ಸಮುದ್ರದ ನೀರು ಆವಿಯಾಗಿ ಮೋಡವಾಗುತ್ತದೆ. ಆಗ ಸಮುದ್ರ ಸೂರ್ಯನಿಗೆ ಹೇಳುತ್ತದೆ, ‘ಇದು ನಿನಗೆ ನನ್ನ ನೈವೇದ್ಯ’ ಅಂತ. ಮೋಡ ಹಾಗೆಯೇ ಇರಲ್ಲ. ಮಳೆಯಾಗಿ ಸುರಿಯುತ್ತದೆ. ಮಳೆ ಆಕಾಶದಲ್ಲೇ ಇಲ್ಲ. ಅದು ಭೂಮಿಗೆ ಬಿದ್ದಿದೆ. ಭೂಮಿ ಕೂಡಾ ನೀರನ್ನು ತಾನೇ ಇಟ್ಟುಕೊಂಡಿಲ್ಲ. ಮರಗಳಿಗೆ ಕೊಟ್ಟಿದೆ. ಮರ ತಾನು ಇಟ್ಟುಕೊಂಡಿಲ್ಲ. ಹಣ್ಣಾಗಿ ಮತ್ತೆ ಭೂಮಿಗೇ ಕೊಟ್ಟಿದೆ. ನಿಸರ್ಗ ಕೊಟ್ಟು ಸಂತೋಷ ಪಟ್ಟಿದೆ. ಇಟ್ಟುಕೊಂಡು ಸಂತೋಷ ಪಟ್ಟಿಲ್ಲ.

ಸಂಪತ್ತಿಗೆ ಮೂರು ರೂಪಗಳಿವೆ. ನಮ್ಮ ದೇಶದ ದಾರ್ಶನಿಕರು ಸಂಪತ್ತನ್ನು ಹೇಗೆ ಬಳಸಬೇಕು ಎಂದು ಚಿಂತನೆ ಮಾಡಿದ್ದಾರೆ. ನಾವು ಗಳಿಸಿದ ಸಂಪತ್ತನ್ನು ನಾವೇ ಅನುಭವಿಸಬೇಕು. ಇದು ಮೊದಲನೆಯದ್ದು. ನೀನು ದುಡಿದ ಸಂಪತ್ತಿನ ಮೇಲೆ ನಿನಗೆ ಸಂಪೂರ್ಣ ಹಕ್ಕು ಇದೆ. ನೀನು ಉಣ್ಣು, ತಿನ್ನು, ಮಜಾ ಮಾಡು. ಏನೂ ತಪ್ಪಿಲ್ಲ. ನೀವು ದುಡಿದ ಸಂಪತ್ತನ್ನು ಆರಾಮಾಗಿ ಅನುಭವಿಸು. ನಾವು ಹಾಗೆ ಮಾಡುವುದಿಲ್ಲ. ಒಳ್ಳೆಯ ಆಕಳು ಕಟ್ಟುತ್ತೇವೆ. ಹಾಲನ್ನು ಹೋಟೆಲ್ಗೆ ಕೊಟ್ಟು ಮಕ್ಕಳಿಗೆ ನೀರು ಹಾಲು ಕೊಡುತ್ತೇವೆ. ನಾವು ಬೆಳೆದ ಒಳ್ಳೆಯ ಹಣ್ಣುಗಳನ್ನು ರಫ್ತು ಮಾಡುತ್ತೇವೆ.

ಕೊಳೆತ ಸಾಧಾರಣ ಹಣ್ಣುಗಳನ್ನು ಮನೆಗೆ ತರ್ತೇವೆ. ವಾರೆನ್ ಬಫೆಟ್ ಎಂಬಾತ ಹೇಳುವುದೇನು ಎಂದರೆ, ‘ಮನುಷ್ಯನೇ, ನೀನು ಶ್ರೀಮಂತ ಆಗಬೇಕು ಎಂದರೆ ಸಂಗ್ರಹ ಮಾಡಬೇಡ. ಕೂಡಿಡಬೇಡ, ಹೂಡಿಕೆ ಮಾಡು’ ಎನ್ನುತ್ತಾನೆ. ನಾವು ಹಾಗಲ್ಲ. ಎಲ್ಲಲ್ಲಿ ಸಾಧ್ಯವೋ ಅಲ್ಲಲ್ಲಿ ಸಂಗ್ರಹಿಸಿ ಇಡುತ್ತೇವೆ. ಆರೋಗ್ಯ, ಆನಂದ ಮತ್ತು ಅಧ್ಯಾತ್ಮ ಯಾರಲ್ಲಿ ಇರುತ್ತದೋ ಅವರು ಸಂತೋಷವಾಗಿ ಇರುತ್ತಾರೆ. ಸಂತೃಪ್ತಿಯಾಗಿಯೂ ಇರುತ್ತಾರೆ. ಇವುಗಳನ್ನು ಎಂದೂ ಕಳೆದುಕೊಳ್ಳಬಾರದು.

ಎರಡನೆಯದ್ದು ಏನೆಂದರೆ ಹಂಚಿಕೊಂಡು ಉಣ್ಣು. ಹಣ ಇದ್ದಾಗ ಹಂಚಿಕೊಂಡು ಉಣ್ಣು, ನೆಣ (ಶಕ್ತಿ) ಇದ್ದಾಗ ಸೇವೆ ಮಾಡು. ಹಣ, ನೆಣ ಮತ್ತು ಗುಣ ಕಾಯಂ ಇರೋದಿಲ್ಲ. ಇದ್ದಾಗ ಮಾಡಿಕೊಳ್ಳಬೇಕು. ಗಾಳಿ ಬಂದಾಗಲೇ ತೂರಿಕೊಳ್ಳಬೇಕು. ಕರ್ಣ ಒಮ್ಮೆ ಕ್ಷೌರ ಮಾಡಿಕೊಳ್ಳುತ್ತಾ ಇರುವಾಗ ಯಾರೋ ಒಬ್ಬ ಬಂದು ಸಹಾಯ ಕೇಳಿದನಂತೆ. ಆತ ತಕ್ಷಣವೇ ಪಕ್ಕದಲ್ಲಿಯೇ ಇದ್ದ ಬಂಗಾರದ ಬಟ್ಟಲನ್ನು ಕೊಟ್ಟು ಕಳಿಸಿದನಂತೆ. ಆಗ ಪಕ್ಕದಲ್ಲಿ ಇದ್ದವನು ‘ಏನ್ ಸ್ವಾಮಿ ನೀವು ಎಡಗೈಲಿ ದಾನ ಕೊಟ್ಟಿರಲ್ಲ, ತಪ್ಪಲ್ಲವಾ’ ಎಂದು ಕೇಳಿದನಂತೆ.

ಅದಕ್ಕೆ ಕರ್ಣ ‘ಎಡಗೈಯಲ್ಲಿ ಇದ್ದಿದ್ದು ಬಲಗೈಗೆ ಬರುವುದರೊಳಗೆ ನನ್ನ ಮನಸ್ಸು ಬದಲಾಗಬಹುದು ಎಂದು ಎಡಗೈಲೇ ಕೊಟ್ಟೆ’ ಎಂದನಂತೆ. ಕೊಟ್ಟು ಸಂತೋಷ ಪಡಬೇಕು. ಕೊಡುವುದಿಲ್ಲ ಎಂದರೆ ನಡೆಯೋದಿಲ್ಲ ಈ ಜಗತ್ತಿನಲ್ಲಿ. ಕೊಟ್ಟು ಹೋಗಬೇಕು ಇಲ್ಲಾ ಬಿಟ್ಟು ಹೋಗಬೇಕು. ಇಲ್ಲವಾದರೆ ಕೆಟ್ಟು ಹೋಗುತ್ತದೆ. ನೀವು ಇದನ್ನು ಪ್ರಾಕ್ಟೀಸ್ ಮಾಡಿ ಬೇಕಾದರೆ. ನೀವು ಗಾಳಿ ಒಳಗೆ ತೆಗೆದುಕೊಳ್ಳಿ. ಹೊರಗೆ ಕೊಡೋದಿಲ್ಲ ಎಂದು ಒಳಗೇ ಇಟ್ಟುಕೊಳ್ಳಲು ಆಗಲ್ಲ. ಹೊರಗೆ ಬಿಡಲೇ ಬೇಕು. ತುಂಬಿದ ಕೆರೆ ತುಂಬಿದ ಹಾಗೆಯೇ ಇರಬೇಕು ಎಂದರೆ ಒಂದು ಕೋಡಿ ಇರಲೇ ಬೇಕು. ಹಾಗೆಯೇ ನಮ್ಮ ಸಂಪತ್ತಿನ ಕೆರೆಗೆ ದಾನ ಎಂಬ ಕೋಡಿ ಇರಬೇಕು. ಕೋಡಿ ಬಿಡದೇ ಇದ್ದರೆ ಕೆರೆ ಒಡೆದು ಹೋಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.