ಮಹಾರಾಷ್ಟ್ರ ಪೊಲೀಸರ ಕಾರ್ಯಾಚರಣೆಯ ಮೂಲಕ ಮೈಸೂರಿನಲ್ಲಿ ಬೆಳಕಿಗೆ ಬಂದಿರುವ ಮಾದಕವಸ್ತು ತಯಾರಿಕೆ ಹಾಗೂ ಮಾರಾಟ ಜಾಲ ಗಾಬರಿಹುಟ್ಟಿಸುವಂತಿದೆ. ಈ ಜಾಲದ ಬಗ್ಗೆ ಕರ್ನಾಟಕ ಪೊಲೀಸ್ ಇಲಾಖೆ ಹಾಗೂ ಗುಪ್ತಚರ ಇಲಾಖೆಗೆ ಮಾಹಿತಿ ಇರಲಿಲ್ಲ ಎನ್ನುವುದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಗುಪ್ತಚರ ವ್ಯವಸ್ಥೆ ಎಷ್ಟರಮಟ್ಟಿಗೆ ಜಾಗೃತವಾಗಿದೆ ಎನ್ನುವುದಕ್ಕೆ ನಿದರ್ಶನದಂತಿದೆ. ಮಾದಕವಸ್ತುಗಳ ಜಾಲವೊಂದನ್ನು ಬಯಲು ಮಾಡಲು ಮಹಾರಾಷ್ಟ್ರ ಪೊಲೀಸರು ಸುಮಾರು ಒಂದು ಸಾವಿರ ಕಿ.ಮೀ ದೂರದಿಂದ ಮೈಸೂರಿಗೆ ಬಂದಿದ್ದು, ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಮಾದಕವಸ್ತು ತಯಾರಿಕಾ ಕೇಂದ್ರದ ಮೇಲೆ ದಾಳಿ ನಡೆಸಿದ್ದಾರೆ. ಪಕ್ಕದ ರಾಜ್ಯದ ಪೊಲೀಸರಿಂದ ವಿಷಯ ತಿಳಿಯುವವರೆಗೂ, ನಗರದ ಹೃದಯ ಭಾಗದಲ್ಲಿ ಏನು ನಡೆಯುತ್ತಿದೆ ಎನ್ನುವುದು ಸ್ಥಳೀಯ ಪೊಲೀಸರಿಗೆ ತಿಳಿಯದಿರುವುದು ಮುಜುಗರಕ್ಕೆ ಕಾರಣವಾಗಬೇಕಾದ ಸಂಗತಿ. ಮೈಸೂರು, ರಾಜ್ಯದ ಯಾವುದೋ ಮೂಲೆಯಲ್ಲಿರುವ ನಗರವಲ್ಲ. ರಾಜ್ಯದ ಸಾಂಸ್ಕೃತಿಕ ರಾಜಧಾನಿ ಎನ್ನುವ ಹೆಗ್ಗಳಿಕೆಯ ಈ ನಗರ, ನಾಡಿನ ಪ್ರಮುಖ ಪ್ರವಾಸಿ ಕೇಂದ್ರವೂ ಹೌದು. ಶತಮಾನ ಕಂಡಿರುವ ಮೈಸೂರು ವಿಶ್ವವಿದ್ಯಾಲಯದ ಜೊತೆಗೆ, ದೇಶ ವಿದೇಶಗಳಿಂದ ಸಾವಿರಾರು ವಿದ್ಯಾರ್ಥಿಗಳನ್ನು ಆಕರ್ಷಿಸುವ ಖಾಸಗಿ ವಿದ್ಯಾಸಂಸ್ಥೆಗಳ ನೆಲೆಯೂ ಆಗಿದೆ. ರಾಜಧಾನಿ ಬೆಂಗಳೂರಿಗೆ ಸಮೀಪವೂ ಇರುವ ನಗರದಲ್ಲಿ ವ್ಯವಸ್ಥಿತ ಅಪರಾಧದಲ್ಲಿ ತೊಡಗಿರುವ ಮಾದಕವಸ್ತುಗಳ ಜಾಲ ಸಕ್ರಿಯವಾಗಿರುವುದು ಸ್ಥಳೀಯ ಪೊಲೀಸರ ಸ್ಪಷ್ಟ ವೈಫಲ್ಯಕ್ಕೆ ಸಂಕೇತದಂತಿದೆ.

ಪೊಲೀಸರು ವಶಪಡಿಸಿಕೊಂಡಿರುವ ‘ಎಂಡಿಎಂಎ’ ಹೆಸರಿನ ಮಾದಕವಸ್ತು ಒಂದು ಸಂಶ್ಲೇಷಿತ ಔಷಧವಾಗಿದ್ದು, ಚಿತ್ತಭ್ರಾಂತಿಯನ್ನು ಉಂಟು ಮಾಡುವುದಕ್ಕೆ ಹೆಸರುವಾಸಿಯಾಗಿದೆ. ಇದರ ದೀರ್ಘಕಾಲೀನ ಬಳಕೆಯು ಮೆದುಳಿಗೆ ತೀವ್ರ ಹಾನಿ ಉಂಟುಮಾಡ ಬಹುದು; ಜ್ಞಾಪಕಶಕ್ತಿ ನಷ್ಟ ಹಾಗೂ ಗಂಭೀರ ಮಾನಸಿಕ ಸಮಸ್ಯೆಗಳಿಗೆ ಕಾರಣ ಆಗಬಹುದು. 11 ಕೆ.ಜಿ.ಯಷ್ಟು ಎಂಡಿಎಂಎ ಹಾಗೂ 50 ಕೆ.ಜಿಯಷ್ಟು ಮಾದಕವಸ್ತು ಉತ್ಪಾದಿಸಬಹುದಾದ ಕಚ್ಚಾವಸ್ತುಗಳನ್ನು ಪೊಲೀಸರ ದಾಳಿಯಲ್ಲಿ ವಶಪಡಿಸಿಕೊಳ್ಳಲಾಗಿದೆ. ಇದು ಸಾಮಾನ್ಯ ದಂಧೆಯಾಗಿರದೆ, ವ್ಯವಸ್ಥಿತವಾಗಿ ರೂಪುಗೊಂಡ ಬಹು ದೊಡ್ಡ ಜಾಲವಾಗಿದೆ. ರಾಜ್ಯದೊಳಗೆ ಹಾಗೂ ಹೊರಗೆ ಸಕ್ರಿಯವಾಗಿರುವ ಈ ಜಾಲ ಪೊಲೀಸರ ಕಣ್ತಪ್ಪಿಸಿ ದೀರ್ಘ ಕಾಲದಿಂದ ಕಾರ್ಯ ನಿರ್ವಹಿಸುತ್ತಿರುವ ಸಾಧ್ಯತೆಗಳಿವೆ. ಕಾನೂನು ಮತ್ತು ಸುವ್ಯವಸ್ಥೆಯ ನಿರ್ಲಕ್ಷ್ಯದ ಹೊರತಾಗಿ ಮೈಸೂರಿನಂಥ ನಗರದಲ್ಲಿ ಬೃಹತ್ ಜಾಲವೊಂದು ಕಾರ್ಯ ನಿರ್ವಹಿಸುವುದು ಸಾಧ್ಯವೇ ಇಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸ್ ಇನ್ಸ್ಪೆಕ್ಟರ್ ಒಬ್ಬರನ್ನು ಅಮಾನತುಗೊಳಿಸಲಾಗಿದೆ. ಇಷ್ಟಕ್ಕೆ ಪೊಲೀಸ್ ಇಲಾಖೆಯ ಹೊಣೆಗಾರಿಕೆ ಮುಗಿಯುವುದಿಲ್ಲ. ನಗರ ಪೊಲೀಸ್ ಆಯುಕ್ತರು ಹಾಗೂ ಉಪ ಪೊಲೀಸ್ ಆಯುಕ್ತರು ಕೂಡ ಗಂಭೀರ ಲೋಪದ ಹೊಣೆ ಹೊರಬೇಕಾಗಿದೆ.

‘ಡ್ರಗ್ಸ್ ಫ್ರೀ ಕರ್ನಾಟಕ’ ಆ್ಯಪ್ನಂತಹ ರಚನಾತ್ಮಕ ಕ್ರಮಗಳು ರಾಜ್ಯದಲ್ಲಿ ಜಾರಿಯಲ್ಲಿವೆ. ಆದರೆ, ಮಾದಕವಸ್ತುಗಳ ತಡೆಗಟ್ಟುವಿಕೆಯ ಪ್ರಯತ್ನಗಳು ಕಟ್ಟುನಿಟ್ಟಾಗಿ ಜಾರಿಗೆ ಬಾರದೆ ಹೋದರೆ ಯಾವ ಕಾರ್ಯಕ್ರಮದಿಂದಲೂ ಉಪಯೋಗವಿಲ್ಲ. ಕಟ್ಟುನಿಟ್ಟಾದ ಮೇಲ್ವಿಚಾರಣೆ ಹಾಗೂ ವಿವಿಧ ಇಲಾಖೆಗಳ ನಡುವಣ ಸಮನ್ವಯ ಸಾಧಿಸುವಿಕೆಯ ಜೊತೆಗೆ, ಸಮುದಾಯ ಜಾಗೃತಿ ಕಾರ್ಯಕ್ರಮಗಳ ಮೂಲಕ ಮಾದಕವಸ್ತುಗಳ ವಿರುದ್ಧದ ಹೋರಾಟದಲ್ಲಿ ಯಶಸ್ಸು ಗಳಿಸಬಹುದಾಗಿದೆ. ಪೊಲೀಸರು ಎಚ್ಚರವಾಗಿದ್ದರಷ್ಟೇ ಸಾಲದು; ಚುನಾಯಿತ ಪ್ರತಿನಿಧಿಗಳು ಹಾಗೂ ಜನಸಾಮಾನ್ಯರು ಕೂಡ ಕಾನೂನುಬಾಹಿರ ಚಟುವಟಿಕೆಗಳ ಬಗ್ಗೆ ಜಾಗರೂಕತೆಯಿಂದ ಇರಬೇಕು. ಅಪರಾಧ ಪ್ರಕರಣಗಳ ಹೆಚ್ಚಳದಲ್ಲಿ ಸಾಮಾಜಿಕ ಉದಾಸೀನದ ಪಾತ್ರವೂ ಇರುತ್ತದೆ. ಪರಂಪರೆ, ಕಲೆ ಮತ್ತು ಶಿಕ್ಷಣಕ್ಕೆ ಹೆಸರಾದ ‘ಸಾಂಸ್ಕೃತಿಕ ನಗರಿ’ಯು ಡ್ರಗ್ಸ್ ದಂಧೆಯ ಕೇಂದ್ರ ಆಗಬಾರದು. ಸಣ್ಣ ನಿರ್ಲಕ್ಷ್ಯ ಕೂಡ ನಗರದ ವರ್ಚಸ್ಸಿಗೆ ದೊಡ್ಡ ಗಾಯ ಮಾಡಬಹುದು. ಮೈಸೂರಿನಲ್ಲಿ ಡ್ರಗ್ಸ್ ಜಾಲ ಸಕ್ರಿಯವಾಗಿರುವ ಬಗ್ಗೆ ಗೃಹ ಸಚಿವ ಜಿ. ಪರಮೇಶ್ವರ ಕಳವಳ ವ್ಯಕ್ತಪಡಿಸಿದ್ದಾರೆ. ಅವರ ಕಾಳಜಿ ಇಷ್ಟಕ್ಕೆ ಸೀಮಿತವಾಗಬಾರದು. ಮಾದಕವಸ್ತುಗಳ ವ್ಯಸನಕ್ಕೆ ಯುವಜನ ತುತ್ತಾಗದಂತೆ ಮಾಡಲು ಸಾಧ್ಯವಿರುವ ಎಲ್ಲ ಕ್ರಮಗಳನ್ನೂ ಸರ್ಕಾರ ಕೈಗೊಳ್ಳಬೇಕಾಗಿದೆ. ಪೊಲೀಸ್ ಇಲಾಖೆ ಹಾಗೂ ಗುಪ್ತಚರ ವ್ಯವಸ್ಥೆ ಸಾರ್ವಜನಿಕ ವಿಶ್ವಾಸಾರ್ಹತೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುವುದು ಅಗತ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.