ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ | ಫುಟ್‍ಬಾಲ್ ಧಾರಾವಾಹಿ

Last Updated 21 ಡಿಸೆಂಬರ್ 2022, 22:15 IST
ಅಕ್ಷರ ಗಾತ್ರ

ವಿಶ್ವಕಪ್ ಫುಟ್‍ಬಾಲ್ ಎಂಬ ಧಾರಾವಾಹಿ ಮುಗಿದ ಮೇಲೆ ಅಸಂಖ್ಯಾತ ಓದುಗ ಅಭಿಮಾನಿಗಳಿಂದ ಬಂದ ಪತ್ರಗಳಲ್ಲಿ ಆಯ್ದ ಕೆಲವನ್ನು ಇಲ್ಲಿ ಸಾರಾಂಶವಾಗಿ ಕೊಡಲಾಗಿದೆ:

• ಅಯ್ಯೋ! ಫುಟ್‍ಬಾಲ್ ಪಂದ್ಯಗಳು ಮುಗಿದೇ ಹೋದವೆ?

• ಟೂರ್ನಮೆಂಟ್ ಮುಂದುವರಿಸಿದ್ದಿದ್ದರೆ ಇವರ ಗಂಟೇನು ಹೋಗುತ್ತಿತ್ತು?

• ಈಗ ನಾನೇನು ನೋಡಲಿ?

• ಇನ್ನು ಮುಂದೆ ಕೆಲವು ದಿನ 8.30ರ ನಂತರ ರಾತ್ರಿ ಮನೆಯಲ್ಲಿ ಶೂನ್ಯ ಆವರಿಸುತ್ತದೆ.

-ಕೆಲವು ಗಂಡಸರು ಬರೆದ ಪತ್ರಗಳು

• ಇಷ್ಟು ದಿನ ನನ್ನ ಗಂಡ ಸರಿಯಾಗಿ ರಾತ್ರಿ 8.30ಕ್ಕೆ ಮೊದಲೇ ಮನೆಗೆ ಬರುತ್ತಿದ್ದರು. ಇನ್ನು ಮುಂದೆ ಹೇಗೋ ಏನೋ...

• ಸದ್ಯ ಮುಗಿಯಿತಲ್ಲ. ಮನೆಯಲ್ಲಿ ಕೂಗಾಟ, ಚೀರಾಟ ಇನ್ನು ಕಡಿಮೆಯಾಗುತ್ತದೆ.

• ಕರೆಂಟ್ ಬಿಲ್ ಉಳಿಯುತ್ತದೆ. 10 ಗಂಟೆಗೇ ದೀಪ ಆರಿಸಬಹುದು.

• ಈಗಲಾದರೂ ಮಕ್ಕಳು ಓದಿನ ಕಡೆ ಗಮನಹರಿಸುವರೇ?

-ಗೃಹಿಣಿಯರ ಅನಿಸಿಕೆ

• ಮೆಸ್ಸಿ ತಮ್ಮ ಸಂಸಾರದ ಕಡೆ ಹೆಚ್ಚು ಗಮನ ಕೊಡುವರೋ ಅಥವಾ ತಮ್ಮ ಫಾರ್ಮ್ ಇನ್ನಷ್ಟು ಉತ್ತಮಪಡಿಸಿಕೊಳ್ಳಲು ಅಭ್ಯಾಸದ ಕಡೆ ಹೆಚ್ಚು ಗಮನ ಕೊಡುವರೋ ಕಾದು ನೋಡಬೇಕಿದೆ.

-ಒಬ್ಬ ಅಧಿಕ ಪ್ರಸಂಗಿ

• ಮುಂದಿನ ಟೂರ್ನಮೆಂಟ್‍ನಲ್ಲಿ ಆಟಗಾರರಿಗೆ ಸಂಭಾವನೆಯನ್ನು ಬಂಗಾರದ ರೂಪದಲ್ಲಿ ಕೊಡುವರೇ? ಏಕೆಂದರೆ ಈಗಾಗಲೇ ಅವರ ಬಳಿ ಬಹಳಷ್ಟು ಡಾಲರ್‌ಗಳಿವೆ.

-ಹಣಕಾಸು ತಜ್ಞ

• ಭಾರತ ಈ ಟೂರ್ನಿಯಲ್ಲಿ ಭಾಗವಹಿಸುವಂತೆ ಮಾಡಲು ಮೋದೀಜಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಖಂಡಿತ.
-ಉಟ್ಟು ಓರಾಟಗಾರ

• ಕಾಶಿ ಯಾತ್ರೆ, ಅಯೋಧ್ಯ ಯಾತ್ರೆ, ಉಜ್ಜಯಿನಿ ಯಾತ್ರೆಯಂತೆ ಫುಟ್‍ಬಾಲ್ ಯಾತ್ರೆಯನ್ನೂ ಸರ್ಕಾರ ಏರ್ಪಡಿಸಬೇಕು. ಇದರಲ್ಲಿ ಆಟಗಾರರು ಮಾತ್ರ ಭಾಗವಹಿಸಲಿ. ರಾಜಕಾರಣಿಗಳ ಮಕ್ಕಳು ಹೋಗದಂತೆ ತಡೆಯಬೇಕು.

-ಫುಟ್‍ಬಾಲ್ ಫ್ಯಾನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT