ಭಾನುವಾರ ಹೊತ್ತಿನಂತೆ ತಟ್ಟೆಇಡ್ಲಿ ತಿನ್ನಕೋಗಿದ್ದೋ. ನಮ್ಮ ಪಕ್ಕದೇಲೆ ಒಬ್ಬ ಫೋನಲ್ಲಿ ‘ಇನ್ನೇಟು ಕಟ್ಟತೀರಲ ಟ್ಯಾಕ್ಸಾ’ ಅಂತ ಸೈರಣೆ ಕಳಕತಿದ್ದ. ತುರೇಮಣೆ ‘ಸ್ವಮೇ, ಏನು ಯಾಪಾರಸ್ಥರೋ ತಾವು?’ ಅಂತ ಇಚಾರಿಸಿದರು.

‘ಹ್ಞೂಂಕಪ್ಪಾ, ಒಂದು ಪ್ಯಾಗುಟ್ರಿ ಅದೆ. ವರ್ಸೊಪ್ಪತ್ತೂ ಟ್ಯಾಕ್ಸು ಕಟ್ಟದೇ ಆಯ್ತದೆ’ ಅಂದ ಆತ. ‘ಯಾಕ್ಬುದ್ದಿ ಹಂಗೆ?’ ಅಂತ ಕೇಳಿದರು ತುರೇಮಣೆ.

‘ಏನೇಳನೆ, ಪ್ರೊಪೆಶನಲ್ ಟ್ಯಾಕ್ಸು, ಜಿಎಸ್‍ಟಿ, ಕಸ್ಟಂ ಡೂಟಿ, ಎಕ್ಸೈಜು ಡೂಟಿ, ಕಾರ್ಪೋರೇಟ್ ಟ್ಯಾಕ್ಸು, ಇನ್ಕಂಟ್ಯಾಕ್ಸು, ಡಿವಿಡೆಂಡ್ ಟ್ಯಾಕ್ಸು, ಫ್ರಿಂಜ್ ಬೆನಿಫಿಟ್ ಟ್ಯಾಕ್ಸು, ಶೇರ್ ಮ್ಯಾಲೆ ಸೆಕ್ಯೂರಿಟಿಸ್ ಟ್ಯಾಕ್ಸು, ಲೇಬರ್ ಟ್ಯಾಕ್ಸು ಕಟ್ಟಬೇಕಾಯ್ತದೆ’ ಅಂದ ಆತ.

‘ಅಲ್ಲವುರಾ! ಬಿಬಿಎಂಪಿ ಆಸ್ತಿ ತೆರಿಗೆ, ಕಸದ ಸೆಸ್ಸು ಕಟ್ಟೇ ಇರತೀರ ಬುಡಿ’ ಅಂದ ತುರೇಮಣೆ ಮಾತಿಗೆ ಆತ ‘ಅಣೈ, ನಾವು ಸಾಲಭೈರವರು ಕಪ್ಪಾ. ವಾಟರ್ ಟ್ಯಾಕ್ಸು, ಕರಂಟು ಟ್ಯಾಕ್ಸು, ಆಸ್ತಿ ಮ್ಯಾಲೆ ಸ್ಟಾಂಪು ಡೂಟಿ ಎಲ್ಲಾ ಅವೆ’ ಅಂದ ನೋವಲ್ಲಿ ತೆರಿಗೆದಾರ. ‘ಓಹೋ’ ಅಂತ ತಿದಿ ಒತ್ತಿದರು ತುರೇಮಣೆ.

‘ನಮಗೆ ಗೊತ್ತಿಲ್ಲದಂಗೆ ಪೆಟ್ರೋಲ್- ಡೀಸೆಲ್ ಮ್ಯಾಲೆ ಕೆಎಸ್‍ಟಿ ಟ್ಯಾಕ್ಸು, ಪೆಗ್ಗಾಕಿದ್ರೆ ವ್ಯಾಟು, ಕಾರಿಗೆ ರೋಡು ಟ್ಯಾಕ್ಸು, ಕಾರಿಗೆ-ನಮಗೆ ಇನ್ಸುರೆನ್ಸು, ಟೋಲು ಫಾಸ್ಟ್ಯಾಗು ಕಟ್ಟಿಕಟ್ಟಿ ಹೆಲ್ತು ಹೋಯ್ತಾ ಅದೆ ವೆಲ್ತು ನಿಂತೋಗದೆ. ಇದೆಲ್ಲಾದರ ಮ್ಯಾಲೆ ಪುಳ್ಳೆಹಾಕಿದಂಗೆ ಸ್ವಚ್ಚ ಭಾರತ್ ಸೆಸ್ಸು, ಎಜುಕೇಶನ್ ಸೆಸ್ಸು, ಇನ್‌ಫ್ರಾಸ್ಟ್ರಕ್ಚರ್ ಸೆಸ್ಸು, ಕೃಷಿ ಕಲ್ಯಾಣ ಸೆಸ್ಸು. ಹಿಂಗೇ 25 ಥರಾ ಟ್ಯಾಕ್ಸು ಸೇರಿ 100 ಪರ್ಸೆಂಟು ಕಟ್ಟಿ ತೆರಿಗೆ ನೋವು, ಸತ್ತೋಯ್ತಿವಿ’ ಅಂದ ಸುಸ್ತಾಗಿ.

‘ಸೋಮಿ, ನೀವು ಹಂಗೆಲ್ಲಾ ಬೇಕಾಬಿಟ್ಟಿ ಸಾಯಂಗಿಲ್ಲ. ಮುಂದ್ಲ ತಿಂಗಳಿಂದಾ ಎಲ್ಲಾರೂ ವರ್ಷಕ್ಕೆ ಸಾವಿರ ರುಪಾಯಿ ಫ್ಯುನರಿಲ್ ಟ್ಯಾಕ್ಸು, ಅಂದರೆ ಸಂಸ್ಕಾರ ತೆರಿಗೆ ಕಟ್ಟಬೇಕಾಯ್ತದೆ! ತಿಳಕಳಿ. ಇಲ್ಲದಿದ್ರೆ ಎರಡು ಸಾವಿರ ರುಪಾಯಿ ನೋಟಿನ ಥರಾ ಇದ್ದೂ ಇಲ್ಲದಂಗಾಯ್ತಿರಾ!’ ಅಂತ ತುರೇಮಣೆ ಅಂದುದ್ದಕ್ಕೆ ಆವಯ್ಯ ಗ್ವಾಮಾಳೆ ವಾಲಿಸಿಕ್ಯಂಡು ವಯಕ್ ಅಂದ್ಬುಡದಾ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.