ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಟಾಫಟ್|‘ಸಿದ್ಧತೆ, ಅನುಭವ ನೆರವಾಯಿತು: ಅಭಿಷೇಕ್ ಗೌಡ 

Last Updated 17 ಜನವರಿ 2020, 20:00 IST
ಅಕ್ಷರ ಗಾತ್ರ

ಜೈನ್ ವಿಶ್ವವಿದ್ಯಾಲಯದ ಬಾಸ್ಕೆಟ್ ಬಾಲ್ ತಂಡದ ನಾಯಕ ಅಭಿಷೇಕ್ ಗೌಡಜತೆ ಫಟಾಫಟ್ ಸಂದರ್ಶನ

ಸುದೀರ್ಘ ಅವಧಿಯನಂತರ ರಾಜ್ಯದ ವಿಶ್ವವಿದ್ಯಾಲಯವೊಂದು ಅಂತರ ವಿಶ್ವವಿದ್ಯಾಲಯ ಪುರುಷರ ಬ್ಯಾಸ್ಕೆಟ್‌ಬಾಲ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ. ಜೈನ್‌ ವಿ.ವಿ. ತಂಡದ ಸಿದ್ಧತೆ ಹೇಗಿತ್ತು?

ನಮ್ಮ ವಿಶ್ವವಿದ್ಯಾಲಯ ಕಳೆದ ವರ್ಷ ಬೆಳ್ಳಿಯ ಪದಕ ಗೆದ್ದುಕೊಂಡಿತ್ತು. ಅದಕ್ಕಿಂತ ಹಿಂದಿನ ವರ್ಷ ಕಂಚಿನ ಪದಕ ಬಂದಿತ್ತು. ಈ ವರ್ಷ ಚಿನ್ನ ಗೆಲ್ಲುವ ಅವಕಾಶ ತಪ್ಪಿಸಿಕೊಳ್ಳಬಾರದೆಂದು ಪಣ ತೊಟ್ಟಿದ್ದೆವು. ಕನಕಪುರ ರಸ್ತೆಯ ಜೈನ್‌ ಸ್ಪೋರ್ಟ್ಸ್‌ ಕೇಂದ್ರದಲ್ಲಿ ತಂಡಕ್ಕೆ ಒಂದು ತಿಂಗಳ ಸಿದ್ಧತಾ ಶಿಬಿರವೂ ನಡೆದಿತ್ತು. ನಮ್ಮ ಆಡಳಿತ ಮಂಡಳಿ, ದೈಹಿಕ ಶಿಕ್ಷಣ ನಿರ್ದೇಶಕ ಡಾ. ಯು.ವಿ.ಶಂಕರ್‌ ಅವರ ಪ್ರೋತ್ಸಾಹ ಬೆನ್ನಿಗಿತ್ತು.

ಕಳೆದ ವರ್ಷ ನಾವು ರಾಜ್ಯ ಮಟ್ಟದ ಎಂಟು ಟೂರ್ನಿಗಳಲ್ಲಿ ಏಳರಲ್ಲಿ ಜಯಗಳಿಸಿದ್ದೆವು. ಚೆನ್ನೈನ ಕೆಲವು ಟೂರ್ನಿಗಳಲ್ಲಿ ಆಡಿದ್ದೆವು. ಇದರಿಂದ ನಮ್ಮ ವಿಶ್ವಾಸ ವೃದ್ಧಿಸಿತು.

ತಂಡ, ಚಾಂಪಿಯನ್‌ ಆಗಬಹುದೆಂಬ ವಿಶ್ವಾಸವಿತ್ತೇ?

ನಮ್ಮ ತಂಡ ಈ ಬಾರಿ ಹಿಂದಿಗಿಂತ ಪ್ರಬಲವಾಗಿತ್ತು. ಭಾರತ ತಂಡದ ಆಟಗಾರ ಸಹಜ್‌, ರಾಜ್ಯ ಸೀನಿಯರ್‌ ತಂಡದಲ್ಲಿ ಆಡಿದ್ದ ಮೂವರು ಆಟಗಾರರು ನಮ್ಮ ತಂಡದಲ್ಲಿದ್ದರು. ಸಹಜ್, ನಿಖಿಲ್‌ ಅವರು ನನ್ನ ಜೊತೆದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದರು. ನಿರ್ಮಲ್‌ ಅಂತೂ ರಕ್ಷಣಾ ವಿಭಾಗದ ಬೆನ್ನೆಲುಬಾಗಿ ಆಡಿದರು.

ಪ್ರಬಲ ತಂಡಗಳ ವಿರುದ್ಧ ಯಾವ ರೀತಿಯ ತಂತ್ರ ಹೆಣೆಯಲಾಗಿತ್ತು?

ಟೂರ್ನಿಯಲ್ಲಿ ಇತರ ತಂಡಗಳು ಆಡುತ್ತಿದ್ದಾಗ ಅವರ ಪಂದ್ಯಗಳನ್ನು ನಾವು ವೀಕ್ಷಿಸಿ ಸಾಮರ್ಥ್ಯ, ದೌರ್ಬಲ್ಯಗಳನ್ನು ಕಂಡುಕೊಳ್ಳು‌‌ತ್ತಿದ್ದೆವು. ಪ್ರತೀ ಪಂದ್ಯದಲ್ಲಿ ನಮ್ಮ ತಪ್ಪುಗಳನ್ನು ಗುರುತಿ
ಸುತ್ತಿದ್ದ ಕೋಚ್‌ ಪುನೀತ್‌, ಎದುರಾಳಿಯನ್ನು ಹೇಗೆ ತಡೆಯಬೇಕೆಂದು ಸಲಹೆ– ಸೂಚನೆ ಕೊಡುತ್ತಿದ್ದರು. ಸೆಮಿಫೈನಲ್‌ (ಜಾನ್‌ಪುರದ ವಿ.ಬಿ.ಎಸ್‌. ಪೂರ್ವಾಂಚಲ ವಿ.ವಿ. ವಿರುದ್ಧ) ಪಂದ್ಯದಲ್ಲಿ ಬಹುಭಾಗ ನಮ್ಮ ತಂಡವೇಉತ್ತಮ ಲೀಡ್‌ ಪಡೆದಿದ್ದರೂ, ಕೆಲವು ಸ್ವಯಂಕೃತ ತಪ್ಪುಗಳಿಂದ ನಮ್ಮ ಗೆಲುವಿನ
ಅಂತರ ಮೂರು ಪಾಯಿಂಟ್‌ಗೆ ಇಳಿಯಿತು. ಆದರೆ, ಫೈನಲ್‌ನಲ್ಲಿ ಚೆನ್ನೈನ ಮದ್ರಾಸ್‌ ವಿಶ್ವ
ವಿದ್ಯಾಲಯ ತಂಡದ ಆಟಗಾರರು ಯಾವ ರೀತಿ ಆಡುತ್ತಾರೆ ಎಂಬುದನ್ನು ಅರ್ಥ ಮಾಡಿ
ಕೊಂಡಿದ್ದೆವು. ಅವರ ವಿರುದ್ಧ ಹಿಂದೆಯೂ ಆಡಿ ಗೊತ್ತಿದ್ದ ಕಾರಣ, ಗೆಲುವು ಅಷ್ಟೊಂದು ಕಷ್ಟವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT