ಮಾನಸಿಕ ಚಿಕಿತ್ಸಾ ಕೇಂದ್ರದಲ್ಲಿ ರೋಗಿಗಳು ಜೋರು ಗಲಾಟೆ ಮಾಡುತ್ತ ಕುಸ್ತಿಗೇ ಬಿದ್ದಿದ್ದರು. ‘ಅವರಿವರನ್ನು ಕೊಂದ ಮಾತ್ರಕ್ಕೆ ನೀನು ಅಜೇಯನಲ್ಲ... ನಾನು ಪಾರ್ಥ, ನನ್ನ ಎದುರಿಸು’ ಅಂತ ಒಬ್ಬ, ‘ಏನು ಪಾರ್ಥ? ಕೆಂಗಣ್ಣಿನಿಂದ ಕೆಕ್ಕರಿಸಿ ಈ ಬಬ್ರುವಾಹನನನ್ನು ಗೆಲ್ಲಲಾರೆ... ಎತ್ತು ನಿನ್ನ ಗಾಂಡೀವ...’ ಅಂತ ಇನ್ನೊಬ್ಬ. ಡಾಕ್ಟರಿಗೆ ತೆಲಿ ಕೆಟ್ಟು ಹೋಯಿತು.

ಇನ್ನೊಂದು ಕಡೆ ‘ಟೀವಿ ಹಾಕ್ರಿ, ಅದೂ ರಾಜಕೀಯದ್ದೇ ಚಾನೆಲ್ ಬೇಕು’ ಅಂತ ಇನ್ನೊಂದು ಗುಂಪು ಗಲಾಟೆ. ‘ರಾಜಕೀಯ ಬ್ಯಾಡ ಕಣ್ರಲೆ, ಕಾಮಿಡಿ ಹಾಕ್ಲಾ?’ ಡಾಕ್ಟರು ನೈಸ್ ಮಾಡಲು ನೋಡಿದರು.

‘ಈ ರಾಜಕೀಯನೇ ದೊಡ್ಡ ಕಾಮಿಡಿ ಸಾ... ಅದ್ನೇ ಹಾಕಿ’ ಎಂದ ಮತ್ತೊಬ್ಬ ಭೂಪ!

‘ಅಲ್ಲ, ಎಲ್ಲ ಕರೆಕ್ಟಾಗಿ ಮಾತಾಡ್ತೀರ, ನಿಮಗೆ ತೆಲಿ ಸರಿ ಇಲ್ಲ ಅಂತ ಯಾರಯ್ಯ ಹೇಳಿದ್ದು?’

‘ನೀವೇ ಸಾ, ತೆಲಿ ಕೆಟ್ಟೋರ್ನ ಹೊರಗೆ ಬಿಟ್ಟಿದೀರಿ, ತೆಲಿ ಸರಿ ಇರೋ ನಮ್ಮನ್ನ ಒಳಗೆ ಇಟ್ಕಂಡಿದೀರಿ. ನಿಮಗೇ ತೆಲಿ ಸರಿ ಇಲ್ಲ’.

‘ಕರೆಕ್ಟ್ ಕಣ್ರಯ್ಯ. ಅದಿರ್‍ಲಿ, ಈ ತೆಪರೇಸಿ, ಗುಡ್ಡೆ ಎಲ್ಲಿ?’ ಡಾಕ್ಟರು ಸುತ್ತಮುತ್ತ ಹುಡುಕಿದರು.

‘ಅವರು ಅರೆಸ್ಟ್ ಆಟ ಆಡ್ತದಾರೆ ಸಾ. ತೆಪರೇಸಿ ಗುಡ್ಡೇನ ಅರೆಸ್ಟ್ ಮಾಡಿಸ್ತಾನಂತೆ, ಗುಡ್ಡೆ ತೆಪರೇಸಿನ ಒಳಗೆ ಹಾಕಿಸ್ತಾನಂತೆ, ಹೊಸ ಆಟ’.

‘ಹೌದಾ? ಎಲ್ಲದಾರೆ ಅವ್ರು?’ ಡಾಕ್ಟರು ಹುಡುಕುತ್ತ ಹೋದರು. ಅಷ್ಟರಲ್ಲಿ ದುಬ್ಬೀರ, ಕೊಟ್ರೇಶಿ ಕಿತ್ತಾಡಿಕೊಂಡು, ಒಬ್ಬರಿಗೊಬ್ಬರು ಬಟ್ಟೆ ಹರ್ಕಂಡು ಅಲ್ಲಿಗೆ ಬಂದರು. ಇಬ್ಬರ ಮೈಮೇಲೂ ಚೆಡ್ಡಿ ಬಿಟ್ಟರೆ ಬೇರೇನೂ ಇರಲಿಲ್ಲ.

‘ಏನ್ರೋ ಇದು ನಿಮ್ ಅವತಾರ?’ ಡಾಕ್ಟರಿಗೆ ಸಿಟ್ಟು ಬಂತು.

‘ಇದು ಬಿಚ್ಚೋ ಆಟ ಸಾ... ದುಬ್ಬೀರ ನಂದೆಲ್ಲ ಬಿಚ್ಚಿಡ್ತೀನಿ ಅಂದ, ನಾನು ಬಿಡ್ತೀನಾ? ನಾನೂ ಅವನದೆಲ್ಲ ಬಿಚ್ಚಿಟ್ಟೆ...’ ಎಂದ ಕೊಟ್ರೇಶಿ. ಡಾಕ್ಟರಿಗೆ ನಿಂತಲ್ಲೇ ತಲೆ ಗಿರ್ ಅಂತ ತಿರುಗಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.