ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಮತ ಕಳವು ಆರೋಪ, ಚುನಾವಣಾ ಪಾವಿತ್ರ್ಯದ ಬಗ್ಗೆ ಅನುಮಾನ ಮೂಡಿಸುವಂತಿದೆ.

‘ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ’ದಲ್ಲಿ, 2024ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಹುದೊಡ್ಡ ಚುನಾವಣಾ ಅಕ್ರಮ ಮತ್ತು ಮತ ಕಳವು ನಡೆದಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆಪಾದಿಸಿದ್ದಾರೆ. ಮೇಲ್ನೋಟಕ್ಕೆ ಚುನಾವಣಾ ಪ್ರಕ್ರಿಯೆಯಲ್ಲಿನ ಗಂಭೀರ ಲೋಪದಂತೆ ಕಾಣಿಸುತ್ತಿರುವ ಆರೋಪದ ಬಗ್ಗೆ ವಿಳಂಬ ಮಾಡದೆ ಲೆಕ್ಕಪರಿಶೋಧನೆ– ತನಿಖೆ ನಡೆಯಬೇಕಾಗಿದೆ. ಮಹದೇವಪುರ ವಿಧಾನಸಭಾ ಕ್ಷೇತ್ರವೊಂದರಲ್ಲೇ ಒಂದು ಲಕ್ಷಕ್ಕೂ ಹೆಚ್ಚು ನಕಲಿ ಮತಗಳು ಪತ್ತೆಯಾಗಿವೆ; ಅವುಗಳಲ್ಲಿ 11,000 ನಕಲಿ ನೋಂದಣಿಗಳಾಗಿದ್ದು, 40,000 ಮತದಾರರ ವಿಳಾಸಗಳು ಅನುಮಾನ ಹುಟ್ಟಿಸುವಂತಿವೆ; 33 ಸಾವಿರ ಪ್ರಕರಣಗಳಲ್ಲಿ ‘ನಮೂನೆ–6’ರ ದುರುಪಯೋಗ ನಡೆದಿದೆ; 4,000 ಪ್ರಕರಣಗಳು ಅಮಾನ್ಯ ಛಾಯಾಚಿತ್ರಗಳಿಗೆ ಸಂಬಂಧಿಸಿದವು ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಅಂಕಿಅಂಶಗಳು ನಿಜವಾಗಿದ್ದಲ್ಲಿ, ಚುನಾವಣಾ ಪ್ರಕ್ರಿಯೆ ದೋಷಪೂರಿತವಾಗಿದೆ ಎಂದು ಭಾವಿಸಬೇಕಾಗುತ್ತದೆ. ಚುನಾವಣಾ ಅಕ್ರಮಕ್ಕಾಗಿ ಬೇರೆಯವರನ್ನು ದೂಷಿಸುವ ಮೊದಲು, ಕಾಂಗ್ರೆಸ್ ಪಕ್ಷ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಮತದಾರರ ಅಂತಿಮ ಪಟ್ಟಿಯನ್ನು ಮತದಾನಕ್ಕೆ ಮೊದಲೇ ಎಲ್ಲ ರಾಜಕೀಯ ಪಕ್ಷಗಳಿಗೂ ನೀಡಲಾಗುತ್ತದೆ. ಆ ಸಂದರ್ಭದಲ್ಲಿ, ಲೋಪದೋಷಗಳನ್ನು ಕಾಂಗ್ರೆಸ್ ಏಕೆ ಗಮನಿಸಲಿಲ್ಲ? ಮತಪಟ್ಟಿಯಲ್ಲಿನ ವ್ಯತ್ಯಾಸಗಳನ್ನು ಮನೆ ಮನೆಗೆ ಹೋಗಿ ಪ್ರಚಾರ ನಡೆಸುವ ಬೂತ್ ಮಟ್ಟದ ಕಾರ್ಯಕರ್ತರು ಏಕೆ ಗಮನಿಸಲಿಲ್ಲ? ಮತದಾನದ ದಿನವೂ ಶಂಕಿತ ನಕಲಿ ಮತದಾನದ ಬಗ್ಗೆ ಪಕ್ಷದ ಚುನಾವಣಾ ಏಜೆಂಟರು ಪ್ರತಿಭಟನೆ ನಡೆಸಬಹುದಿತ್ತು. ಫಲಿತಾಂಶದ ನಂತರವೂ ಚುನಾವಣಾ ಅಕ್ರಮದ ಬಗ್ಗೆ ದೂರು ಸಲ್ಲಿಸಲು ಕಾಂಗ್ರೆಸ್ಗೆ ಅವಕಾಶವಿತ್ತು.

ಚುನಾವಣೆಗೆ ಮುನ್ನ ಹಾಗೂ ಚುನಾವಣೆಯ ನಂತರ ಪ್ರತಿಭಟಿಸುವ ಅವಕಾಶಗಳನ್ನು ಕಾಂಗ್ರೆಸ್ ಬಿಟ್ಟು
ಕೊಟ್ಟಿದ್ದರೂ, ಮರಣೋತ್ತರ ಪರೀಕ್ಷೆಗೆ ಅವಕಾಶ ಇನ್ನೂ ಇದೆ. ಮತದಾರರು ತಮ್ಮ ವಾಸಸ್ಥಳ ಬದಲಿಸಿದಾಗ, ಹಳೆಯ ನೋಂದಣಿಗಳನ್ನು ರದ್ದುಪಡಿಸದೆ ಹೋದಲ್ಲಿ, ನಕಲಿ ನಮೂದುಗಳು ದಾಖ
ಲಾಗುತ್ತವೆ. ಅಂತಹ ಸಂದರ್ಭದಲ್ಲಿ ಆಧುನಿಕ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ದೋಷಗಳನ್ನು ಸರಿಪಡಿಸಬಹುದಾಗಿದೆ. ಪ್ರಸಕ್ತ ಪ್ರಕರಣದಲ್ಲಿ ಚುನಾವಣಾ ಆಯೋಗದ ಲೋಪವನ್ನು ತಳ್ಳಿಹಾಕುವಂತಿಲ್ಲ. ನಕಲಿ ಮತದಾರರು ಚುನಾವಣೆಯಲ್ಲಿ ಮತದಾನ ಮಾಡಿದ್ದಾರೆಯೇ ಹಾಗೂ ಆ ಮತದಾನ ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರಿದೆಯೇ ಅಥವಾ ಈ ಹೆಸರುಗಳು ಬರೀ ಮತದಾರರ ಪಟ್ಟಿಯಲ್ಲಷ್ಟೇ ಕಾಣಿಸಿಕೊಂಡಿವೆಯೇ– ಪ್ರಸ್ತುತ ಉತ್ತರ ದೊರಕಬೇಕಾಗಿರುವ ಮುಖ್ಯ ಪ್ರಶ್ನೆಗಳಿವು. ಹೆಸರು ಮತ್ತು ವಿಳಾಸದಲ್ಲಿ ಸಾಮ್ಯತೆಯಿರುವ ಒಬ್ಬನೇ ವ್ಯಕ್ತಿ ಎರಡು ಕಡೆಗಳಲ್ಲಿ ಮತದಾನ ಮಾಡಿರುವುದನ್ನು ರಾಹುಲ್ ಗಾಂಧಿ ಅವರು ನೀಡಿರುವ ಸಾಕ್ಷ್ಯಗಳು ಸೂಚಿಸುತ್ತಿವೆ.

ಆರೋಪಗಳನ್ನು ಸಹಿ ಮಾಡಿದ ಪ್ರಮಾಣ ಪತ್ರದೊಂದಿಗೆ ಸಲ್ಲಿಸುವಂತೆ ಚುನಾವಣಾ ಆಯೋಗ ರಾಹುಲ್ ಗಾಂಧಿ ಅವರಿಗೆ ತಿಳಿಸಿದೆ. ಆರೋಪ ಸುಳ್ಳಾದಲ್ಲಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆಂದು ಪರೋಕ್ಷವಾಗಿ ಬೆದರಿಸಿದೆ. ಈ ಬೆದರಿಕೆಗೆ ಬದಲು, ಆಯೋಗ ಹೆಚ್ಚು ಕ್ರಿಯಾಶೀಲ ವಿಧಾನ ಅನುಸರಿಸಬಹುದಾಗಿತ್ತು. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸಬೇಕಾದ ಸಂಸ್ಥೆಯ ವಿಶ್ವಾಸಾರ್ಹತೆಯೇ ಪ್ರಶ್ನೆಗೊಳಗಾದಾಗ, ತೀರ್ಪು ನೀಡುವ ಸ್ಥಾನದಲ್ಲಿ ಆರೋಪಕ್ಕೆ ಗುರಿಯಾದ ಸಂಸ್ಥೆಯೇ ಇರುವುದನ್ನು ಒಪ್ಪಿಕೊಳ್ಳಲಾಗದು. ಮತದಾರರ ಪಟ್ಟಿ ಮತ್ತು ಚುನಾವಣಾ ಪ್ರಕ್ರಿಯೆಯಲ್ಲಿ ಆಗಿರಬಹುದಾದ ಅಕ್ರಮಗಳ ಬಗ್ಗೆ ತನಿಖೆ ನಡೆಸಲು, ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸುವಂತೆ ಕಾಂಗ್ರೆಸ್ ಒತ್ತಾಯಿಸಬೇಕಾಗಿದೆ. ಒಂದುವೇಳೆ, ರಾಹುಲ್ ಅವರ ಆರೋಪಗಳು ಆಧಾರ ರಹಿತ ಆಗಿದ್ದಲ್ಲಿ ಅವರನ್ನು ಕಾನೂನು ಕ್ರಮಕ್ಕೆ ಒಳಪಡಿಸಬೇಕು. ಆರೋಪ ದೃಢಪಟ್ಟಲ್ಲಿ, ತಳಮಟ್ಟದ ಅಧಿಕಾರಿಗಳಿಂದ ಹಿಡಿದು ಕಳಂಕಿತ ಮತದಾರರ ಪಟ್ಟಿಗೆ ಅನುಮೋದನೆ ನೀಡಿದ ಎಲ್ಲರೂ ಗುರುತರ ಲೋಪದ ಜವಾಬ್ದಾರಿ ಹೊರಬೇಕಾಗುತ್ತದೆ. ಇದು ಎರಡು ಪಕ್ಷಗಳಿಗೆ ಸಂಬಂಧಿಸಿದ ವಿದ್ಯಮಾನವಷ್ಟೇ ಅಲ್ಲ; ಚುನಾವಣೆಗಳಲ್ಲಿ ಅಕ್ರಮ ಎಸಗುವುದು ಹಾಗೂ ಮತದಾರರ ಅಭಿಪ್ರಾಯವನ್ನು ಕದಿಯುವುದೆಂದರೆ, ಅದು ಸಂವಿಧಾನಕ್ಕೆ ಎಸಗುವ ದ್ರೋಹ ಹಾಗೂ ಪ್ರಜಾಪ್ರಭುತ್ವದ ಮೇಲೆ ನಡೆಸುವ ಆಕ್ರಮಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.