ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಚುರುಮುರಿ: ಪಾರ್ಲಿಮೆಂಟ್ ಪಾಸ್

Published 5 ಜೂನ್ 2024, 0:20 IST
Last Updated 5 ಜೂನ್ 2024, 0:20 IST
ಅಕ್ಷರ ಗಾತ್ರ

‘ಪಾರ್ಲಿಮೆಂಟ್ ಪರೀಕ್ಷೆ ಫಲಿತಾಂಶ ಪ್ರಕಟವಾಗಿ ಟಾಪರ್‌ಗಳು ಪಾಸಾದರು, ಉಳಿದವರು ಫೇಲಾದರು...’ ಎಂದ ಶಂಕ್ರಿ.

‘ಚುನಾವಣೆಯಲ್ಲಿ ಮತ ಚಲಾಯಿಸದೆ ನಿರ್ಲಕ್ಷ್ಯ ಮಾಡಿದ ಮತದಾರರನ್ನೂ ನಿರ್ದಾಕ್ಷಿಣ್ಯವಾಗಿ ಫೇಲ್ ಮಾಡಿಬಿಡಬೇಕು’ ಸುಮಿಗೆ ಸಿಟ್ಟು.

‘ಥಿಯೇಟರ್‌ನಲ್ಲೇ ಸಿನಿಮಾ ನೋಡಿ ಎನ್ನು ವಂತೆ, ಮತಗಟ್ಟೆಗೇ ಬಂದು ಮತದಾನ ಮಾಡಿ ಎಂದರೆ ಮತದಾರರಿಗೆ ಕಷ್ಟ ಆಗೋದಿಲ್ವೇನ್ರೀ? ವೋಟ್ ಫ್ರಂ ಹೋಂ ವ್ಯವಸ್ಥೆ ಮಾಡಿ ಮರು
ಮತದಾನಕ್ಕೆ ಅವಕಾಶ ಮಾಡಿಕೊಟ್ಟರೆ ಮತದಾರರು ಡಿಸ್ಟಿಂಕ್ಷನ್‍ನಲ್ಲಿ ಪಾಸಾಗ್ತಾರೆ’.

‘ಮತ ಮರೆತವರ ಬಗ್ಗೆ ಮರುಕ ತೋರಿಸಬೇಡಿ, ಹಾರ್ಡ್‌ವರ್ಕ್ ಮಾಡಿಯೂ ಚುನಾವಣೆಯಲ್ಲಿ ಫೇಲಾಗಿ ಸಂಕಟಪಡುತ್ತಿರುವ ಅಭ್ಯರ್ಥಿಗಳ ಬಗ್ಗೆ ಸಿಂಪಥಿ ತೋರಿಸಿ’.

‘ಫೇಲೇ ಪಾಸಿನ ಮೆಟ್ಟಿಲು ಎಂದುಕೊಂಡು ಫೇಲಾದ ಅಭ್ಯರ್ಥಿಗಳು ಮುಂದಿನ ಎಲೆಕ್ಷನ್‌
ವರೆಗೂ ಸಮಾಧಾನ ಮಾಡಿಕೊಳ್ಳಲೇಬೇಕು’.

‘ಪ್ರಬಲ ಪಕ್ಷದವರು ಸುಲಭವಾಗಿ ಪಾಸಾಗಿ ಪಾರ್ಲಿಮೆಂಟ್ ಪ್ರವೇಶ ಮಾಡಿಬಿಡ್ತಾರೆ, ಅದೆಷ್ಟೋ ದುರ್ಬಲ ಪಕ್ಷಗಳಿಗೆ ಇವತ್ತಿಗೂ ಪಾರ್ಲಿಮೆಂಟ್ ಫ್ಲೈಟ್ ಹತ್ತಲು ಸಾಧ್ಯವಾಗಿಲ್ಲ. ದೊಡ್ಡ ಪಕ್ಷಗಳು ಸಣ್ಣಪುಟ್ಟ ಪಕ್ಷಗಳ ಕೈ ಹಿಡಿದು ತಮ್ಮ ಜೊತೆ ಪಾರ್ಲಿಮೆಂಟಿಗೆ ಕರೆದೊಯ್ಯುವ ದೊಡ್ಡತನ ತೋರಬೇಕು’.

‘ಅಂತಹ ದೊಡ್ಡತನದಿಂದಲೇ ಎನ್‍ಡಿಎ ಗ್ರೂಪ್, ‘ಇಂಡಿಯಾ’ ಟ್ರೂಪ್ ಮಾಡಿಕೊಂಡು ಸಣ್ಣ ಪಕ್ಷಗಳೊಂದಿಗೆ ಸೀಟು, ಶಕ್ತಿ ಹಂಚಿಕೆ ಮಾಡಿಕೊಂಡು ಅವರೂ ಪಾರ್ಲಿಮೆಂಟ್ ಪ್ರವೇಶಿಸಲು ನೆರವಾಗಿದ್ದಾರೆ’.

‘ಕೂಟ, ಒಕ್ಕೂಟಗಳೂ ಕಡೆಗಣಿಸಿರುವ ಅನೇಕ ಶಕ್ತಿಹೀನ ಪಕ್ಷಗಳು ನಮ್ಮಲ್ಲಿವೆ. ಸಂಸತ್ ಸದಸ್ಯರ ಸಂಖ್ಯೆ ಹೆಚ್ಚಳ ಮಾಡಿ, ಚುನಾವಣೆಯಲ್ಲಿ 35 ಪರ್ಸೆಂಟ್ ಮತ ಪಡೆದವರನ್ನು ಪಾಸ್ ಮಾಡುವ ವ್ಯವಸ್ಥೆ ಜಾರಿಯಾದರೆ ದುರ್ಬಲ ಪಕ್ಷಗಳೂ ಪಾರ್ಲಿಮೆಂಟ್‌ಗೆ ಪ್ರವೇಶ ಪಡೆಯಬಹುದು’.

‘35 ಪರ್ಸೆಂಟೂ ಪಡೆಯಲಾಗದವರು ಒಂದಷ್ಟು ಗ್ರೇಸ್ ಮತ ಕೊಟ್ಟು ಪಾಸ್ ಮಾಡಿ ಅಂತ ಒತ್ತಾಯಿಸಿದರೆ ವ್ಯವಸ್ಥೆಯು ಅವ್ಯವಸ್ಥೆ ಆಗಿಬಿಡುತ್ತದೆ...’ ಅಂದ ಶಂಕ್ರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT