ಕರ್ನಾಟಕದಲ್ಲಿ ಇಂದು ಆರ್ಥಿಕ ವಿರೋಧಾಭಾಸವು ಬಹಳ ಎದ್ದುಕಾಣುವಂತೆ ಇದೆ. ದೇಶದಲ್ಲಿ ಅತಿಹೆಚ್ಚಿನ ತಲಾವಾರು ಆದಾಯ ಇರುವುದು ಕರ್ನಾಟಕದಲ್ಲಿ ಎಂದು ರಾಜ್ಯ ಸರ್ಕಾರವು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದೆ. ಇಲ್ಲಿನ ಸರಾಸರಿ ತಲಾ ಆದಾಯವು ₹2,04,605ರಷ್ಟಿದೆ. ಇದು ರಾಷ್ಟ್ರೀಯ ಸರಾಸರಿ ತಲಾ ಆದಾಯವಾದ ₹1,14,710ಕ್ಕಿಂತ ಬಹಳ ಹೆಚ್ಚು. ಭಾರತದಲ್ಲಿ ನಾಲ್ಕನೆಯ ಅತಿದೊಡ್ಡ ಅರ್ಥವ್ಯವಸ್ಥೆ ಕರ್ನಾಟಕದ್ದು. ದೇಶದಲ್ಲಿ ಜಿಎಸ್ಟಿ ಕಣಜಕ್ಕೆ ಎರಡನೆಯ ಅತಿಹೆಚ್ಚಿನ ಕೊಡುಗೆ ನೀಡುವ ರಾಜ್ಯ ಕರ್ನಾಟಕ. ದೇಶದ ದೊಡ್ಡ ರಾಜ್ಯಗಳ ಪೈಕಿ ಅತ್ಯಂತ ವೇಗದ ಬೆಳವಣಿಗೆ ಕಾಣುತ್ತಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. 2024–25ರಲ್ಲಿ ರಾಜ್ಯದ ಜಿಡಿಪಿ (ಜಿಎಸ್ಡಿಪಿ) ಶೇ 12.8ರಷ್ಟು ಬೆಳವಣಿಗೆ ಸಾಧಿಸಿದೆ. ರಾಜ್ಯದಲ್ಲಿ 2013–14ರಲ್ಲಿ ಶೇ 16.55ರಷ್ಟಿದ್ದ ಬಹುಆಯಾಮಗಳ ಬಡತನದ ಪ್ರಮಾಣವು 2025ರಲ್ಲಿ ಶೇ 5.67ಕ್ಕೆ ಇಳಿಕೆ ಕಂಡಿದೆ. ಹೀಗಿದ್ದರೂ ವಿಚಿತ್ರವೆನಿಸುವ ಸಂಗತಿಯೆಂದರೆ ಭಾರತದಲ್ಲಿ ಅತಿಹೆಚ್ಚಿನ ಸಂಖ್ಯೆಯಲ್ಲಿ ಬಿಪಿಎಲ್ ಪಡಿತರ ಚೀಟಿಗಳು ಇರುವುದು ಕರ್ನಾಟಕದಲ್ಲೇ! ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ವಿಧಾನಸಭೆಯಲ್ಲೇ ಒಪ್ಪಿಕೊಂಡಿರುವ ಪ್ರಕಾರ ರಾಜ್ಯದ ಶೇಕಡ 73ರಿಂದ
ಶೇ 75ರಷ್ಟು ಮಂದಿ ಬಿಪಿಎಲ್ ಪಡಿತರ ಚೀಟಿ ಹೊಂದಿದ್ದಾರೆ. ಉತ್ತಮಮಟ್ಟದ ಸರಾಸರಿ ತಲಾ ಆದಾಯ ಹೊಂದಿರುವ ರಾಜ್ಯದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಬಿಪಿಎಲ್ ಪಡಿತರ ಚೀಟಿಗಳನ್ನು ನೀಡಿರುವುದು ಸಾಮಾನ್ಯ ಸಂಗತಿಯಲ್ಲ. ಇದು ಆಡಳಿತಾತ್ಮಕ ಲೋಪ ಅಲ್ಲ; ಇದು ವ್ಯವಸ್ಥೆಯ ಸೋಲಿನ ಸೂಚಕ. ವಾರ್ಷಿಕ ₹1.2 ಲಕ್ಷಕ್ಕಿಂತ ಕಡಿಮೆ ಆದಾಯ ಇರುವ ಕುಟುಂಬಗಳು ಬಿಪಿಎಲ್ ಪಡಿತರ ಚೀಟಿ ಪಡೆಯಲು ಅರ್ಹ. ರಾಜ್ಯದಲ್ಲಿ 4.44 ಕೋಟಿ ಜನ ಈ ‘ಆದ್ಯತಾ ಕುಟುಂಬ’ಗಳ ಅಡಿಯಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ, ಇವರಲ್ಲಿ ಹಲವರು ಬಿಪಿಎಲ್ ಕಾರ್ಡ್ ಪಡೆಯಲು ಅರ್ಹರಲ್ಲ. ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವವರ ಪೈಕಿ 7.76 ಲಕ್ಷ ಮಂದಿ ಆ ಸೌಲಭ್ಯಕ್ಕೆ ಅರ್ಹರಲ್ಲ ಎಂಬ ಅನುಮಾನವನ್ನು ಕೇಂದ್ರ ವ್ಯಕ್ತಪಡಿಸಿದೆ.

ಅರ್ಹರಲ್ಲದವರಿಗೆ ಬಿಪಿಎಲ್ ಕಾರ್ಡ್ ನೀಡುವುದರ ಪರಿಣಾಮಗಳು ಬಹಳ ಗಂಭೀರವಾದವು. ಬಡವರಿಗಾಗಿ ರೂಪಿಸಿದ ಅಭಿವೃದ್ಧಿ ಯೋಜನೆಗಳ ಪ್ರಯೋಜನವನ್ನು ಉಳ್ಳವರು ಹೆಚ್ಚಿನ ಪ್ರಮಾಣದಲ್ಲಿ ಪಡೆದುಕೊಂಡಾಗ, ಬಡವರಿಗೆ ಅದು ಅಗತ್ಯ ಪ್ರಮಾಣದಲ್ಲಿ ಸಿಗದಂತಾಗುತ್ತದೆ. ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ನೀಡುವ ಅಕ್ಕಿಯನ್ನು ಉಳ್ಳವರು ಪಡೆದುಕೊಂಡಾಗಲೆಲ್ಲ, ಅದರ ಅಗತ್ಯವು ನಿಜವಾಗಿಯೂ ಇದ್ದವರಿಗೆ ವಂಚನೆ ಎಸಗಿದಂತಾಗುತ್ತದೆ. ನೆರವಿನ ಅಗತ್ಯ ಇಲ್ಲದವರೂ ಬಿಪಿಎಲ್ ಕಾರ್ಡ್ ಮೂಲಕ ಸರ್ಕಾರದ ನೆರವು ಪಡೆದುಕೊಂಡಾಗ, ರಾಜ್ಯವು ಅಭಿವೃದ್ಧಿಯ ಉದ್ದೇಶದಿಂದ ಜಾರಿಗೆ ತಂದಿರುವ ಗೃಹಲಕ್ಷ್ಮಿ, ಅನ್ನಭಾಗ್ಯದಂತಹ ಯೋಜನೆಗಳು ಹಣಕಾಸಿನ ದೃಷ್ಟಿಯಿಂದ ಸುಸ್ಥಿರವಾಗಿ ಉಳಿಯುವುದಿಲ್ಲ. ಆಗ ಇಂತಹ ಯೋಜನೆಗಳ ಬದಲು ಹಣವನ್ನು ದೀರ್ಘಾವಧಿಯ ಹೂಡಿಕೆಗಳಾದ ಶಾಲೆ, ಆಸ್ಪತ್ರೆ, ಮೂಲಸೌಕರ್ಯ ನಿರ್ಮಾಣಕ್ಕೆ ಬಳಸುವುದು ಹೆಚ್ಚು ಸೂಕ್ತವೆಂದು ಅನ್ನಿಸುತ್ತದೆ.

ಅನರ್ಹ ಬಿಪಿಎಲ್ ಕಾರ್ಡುದಾರರನ್ನು ಗುರುತಿಸಿ, ಅಂತಹ ಕಾರ್ಡ್ಗಳನ್ನು ರದ್ದುಪಡಿಸಲು ಸರ್ಕಾರ ನಡೆಸಿರುವ ಅಭಿಯಾನವು ಬಹಳ ಅಗತ್ಯವಾಗಿತ್ತು, ಅಭಿಯಾನ ಶುರುಮಾಡಿದ್ದು ಬಹಳ ವಿಳಂಬವೂ ಆಯಿತು. ಆಧಾರ್ ಸಂಖ್ಯೆಯ ಜೊತೆ ಜೋಡಣೆ ಮಾತ್ರದಿಂದಲೇ ವ್ಯಕ್ತಿ ಅಥವಾ ಕುಟುಂಬದ ಆದಾಯವನ್ನು ತಾಳೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಸರ್ಕಾರವು ತಂತ್ರಜ್ಞಾನವನ್ನು ಬಳಸಿಕೊಂಡು ಇತರ ಮಾರ್ಗಗಳಾದ ಆದಾಯ ತೆರಿಗೆ ಪಾವತಿ ದಾಖಲೆಗಳ ಪರಿಶೀಲನೆ, ಜಮೀನು ದಾಖಲೆಗಳ ಪರಿಶೀಲನೆ, ವಾಹನ ನೋಂದಣಿ ಪರಿಶೀಲನೆ ನಡೆಸಿ ಆದಾಯ ಲೆಕ್ಕಹಾಕಬೇಕು. ಇದು ಸರ್ಕಾರವು ತನ್ನ ನೈತಿಕ ಹಾಗೂ ಹಣಕಾಸಿನ ಹೊಣೆಯನ್ನು ಸರಿಯಾಗಿ ನಿಭಾಯಿಸುವ ಕೆಲಸವಾಗುತ್ತದೆ. ಸಮೃದ್ಧಿ ಹೊಂದಿರುವ ರಾಜ್ಯವೊಂದು ಬಡತನಕ್ಕೆ ಸಂಬಂಧಿಸಿದ ಸುಳ್ಳು ಆಧಾರಗಳ ದತ್ತಾಂಶವನ್ನು ನೆಚ್ಚಿಕೊಳ್ಳುವುದು ಸರಿಯಲ್ಲ. ಪ್ರತಿಯೊಂದು ಬೋಗಸ್ ಬಿಪಿಎಲ್ ಕಾರ್ಡ್ ಕೂಡ ಸಾರ್ವಜನಿಕರ ಹಣ ಪೋಲಾಗಲು ಕಾರಣವಾಗುತ್ತದೆ, ಸರ್ಕಾರದ ನೆರವು ನಿಜವಾಗಿಯೂ ಬೇಕಿರುವವರಿಂದ ಏನನ್ನೋ ಕಿತ್ತುಕೊಳ್ಳುತ್ತಿರುತ್ತದೆ. ಬಡತನದ ನಿಜವಾದ ನಿರ್ಮೂಲನೆ ಹಾಗೂ ಉಳ್ಳವರಿಗೆ ಇನ್ನಷ್ಟು ಸೌಲಭ್ಯಗಳನ್ನು ಕಲ್ಪಿಸಿಕೊಡುವುದರ ನಡುವೆ ತನ್ನ ಆಯ್ಕೆ ಯಾವುದು ಎಂಬುದನ್ನು ರಾಜ್ಯ ಸರ್ಕಾರ ತೀರ್ಮಾನಿಸಬೇಕು. ಆದರೆ, ದುರದೃಷ್ಟದ ಸಂಗತಿಯೆಂದರೆ, ಮತ ಬ್ಯಾಂಕ್ ರಾಜಕಾರಣವು ಆಡಳಿತದಲ್ಲಿನ ಪ್ರಾಮಾಣಿಕತೆಗಿಂತ ಮಿಗಿಲಾಗಿ ನಿಲ್ಲುತ್ತದೆ. ಅಭಿವೃದ್ಧಿ ಉದ್ದೇಶದ ಯೋಜನೆಗಳನ್ನು ಬಡವರನ್ನು ಮೇಲಕ್ಕೆ ಎತ್ತುವ ಯೋಜನೆಗಳನ್ನಾಗಿಸುವ ಬದಲು, ಕೆಲವರ ಓಲೈಕೆಗೆ ಇರುವ ಯೋಜನೆಗಳನ್ನಾಗಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.