ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ | ಡೌಲ್‍ಸೀನ್

Last Updated 29 ಜೂನ್ 2020, 19:30 IST
ಅಕ್ಷರ ಗಾತ್ರ

ಆವತ್ತು ನಾನು ವಿಕ್ರಮಾದಿತ್ಯ ರಾಜನಾಗಿ ಬುಟ್ಟಿದ್ದೆ! ಬೇತಾಳನ್ನ ಹುಡಿಕ್ಕಂಡ್ ಹೋಯ್ತಾ ನ್ಯೂಸ್‍ಪೇಪರ್ ನೋಡಿದ್ರೆ ಬರೀ ಡೌಲು ಸುದ್ದಿಗಳೇ! ಈ ಚಾಲು ಇದ್ದುದ್ದೇ ಅಂತ ಚೀನಾ ಬಾವಲಿ ಥರಾ ನ್ಯಾತು ಬಿದ್ದಿದ್ದ ತುರೇಮಣೇನ ಇಳಿಸಿ ಹೊತಗಂಡು ಹೊಂಟೆ. ಸ್ವಲ್ಪ ಹೊತ್ತು ಸುಮ್ಮಗಿದ್ದ ಬೇತಾಳ ಮಾತಿಗೆ ಶುರು ಮಾಡಿತು.

‘ಬಡ್ಡಿಹೈದ್ನೆ ಈವತ್ತು ನಿನ್ನ ಮಾರ್ಗಾಯಾಸ ಪರಿಹಾರಕ್ಕೆ ಕತೆ-ಗಿತೆ ಹೇಳಕುಲ್ಲ. ನೋಡ್ಲಾ ಈಗ ಜಗತ್ತಲ್ಲಿ ಎರಡೇ ಕಾಲ. ಮನೇಲಿದ್ರೆ ಉಳಿಗಾಲ, ಆಚೆಗ್ ಬಂದ್ರೆ ಕೊನೆಗಾಲ! ಎಡವಟ್ ನನ್ಮಗ ನೀನು. ಮಾಸ್ಕು, ಆರೋಗ್ಯಸೇತು ಇಲ್ಲದೆ ಆಚೆ ಬಂದಿದೀಯ. ಈವತ್ತು ಒಂದಷ್ಟು ಪ್ರಶ್ನೆ ಕೇಳತೀನಿ ರೆಡಿಯಾಗು’.

‘ಬಡ್ಡಿ ಹೈದ್ನೆ ಈ ಕಡೆಗೆ ಅಮೆರಿಕ ತನ್ನ ಸೈನ್ಯ ಯಾಕೆ ಕಳೀಸ್ತಾ ಅದೆ? ಕೊರೊನಾ ಜ್ವರದಂಗೆ ಪೆಟ್ರೋಲ್-ಡೀಸೆಲ್ ರೇಟು ಯಾಕೆ ಏರ್ತಾದೆ?

‘ಕೊರೊನಾ, ಯುದ್ಧದ ಬಿಸಿ ನಡಂತರದಲ್ಲಿ ರಾಗಾ ಯಾಕೆ ದಡಿಕತ್ತರಿ ತಗಂಡು ಸರಂಡರ್ ಮೋದಿ ಅಂತ ನಿಂತವ್ರೆ? ಛೀ-ನೀ ಅಂತ ಮಕ್ಕುಗೀತಿದ್ರು ಜನ ಚೀನಾ ವಸ್ತುನಾ ತಗತ್ಲೇ ಅವ್ರೆ, ಯಾಕೆ?

‘ಕೊರೊನಾ ಉಸ್ತುವಾರಿಯಾಗಿ ಅಂದ್ರಿಗಿನಾ ಮೊದಲು ರಾಮುಲಣ್ಣ, ಸುಧಾರಕ, ನಶ್ವತ್ ಆರಾಯಣ, ಈಗ ರಶೋಕಣ್ಣ! ಯಾಕೆ ಹಿಂಗೆ ಬದ್ಲಾಸ್ತಾವರೆ?

‘ರಾಜ್ಯದಲ್ಲಿ ಎಲ್ಲಾರಿಗೂ ಕೊರೊನಾ ಟೆಸ್ಟ್ ಮಾಡಿ ಆಗ್ಯದಂತೆ, ನಂತಾವ್ಕಿನ್ನಾ ಟ್ಯಾಗ್ ತಕಂದು ಬಂದೇ ಇಲ್ಲಪ್ಪ! ಹ್ಯಂಗೆ?’

‘ಕೋವಿಡ್‍ಗೆ 10,000 ಬೆಡ್ಡು ಅದಂತೆ. ಆದ್ರೂ ಆಸ್ಪತ್ರೇಲಿ ಜಾಗಿಲ್ಲವಂತೆ. ಇಷ್ಟು ದಿನಾದ್ರೂ ಬೆಡ್ಡು-ಬ್ರೆಡ್ಡು ಜಾಸ್ತಿ ಮಾಡದು ಬುಟ್ಟು ನೋಡಲ್ಲ ಅಧಿಕಾರಿ ಯಾಕೆ? ಯಾವ ಪರಿಸ್ಥಿತಿಯಲ್ಲೂ ಲಾಕ್‍ಡೌನ್ ಮಾಡಲ್ಲ ಬರೀ ಸೀಲ್‍ಡೌನ್ ಅಂತೆ! ಯಾಕೆ?’

‘ನೋಡ್ಲಾ, ಇವೆಲ್ಲ ಪ್ರಶ್ನೆಗೂ ನೀನು ಒಂದೇ ಪದದಲ್ಲಿ ಉತ್ತರ ಕೊಡಬೇಕು. ಇಲ್ಲದಿದ್ರೆ ನಿನ್ನ ತಲೆ ತಕಂದು ಸೀದುಬುಡ್ತೀನಿ’ ಅಂತು ಬೇತಾಳ. ಈವಯ್ಯಂದೂ ಡೌಲು ಪ್ರಶ್ನೆಗಳೇ! ಅದೇ ಸರಿ ಉತ್ತರ ಅಂತ ಹೀಗಂದೆ:

‘ಡೌಲ್‍ಸೀನ್’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT