‘ಒಂದು ಯಾಪ್ ಮಾಡಬೇಕಾಗೈತಿ’ ಲೀಡರ್ ಕುರ್ಚಿ ಮೇಲೆ ಕಣ್ಣಿಟ್ಟಿದ್ದ ಉಪದ್ವ್ಯಾಪಿ ಮುದ್ದಣ್ಣ ದಾಳ ಉರುಳಿಸಿದ.

ಸುತ್ತಮುತ್ತ ನಿಂತಿದ್ದ ಪಾರ್ಟಿ ಮೆಂಬರ್ಸ್ ಎಲ್ಲ ತಲೆ ಕೆರೆದುಕೊಂಡು, 'ಯಾಪ್ ಅಂದ್ರ ಏನ್ ಲೇ ಪಾ’ ಎಂದು ಒಟ್ಟಿಗೇ ಕೇಳಿದ್ರು.

‘ಯಾಪ್ ಲೇ ಪಾ ಯಾಪು, ನಾವ್ ಹೇಳ್ದಂಗ ಕೇಳೋ ಯಾಪು, ಭಾಷಾ ಕಲ್ಸೋ ಯಾಪು’.

‘ಯಾಪ್ ಅಲ್ಲಲೇ ಪಾ ಅದು, ಆ್ಯಪ್ ಅನ್ನು... ನಿಂಗ ನೆಟ್ಟಗ ಮಾತಾಡಾಕ ಬರಲ್ಲ, ಊರ ಮಂದೀಗೆಲ್ಲ ಹಂಗಿಸ್ಕೋಂತ ಮಾತಾಡ್ತೀ’ ಹಿರಿಯರೊಬ್ಬರು ಬೈದರು.

‘ಆ್ಯಪ್ ರೆಡಿ ಮಾಡಿಕೊಟ್ರೂ ಏನ್ ಮಾಡಾಂವ ಅದ್ರಿಂದ’ ಮತ್ತೊಬ್ಬ ಮೆಂಬರ್ ಕೇಳಿದ್ರು.

‘ಏನಿಲ್ರೀ, ಆ ಆ್ಯಪೂ ನಾನ್ ಮಾಡಿದ್ಹಂಗ ಮಾಡಿದ್ರಾತು’.

‘ಅಂದ್ರ?’

‘ರಾಜಕಾರಣಿಗಳ ಮುಂದ ಮೀಡಿಯಾದವ್ರನ್ನ ಬೈಯೂದ, ಮೀಡಿಯಾದವ್ರ ಮುಂದ ರಾಜಕಾರಣಿಗಳನ್ನ ಬೈಯೂದು, ಇನ್ನೂ ಜಾಸ್ತಿ ನ್ಯೂಸ್ನಾಗ ಇರಬೇಕಂದ್ರ ನಮ್ ಪಾರ್ಟಿಯವರನ್ನೂ ಬೈಯೂದ... ಯಾವ ಟೈಮ್ನಾಗ ಯಾರನ್ನ ಬೈಯೂದು ಅಂತ ಆ ಆ್ಯಪ್ ನಂಗೆ ಅಪ್ಡೇಟ್ ಮಾಡ್ತಿರಬೇಕಷ್ಟ’ ಹಲ್ಲು ಕಿರಿದ ಮುದ್ದಣ್ಣ.

‘ಇದು ಅಧ್ಯಕ್ಷ. ಎಲ್ಲರೂ ಹೇಗೇಗೋ ಮಾತಾಡೋದಲ್ಲ. ತಲೆಹರಟೆ ಮಾಡೋರಿಗೆ ಏನ್ ಮಾಡಬೇಕು ಅಂತ ನನಗೆ ಗೊತ್ತುಂಟು’ ಗರಂ ಆಗಿಯೇ ಎಂಟ್ರಿ ಕೊಟ್ಟರು ಪಾರ್ಟಿ ಪ್ರೆಸಿಡೆಂಟ್ ವಿಜಿ.

‘ನಮ್ ಪಾರ್ಟಿ ಹೀನಾಯವಾಗಿ ಸೋತರೂ ಇವರನ್ನೇ ಯಾಕೆ ಇನ್ನೂ ಅಧ್ಯಕ್ಷರಾಗಿ ಇಟ್ಟವರೆ’ ಮೆತ್ತಗೆ ಗೊಣಗಿದರು ಮೆಂಬರ್ ಒಬ್ಬರು.

‘ನಮ್ ಪ್ರೆಸಿಡೆಂಟ್ನ ಚೇಂಜ್ ಮಾಡೋಕೆ ಎದುರು ಪಾರ್ಟಿಯವರೇ ಬಿಡ್ತಿಲ್ವಂತೆ’

‘ಯಾಕೆ?’

‘ನಮ್ ಪ್ರೆಸಿಡೆಂಟ್, ಬಾಲ್ ವೇಸ್ಟ್ ಮಾಡೋ ಬ್ಯಾಟ್ಸ್ಮನ್ ಇದ್ದಂಗೆ. ಅವರು ಸ್ಕ್ರೀಜ್ನಲ್ಲಿದ್ದಷ್ಟೂ ಹೊತ್ತು ಎದುರು ಟೀಮ್ಗೇ ಗೆಲ್ಲೋ ಅವಕಾಶ ಜಾಸ್ತಿ ಅಂತ!’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.