‘ಕೊನಿಗೂ ಎಲಾನ್ ಮಸ್ಕು ಮನುಷ್ಯನ ಮಿದುಳಿಗೆ ಚಿಪ್ ಅಳವಡಿಸೇಬಿಟ್ನಂತೆ ನೋಡ್ರಲೆ...’ ದುಬ್ಬೀರ ಹರಟೆಕಟ್ಟೇಲಿ ಪೇಪರ್‌ನಾಗಿನ ಸುದ್ದಿ ಓದಿ ಹೇಳಿದ.

‘ಓ... ಅಂದ್ರೆ ಇದು ಚಿಪ್ಪಿಂಗ್ ನ್ಯೂಸು!’ ಗುಡ್ಡೆ ನಕ್ಕ.

‘ಮಿದುಳಿಗೆ ಚಿಪ್ಪಾ? ಅದ್ರಿಂದ ಏನ್ ಪ್ರಯೋಜನ?’ ಮಂಜಮ್ಮನಿಗೆ ಕುತೂಹಲ.

‘ಪ್ರಯೋಜನ ಬಾಳದಾವು. ಇನ್ಮೇಲೆ ಮೊಬೈಲು, ಕಂಪ್ಯೂಟ್ರು ಬ್ಯಾಡೇ ಬ್ಯಾಡ. ಸುಮ್ನೆ ಮನಸ್ನಾಗೆ ‘ಚಿಪ್, ದುಬ್ಬೀರಂಗೆ ಕಾಲ್ ಮಾಡು’ ಅಂದ್ರೆ ಸಾಕು, ಟಕ್ ಅಂತ ಚಿಪ್ ಆನ್ ಆಗಿ ದುಬ್ಬೀರನ ಮೊಬೈಲ್‌ಗೆ ಕಾಲ್ ಮಾಡ್ತತಿ. ‘ಮಂಡ್ಯ ಟಿಕೆಟ್ಟು ಕುಮಾರಣ್ಣಂಗೋ ಸುಮಕ್ಕಂಗೋ ಹೇಳು’ ಅಂದ್ರೆ ಗೆಸ್ ಮಾಡಿ ಪಟ್ ಅಂತ ಹೇಳ್ತತಿ. ಇನ್ನೂ ಏನೇನೋ... ನಮ್ ಮಿದುಳು ಏನ್ ಹೇಳುತ್ತೋ ಅದ್ನ ಚಿಪ್ ಕೇಳ್ತತಿ’ ತೆಪರೇಸಿ ವಿವರಿಸಿದ.

‘ಅಲೆ ಇವ್ನ, ಹೌದಾ? ಚಿಪ್ ಅಂದ್ರೆ ಆನ್, ಚುಪ್ ಅಂದ್ರೆ ಆಫ್ ಆಗುತ್ತಾ?’

‘ಅಷ್ಟೇ ಅಲ್ಲ, ಈ ಜಗತ್ತಿನಾಗಿರೋ ಯಾವುದೇ ಅಂಕಿ ಅಂಶ ಕೇಳು, ಎರಡು ಸೆಕೆಂಡ್‌ನಾಗೆ ಉತ್ತರ ಹೇಳ್ತತಿ. ಈ ಚಿಪ್‌ಗೆ ಟೆಲಿಪತಿ ಅಂತ ಹೆಸರಿಟ್ಟಾರೆ’.

‘ಈ ಟೆಲಿಪತಿಗೆ ಇವತ್ತು ತಿರುಪತಿ ತಿಮ್ಮಪ್ಪಂಗೆ ಎಷ್ಟು ಕಾಣಿಕಿ ಬಿದ್ವು ಅನ್ನೋದೂ ಗೊತ್ತಾಗ್ತತಾ?’ ಕೊಟ್ರೇಶಿ ಕೊಕ್ಕೆ.

‘ಈಗ ‘ಕೈ’ನಾಗಿರೋ ಲಕ್ಷ್ಮಣ ಮುಂದೆ ಕಮಲ ಸೇರ್ತಾರೋ ಇಲ್ಲೋ ಚಿಪ್ ಹೇಳ್ತತಾ?’ ಗುಡ್ಡೆ ಪ್ರಶ್ನೆ.

‘ಲೇಯ್, ರಾಮ ಇದ್ದ ಕಡಿ ಲಕ್ಷ್ಮಣ ಹೋಗ್ತಾನಪ, ಅದ್ನ ಚಿಪ್ ಕೇಳೇ ಹೇಳ್ಬೇಕಾ?’ ದುಬ್ಬೀರ ನಕ್ಕ.

‘ಈಗ ಎದುರುಗಡಿ ಇರೋನ ತೆಲಿ ಒಳಗೆ ಏನೈತಿ, ಅವನ ಜೇಬಿನಾಗೆ ಏನೈತಿ ಎಲ್ಲ ಚಿಪ್ ಹೇಳ್ತತಾ?’ ಕೊಟ್ರೇಶಿ ಪ್ರಶ್ನೆ.

‘ಜೇಬಿನಾಗ? ಯಾಕೆ?’

‘ಅಲ್ಲ, ಈ ಗುಡ್ಡೆ ಜೇಬಿನಾಗೆ ಎಷ್ಟು ರೊಕ್ಕದಾವು ಅಂತ ಗೊತ್ತಾದ್ರೆ ಎಲ್ರಿಗೂ ಚಾ ಹೇಳಬೋದಲ್ಲ ಅಂತ’. ಕೊಟ್ರೇಶಿ ಲೆಕ್ಕಾಚಾರಕ್ಕೆ ಎಲ್ಲರೂ ಗೊಳ್ಳಂತ ನಕ್ಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.