ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈರಸ್– ನರ್ವಸ್

Last Updated 27 ಏಪ್ರಿಲ್ 2022, 18:25 IST
ಅಕ್ಷರ ಗಾತ್ರ

‘ಯುಗಾದಿ, ದೀಪಾವಳಿಯಂತೆ ಕೊರೊನಾ ಪ್ರತಿವರ್ಷ ಬರಲು ಶುರುವಾಗಿದೆ. ಹಬ್ಬಹರಿದಿನ
ಗಳಂತೆ ಕೊರೊನಾ ಬರುವ ದಿನಾಂಕಗಳನ್ನೂ ಕ್ಯಾಲೆಂಡರ್‌ನಲ್ಲಿ ಪ್ರಿಂಟ್ ಮಾಡಿದರೆ ನಾವು ಆ ಟೈಮ್‌ಗೆ ಬಟ್ಟೆ ಬರೆ ಕೊಂಡುಕೊಂಡು ಸಿದ್ಧವಾಗಬಹುದು’ ಅಂದಳು ಸುಮಿ.

‘ಹೊಸ ಬಟ್ಟೆ ತಂದು, ಮನೆ ಬಾಗಿಲಿಗೆ ತೋರಣ ಕಟ್ಟಿ, ರಂಗೋಲಿ ಹಾಕಿ ಆಚರಿಸಲು ಕೊರೊನಾ ಅನ್ನೋದು ಹಬ್ಬವಲ್ಲ’ ಅಂದ ಶಂಕ್ರಿ.

‘ಹಾಗಲ್ಲಾರೀ, ಹೊಸ ವೈರಸ್‍ಗೆ ಹೊಸ ಮಾಸ್ಕ್ ಕೊಳ್ಳಬೇಕಲ್ವಾ?’

‘ಹೊಸ ಮಾಸ್ಕಿಗೆ ಮ್ಯಾಚ್ ಆಗುವ ಹೊಸ ಸೀರೆ ಬೇಕು ಅಂತ ಕೇಳಬೇಡ, ಇರುವ ಸೀರೆಗಳಿಗೆ ಮ್ಯಾಚ್ ಆಗುವ ಮಾಸ್ಕ್ ಖರೀದಿ ಮಾಡು ಸಾಕು. ಹೊಸ ವೈರಸ್ ಪರಿಣಾಮ ಹೇಗಿರುತ್ತೋ ಏನೋ...’ ಶಂಕ್ರಿ ಆತಂಕಗೊಂಡ.

‘ಕಾಯಿಲೆ ಬಂದ ಮೇಲೆ ಪರದಾಡುವುದು ಬೇಡ. ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ಈಗಿನಿಂದಲೇ ನಿಗಾ ವಹಿಸೋಣ. ಆಸ್ಪತ್ರೆ ಖರ್ಚಿಗೆಂದು ಈಗಲೇ ದುಡ್ಡು ಹೊಂಚಿ ಇಟ್ಟುಕೊಳ್ಳಿ. ಬ್ಯಾಂಕ್‍ಗಳಲ್ಲಿ ಕೊರೊನಾ ಲೋನ್ ಕೊಡ್ತಾರಾ ಕೇಳಿ’ ಎಂದಳು ಸುಮಿ.

‘ಡಬಲ್ ಡೋಸ್, ಬೂಸ್ಟರ್ ಡೋಸ್ ಲಸಿಕೆ ಹಾಕಿಸಿಕೊಂಡಿದ್ದೀನಿ ಅಂತ ನೆಗ್ಲೆಕ್ಟ್ ಮಾಡಬೇಡ. ಗುಂಪು ಸೇರುವ ಮದುವೆ, ನಾಮಕರಣಗಳಿಗೆ ಹೋಗಬೇಡ, ಸ್ಯಾನಿಟೈಸರ್‌ನಲ್ಲಿ ಕೈ ತೊಳೆಸದೆ ಯಾರನ್ನೂ ಮನೆ ಒಳಗೆ ಬಿಟ್ಟುಕೊಳ್ಳಬೇಡ’.

‘ಗೊತ್ತೂರೀ, ಗೇಟಿನ ಮೇಲೆ ನಮ್ಮ ಲಸಿಕೆ ಪ್ರಮಾಣಪತ್ರದ ಪ್ರತಿ ಅಂಟಿಸಿ, ‘ಬೂಸ್ಟರ್ ಡೋಸ್ ಪಡೆದಿದ್ದೇವೆ, ಎಚ್ಚರಿಕೆ’ ಅಂತ ಬೋರ್ಡ್ ಹಾಕ್ತೀನಿ’.

‘ಬೋರ್ಡ್ ಹಾಕಿದ್ರೆ ಕೊರೊನಾ ಬರೊಲ್ವಾ?’

‘ಹಾಗಲ್ಲ, ಕೊರೊನಾ ಹೆಸರಲ್ಲಿ ಭಯ ಹುಟ್ಟಿಸಿ ಬೀಪಿ, ಶುಗರ್ ಜಾಸ್ತಿ ಮಾಡುವವರ ಕಾಟ ತಡೆಯಲು ಬೋರ್ಡ್ ಹಾಕ್ತೀನಿ...’ ಅಂದಳು ಸುಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT