ಕದನ ವಿರಾಮ ಮತ್ತು ಇತರ ದ್ವಿಪಕ್ಷೀಯ ವಿಷಯಗಳ ಬಗ್ಗೆ ಅಮೆರಿಕದ ನಾಯಕರು ನೀಡಿರುವ ಹೇಳಿಕೆಗಳ ಕುರಿತಾಗಿ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕು

ಭಾರತ ಮತ್ತು ಪಾಕಿಸ್ತಾನವು ಶನಿವಾರದಿಂದ ಅನ್ವಯ ಆಗುವಂತೆ ಕದನ ವಿರಾಮವನ್ನು ಜಾರಿಗೆ ತಂದಿವೆ. ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ ನಂತರದಲ್ಲಿ ಎರಡೂ ದೇಶಗಳ ನಡುವೆ ತೀವ್ರ ಸ್ವರೂಪದ ಬಿಕ್ಕಟ್ಟು ಸೃಷ್ಟಿಯಾಗಿತ್ತು. ನಂತರದಲ್ಲಿ ಎರಡೂ ದೇಶಗಳ ನಡುವೆ ಸಂಘರ್ಷ ಕೂಡ ಉಂಟಾಗಿತ್ತು. ಇಂತಹ ಸಂದರ್ಭದಲ್ಲಿ ಮೂಡಿರುವ ಈ ಕದನ ವಿರಾಮ ಸ್ವಾಗತಾರ್ಹ. ಏಕೆಂದರೆ ಭಾರತವು ಹೆಚ್ಚಿನ ನಷ್ಟ ಅನುಭವಿಸದೆ ತನ್ನ ನಿಲುವನ್ನು ಪಾಕಿಸ್ತಾನಕ್ಕೆ ಸ್ಪಷ್ಟಪಡಿಸುವ ಕೆಲಸ ಮಾಡಿದೆ. ಕದನ ವಿರಾಮಕ್ಕೆ ಶನಿವಾರ ತುಸು ಮಟ್ಟಿಗೆ ಭಂಗ ಎದುರಾಗಿತ್ತಾದರೂ ಭಾನುವಾರ ಕದನ ವಿರಾಮ ಉಲ್ಲಂಘನೆ ಆದ ವರದಿಗಳು ಇಲ್ಲ.

ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಆರಂಭ ಆಗಿರಲಿಲ್ಲವಾದರೂ, ಎರಡೂ ದೇಶಗಳು ಕ್ಷಿಪಣಿಗಳ ಬಳಕೆ ಮಾಡಿದ್ದವು. ಎರಡೂ ದೇಶಗಳು ಡ್ರೋನ್ ಬಳಕೆ ಮಾಡಿದ್ದವು ಹಾಗೂ ಗಡಿ ನಿಯಂತ್ರಣ ರೇಖೆಯ ಬಳಿ ಶೆಲ್ ದಾಳಿ ನಡೆದಿತ್ತು. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕರ ಶಿಬಿರಗಳ ಮೇಲೆ ಭಾರತ ದಾಳಿ ನಡೆಸಿತ್ತು. ಅಲ್ಲದೆ, ಪಾಕಿಸ್ತಾನದಲ್ಲಿ ಇರುವ ಭಯೋತ್ಪಾದಕರ ಮೂಲಸೌಕರ್ಯಗಳಿಗೆ ಹಾನಿ ಉಂಟುಮಾಡುವಲ್ಲಿ ಭಾರತ ಯಶಸ್ಸು ಕಂಡಿತ್ತು. ಎರಡೂ ದೇಶಗಳ ಮಿಲಿಟರಿಯನ್ನು ಯುದ್ಧಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿತ್ತು. ಸಂಘರ್ಷವು ಯುದ್ಧದ ಸ್ವರೂಪವನ್ನು ಪಡೆದುಕೊಳ್ಳಬಹುದು ಎಂಬ ಸ್ಥಿತಿ ನಿರ್ಮಾಣ ಆಗಿದ್ದಾಗ, ಎರಡೂ ದೇಶಗಳ ನಡುವೆ ಕದನ ವಿರಾಮ ಜಾರಿಗೆ ಬಂದಿದೆ. ಪೂರ್ಣ ಪ್ರಮಾಣದ ಯುದ್ಧದಿಂದ ಎರಡೂ ದೇಶಗಳಿಗೆ ನಷ್ಟ. ಹೀಗಾಗಿ, ಯುದ್ಧದ ಸಾಧ್ಯತೆಯನ್ನು ದೂರ ಮಾಡಿ, ಕದನ ವಿರಾಮಕ್ಕೆ ಒಪ್ಪುವ ಮೂಲಕ ಎರಡೂ ದೇಶಗಳು ಒಳ್ಳೆಯ ಕೆಲಸ ಮಾಡಿವೆ.

ಮಿಲಿಟರಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವ ವಿಚಾರವಾಗಿ ಪಾಕಿಸ್ತಾನದ ಜೊತೆ ಒಪ್ಪಂದ ವೊಂದಕ್ಕೆ ಬರಲಾಗಿದೆ, ಪಹಲ್ಗಾಮ್ ದಾಳಿಯ ನಂತರದಲ್ಲಿ ಪಾಕಿಸ್ತಾನವನ್ನು ಗುರಿಯಾಗಿಸಿಕೊಂಡು ಕೈಗೊಂಡಿರುವ ರಾಜತಾಂತ್ರಿಕ ಕ್ರಮಗಳ ಮೇಲೆ ಈ ಒಪ್ಪಂದವು ಪರಿಣಾಮ ಉಂಟುಮಾಡುವುದಿಲ್ಲ ಎಂದು ಭಾರತ ಹೇಳಿದೆ. ಕದನ ವಿರಾಮ ಹಾಗೂ ಅದು ಜಾರಿಗೆ ಬಂದ ನಂತರದ ಸ್ಥಿತಿಯ ಬಗ್ಗೆ ಕೇಂದ್ರ ಸರ್ಕಾರವು ಭಾನುವಾರ ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಸಿದೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಬಿಕ್ಕಟ್ಟಿಗೆ ದೀರ್ಘ ಇತಿಹಾಸ ಇದೆ.

ಹಾಗೆಯೇ, ಪ್ರಚೋದನಾತ್ಮಕ ದಾಳಿಗಳನ್ನು ನಡೆಸುವ ಚಾಳಿಯನ್ನು ಪಾಕಿಸ್ತಾನ ಹೊಂದಿದೆ. ಇವುಗಳನ್ನು ಗಮನಿಸಿದಾಗ ಈಗಿನ ಕದನ ವಿರಾಮವು ದುರ್ಬಲ ಎಂದು ಅನ್ನಿಸಬಹುದು. ಆದರೂ ಈ ವಿರಾಮಕ್ಕೆ ಸದ್ಯಕ್ಕೆ ಭಂಗ ಎದುರಾಗಲಿಕ್ಕಿಲ್ಲ ಎಂಬ ಆಶಾಭಾವನೆಯೂ ಇದೆ. ಭಾರತದ ಮೇಲೆ ಇನ್ನೊಂದು ಬಾರಿ ಭಯೋತ್ಪಾದಕ ದಾಳಿ ನಡೆದಿದ್ದೇ ಆದಲ್ಲಿ ಅದನ್ನು ಯುದ್ಧಕ್ಕೆ ಸಮನಾದ ಕೃತ್ಯವೆಂದು ಪರಿಗಣಿಸಲಾಗುತ್ತದೆ ಎಂಬುದನ್ನು ಕೇಂದ್ರ ಸರ್ಕಾರವು ಸ್ಪಷ್ಟಪಡಿಸಿದೆ. ಶಾಂತಿಯನ್ನು ಸ್ಥಾಪಿಸುವ ಹೊಣೆಯು ಪಾಕಿಸ್ತಾನದ ಮೇಲಿದೆ ಎಂಬುದನ್ನೂ ಅದು ಹೇಳಿದೆ.

ಪರಿಸ್ಥಿತಿ ತಿಳಿಗೊಂಡಿದೆ. ಆದರೆ ಪರಿಸ್ಥಿತಿ ತಿಳಿಗೊಂಡಿದ್ದರ ಹಿಂದಿನ ಪ್ರಕ್ರಿಯೆ ಹಾಗೂ ಕೆಲವು ವಿಚಾರಗಳ ಬಗ್ಗೆ ಸ್ಪಷ್ಟತೆ ಬೇಕಿದೆ. ಎರಡೂ ದೇಶಗಳ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ (ಡಿಜಿಎಂಒ) ನಡುವಿನ ದ್ವಿಪಕ್ಷೀಯ ಮಾತುಕತೆಯ ಮೂಲಕ ಕದನ ವಿರಾಮ ಒಪ್ಪಂದಕ್ಕೆ ಬರಲಾಯಿತು ಎಂದು ಕೇಂದ್ರ ಸರ್ಕಾರ ಹೇಳಿದೆ. ಆದರೆ, ಸಂಘರ್ಷವನ್ನು ನಿಲ್ಲಿಸಿ, ಕದನ ವಿರಾಮಕ್ಕೆ ಒಪ್ಪಿಕೊಳ್ಳು ವಂತೆ ಎರಡೂ ದೇಶಗಳ ಮೇಲೆ ಅಮೆರಿಕದ ಒತ್ತಡ ಇತ್ತು ಎಂಬುದನ್ನು ಸಂದರ್ಭವು ಹೇಳುತ್ತಿದೆ. ಕದನ ವಿರಾಮದ ಘೋಷಣೆಯನ್ನು ಮೊದಲು ಮಾಡಿದ್ದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್. ಈ ಕದನ ವಿರಾಮವು ಅಮೆರಿಕದ ಮಧ್ಯಸ್ಥಿಕೆಯಲ್ಲಿ ಮೂಡಿದೆ ಎಂದು ಅಲ್ಲಿನ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ. ಅಲ್ಲದೆ, ಅಮೆರಿಕದ ವಿದೇಶಾಂಗ ವ್ಯವಹಾರಗಳ ಸಚಿವ ಮಾರ್ಕೊ ರುಬಿಯೊ ಅವರು, ಎರಡೂ ದೇಶಗಳು ಹಲವು ವಿಚಾರಗಳ ಬಗ್ಗೆ ತಟಸ್ಥ ಸ್ಥಳವೊಂದರಲ್ಲಿ ಮಾತುಕತೆ ನಡೆಸಲು ಒಪ್ಪಿವೆ ಎಂದು ಹೇಳಿದ್ದಾರೆ.

ಕಾಶ್ಮೀರ ವಿಚಾರವಾಗಿ ಪರಿಹಾರವೊಂದನ್ನು ಕಂಡುಕೊಳ್ಳಲು ಸಾಧ್ಯವೇ ಎಂಬ ಬಗ್ಗೆ ಎರಡೂ ದೇಶಗಳ ಜೊತೆಗೂಡಿ ಕೆಲಸ ಮಾಡುವುದಾಗಿಯೂ ಟ್ರಂಪ್ ಹೇಳಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ವಿಚಾರಗಳಲ್ಲಿ ಮೂರನೆಯ ದೇಶದ ಮಧ್ಯಸ್ಥಿಕೆಗೆ ಅವಕಾಶ ಇಲ್ಲ ಎಂಬ ನಿಲುವನ್ನು ಭಾರತವು ಹಿಂದಿನಿಂದಲೂ ತಾಳಿದೆ, ಶಿಮ್ಲಾ ಒಪ್ಪಂದ ಕೂಡ ಇದನ್ನೇ ಹೇಳುತ್ತದೆ. ಪ್ರಸ್ತುತ ಕದನ ವಿರಾಮವು ಸಾಧ್ಯವಾಗಿದ್ದು ಹೇಗೆ ಎಂಬ ಬಗ್ಗೆ ಕೇಂದ್ರ ಸರ್ಕಾರವು ಮಾಹಿತಿ ಒದಗಿಸಬೇಕು. ಕದನ ವಿರಾಮದ ಬಗ್ಗೆ ಮತ್ತು ಇತರ ದ್ವಿಪಕ್ಷೀಯ ವಿಷಯಗಳ ಬಗ್ಗೆ ಅಮೆರಿಕದ ನಾಯಕರು ನೀಡಿರುವ ಹೇಳಿಕೆಗಳ ಕುರಿತಾಗಿ ಕೇಂದ್ರವು ಸ್ಪಷ್ಟನೆ ನೀಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.