ಕೈಲಿದ್ದ ಮೊಬೈಲ್ ನೋಡಿಕ್ಯಂದು ಒಬ್ಬನೇ ಹೋಯ್ತಿದ್ದೆ. ಎದುರಿಗೆ ಬಂದ ತುರೇಮಣೆ ‘ಏನ್ಲಾ, ನಿನಗೂ ಮೊಬೈಲ್ ರೀಲ್ಸ್ ಹುಚ್ಚು ಅಮರಿಕ್ಯಂಡದೇನೋ?’ ಅಂತ ಬೋದರು.

‘ಇಲ್ಲ ಸಾ, ನಾನು ರಾಜಕೀಯ ನಾಯಕರ ಹೆಜ್ಜೆ ಗುರುತು ಪಿಪಿಎಸ್ ಟ್ರಾಕ್ ಮಾಡ್ತಾ ಇವ್ನಿ’ ಅಂತಂದೆ.

‘ಜಿಪಿಎಸ್ ಗೊತ್ತದೆ, ಅದ್ಯಾವುದ್ಲಾ ಪಿಪಿಎಸ್ಸು ಟ್ರಾಕಿಂಗು?’

‘ಸಾ, ಇದು ಪೊಲಿಟಿಕಲ್ ಪೊಸಿಶನಿಂಗ್ ಸಿಸ್ಟಂ ಅಂತ. ಯಾವ ನಾಯಕರು ಯಾವ ಪಕ್ಷದಲ್ಲಿ ಲಂಚು-ಡಿನ್ನರ್ ಮಾಡಿಕ್ಯಂದು ಹೊಟ್ಟೆ ಜೀವಣ ನಡೆಸ್ತಾವ್ರೆ ಅಂತ ನೋಡಕ್ಕೆ ಹೊಸಾ ಆಪ್ ಬಂದದೆ. ಅದರ ಲೈವ್ ಲೊಕೇಶನ್ ಮ್ಯಾಪ್ ಓಪನ್ ಮಾಡಿಕ್ಯಂದ್ರೆ ಶಾಸಕರು ಎಲ್ಲಿ, ಏನು ಕಡಿದು ಕಟ್ಟೆ ಹಾಕ್ತಾವ್ರೆ ಅಂತ ಗೊತ್ತಾತದೆ’ ಬಹಳ ಹೆಮ್ಮೆಯಿಂದ ಹೇಳಿದೆ.

‘ನೀವೆಲ್ಲೋಗಿದ್ರಿ ಸಾ? ಇಕ್ಕಡಿಂದ ಬತ್ತುದರಿ’ ಕೇಳಿದೆ.

‘ನನ್ನ ಸ್ನೇಹಿತರ ಮಗ ಕಾಲೇಜಲ್ಲಿ ಅತಿಥಿ ಉಪನ್ಯಾಸಕ ಆಗ್ಯವನೆ ಕನೋ. ‘ಒಂದು ಹೆಣ್ಣದೆ ಮದುವೆ ಮಾಡಿಕ್ಯಂದೀಲಾ’ ಅಂತ ಕೇಳುಕ್ಕೆ ಹೋಗಿದ್ದೆ. ನನ್ನ ಮಾತು ಕೇಳ್ತಿದ್ದಂಗೇ ಕಣ್ಣಗೆ ನೀರಾಕ್ಕ್ಯಂದ. ‘ನಾವು ಪೌರಕಾರ್ಮಿಕರಿಗಿಂತ ಕಡೆಯಾಗೋದೋ ಕಣ ಚಿಗಪ್ಪ. ವತ್ತರಿಂದ ಸಂದೆಗಂಟ ಗೇದ್ರೂ ಬರೀ ಇಪ್ಪತ್ತೈದು ಸಾವಿರ ಸಂಬಳ. ಪರ್ಮನೆಂಟ್ ಆಗಕುಲ್ಲ. ನಾನು ಲಚ್ಚರ್ ಕೆಲಸ ಬುಟ್ಟು ಬಿಬಿಎಂಪಿಗೆ ಪೌರಕಾರ್ಮಿಕನಾಗಿ ಸೇರಿಕ್ಯತ್ತೀನಿ’ ಅಂತ ಅತ್ತುಗಂದ ಕಲಾ’.

‘ನೀವೇನಂದ್ರಿ?’

‘ನೊಂದ್ಕಬ್ಯಾಡ ಮಗ, ಲಚ್ಚರುಗಳು ಮನಸ್ಸಿನ ಕೊಳೆ ತೊಳೆಯೋ ಜಲಗಾರರೇ ಅಂತ ಸಮಾಧಾನ ಮಾಡಿ ‘ಶಾಸಕರ ತಾವು ಮಾತಾಡಿ ಬಿಬಿಎಂಪಿಲಿ ಸೇರಿಸ್ತೀನಿ’ ಅಂತ ಹೇಳಿ ಬಂದಿವ್ನಿ. ಈಗ ಶಾಸಕರು ಎಲ್ಲ್ಯವರೆ ನೋಡು’ ತುರೇಮಣೆ ಸೂಚಿಸಿದರು.

‘ಸಾ, ಶಾಸಕರು ಸೊಂಟಕ್ಕೆ ಬಾಂಬು ಕಟ್ಟಿಗ್ಯಂದು ಯುದ್ಧಕ್ಕೆ ಹೊಂಟವ್ರೋ ಏನೋ ಕಾಣೆ. ಆಪಲ್ಲಿ ನೋಡ್ತೀನಿ ಇರ್ರಿ’ ಅಂತಂದು ಆಪು ತೆಗೆದ್ರೆ ಅದು ಯುದ್ಧಕ್ಕೆ ನಡಕೋಯ್ತಿರಾ, ಬೈಕಗೋಯ್ತಿರಾ ಅಂತ ಕೇಳಕ್ಕೆ ಮುಟ್ಟಿಗ್ಯತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.