ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ | ಶನಿವಾರ, 11–7–1970

Last Updated 10 ಜುಲೈ 2020, 19:31 IST
ಅಕ್ಷರ ಗಾತ್ರ

‘ಜನತೆಯನ್ನು ಮರುಳು ಮಾಡಲು ಏನೆಲ್ಲ ನಾಟಕ’

ಬೆಂಗಳೂರು, ಜುಲೈ 10– ಬ್ಯಾಂಕ್‌ ರಾಷ್ಟ್ರೀಕರಣದಿಂದ ಹಿಡಿದು ಈಗ ಆಡಿಕೊಳ್ಳುತ್ತಿರುವ ಔಷಧಿ ಬೆಲೆ ನಿಯಂತ್ರಣದವರೆಗಿನ ಮಾತುಕತೆಗಳೆಲ್ಲ ಶ್ರೀಸಾಮಾನ್ಯರ ಎದುರು ‘ಹೊಗೆ ಪರದೆ’ ಹಿಡಿಯುವ ಪ್ರಯತ್ನವಾಗಿದೆ ಎಂದು ಸಂಸ್ಥಾ ಕಾಂಗ್ರೆಸ್‌ ಅಧ್ಯಕ್ಷ ಶ್ರೀ ನಿಜಲಿಂಗಪ್ಪನವರು ಇಂದು ಇಲ್ಲಿ ಹೇಳಿದರು.

‘ಬ್ಯಾಂಕ್‌ ರಾಷ್ಟ್ರೀಕರಣದಿಂದ ಏನಾಯಿತು? ನೀವೇ ಒಂದು ಸಮೀಕ್ಷೆ ಮಾಡಿ ತಿಳಿದುಕೊಳ್ಳಿ’ ಎಂದು ಅವರು ವರದಿಗಾರರಿಗೆ ಹೇಳಿದರು.

ಆಜ್ಞೆಪಾಲಕರು

ಬೆಂಗಳೂರು, ಜುಲೈ 10– ‘ಸಿಂಡಿಕೇಟ್‌’ ಎಂಬ ಶಬ್ದ ಕೇಳಿದರೆ ಕೆಲವು ದಿನಗಳ ಹಿಂದಿನವರೆಗೂ ಅಸಮಾಧಾನ ಸೂಚಿಸುತ್ತಿದ್ದ ಸಂಸ್ಥಾ ಕಾಂಗ್ರೆಸ್ಸಿನ ಅಧ್ಯಕ್ಷ ಶ್ರೀ ನಿಜಲಿಂಗಪ್ಪನವರು, ಇಂದು ಆ ಶಬ್ದದ ಅರ್ಥವ್ಯಾಪ್ತಿಯ ದೃಷ್ಟಿಯಿಂದ ಅದು ತಮ್ಮ ಪಕ್ಷದ ಹೆಸರಾಗಬಹುದು ಎಂದು ಒಪ್ಪಿಕೊಂಡರು.

‘ಸಿಂಡಿಕೇಟ್‌’ ಎಂದರೆ ಹಲವರು ಸೇರಿರುವ ಒಂದು ಗುಂಪು. ಆದರೆ ‘ಇಂಡಿಕೇಟ್‌’ ಎಂದರೆ ಒಂದು ವ್ಯಕ್ತಿಯ ಸಂಸ್ಥೆ. ಇಂದು ಸಿಂಡಿಕೇಟಿಗೇ ಜನಬಲ ಹೆಚ್ಚು ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು.

ಪ್ರಧಾನಿ ಸರ್ವಾಧಿಕಾರಿಯಾಗುತ್ತಿದ್ದಾರೆ ಎಂಬ ತಮ್ಮ ವಾದವನ್ನು ಪುನರ್‌ ಪ್ರತಿಪಾದಿಸಿ, ಈಚಿನ ಸಚಿವ ಸಂಪುಟದ ಪುನರ್‌ರಚನೆ ಅದನ್ನು ಸಾಧಿಸಿ ತೋರಿಸಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT