ಯೋಜನೆಯನ್ನು ಬದಲಿಸುವ ಮೂಲಕ ಗಾಂಧಿಯವರ ಹೆಸರನ್ನು ಕೈಬಿಡಲಾಗಿದೆ ಎಂಬುದು ಕಾಂಗ್ರೆಸ್ ಆರೋಪ. ಆದರೆ ವಿಬಿ-ಜಿ ರಾಮ್ ಜಿ ಯೋಜನೆಯಲ್ಲಿ ಗಾಂಧಿಯವರ ಕನಸನ್ನು ಸಾಕಾರಗೊಳಿಸಲು ಅವರು ಆರಾಧಿಸುತ್ತಿದ್ದ ರಾಮನ ಹೆಸರನ್ನು ಬಳಸಿಕೊಳ್ಳಲಾಗಿದೆ. ಗಾಂಧಿಯವರು ಕೊನೆಯುಸಿರು ಇರುವವರೆಗೂ ‘ಹೇ ರಾಮ್’ ಎನ್ನುತ್ತಿದ್ದರು. ರಾಮರಾಜ್ಯದ ಕಲ್ಪನೆ ಸ್ವತಂತ್ರ ಭಾರತದಲ್ಲಿ ಪಡಿಮೂಡಬೇಕು ಎಂಬುದು ಅವರ ಮಹತ್ವಾಕಾಂಕ್ಷೆಯಾಗಿತ್ತು. ಈ ಕಾರಣಕ್ಕಾಗಿಯೇ ಗಾಂಧಿ ಕನಸಿನ ಈ ಯೋಜನೆಗೆ ಶ್ರೀರಾಮನ ಹೆಸರು ಸೇರ್ಪಡೆಯಾಗಿದೆ