ಮಂಗಳವಾರ, 8–7–1969

ಮಂಗಳವಾರ, ಜೂಲೈ 23, 2019
25 °C

ಮಂಗಳವಾರ, 8–7–1969

Published:
Updated:

ಹೈದರಾಬಾದಿನಲ್ಲಿ ಐದು ಕಡೆ ಗೋಲಿಬಾರ್: ಇಬ್ಬರ ಸಾವು

ಹೈದರಾಬಾದ್, ಜುಲೈ 7– ತೆಲಂಗಾಣ ಚಳವಳಿಕಾರರ ಹಿಂಸಾತ್ಮಕ ಕೃತ್ಯಗಳ ಕಾರಣ ಪೊಲೀಸರು ಇಂದು ಹೈದರಾಬಾದ್ ನಗರ ಮತ್ತು ಅದರ ಹೊರವಲಯಗಳಲ್ಲಿ ಐದು ಕಡೆ ಗೋಲಿಬಾರ್ ಮಾಡಿದ ಪರಿಣಾಮ ಇಬ್ಬರು ಸತ್ತು ಹಲವರು ಗಾಯಗೊಂಡರು.

ಅಸ್ಪೃಶ್ಯರಿಗೆ ಸಂಖ್ಯೆ ಆಧಾರ ಪ್ರಾತಿನಿಧ್ಯಕ್ಕೆ ಸಮ್ಮೇಳನದಲ್ಲಿ ಒತ್ತಾಯ

ಬೆಂಗಳೂರು, ಜುಲೈ 7– ರಾಜಕೀಯ ಅಧಿಕಾರ ಮತ್ತು ಆಡಳಿತ ವ್ಯವಹಾರಗಳಲ್ಲಿ ಜನಸಂಖ್ಯೆಗನುಗುಣವಾಗಿ ಅಸ್ಪೃಶ್ಯರಿಗೆ ಪಾಲು ದೊರಕಬೇಕೆಂದು ಮಾಜಿ ಸಚಿವ ಶ್ರೀ ಎನ್. ರಾಚಯ್ಯ ಮತ್ತು ಮಾಜಿ ಉಪ ಸಚಿವ ಶ್ರೀ ಬಿ. ಬಸವಲಿಂಗಪ್ಪನವರು ಇಂದು ಇಲ್ಲಿ ಒತ್ತಾಯಪಡಿಸಿದರು.

ಜನಸಂಖ್ಯೆಗನುಗುಣವಾಗಿ ಮೀಸಲಿಡುವುದನ್ನು ರಾಜ್ಯಾಂಗ ತಿದ್ದುಪಡಿ ಮಾಡಿಯಾದರೂ ಜಾರಿಗೆ ತರದಿದ್ದರೆ ಬೀದಿಗೆ ಇಳಿಯುತ್ತೇವೆ ಎಂದು ರಾಚಯ್ಯನವರು ಎಚ್ಚರಿಕೆ ನೀಡಿದರು.

ಎ.ಐ.ಸಿ.ಸಿ. ಅಧಿವೇಶನಕ್ಕೆ ಭರದ ಸಿದ್ಧತೆ

ಬೆಂಗಳೂರು, ಜುಲೈ 7– ನಗರದಲ್ಲಿ 10ರಿಂದ ನಡೆಯಲಿರುವ ಎ.ಐ.ಸಿ.ಸಿ. ಅಧಿವೇಶನದಲ್ಲಿ ಭಾಗವಹಿಸಲು ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪ ಅವರು ಜುಲೈ 8ರಂದು ಮಧ್ಯಾಹ್ನ 2.10ಕ್ಕೆ ಹಾಗೂ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ಜುಲೈ 9ರಂದು ಸಂಜೆ 5.30ಕ್ಕೆ ನಗರಕ್ಕೆ ಆಗಮಿಸುವರು. ವಿಮಾನ ನಿಲ್ದಾಣದಿಂದ, ಕಾಂಗ್ರೆಸ್ ಅಧ್ಯಕ್ಷರು ತಂಗುವ ‘ಕುಮಾರ ಕೃಪಾ’ದವರೆಗೆ ಕಾಂಗ್ರೆಸ್‌ ಅಧ್ಯಕ್ಷರಿಗೆ ಸ್ವಾಗತ ನೀಡಲು ಕಮಾನುಗಳು ನಿರ್ಮಾಣವಾಗುತ್ತಿವೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !