ಅಲ್ಲಿ ಗುರು ಶಿಷ್ಯರೆಲ್ಲರೂ ಊಟಕ್ಕೆ ಕುಳಿತುಕೊಳ್ಳುವ ಜಾಗದಲ್ಲಿ ಒಂದು ಖಾಲಿ ಕುರ್ಚಿ ಸದಾ ಇಡಲಾಗುತ್ತಿತ್ತು. ಶಿಷ್ಯ ಸಮೂಹಕ್ಕೆ ತಮ್ಮ ಗುರುಗಳು ಯಾವತ್ತೂ ಆ ಖಾಲಿ ಕುರ್ಚಿಯಲ್ಲಿ ಕೂಡದ ಬಗ್ಗೆ ದಿನವೂ ಕುತೂಹಲ. ಆ ಗುರುಗಳು ಆ ಕುರ್ಚಿಯಲ್ಲಿ ಕೂಡುತ್ತಾರೆಂದೇ ನಿತ್ಯದ ನಿರೀಕ್ಷೆ. ಆದರೆ ಯಾರೊಬ್ಬರೂ ಏಕೆ ಏನು ಎಂದು ಪ್ರಶ್ನೆ ಮಾಡುವ ಧೈರ್ಯ ತೋರುತ್ತಿರಲಿಲ್ಲ. ಗುರುಗಳು ಕೂಡಾ ಎಲ್ಲ ಶಿಷ್ಯಂದಿರ ಜೊತೆಗೆ ತಮಗೆ ಆ ಖಾಲಿ ಕುರ್ಚಿ ಕಾಣುವ ಹಾಗೆ ಅದಕ್ಕೆ ಅಭಿಮುಖವಾಗಿಯೇ ಅದನ್ನು ನೋಡುತ್ತ ಕೂತು ಬಿಡುತ್ತಿದ್ದರೇ ಹೊರತು ಅದರ ಮೇಲೆ ಕೂಡಲು ಮನಸು ಮಾಡಲೇ ಇಲ್ಲ. ಗುರುಗಳು ಬಹಳ ಮೌನಿ. ಅನಗತ್ಯ ಮಾತು ಕಮ್ಮಿ.

ಅಂತೂ ಇಂತೂ ಒಬ್ಬ ವಿದ್ಯಾರ್ಥಿ ಧೈರ್ಯ ಮಾಡೀ ಕೇಳಿಯೇ ಬಿಟ್ಟ. ‘ಗುರುಗಳೇ ಆ ಕುರ್ಚಿ ನಿಮಗಾಗಿಯೇ ಅಲ್ಲವೆ? ನೀವೇಕೆ ಅದರ ಮೇಲೆ ಕೂಡುವುದಿಲ್ಲ’ ಎಂಬ ಪ್ರಶ್ನೆಗೆ ಅವರು ಕೊಟ್ಟ ಉತ್ತರವೇ ಬಹಳ ಭಿನ್ನವಾಗಿತ್ತು. ‘ಅದು ಕೇವಲ ಖಾಲಿ ಕುರ್ಚಿಯಲ್ಲ ಮತ್ತು ಅದರ ಮೇಲೆ ಕೂಡುವುದು ಸುಲಭವಲ್ಲ. ಎಲ್ಲವನ್ನು ಬಿಟ್ಟುಕೊಟ್ಟು ಖಾಲಿಯಾಗಬೇಕು ಎಂದು ಸದಾ ನನ್ನನ್ನು ಎಚ್ಚರಿಸುವ ಜಾಗವದು. ನಾನು ಪ್ರತಿ ನಿತ್ಯ ಏನಾದರೂ ಒಂದು ಕೆಲಸ ಮಾಡುತ್ತಲೇ ಇರುತ್ತೇನೆ. ಬೋಧನೆ, ಸಹಾಯ, ಸಾಂತ್ವನ, ಅಡುಗೆ, ತೋಟಗಾರಿಕೆ, ಪ್ರಾಣಿಗಳಿಗೆ ಊಟ ಹಾಕುವುದು ಇತ್ಯಾದಿ. ಆದರೆ ನಾನು ಏನೇ ಮಾಡಿದರೂ ಅದರ ಒಳಗೆ ಅಹಂಕಾರ ಮನೆ ಮಾಡಿರುತ್ತದೆ. ನಾನು ಮಾಡಿದೆ, ನಾನು ಧನ್ಯ, ನಾನು ಭಿನ್ನ ಹೀಗೇ ಏನಾದರೊಂದು ಭಾವಕ್ಕೆ ಅಂಟಿಕೊಂಡೇ ವ್ಯವಹರಿಸುತ್ತೇನೆ. ಪ್ರತಿ ನಿತ್ಯ ಒಂದು ಸಣ್ಣ ಸ್ವಾರ್ಥ ನನ್ನಲ್ಲಿ ಇದ್ದೇ ಇರುತ್ತದೆ. ಈ ಭಾವಗಳಿಂದ ನಾನು ಯಾವತ್ತೂ ಖಾಲಿ ಆಗುವುದೇ ಇಲ್ಲ. ನನ್ನನ್ನು ನಾನು ಪಕ್ಕಕ್ಕೆ ಇಟ್ಟು ಖಾಲಿಯಾಗಬೇಕು ಎಂಬುದನ್ನು ಆ ಖಾಲಿ ಕುರ್ಚಿ ಸದಾ ನನ್ನನ್ನು ಎಚ್ಚರಿಸುತ್ತದೆ. ನಾನು ಇನ್ನೂ ಮೃದುವಾಗಬೇಕಾಗಿದೆ. ಇನ್ನೂ ಕಲಿಯಬೇಕಾಗಿದೆ. ಇನ್ನೂ ಹಗುರಾಗಬೇಕಿದೆ. ಇನ್ನೂ ಖಾಲಿಯಾಗಬೇಕಾಗಿದೆ’.

ಇದು ಕೇವಲ ಆ ಗುರುವಿನ ಕುರ್ಚಿಯ ಕಥೆಯಲ್ಲ ಅನಿಸುತ್ತದೆ. ಪಾತ್ರ ಗುರುವಿನದು ಅಷ್ಟೇ. ನಾವೆಲ್ಲರೂ ನಮ್ಮ ಪಾತ್ರಕ್ಕಾಗಿ ಒಂದು ಕುರ್ಚಿಯನ್ನು ಆಯ್ಕೆ ಮಾಡಿಕೊಂಡಿರುತ್ತೇವೆ. ಅದನ್ನು ಖಾಲಿ ಬಿಟ್ಟು ದೂರವಿಟ್ಟು ಎಂದೂ ಯೋಚಿಸಲಾರೆವು ನೋಡಿ. ಮಾಡುವ ಕೆಲಸಗಳನ್ನು ಮಾಡುತ್ತ ನಿರ್ವಿಕಾರಗಳನ್ನು ಬಿಟ್ಟು ಕೊಟ್ಟು ಖಾಲಿ ಆಗುವುದಿದೆ ನೋಡಿ, ಅದು ಸುಲಭವಲ್ಲ. ಒಂದಿಲ್ಲೊಂದು ನಿರೀಕ್ಷೆ ಮತ್ತು ಅದು ಮಾಡುವ ಕೊರಗಿನ ಗಾಯವನ್ನು ಹೊತ್ತುಕೊಂಡೇ ನಾವು ವ್ಯವಹರಿಸುತ್ತಿರುತ್ತೇವೆ. ತಂದೆ, ತಾಯಿ, ಅಣ್ಣ, ಅಕ್ಕ, ಯಾವುದೇ ಸಂಬಂಧಗಳು ಇರಬಹುದು. ಅವೆಲ್ಲವೂ ಒಂದು ಸ್ಥಾನವೇ ಆಗಿದೆ. ನಮ್ಮೊಳಗೆ ಇಂಥ ಖಾಲಿ ಕುರ್ಚಿಯೊಂದರ ಅಗತ್ಯ ಇದೆ. ಈ ಕುರ್ಚಿ ಸದಾ ಖಾಲಿಯಾಗುವ ಎಚ್ಚರವನ್ನು ಕಲಿಸುತ್ತಲೇ ಇರುತ್ತದೆ. ನಿರೀಕ್ಷೆ ಮತ್ತು ಲಾಭದ ಜೊತೆಗೇ ಗುದ್ದಾಡುತ್ತಲೇ ಇರುವ ನಮಗೆ ಈ ಖಾಲಿ ಕುರ್ಚಿ ಹೊಸದಾಗಿ ಬಾಳಲು ಪ್ರೇರೇಪಣೆಯಾಗಬಲ್ಲದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.