ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ಸರ್ಕಾರಿ ಶಾಲೆ ವಿದ್ಯಾರ್ಥಿ ಎಂಬ ಹೆಮ್ಮೆ ಇದೆ

Last Updated 8 ನವೆಂಬರ್ 2019, 20:00 IST
ಅಕ್ಷರ ಗಾತ್ರ

ಕನ್ನಡದ ಕೋಟ್ಯಧಿಪತಿಕಾರ್ಯಕ್ರಮದಲ್ಲಿ ಹಣ ಗೆದ್ದ ಬಗ್ಗೆ ಏನನಿಸುತ್ತಿದೆ?
ಹಣ ಗೆದ್ದೆ ಎನ್ನುವುದಕ್ಕಿಂತ ಹಾಟ್‌ಸೀಟ್‌ನಲ್ಲಿ ಪುನೀತ್‌ ರಾಜ್‌ಕುಮಾರ್‌ ಅವರ ಎದುರು ಕುಳಿತೆ ಎಂಬುದೇ ಖುಷಿ. ಹಾಸನ ತಾಲ್ಲೂಕಿನ ಕಟ್ಟಾಯ ಸರ್ಕಾರಿ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ ನಾನು. ಸರ್ಕಾರಿ ಶಾಲೆಯ ವಿದ್ಯಾರ್ಥಿ ಎಂಬ ಹೆಮ್ಮೆ ಇದೆ.

ಕೋಟಿ ರೂಪಾಯಿ ಗೆಲ್ಲಬಹುದಾಗಿತ್ತಾ?
ಆರಂಭದಲ್ಲಿಯೇ ಲೈಫ್‌ಲೈನ್‌ ಬಳಸಿಬಿಟ್ಟೆ. ಕೋಟಿ ಗೆಲ್ಲೋಕೆ ಇನ್ನು ಮೂರು ಪ್ರಶ್ನೆಗಳು ಬಾಕಿ ಇದ್ದವಷ್ಟೆ. ಲೈಫ್‌ಲೈನ್‌ ಬಳಸಿರಲಿಲ್ಲ ಅಂದಿದ್ರೆ ಕೋಟಿ ರೂಪಾಯಿ ಗೆಲ್ಲುತ್ತಿದ್ದೆ ಅನ್ಸುತ್ತೆ. ಈಗಲೂ ನನ್ನ ಫ್ರೆಂಡ್ಸ್‌ ಅದನ್ನೇ ಹೇಳುತ್ತಿರುತ್ತಾರೆ.

ಹಣ ಗೆದ್ದಿರುವ ಬಗ್ಗೆ ಪೋಷಕರು ಏನು ಹೇಳಿದರು?
ಜಾಸ್ತಿ ಹಣ ಗೆದ್ದೆ ಅಂತ ಗರ್ವ ಪಡಬೇಡ, ಓದುವುದರ ಕಡೆ ಗಮನಹರಿಸು ಅಂದ್ರು. ಶಾಸಕ ಕುಮಾರಸ್ವಾಮಿ ಸನ್ಮಾನ ಮಾಡಿದರು. ಊರಿನವರು ಈಗ ಮಾತನಾಡಿಸುತ್ತಾರೆ. ಫ್ರೆಂಡ್ಸ್‌ ಎಲ್ಲ, ‘ಏನಪ್ಪ ಕೋಟ್ಯಧಿಪತಿ, ನಮಗೂ ಎರಡು ಲಕ್ಷ ರೂಪಾಯಿ ಕೊಡಪ್ಪ’ ಅಂತಾರೆ.

ಶಾಲೆ ಕಾಂಪೌಂಡ್‌ ನಿರ್ಮಾಣಕ್ಕೆ ಹಣ ನೀಡಲು ಯಾಕೆ ನಿರ್ಧರಿಸಿದೆ?
ಪ್ರತಿ ವರ್ಷ ಪರಿಸರ ದಿನ ಆಚರಿಸುವಾಗ ಅತಿಥಿಗಳನ್ನು ಆಹ್ವಾನಿಸಿ ಸಸಿಗಳನ್ನು ನೆಡುತ್ತೇವೆ. ಆದರೆ, ಅವೆಲ್ಲ ದನಗಳ ಹಾವಳಿಯಿಂದ ಉಳಿಯುತ್ತಿರಲಿಲ್ಲ. ಈ ವರ್ಷ ಬಾದಾಮಿ ಗಿಡಗಳನ್ನು ನೆಡಲಾಗಿತ್ತು. ಕಾಂಪೌಂಡ್‌ ಕಟ್ಟಿಸಿದರೆ ಅವುಗಳನ್ನು ಉಳಿಸಿಕೊಳ್ಳಬಹುದು ಎನ್ನಿಸಿತು. ನಮ್ಮೂರ ಶಾಲೆ ಚೆನ್ನಾಗಿರಲಿ ಅಂತ ಕಾಂಪೌಂಡ್‌ ಕಟ್ಟಿಸಲು ಹಣ ಕೊಡಲು ನಿರ್ಧರಿಸಿದೆ. ಆದರೆ, ಶಿಕ್ಷಣ ಸಚಿವ ಸುರೇಶ್ ಕುಮಾರ್‌ ಅವರು ಫೋನ್‌ ಮಾಡಿ, ‘ಕಾಂಪೌಂಡ್‌ ನಾವೇ ಕಟ್ಟಿಸಿಕೊಡುತ್ತೇವೆ. ಹಣವನ್ನು ಶಿಕ್ಷಣಕ್ಕೆ ಬಳಸಿಕೋ’ ಎಂದು ಹೇಳಿದರು.

ಗೆದ್ದಿರುವ ಹಣವನ್ನು ಹೇಗೆ ಬಳಸಬೇಕು ಎಂದುಕೊಂಡಿರುವಿ?
ತಾಯಿಗೆ ಕಣ್ಣಿನ ಸಮಸ್ಯೆ ಇದೆ. ಅವರಿಗೆ ಒಳ್ಳೆಯ ಕಡೆ ಚಿಕಿತ್ಸೆ ಕೊಡಿಸುತ್ತೇನೆ. ಎರಡು ಹಸುಗಳಿವೆ. ಮುಂದೆ ಮತ್ತಷ್ಟು ಹಸುಗಳನ್ನು ಕೊಂಡುಕೊಂಡು ಸಾಕುತ್ತೇನೆ.

ಓದಿ ಏನಾಗಬೇಕು ಅಂದುಕೊಂಡಿದ್ದೀಯ?‌
ಡಾಕ್ಟರ್‌ ಆಗಿ ಸಮಾಜಸೇವೆ ಮಾಡಬೇಕೆಂಬ ಆಸೆ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT