ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ | ಮಂಗಳವಾರ, 28–4–1970

Last Updated 27 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ಪಕ್ಷಾಂತರ ಕುರಿತ ಸಂಸತ್‌ ಸಮಿತಿ ಶಿಫಾರಸು ಕಾರ್ಯಗತಕ್ಕೆ ಸಂವಿಧಾನ ತಿದ್ದುಪಡಿ ಅಗತ್ಯ
ನವದೆಹಲಿ, ಏ. 27–
ಸಂಸತ್‌ ಸದಸ್ಯರು ಮತ್ತು ರಾಜ್ಯ ಶಾಸಕರು ಪಕ್ಷಾಂತರ ಮತ್ತು ಮತಾಂತರಗಳಲ್ಲಿ ತೊಡಗುವುದನ್ನು ಕಾನೂನು ಮೂಲಕ ನಿಷೇಧಿಸಬೇಕೆಂದು ಇಂದು ರಾಜ್ಯಸಭೆಯಲ್ಲಿ ಒಬ್ಬ ಯಂಗ್‌ ಟರ್ಕ್‌ ಮತ್ತು ವಿರೋಧ ಪಕ್ಷಗಳ ಕೆಲವು ಸದಸ್ಯರು ಒತ್ತಾಯ ಮಾಡಿದರು.

ಪಕ್ಷಾಂತರ ಕುರಿತ ಸಂಸತ್‌ ಸಮಿತಿ ಶಿಫಾರಸುಗಳನ್ನು ಗೃಹ ಸಚಿವರು ‍ಪರಿಷ್ಕರಿಸುತ್ತಿದ್ದಾರೆಂದು ಕಾನೂನು ಸಚಿವ ಶ್ರೀ ಪಿ.ಗೋವಿಂದ ಮೆನನ್‌ ನುಡಿದು, ಅವುಗಳ ಅನುಷ್ಠಾನಕ್ಕೆ ಸಂವಿಧಾನದ ತಿದ್ದುಪಡಿ ಅವಶ್ಯ ಎಂದರು.

ಶ್ರೀ ಮೋಹನ್‌ ಧಾರಿಯಾ ಅವರು ಪಕ್ಷಾಂತರವನ್ನು ‘ಸ್ವಯಂ ಹರಾಜು’ ಎಂದು ವರ್ಣಿಸಿದರೆ, ಶ್ರೀ ಕೃಷ್ಣಕಾಂತ್‌ ಅವರು ‘ತೀವ್ರ ಭ್ರಷ್ಟಾಚಾರ’ವೆನಿಸುವ ಪಕ್ಷಾಂತರ ನಿಲ್ಲಿಸಲು ಸರ್ಕಾರ ಏನು ಮಾಡಿದೆಯೆಂದು ಕೇಳಿದರು.

ಕೋರ್ಟ್‌ ತೀರ್ಪಿನ ಟೀಕೆಗೆ ಎಲ್ಲರಿಗೂ ಹಕ್ಕು: ಹಿದಾಯತ್‌ ಉಲ್ಲಾ
ನವದೆಹಲಿ, ಏ. 27–
ಕೋರ್ಟ್‌ ತೀರ್ಪನ್ನು ಟೀಕಿಸಲು ಪ್ರತಿಯೊಬ್ಬ ಪ್ರಜೆಗೂ ಅಧಿಕಾರವಿದೆ ಎಂದು ಶ್ರೇಷ್ಠ ನ್ಯಾಯಮೂರ್ತಿ ಎಂ.ಹಿದಾಯತ್‌ ಉಲ್ಲಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸಚಿವ ಆರ್‌.ಕೆ.ಖಾಡಿಲ್ಕರ್‌ ಅವರ ವಿರುದ್ಧದ ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್‌ ಇಂದು ತೀರ್ಪನ್ನು ಕಾದಿರಿಸಿದ ಸಂದರ್ಭದಲ್ಲಿ ಅವರು ಮೇಲಿನಂತೆ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT