ಮಾನವೀಯ ಸ್ಪಂದನಗಳನ್ನು ಕಳೆದುಕೊಂಡ ಹಾಗೂ ದೂರದೃಷ್ಟಿ ಕೊರತೆಯ ಕಾನೂನು ಕ್ರಮಗಳು ಉಂಟುಮಾಡಬಹುದಾದ ಬಿಕ್ಕಟ್ಟಿಗೆ ಬೆಂಗಳೂರಿನ ಯಲಹಂಕ ಸಮೀಪದಲ್ಲಿರುವ ಕೋಗಿಲು ಬಡಾವಣೆಯಲ್ಲಿ ನಡೆದ ಒತ್ತುವರಿ ತೆರವು ಕಾರ್ಯಾಚರಣೆ ನಿದರ್ಶನದಂತಿದೆ. ಸರ್ಕಾರಿ ಭೂಮಿಯ ಅತಿಕ್ರಮಣವನ್ನು ತೆರವುಗೊಳಿಸುವ ಕಾನೂನುಬದ್ಧ ಅಧಿಕಾರ ಸರ್ಕಾರಕ್ಕಿದೆ. ಆದರೆ, ಕಾರ್ಯಾಚರಣೆ ನಡೆಸುವ ಮುನ್ನ ಪಾಲಿಸಬೇಕಾದ ಮಾನವೀಯ ಹಾಗೂ ನೈತಿಕ ಸಂಗತಿಗಳನ್ನು ಮರೆತರೆ ಮುಜುಗರಕ್ಕೆ ಸಿಲುಕಬೇಕಾಗುತ್ತದೆ, ಸಾರ್ವಜನಿಕ ಪ್ರತಿರೋಧ ಎದುರಿಸಬೇಕಾಗುತ್ತದೆ. ಕೋಗಿಲು ಬಡಾವಣೆಯ ಫಕೀರ್ ಕಾಲೊನಿ ಹಾಗೂ ವಸೀಂ ಕಾಲೊನಿಯಲ್ಲಿನ 167 ಮನೆಗಳನ್ನು ಯಾವ ಮುನ್ಸೂಚನೆಯನ್ನೂ ನೀಡದೆ ತೆರವುಗೊಳಿಸಿರುವುದು ಆಡಳಿತಾತ್ಮಕ ಕಾರ್ಯಾಚರಣೆಯಂತಿರದೆ, ಮನುಷ್ಯರ ಜೀವಗಳ ಘನತೆಯನ್ನು ಲೆಕ್ಕಿಸದೆ ನಡೆಸಿದ ಧ್ವಂಸ ಚಟುವಟಿಕೆಯಂತಿದೆ. ಬಡಾವಣೆಯ ನಿವಾಸಿಗಳು ನಿದ್ರಿಸುತ್ತಿದ್ದ ನಸುಕಿನ 4.30ರ ಸುಮಾರಿಗೆ ಧಾವಿಸಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು, ಅಗತ್ಯ ಸಾಮಗ್ರಿಗಳನ್ನು ಮನೆಗಳಿಂದ ಹೊರಗೆ ತರಲೂ ಅವಕಾಶ ಕಲ್ಪಿಸದೆ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಕಾರ್ಯಾಚರಣೆಗೆ ಸಂಬಂಧಿಸಿದ ಯಾವ ಮಾಹಿತಿಯೂ ತಮಗಿರಲಿಲ್ಲ ಎಂದು ಸಂತ್ರಸ್ತರು ದೂರಿದ್ದಾರೆ. ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರನ್ನು ತೀವ್ರ ಚಳಿ–ಗಾಳಿಯ ಸಂದರ್ಭದಲ್ಲಿ ಮನೆಗಳಿಂದ ಬಲವಂತವಾಗಿ ಹೊರಗೆ ಕಳಿಸಲಾಗಿದೆ. ದುರ್ಬಲ ವರ್ಗದ ಕುರಿತ ಸ್ಪಂದನದ ಮೂಲಕ ಸರ್ಕಾರವೊಂದರ ಗುಣಮಟ್ಟ ವನ್ನು ನಿರ್ಣಯಿಸುವುದಾದರೆ, ಕೋಗಿಲು ಘಟನೆ ಬಹು ದೊಡ್ಡ ನೈತಿಕ ವೈಫಲ್ಯವಾಗಿದೆ.

ಎರಡು ದಶಕಗಳಿಗೂ ಹೆಚ್ಚಿನ ಸಮಯದಿಂದ ಆ ಪ್ರದೇಶದಲ್ಲಿ ವಾಸಿಸುತ್ತಿರುವುದಾಗಿಯೂ, ಬ್ಯಾಂಕ್ಗಳಿಂದ ಸಾಲ ಪಡೆದು ಮನೆಗಳನ್ನು ನಿರ್ಮಿಸಿರುವುದಾಗಿಯೂ ಕೆಲವು ಸಂತ್ರಸ್ತರು ಅಳಲು ತೋಡಿಕೊಂಡಿ ದ್ದಾರೆ. ಇದರ ಹೊರತಾಗಿಯೂ ಇಲ್ಲಿನ ಮನೆಗಳನ್ನು ಅಕ್ರಮ ಎಂದು ಭಾವಿಸಿದರೂ, ದಶಕಗಳಿಂದ ವಾಸಿಸುತ್ತಿ ರುವವರನ್ನು ತೆರವುಗೊಳಿಸಲು ಮಾನವೀಯ ನೀತಿಯನ್ನು ಅನುಸರಿ ಸುವುದು ಹಾಗೂ ಪುನರ್ವಸತಿಯ ಚಿಂತನೆ ಅಗತ್ಯ. ಸಂವಿಧಾನದ 21ನೇ ವಿಧಿ ನೀಡಿರುವ ವಸತಿಯ ಹಕ್ಕು ಹಾಗೂ ಘನತೆಯಿಂದ ಬಾಳುವ ಹಕ್ಕನ್ನು ಸುಪ್ರೀಂ ಕೋರ್ಟ್ ಹಲವು ಪ್ರಕರಣಗಳಲ್ಲಿ ಎತ್ತಿಹಿಡಿದಿದೆ. ಸಂವಿಧಾನ ನೀಡಿರುವ ಈ ಖಾತರಿಯ ಮೇಲೆ ಬುಲ್ಡೋಜರ್ ಓಡಿಸಿದಂತಿದೆ. ನಾಗರಿಕ ಸಂಘಟನೆಗಳು ಹಾಗೂ ಸ್ವಯಂ ಸೇವಕರು ಸಂತ್ರಸ್ತರಿಗೆ ಆಹಾರ, ಹೊದಿಕೆ ಸೇರಿದಂತೆ ಜೀವನವಶ್ಯ ವಸ್ತುಗಳನ್ನು ಒದಗಿಸುತ್ತಿದ್ದಾರೆ. ಘಟನೆಗೆ ತೀವ್ರ ಪ್ರತಿರೋಧ ಎದುರಾದ ನಂತರ, ಸಂತ್ರಸ್ತ ಕುಟುಂಬಗಳಲ್ಲಿ ‘ಅರ್ಹ’ರಾದವರಿಗೆ ಬೈಯಪ್ಪನಹಳ್ಳಿಯ ವಸತಿ ಸಮುಚ್ಚಯದಲ್ಲಿ ಮನೆಗಳನ್ನು ಹಂಚಿಕೆ ಮಾಡುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಆದರೆ, ಮುಖ್ಯಮಂತ್ರಿ ಹೇಳಿರುವ ‘ಅರ್ಹತೆ’ಯ ಮಾನದಂಡದ ಬಗ್ಗೆ ಸ್ಪಷ್ಟತೆಯಿಲ್ಲ. ಮಾನವೀಯ ನೆಲೆಗಟ್ಟಿನ ಈ ನಿರ್ಧಾರದಿಂದ ಸರ್ಕಾರದ ಮೇಲಿನ ರಾಜಕೀಯ ಒತ್ತಡ ಸ್ವಲ್ಪಮಟ್ಟಿಗೆ ಕಡಿಮೆ ಆಗಬಹುದಾದರೂ, ಅಮಾನವೀಯ ಕಾರ್ಯಾಚರಣೆಯ ಬಗೆಗಿನ ಪ್ರಶ್ನೆಗಳು ಮುಂದುವರಿಯುತ್ತವೆ.

ತೆರವು ಕಾರ್ಯಾಚರಣೆಯು ರಾಜಕೀಯ ಉದ್ದೇಶಗಳಿಗಾಗಿ ಬಳಕೆಯಾಗುತ್ತಿರುವುದು ದುರದೃಷ್ಟಕರ. ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ‘ಬುಲ್ಡೋಜರ್ ನ್ಯಾಯ’ ಎಂದು ಕಾರ್ಯಾಚರಣೆಯನ್ನು ಟೀಕಿಸಿದ್ದಾರೆ. ಈ ಟೀಕೆಯ ಹಿಂದೆ ಕೇರಳದಲ್ಲಿನ ರಾಜಕೀಯ ಸಮೀಕರಣಗಳ ಒತ್ತಡ ಇರುವಂತೆಯೇ, ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರ ಮಧ್ಯಪ್ರವೇಶವು ಪಕ್ಷದಲ್ಲಿನ ಆಂತರಿಕ ಅಸಮಾಧಾನ ಉಲ್ಬಣಿಸಿರುವುದರ ಸಂಕೇತದಂತಿದೆ. ಜವಾಬ್ದಾರಿಯುತ ಪ್ರತಿಪಕ್ಷವಾಗಿ ಘಟನೆಗೆ ಸ್ಪಂದಿಸುವಲ್ಲಿ ಬಿಜೆಪಿಯೂ ವಿಫಲವಾಗಿದೆ. ಸಂತ್ರಸ್ತರಿಗೆ ಮನೆ ಹಂಚಿಕೆ ಮಾಡುವ ಸರ್ಕಾರದ ನೀತಿಯನ್ನು ಬಿಜೆಪಿ ನಾಯಕರು ಟೀಕಿಸಿದ್ದಾರೆ. ಮನೆ ಕಳೆದುಕೊಂಡವರ ದಾರುಣ ಸ್ಥಿತಿಗಿಂತಲೂ, ಅವರ ಧರ್ಮ ಹಾಗೂ ದೇಶ ಯಾವುದೆನ್ನುವುದೇ ಬಿಜೆಪಿಗೆ ಮುಖ್ಯವಾದಂತಿದೆ. ರಾಜ್ಯ ಸರ್ಕಾರ ತಕ್ಷಣವೇ ಸಂತ್ರಸ್ತರಿಗೆ ತಾತ್ಕಾಲಿಕ ವಸತಿಯನ್ನು ಕಲ್ಪಿಸುವುದರ ಜೊತೆಗೆ, ಆಹಾರ ಮತ್ತು ವೈದ್ಯಕೀಯ ನೆರವನ್ನು ಒದಗಿಸಬೇಕಾಗಿದೆ. ವಸತಿ ಸಮುಚ್ಚಯದಲ್ಲಿ ಮನೆಗಳನ್ನು ಹಂಚಿಕೆ ಮಾಡುವ ಪ್ರಕ್ರಿಯೆಯನ್ನೂ ಕಾಲಮಿತಿಯೊಳಗೆ ನಡೆಸಬೇಕಾಗಿದೆ. ತೆರವು ಕಾರ್ಯಾಚರಣೆಯಲ್ಲಿ ಆಗಿರುವ ಲೋಪಗಳ ಬಗ್ಗೆ ಸ್ವತಂತ್ರ ತನಿಖೆ ನಡೆಯಬೇಕು ಹಾಗೂ ತಪ್ಪುಗಳಿಗೆ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಬೇಕು. ಘನತ್ಯಾಜ್ಯ ವಿಲೇವಾರಿಗಾಗಿ ನೀಡಿದ್ದ ಕ್ವಾರಿ ಜಾಗದ ಒತ್ತುವರಿ ಆಗಿರುವುದರಲ್ಲಿ ಅಧಿಕಾರಿಗಳ ಪಾತ್ರವೂ ಬೆಳಕಿಗೆ ಬರಬೇಕು. ಭವಿಷ್ಯದಲ್ಲಿನ ಒತ್ತುವರಿ ತೆರವು ಕಾರ್ಯಾಚರಣೆಗಳು ದೂರದರ್ಶಿತ್ವ, ಪಾರದರ್ಶಕ ಹಾಗೂ ಸಹಾನುಭೂತಿಯಿಂದ ಕೂಡಿರುವುದಕ್ಕೆ ಕೋಗಿಲು ಘಟನೆ ಸರ್ಕಾರಕ್ಕೆ ಪಾಠವಾಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.