ಅವರಿಬ್ಬರೂ ದಟ್ಟ ಟ್ರಾಫಿಕ್ನ ಮಧ್ಯದಿಂದ ಹೇಗೋ ತಪ್ಪಿಸಿಕೊಂಡು ಸಂಜೆ ಮನೆಗೆ ಬಂದು ಲ್ಯಾಪ್ಟಾಪ್ಗಳನ್ನು ಎಸೆದು ಜಗಳಕ್ಕೆ ಕೂತಿದ್ದರು. ಏನಾದರೂ ತಿನ್ನುವುದಕ್ಕೆ ಸಿಗಬಹುದಾ ಅಂತ ಅಡುಗೆ ಮನೆ ತಡಕಾಟ. ಮಾಡಿಟ್ಟು ಹೋಗಿದ್ದರೆ ತಾನೆ ಸಿಗಲು ಸಾಧ್ಯ? ಮನೆ ಬಿಡಬೇಕಾದರೂ ಈಗೋ ಹಿಡಿದುಕೊಂಡು ಮುನಿಸಿಕೊಂಡೇ ಹೊರಟವರು. ಸಂಜೆಗೇನು ಸಿಗಲು ಸಾಧ್ಯ? ಹೊರಗೂ ವಿಚಿತ್ರ ವಾತಾವರಣ. ಕಾಲ ಯಾವುದೆಂಬ ಗೊಂದಲದ ಹಾಗೆ ಚಳಿಗಾಲದಲ್ಲೂ ತುಂತುರು ಮಳೆ. ಸ್ವಿಗ್ಗಿ ಆರ್ಡರ್ ಮಾಡಿ ಕೂತರು. ಏನೋ ಬೇಗ ಬರಲಿ ಬಿಸಿ ಇರಲಿ ಎಂಬ ನಿರ್ಧಾರ. ಐದು ನಿಮಿಷಕ್ಕೆ ಮೆಸೇಜ್: ‘ಯುವರ್ ಆರ್ಡರ್ ಪಿಕ್ಡ್ ಬೈ ನಂದಿತಾ’.

ಆಹಾರ ಬರುವವರೆಗೂ ಅದೇ ವ್ಯಾಜ್ಯ. ಸಣ್ಣ ಸಣ್ಣ ನೆಪದಿಂದ ಶುರುವಾಗಿ ಅವರಿಬ್ಬರೂ ಮದುವೆ ಆಗಿದ್ದ ದಿನವನ್ನು ತಲುಪಿದ ವ್ಯಾಜ್ಯ. ಪದೇ ಪದೇ ಸ್ವಿಗ್ಗಿ ಬರುವಿಕೆಯನ್ನು ಪತ್ತೆ ಹಚ್ಚುವ ಕೆಲಸ. ಅದು ಹೇಳ್ತಾನೆ ಇತ್ತು ಇಪ್ಪತ್ತು ನಿಮಿಷ, ಹತ್ತು ನಿಮಿಷ ಅಂತ. ಆನಂತರ ಹತ್ತು ನಿಮಿಷವಾದರೂ ಸೂಚನೆ ಇಲ್ಲ. ಹೊರಗೆ ಚಳಿ ಮತ್ತು ವಿಚಿತ್ರ ಕಾಲಮಾನದಂತಹ ತುಂತುರು ಮಳೆ. ಇಲ್ಲಿ ಇವರಿಬ್ಬರ ಹೊಟ್ಟೆಯಲ್ಲಿ ಹಸಿವಿನ ಅಗ್ನಿ ಹೊತ್ತಿ ಉರಿಯುತ್ತಿದೆ. ಮನಸ್ಸಿನಲ್ಲೇ ಹಿಡಿಶಾಪ ನಂದಿತಾಳಿಗೆ.

ಮಳೆ, ಟ್ರಾಫಿಕ್ ಬೇರೆ ಯಾವುದನ್ನೂ ಅರ್ಥಮಾಡೊಕೊಳ್ಳದ ಅಸಹನೆಯ ಉರಿ ಕಾರಿಕೊಳ್ಳುತ್ತಿದ್ದರು. ನಿಗದಿತ ಸಮಯಕ್ಕಿಂತ ಹದಿನೈದು ನಿಮಿಷದ ನಂತರ ಮನೆ ಬಾಗಿಲು ಬಡಿದ ಹೆಂಗಸು. ‘ಸಾರೀ ಮೇಡಂ ತಡವಾಯಿತು. ಮಳೆ, ಕೆಟ್ಟ ಟ್ರಾಫಿಕ್’ ಅಂತ ಹೇಳುತ್ತಲೆ ಎದುರು ನಿಂತ ಹೆಣ್ಣುಮಗಳನ್ನು ನೋಡಿದಾಗ ಅವಳ ಹಿಂದೆ ಬಚ್ಚಿಟ್ಟುಕೊಂಡು ನಿಂತಿದ್ದ ಪುಟ್ಟ ಹುಡುಗಿ. ರೇನ್ ಕೋಟ್ ಇದ್ದರೂ ನೆನೆದು ನಡುಗುತಿತ್ತು.

‘ಕೊನೆ ಡೆಲಿವರಿ ಮೇಡಂ. ಮನೆಗೆ ಹೊರಟುಬಿಡ್ತೀನಿ. ಹಾಗಾಗಿ ನಾನೇ ಪಿಕ್ ಮಾಡಿದೆ ನಿಮ್ಮ ಆರ್ಡರ್. ಮಗಳನ್ನೂ ಟ್ಯೂಷನ್ನಿಂದ ಮನೆಗೆ ಕರೆದುಕೊಂಡು ಹೋಗಬೇಕಿತ್ತು. ಇಲ್ಲೇ ಹತ್ತಿರ ನಮ್ಮ ಮನೆ’ ಎನ್ನುತ್ತ ಹೊರಟೇ ಹೋದ ನಂದಿತಾ. ಅವಳ ಮಾತನ್ನು ಬಾಗಿಲ್ಲಲೇ ನಿಲ್ಲಿಸಿ ಕೇಳಿಸಿಕೊಂಡ ಈ ಇಬ್ಬರೂ ಚಕಾರ ಎತ್ತಲಿಲ್ಲ. ಇಬ್ಬರ ಮಧ್ಯೆ ಭಯಂಕರ ಮೌನ.

ಜೀವನವೇ ಹೀಗೆ ನೋಡಿ. ನಮ್ಮದೇ ಹಿಮಾಲಯದಷ್ಟು ಭಾರ ಅಂದುಕೊಂಡು ಲೋಕವನ್ನು ನೋಡುವ ಗೊಡವೆಗೇ ಹೋಗುವುದಿಲ್ಲ. ನಮ್ಮದೇ ಬಹುದೊಡ್ಡ ಸಮಸ್ಯೆ ನಮಗೆ. ಈ ಇಬ್ಬರ ಬ್ಯಾಂಕ್ ಬ್ಯಾಲೆನ್ಸ್ ಕಮ್ಮಿ ಇರಲಿಲ್ಲ. ಆದರೆ ಬಾಳ್ವೆಯ ಅರ್ಥವಂತಿಕೆ ಮತ್ತು ಬಾಳಿನ ಹೊಂದಾಣಿಕೆಯೇ ಕಳಚಿಹೋಗಿತ್ತು. ಸ್ವಿಗ್ಗಿ ಅಹಾರ ತಂದುಕೊಟ್ಟು ಹೋಗಿದ್ದ ನಂದಿತಾ ಮತ್ತವಳ ಮಗಳ ಚಿತ್ರ ಅವರ ಬಾಳಿನ ದೃಷ್ಟಿಕೋನವನ್ನೇ ಬದಲಾಯಿಸಿತು. ಅಕಾಶವೇ ಬಿದ್ದ ಹಾಗೆ ಆಡುವ ನಾವು ಮತ್ತು ನಮ್ಮಂಥವರ ಗ್ರಹಿಕೆಯನ್ನು ಆ ಪುಟ್ಟ ಹುಡುಗಿ ಪ್ರಶ್ನಿಸಿದ ಹಾಗೆ ಆಗಿತ್ತು. ನಿರ್ದಿಷ್ಟ ಅಳತೆ ಮತ್ತು ವಿನ್ಯಾಸದ ಶೂಗಳಿಗಾಗಿ ಹುಡುಕುತ್ತಾ ಗೊಣಗುತ್ತಾ ಸಿಗದೇ ಹೋದಾಗ ಇದ್ದ ಬದ್ದ ಕಂಪನಿಗಳನ್ನು ಬೈಯುವಾಗ ಕಾಲಿರದ ವ್ಯಕ್ತಿಯೊಬ್ಬ ಸರ್ಕಲ್ ಸಿಗ್ನಲ್ಲಿನಲ್ಲಿ ಕಾಣಿಸಿಕೊಳ್ಳಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.