ಬೆಂಗಳೂರು ಸೇರಿದಂತೆ ಮುಂತಾದ ನಗರಗಳು ವೇಗವಾಗಿ ವಿಸ್ತಾರಗೊಳ್ಳುತ್ತಿವೆ. ಇದರಿಂದ ಹಸಿರು ಪ್ರದೇಶಗಳ ನಾಶ, ನೀರುಮೂಲಗಳ ದುರ್ಬಳಕೆ ಮತ್ತು ಹವಾಮಾನ ಬದಲಾವಣೆ ಕಂಡುಬರುತ್ತಿವೆ. ಈ ಹಿನ್ನೆಲೆಯಲ್ಲಿ `ಶಾಶ್ವತ ನಗರೀಕರಣ` ಪರಿಕಲ್ಪನೆಯಡಿಯಲ್ಲಿ ಮರುಸಂರಕ್ಷಣೆ ಹಾಗೂ ಅಭಿವೃದ್ಧಿಯ ಕಾರ್ಯಗಳು ನಡೆಯಬೇಕಾಗಿವೆ. ಬಸ್ ಮೆಟ್ರೋ ಸಂಚಾರ, ಪರಿಸರ ಸ್ನೇಹಿ ತಾಂತ್ರಿಕತೆಯ ಬಳಕೆ ಮತ್ತು ನೀರುಮೂಲಗಳ ಪುನಃ ಬಳಕೆ ಮುಂತಾದವುಗಳು ಸೂಕ್ತ ದಾರಿ. ಈ ನಿಟ್ಟಿನಲ್ಲಿ ಪರಿಸರ ಶಿಕ್ಷಣ ಶಾಲೆ-ಕಾಲೇಜುಗಳಲ್ಲಿ ಪರಿಸರ ಶಿಕ್ಷಣ ಕಡ್ಡಾಯ ಮಾಡಬೇಕು. ಸಾರ್ವಜನಿಕ ಪಾಲ್ಗೊಳ್ಳಿಕೆ,ಜನತೆಗೆ ಜಾಗೃತಿ ಮೂಡಿಸಿ ಪರಿಸರ ಕಾರ್ಯಕ್ರಮಗಳಲ್ಲಿ ಅವರನ್ನು ಸಕ್ರಿಯಗೊಳಿಸಬೇಕು. ತಂತ್ರಜ್ಞಾನ, ನವೀನ ತಂತ್ರಜ್ಞಾನದಿಂದ ಪ್ಲಾಸ್ಟಿಕ್ ಕಡಿತ, ನವೀಕರಿಸಬಹುದಾದ ಇಂಧನ ಬಳಕೆ ಹೆಚ್ಚು ಮಾಡಬೇಕು. ನೀರಿನ ಸಂರಕ್ಷಣೆ, ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಮಳೆನೀರು ಸಂಗ್ರಹಣೆ ಪ್ರೋತ್ಸಾಹಿಸಬೇಕು. ಗಿಡಮರ ನೆಡುವ ಅಭಿಯಾನಗಳು, ಸರ್ಕಾರ ಹಾಗೂ ಖಾಸಗಿ ಸಂಸ್ಥೆಗಳು ಸೇರಿ ಗಿಡ ನೆಡುವ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಬೇಕು.

2024ರ ಅಂದಾಜುಗಳ ಪ್ರಕಾರ, ಭಾರತದ ಜನಸಂಖ್ಯೆ ಸುಮಾರು 1.43 ಬಿಲಿಯನ್ ಆಗಿದ್ದು, ಇದು ವಿಶ್ವದಲ್ಲಿಯೇ ಅತಿದೊಡ್ಡ ಜನಸಂಖ್ಯೆಯ ದೇಶವನ್ನಾಗಿಸಿದೆ. ವೇಗವಾಗಿ ಬೆಳೆಯುತ್ತಿರುವ ಜನಸಂಖ್ಯೆ ನೈಸರ್ಗಿಕ ಸಂಪತ್ತುಗಳ ಮೇಲೆ ಭಾರೀ ಒತ್ತಡವನ್ನು ಉಂಟುಮಾಡುತ್ತದೆ. ಇದರ ಪರಿಣಾಮವಾಗಿ ಭೂಮಿ, ಜಲ, ಶಕ್ತಿ ಮತ್ತು ಜೀವವೈವಿಧ್ಯತೆಗಳ ಮೇಲೆ ಬೇಡಿಕೆ ಹೆಚ್ಚಾಗುತ್ತಿದ್ದು, ಇದು ಸುಸ್ಥಿರ ಅಭಿವೃದ್ಧಿಗೆ ಹಾಗೂ ಪರಿಸರ ಸಂರಕ್ಷಣೆಗೆ ತೀವ್ರ ಸವಾಲುಗಳನ್ನು ಉಂಟುಮಾಡುತ್ತಿದೆ.

ಭಾರತದ ಸಾಕ್ಷರತಾ ಪ್ರಮಾಣವು (2021ರ ರಾಷ್ಟ್ರೀಯ ಸಂಖ್ಯಾ ಕಚೇರಿಯ ಪ್ರಕಾರ) ಸುಮಾರು 77.7% ಇದೆ. ಪುರುಷರ ಸಾಕ್ಷರತಾ ಪ್ರಮಾಣ ಸ್ತ್ರೀಯರಿಗಿಂತ ಹೆಚ್ಚು ಇದೆ, ಹಾಗೂ ಈ ಪ್ರಮಾಣದಲ್ಲಿ ಪ್ರಾದೇಶಿಕ ವ್ಯತ್ಯಾಸಗಳು ಕಂಡುಬರುತ್ತವೆ. ಸಾಕ್ಷರತೆ ಮತ್ತು ಪರಿಸರ ಜಾಗೃತಿ ಪರಸ್ಪರ ಸಂಬಂಧ ಹೊಂದಿವೆ. ಶಿಕ್ಷಣ ಪಡೆದ ನಾಗರಿಕರು ಪರಿಸರ ಸಂರಕ್ಷಣೆಯಲ್ಲಿ ಹೆಚ್ಚು ತೊಡಗಿಕೊಳ್ಳುವ ಸಾಧ್ಯತೆಯಿದೆ.

ಭಾರತದ ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಸಂವಿಧಾನಿಕ ವಿಧಾನಗಳು

ಸಂವಿಧಾನಿಕ ವಿಧಿ 48A: "ರಾಜ್ಯವು ಪರಿಸರವನ್ನು ರಕ್ಷಿಸುವ ಹಾಗೂ ಸುಧಾರಿಸುವ, ಮತ್ತು ಅರಣ್ಯಗಳು ಹಾಗೂ ಕಾಡು ಪ್ರಾಣಿಗಳನ್ನು ಸಂರಕ್ಷಿಸುವ ಬಗ್ಗೆಯೂ ಪ್ರಯತ್ನಿಸಬೇಕು."

ಸಂವಿಧಾನಿಕ ವಿಧಿ 51A(g): "ಅರಣ್ಯಗಳು, ಸರೋವರಗಳು, ನದಿಗಳು ಹಾಗೂ ಕಾಡು ಪ್ರಾಣಿಗಳನ್ನು ಒಳಗೊಂಡು ನೈಸರ್ಗಿಕ ಪರಿಸರವನ್ನು ರಕ್ಷಿಸಿ ಹಾಗೂ ಸುಧಾರಿಸಲು, ಮತ್ತು ಜೀವಿಗಳ ಮೇಲಿನ ಕರುಣೆಯನ್ನು ಹೊಂದಲು, ಪ್ರತಿ ಭಾರತೀಯ ನಾಗರಿಕನ ಕರ್ತವ್ಯವಾಗಿರುತ್ತದೆ."

ಈ ಸಂವಿಧಾನಿಕ ವಿಧಾನಗಳು ಹಾಗೂ ಜನಜಾಗೃತಿ ಕಾರ್ಯಗಳು ಭಾರತದ ಪರಿಸರ ಸಂರಕ್ಷಣೆಯ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ.

1976 ರಲ್ಲಿ ಈ ತಿದ್ದುಪಡಿಗಳನ್ನು ಭಾರತದ ಸಂವಿಧಾನದಲ್ಲಿ ಸೇರಿಸಲಾಗಿದ್ದು, ಪರಿಸರ ರಕ್ಷಣೆಯ ಅಗತ್ಯತೆಯ ಕುರಿತಾದ ಜಾಗತಿಕ ಜಾಗೃತಿಯನ್ನು ಪ್ರತಿಬಿಂಬಿಸುತ್ತವೆ. ಆದರೆ 50 ವರ್ಷಗಳ ನಂತರವೂ, ಬಹುಪಾಲು ಸಾರ್ವಜನಿಕರು ಪರಿಸರ ಸಮಸ್ಯೆಗಳು, ಅವುಗಳ ಪರಿಣಾಮಗಳು ಮತ್ತು ಸಂರಕ್ಷಣಾ ಪ್ರಯತ್ನಗಳ ಮಹತ್ವವನ್ನು ತಿಳಿಯದೆ ಇರುವುದು, ಸಹಭಾಗಿತ್ವ ಇಲ್ಲದೆ ಇರುವುದು ಸುಸ್ಥಿರ ಅಭಿವೃದ್ದಿಗೆ ಹಿನ್ನಡೆ ಆಗಿದೆ.

ಪರಿಸರದ ಕುರಿತು ನಿರ್ಲಕ್ಷ್ಯದಿಂದಾಗಿ ನಾಳೆಯ ಪೀಳಿಗೆ ಅಪಾಯದಲ್ಲಿದೆ. ವಿಶ್ವ ಪರಿಸರ ದಿನದಂದು, ನಾವು ನವ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು. ನಮ್ಮ ಊರು, ನಾಡು ಮತ್ತು ಜಗತ್ತನ್ನು ಶಾಶ್ವತವಾಗಿ ಉಳಿಸಲು ಪ್ರತಿಯೊಬ್ಬ ನಾಗರಿಕನೂ ಪಾತ್ರವಹಿಸಬೇಕು. ಸರ್ಕಾರಗಳು, ಸಂಸ್ಥೆಗಳು ಮತ್ತು ಸಾರ್ವಜನಿಕರು ಕೈಜೋಡಿಸಿದಾಗ ಮಾತ್ರ ನಿಜವಾದ ಪರಿಸರ ಸಂರಕ್ಷಣೆಗೆ ದಾರಿ ಸಿಗುವುದು.

"ಭೂಮಿಯು ಪ್ರತಿಯೊಬ್ಬ ಮನುಷ್ಯನ ಅಗತ್ಯಗಳನ್ನು ಪೂರೈಸಲು ಸಾಕಷ್ಟು ಒದಗಿಸುತ್ತದೆ, ಆದರೆ ಪ್ರತಿಯೊಬ್ಬ ಮನುಷ್ಯನ ದುರಾಸೆಯನ್ನಲ್ಲ" - ಮಹಾತ್ಮ ಗಾಂಧಿ

ಲೇಖನ

ಡಾ. ಡಿ. ಪರಮೇಶ ನಾಯಕ್, ಪರಿಸರ ತಜ್ಞರು ಮತ್ತು ಪ್ರಾದ್ಯಾಪಕರು

ಪರಿಸರ ವಿಜ್ಞಾನ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ.

M:98442 50997, Email: dpnbub@gmail.com

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.