ಹಸಿವು ಮತ್ತು ಬಡತನ ಕಲಿಸುವ ಪಾಠವನ್ನು ಯಾವ ವಿಶ್ವವಿದ್ಯಾಲಯಗಳೂ ಕಲಿಸುವುದಿಲ್ಲ. ನಮಗೆ ಏನಾದರೂ ಕೊರತೆ ಇದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದು ಪರಿಹಾರ ಅಲ್ಲ. ನಮ್ಮ ದೇಶಕ್ಕೆ ಒಳಗೆ ಗುಹೆಯೊಳಗೆ ಕುಳಿತು ಪೂಜೆ ಮಾಡುವ ತಪಸ್ವಿಗಳು ಅಷ್ಟೇ ಅಲ್ಲ. ಕಾಯಕ ತಪಸ್ವಿಗಳು, ಜ್ಞಾನ ತಪಸ್ವಿಗಳು, ಸೇವಾ ತಪಸ್ವಿಗಳು ಬೇಕು. ಈ ಎಲ್ಲಾ ತಪಸ್ವಿಗಳು ಇದ್ದರೆ ದೇಶ
ಸಮೃದ್ಧಿಯಾಗುತ್ತದೆ.

ಕಷ್ಟ ಸಹಿಸಿಕೊಳ್ಳುವುದು, ಕಷ್ಟಪಡುವುದು ಎರಡನ್ನು ಕಲಿಯಬೇಕು. ನಾವು ಏನಾದರೂ ಹೆಚ್ಚುಕಮ್ಮಿ ಆದರೆ ಹೋಗಿ ದೇವರಿಗೆ ಕೈಮುಗಿದು ‘ನಮ್ಮ ಕಷ್ಟ ಪರಿಹಾರ ಮಾಡು’ ಎಂದು ಕೇಳಿಕೊಳ್ಳುತ್ತೇವೆ. ಆದರೆ ದೇವರಲ್ಲಿ ಹೀಗೆ ಬೇಡುವುದಲ್ಲ. ದೇವರಲ್ಲಿ, ಕಷ್ಟ ಕೊಡಬೇಡ ಎಂದು ಬೇಡಿಕೊಳ್ಳಬಾರದು. ನೀನು ಎಷ್ಟೇ ಕಷ್ಟಕೊಟ್ಟರೂ ಅದನ್ನು ತಾಳಿಕೊಳ್ಳುವ ಸಾಮರ್ಥ್ಯಕೊಡು ಎಂದು ಕೇಳಿಕೊಳ್ಳಬೇಕು. ನಾವು ದೇವರ ಬಳಿಗೆ ಹೋಗಿ ಕಷ್ಟ ಹೇಳಿಕೊಳ್ಳುವುದು ಅಲ್ಲ. ಕಷ್ಟಗಳಿಗೆ ಹೇಳಬೇಕು. ನಮ್ಮ ಹತ್ರ ದೇವರಿದ್ದಾನೆ. ನೀನು ಹೇಗೆ ಬರುತ್ತೀಯಾ ಅಂತ ಕೇಳಬೇಕು. ಎಲ್ಲಾ ಕಳಕೊಂಡು ಬಿಟ್ಟೀವಿ. ಜೀವನದಲ್ಲಿ ಇನ್ನು ಏನೂ ಉಳಿದಿಲ್ಲ ಎಂದು ಯಾವುದೇ ಮನುಷ್ಯ ಹೇಳಬಾರದು. ಎಲೆಗಳನ್ನು ಸಂಪೂರ್ಣ ಉದುರಿಸಿದ ಗಿಡ, ‘ನಾನು ಎಲ್ಲಾ ಕಳಕೊಂಡೇನಿ’ ಅಂದಿಲ್ಲ. ‘ಮುಂದೆ ಮಳೆಗಾಲ ಬಂದಾಗ ನಾನು ಚಿಗುರುತ್ತೇನೆ’ ಎಂಬ ಭರವಸೆಯೊಂದಿಗೆ ಅದು ಬದುಕತೈತಿ. ಮನುಷ್ಯ ಕೂಡ ಇಂತಹ ಭರವಸೆಯೊಂದಿಗೆ ಬದುಕಬೇಕು. ನೀವು ಆಸ್ಪತ್ರೆಯಲ್ಲಿ ಐಸಿಯು ನೋಡಿರುತ್ತೀರಿ. ಅಲ್ಲಿ ಮಾನಿಟರ್ ಇರುತ್ತದೆ. ಅದರಲ್ಲಿನ ರೇಖೆಗಳು ಮೇಲೆ ಕೆಳಗೆ ಓಡುತ್ತಿರುತ್ತವೆ. ರೇಖೆಗಳು ಮೇಲೆ ಕೆಳಗೆ ಓಡುತ್ತಿದ್ದರೆ ಮನುಷ್ಯ ಬದುಕಿದ್ದಾನೆ ಎಂದು ಅರ್ಥ. ರೇಖೆಗಳು ನೇರವಾಗಿದ್ದರೆ ಅವ ಸತ್ತ ಎಂದೇ ಅರ್ಥ. ಮನುಷ್ಯ ಬದುಕಿದ್ದಾನೆ ಎಂಬುದರ ಅರ್ಥವೇ ಏರಿಳಿತಗಳು. ಏರಿತಗಳು ಇಲ್ಲ ಅಂದರೆ ಅವ ಬದುಕಿಲ್ಲ ಅಂತ ಅರ್ಥ.

ದೇವರು ನಮಗೆ ಬಹಳ ಕಷ್ಟ ಕೊಟ್ಟಾನೆ ಅಂತಿರ್ತೀವಿ. ಆದರೆ ರೈತರನ್ನು ನೋಡಿ. ಒಬ್ಬ ರೈತ ಹೂವುಗಳನ್ನು ಬೆಳೆಸಲು ಹಸಿರು ಮನೆ ಮಾಡಿರುತ್ತಾನೆ. ಒಂದಿಷ್ಟು ಹೂವುಗಳನ್ನು ಹಸಿರು ಮನೆಯಲ್ಲಿ ಮತ್ತು ಇನ್ನೊಂದಿಷ್ಟು ಹೂವುಗಳನ್ನು ಹೊರಗೆ ಹಾಕುತ್ತಾನೆ. ಯಾವ ಹೂವು ನೆರಳಲ್ಲಿ ಬೆಳೆಯುತ್ತದೆ, ಯಾವ ಹೂವು ಬಿಸಿಲಿನಲ್ಲಿ ಬೆಳೆಯುತ್ತದೆ ಎನ್ನುವುದು ಅವನಿಗೆ ಗೊತ್ತು. ಬಿಸಿಲಿನಲ್ಲಿ ಹಾಕಿದ ಹೂವು ಎಂದೂ ರೈತನ ಬಳಿ ಬಂದು ‘ನನಗೆ ಯಾಕೆ ಬಿಸಿಲಿನಲ್ಲಿ ಹಾಕಿದಿ’ ಎಂದು ದೂರು ಹೇಳಿಲ್ಲ. ಬಿಸಿಲಿನಲ್ಲಿ ಹಾಕುವ ಹೂವನ್ನು ಹಸಿರು ಮನೆಯಲ್ಲಿ ಹಾಕಿದರೆ ಅದು ಬೆಳೆಯುವುದಿಲ್ಲ. ಅದೇ ರೀತಿ ಹಸಿರು ಮನೆಯಲ್ಲಿ ಬೆಳೆಸುವ ಹೂವುಗಳನ್ನು ಬಿಸಿಲಿನಲ್ಲಿ ಹಾಕಿದರು ಅದೂ ಬೆಳೆಯುವುದಿಲ್ಲ. ಹಾಗೆಯೇ ಈ ಜಗತ್ತು ಎನ್ನುವುದು ಹಸಿರುಮನೆ. ದೇವರು ಎನ್ನುವವ ಒಬ್ಬ ರೈತ. ಯಾರನ್ನು ಹೇಗೆ ಬೆಳೆಸಬೇಕು ಎನ್ನುವುದು ಅವನಿಗೆ ಗೊತ್ತು. ಯಾರಿಗೆ ತಾಪ ಕೊಡಬೇಕು, ಯಾರನ್ನು ನೆರಳಿನಲ್ಲಿ ಬೆಳೆಸಬೇಕು ಎನ್ನುವುದು ಅವನಿಗೆ ಗೊತ್ತು. ತಾಪದಲ್ಲಿಯೂ ಅರಳುವಿಕೆ ಇದೆ. ನೆರಳಿನಲ್ಲಿಯೂ ಅರಳುವಿಕೆ ಇದೆ. ಅದಕ್ಕೆ ದೇವರಲ್ಲಿ ಯಾವುದೇ ದೂರು ಹೇಳಬಾರದು. ದೇವರು ಈ ಬದುಕು ಕೊಟ್ಟಿದ್ದಾನೆ. ಅದನ್ನು ಚೆನ್ನಾಗಿಯೇ ಅನುಭವಿಸಬೇಕು. ಅರಿತು ಬದುಕಬೇಕು. ಅರಿತು ಶರಣರಾಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.