‘ಬ್ಯಾಂಗಲ್ ಬಂಗಾರಿ, ಬ್ಯಾಂಗಲ್ ಬಂಗಾರಿ…’ ಹಾಡುತ್ತಾ ಮನೆಯೊಳಗೆ ಹೋದೆ.

‘ಏನ್ರೀ, ನನಗೆ ಬಂಗಾರಿ ಅಂತ ಕರೆದ್ರಾ?’ ಅಡುಗೆ ಮನೆಯಲ್ಲಿದ್ದ ಹೆಂಡತಿ ಖುಷಿಯಿಂದ ಹೊರಗೆ ಬಂದಳು.

ಅನಿವಾರ್ಯವಾಗಿ ‘ಹೂಂ’ ಎಂದು ತಲೆಯಾಡಿಸಿದೆ.

‘ಬರೀ ಹಾಡಲ್ಲಿ ಬ್ಯಾಂಗಲ್ ಬಂಗಾರಿ ಅಂತ ಅಂದ್ರೇನ್ ಬಂತು, ಒಂದ್ ನಾಲ್ಕು ಚಿನ್ನದ ಬಳೆ ಕೊಡಿಸಿದ್ರೆ ಹಾಡಿಗೊಂದು ಅರ್ಥ ಇರುತ್ತೆ’.

‘ಅರ್ಥ ಬರೋಕೆ ನನ್ನ ಜೇಬಲ್ಲಿ ‘ಅರ್ಥ’ ಇರಬೇಕಲ್ವೆ?’

‘ಈಗ ಜಿಎಸ್ಟಿ ಸ್ಲ್ಯಾಬ್ ಎಲ್ಲ ಇಳಿಸೀದಾರಂತಲ್ರೀ?’

‘ಅಯ್ಯೋ ದಡ್ಡಿ, ಜಿಎಸ್ಟಿ ಸ್ಲ್ಯಾಬ್ ಕಡಿಮೆಯಾಗಿದ್ರೂ ಚಿನ್ನದ ದರ ಮಾತ್ರ ಸ್ಲ್ಯಾಬ್ ಏರಿ ಕೂತಿದೆ’.

‘ಹೋಗ್ಲಿ ಬಿಡಿ, ಐ ಫೋನ್ ಆದ್ರೂ ಕೊಡಿಸಿ. ಹೇಗೂ ಟ್ರಂಪ್ ಮತ್ತು ಮೋದಿ ನಡುವೆ ಮತ್ತೆ ಲವ್ ಸ್ಟಾರ್ಟ್ ಆಗಿದೆಯಲ್ಲ, ಆ್ಯಪಲ್ ಕಂಪನಿ ಫೋನ್ ರೇಟ್ ಎಲ್ಲ ಕಡಿಮೆ ಆಗಿರಬಹುದು’ ಹತ್ತಿರ ಬಂದು ತಲೆ ಸವರುತ್ತಾ ಹೇಳಿದಳು.

‘ಬ್ರೇಕಪ್ ನಂತರವೂ ಮೊದಲಿನ ಪ್ರೀತಿಯೇ ಉಳಿದಿರುತ್ತಾ ಹೇಳು, ಒಡೆದ ಮನಸನು ಕೂಡಿಸಲು ಸಾಧ್ಯವೇ’ ಎಂದು ನಾಟಕೀಯವಾಗಿ ಹೇಳಿ, ‘ಬೇಕಾದರೆ ಯಾವುದಾದರೂ ಚೈನಾ ಸೆಟ್ ಕೊಡಿಸುತ್ತೇನೆ ನೋಡು’ ಎಂದೆ.

‘ಛೀ... ಬೇಡವೇ ಬೇಡ, ಒಂದು ವಾರಕ್ಕೇ ಅದು ಹಾಳಾಗೋಗುತ್ತೆ’ ಎಂದಳು ಅರ್ಧಾಂಗಿ.

‘ಓಯ್, ಶಾಂತಂ ಪಾಪಂ ಅನ್ನು, ಈಗ ಇಂಡಿಯಾ–ಚೀನಾ ಭಾಯಿ ಭಾಯಿ… ಗೊತ್ತಿಲ್ವ ನಿಂಗೆ?’

‘ಅದು ಬಿಡಿ, ಇಲ್ಲಿ ನೋಡಿ. ಕಾರಿನ ರೇಟ್ ಎಲ್ಲ ₹60 ಸಾವಿರದಿಂದ ₹2 ಲಕ್ಷ ಆಗಿದೆಯಂತೆ, ಹೊಸ ಕಾರ್ ಆದರೂ ತಗೊಳ್ರೀ’ ಪೇಪರ್ ತೋರಿಸುತ್ತಾ ಹೇಳಿದಳು.

‘₹2 ಲಕ್ಷಕ್ಕೆಲ್ಲ ಹೊಸ ಕಾರ್ ಬರೋದಿಲ್ವೆ, ಅಷ್ಟು ರೇಟ್ ಕಡಿಮೆಯಾಗಬಹುದು ಅಂತ ಅದು, ಹೊಸ ಕಾರ್ ತಗೊಳ್ಳೋಕೆ ಕನಿಷ್ಠ ₹10 ಲಕ್ಷವಾದರೂ ಬೇಕು, ನಿನಗೆ ಗ್ಯಾರಂಟಿ ಬಸ್ಸೇ ಗತಿ’.

‘ಮತ್ಯಾಕೆ ಬ್ಯಾಂಗಲ್ ಬಂಗಾರಿ ಅಂತ ಹಾಡ್ತೀರಿ, ಖಾಲಿ ಕೈ ಚಕೋರಿ ಅನ್ನಿ ಸಾಕು’ ಎನ್ನುತ್ತಾ ತಲೆಗೆ ಮೊಟಕಿ ಒಳಗೆ ಹೋದಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.