ಗುರುವಾರ , ಅಕ್ಟೋಬರ್ 29, 2020
20 °C

ಪ್ರಜಾವಾಣಿ 50 ವರ್ಷಗಳ ಹಿಂದೆ: ಸೋಮವಾರ, 12-10-1970

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಾಕ್‌ಗೆ ಅಮೆರಿಕ ಶಸ್ತ್ರಾಸ್ತ್ರದಿಂದ ಭಾರತಕ್ಕೆ ಆಪತ್ತು– ಮಧೋಕ್

ನವದೆಹಲಿ, ಅ. 11– ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳ ಸರಬರಾಜನ್ನು ಪುನರಾರಂಭಿಸುವ ಅಮೆರಿಕದ ನಿರ್ಧಾರವನ್ನು ಜನಸಂಘದ ನಾಯಕ ಶ್ರೀ ಬಲರಾಜ ಮಧೋಕ್ ಅವರು ಇಂದು ಟೀಕಿಸಿದರು.

ಪಾಕಿಸ್ತಾನದೊಡನೆ ತನ್ನ ಬಾಂಧವ್ಯ ಸುಧಾರಿಸಿಕೊಳ್ಳಲು ಭಾರತ ಸರ್ವಪ್ರಯತ್ನ ನಡೆಸುತ್ತಿರುವಾಗ ಯಾವುದೇ ಹೊಸ ಶಸ್ತ್ರಾಸ್ತ್ರ ಒಪ್ಪಂದವು ಅದು ಭಾರತದ ವಿರುದ್ಧ ಜಗಳಗಂಟಿಯಾಗುವಂತೆ ಪ್ರಚೋದಿಸುವುದೆಂದು ಶ್ರೀ ಮಧೋಕ್ ಅವರು ಯುಎನ್‌ಐಗೆ ತಿಳಿಸಿದರು.

ಪಡೆಗಳ ಜಮಾವಣೆ: ಭಾರತ–ಪಾಕಿಸ್ತಾನ ಗಡಿಯಲ್ಲಿ ಈಗಾಗಲೇ ಪಾಕಿಸ್ತಾನಿ ಪಡೆಗಳು ಜಮಾಯಿಸುತ್ತಿವೆಯೆಂದ ಶ್ರೀ ಮಧೋಕ್ ಅವರು ಅಮೆರಿಕದ ಈ ‘ಅತ್ಯಂತ ಖಂಡನೀಯ’ ಕ್ರಮವು ರಾಷ್ಟ್ರಕ್ಕೆ ತತ್‌ಕ್ಷಣ ಆಪತ್ತು ಒಡ್ಡಿದೆಯೆಂದರು.

ಅಮೆರಿಕದ ವಿರುದ್ಧ ಭಾರತ ತ್ವರಿತವಾಗಿ ಪ್ರತಿಭಟಿಸಿದೆ. ರಷ್ಯಾವು ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳನ್ನು ಸುರಿದಾಗ ಅದು ಈಗಿನಂತೆ ನಡೆದುಕೊಳ್ಳಲಿಲ್ಲವೆಂದು ಶ್ರೀ ಮಧೋಕ್ ಹೇಳಿದರು.

ಶಾಸ್ತ್ರಿ ನಿಧನ ಕುರಿತು ನ್ಯಾಯಾಂಗ ತನಿಖೆ ಇಲ್ಲ

ಜೋಧ್ಪುರ, ಅ. 11– ತಷ್ಕೆಂಟ್‌ನಲ್ಲಿ ಸಂಭವಿಸಿದ ದಿವಂಗತ ಪ್ರಧಾನಮಂತ್ರಿ ಲಾಲ್ ಬಹಾದ್ದೂರ್ ಶಾಸ್ತ್ರಿಯವರ ನಿಧನಕ್ಕೆ ಕಾರಣ ಕುರಿತು ನ್ಯಾಯಾಂಗ ತನಿಖೆ ನಡೆಸುವ ಉದ್ದೇಶ ಸರ್ಕಾರಕ್ಕಿಲ್ಲವೆಂದು ಕೇಂದ್ರ, ಗೃಹ ಶಾಖೆ ಸ್ಟೇಟ್ ಸಚಿವ ರಾಮ್‌ನಿವಾಸ್ ಮಿರ್ಧಾ ಅವರು ಇಂದು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು