ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚುರುಮುರಿ: ಬಬ್ರುವಾಹನ ವೆಬ್‌ಸರಣಿ

Published : 12 ಆಗಸ್ಟ್ 2024, 0:26 IST
Last Updated : 12 ಆಗಸ್ಟ್ 2024, 0:26 IST
ಫಾಲೋ ಮಾಡಿ
Comments

‘ಏ…ಬಾ ಇಲ್ಲಿ… ಬಬ್ರುವಾಹನ ಕಾಳಗ ಮಸ್ತ್‌ ನಡದೈತಿ…’ ಬೆಕ್ಕಣ್ಣ ವದರಿತು.

‘ಬೆಳ್‌ಬೆಳಿಗ್ಗೆ ಬಬ್ರುವಾಹನ ಸಿನಿಮಾ ನೋಡಾಕೆ ನನಗೆ ಟೈಮಿಲ್ಲಲೇ’ ನಾನು ಸಿಡುಕಿದೆ.

‘ಇದು ರಾಜಕುಮಾರ್‌ ಸಿನಿಮಾ ಅಲ್ಲ… ಬಂಡೆ ಮತ್ತೆ ಬ್ರದರ್‌ ನಡುವೆ ನಡೆದಿರೋ ಬಬ್ರವಾಹನ ಕಾಳಗ! ನಮ್‌ ಮಲ್ಲೇಶಣ್ಣ ಸಿನಿಮಾ ಸ್ಕ್ರಿಪ್ಟ್‌ ಥರಾ ಚುರುಮುರಿ ಬರದಾನೆ… ಓದು ಬಾ’ ಬೆಕ್ಕಣ್ಣ ಬಲು ಖುಷಿಯಿಂದ ವಿವರಿಸಿತು.

‘ಓ… ಹಂಗಾರೆ ಹೊಸಾ ಬಬ್ರುವಾಹನ ಸಿನಿಮಾ ಮಾಡಬೌದು.’

‘ಹೌದು… ಸಿನಿಮಾ ಮಾಡಿದ್ರೆ ಡಯಲಾಗ್‌ ಬರೆಯಾಕೆ ಮಲ್ಲೇಶಣ್ಣಂಗೆ ನಾ ಸಹಾಯ ಮಾಡ್ತೀನಿ. ಕುಮಾರಣ್ಣನ ಡಯಲಾಗ್‌ ಎಲ್ಲಾ ನಾನೇ ಬರೀತೀನಿ’ ಬೆಕ್ಕಣ್ಣ ಮೀಸೆ ತಿರುವಿತು.

‘ಒಂದಲ್ಲ… ಮೂರುನಾಕು ವರ್ಶನ್ ಬಬ್ರುವಾಹನ ಸಿನಿಮಾ ಮಾಡಬೇಕಾಗತೈತಿ. ನಿಮ್‌ ಯತ್ನಾಳ ಅಂಕಲ್ಲು- ಯೆಡ್ಯೂರಜ್ಜಾ
ರಿದ್ದೂನು ಒಂದು ವರ್ಶನ್‌ ಮಾಡಬೌದು’ ಎಂದೆ.

‘ಅದೂ ಖರೇ… ಹಂಗೇ ಮೋದಿ ಮಾಮಂದು- ರಾಹುಲಂಕಲ್ಲದು ಕೂಡ ಒಂದು ವರ್ಶನ್ ಮಾಡಬೌದು’ ಬೆಕ್ಕಣ್ಣ ವಿಚಾರಮಗ್ನ
ನಾಗಿ ಹೇಳಿತು.

‘ಆದರೆ ಈಗೇನಿದ್ರೂ ಓಟಿಟಿವಳಗೆ ವೆಬ್‌ಸೀರೀಸ್‌ ಕಾಲ. ಬೆಸ್ಟ್‌ ಅಂದ್ರೆ ನೀನು, ಮಲ್ಲೇಶಣ್ಣ ಕೂಡಿ ಬಬ್ರುವಾಹನ ವೆಬ್‌ಸೀರೀಸ್‌ ತೆಗೀರಿ. ಒಂದೊಂದು ಎಪಿಸೋಡಿಗೆ ಒಂದೊಂದು ಬಬ್ರುವಾಹನ ಜೋಡಿ, ಫುಲ್‌ ಹಿಟ್‌ ಆಗತೈತಿ’ ನಾನು ಬೆಕ್ಕಣ್ಣನ ತಲೆಯಲ್ಲಿ ಹುಳ ಬಿಟ್ಟೆ.

‘ಅಪರೂಪಕ್ಕೊಮ್ಮೆ ನೀ ಮಸ್ತ್‌ ಐಡಿಯಾ ಕೊಡ್ತೀ’.

‘ಒಂದು ಎಪಿಸೋಡಿನಾಗೆ ಕೇಂದ್ರ ಮತ್ತೆ ದಕ್ಷಿಣದ ರಾಜ್ಯಗಳೇ ಪಾತ್ರಧಾರಿಗಳಾಗಿ ಬಬ್ರುವಾಹನ ಕಾಳಗ ಮಾಡಬೌದು. ಹತ್ತಾರು ಟಿ.ವಿ. ಚಾನೆಲ್‌ ನೋಡು, ಎಲ್ಲ ಪಾತ್ರಧಾರಿಗಳ ಡಯಲಾಗ್‌ ಅಲ್ಲೇ ಸಿಗತೈತಿ’ ಎಂದೆ.

‘ಬ್ಯಾರೆ ಯಾರರೇ ಈ ಐಡಿಯಾ ಕದಿಯೋಕು ಮೊದಲು ಬಬ್ರುವಾಹನ ವೆಬ್‌ಸೀರೀಸ್‌ ಟೈಟಲ್‌ ರೆಜಿಸ್ಟರ್‌ ಮಾಡಿಸತೀವಿ’ ಎಂದ ಬೆಕ್ಕಣ್ಣ
ಮಲ್ಲೇಶಣ್ಣನಿಗೆ ಫೋನ್‌ ಮಾಡಿತು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT