ಕಳೆದ 4 ದಶಕಗಳ ಅವಧಿಯಲ್ಲಿ ಓಝೋನ್ ಪದರಕ್ಕೆ ಆಗುತ್ತಿದ್ದ ಹಾನಿಯನ್ನು ಸಾಕಷ್ಟು ತಡೆಗಟ್ಟಲಾಗಿದೆ. ಆದರೆ, ಆಗಬೇಕಾದ ಸಂರಕ್ಷಣೆ ಕೆಲಸ ಇನ್ನೂ ಸಾಕಷ್ಟಿದೆ.

ಭೂಮಿಯ ಮೇಲಿನ ಜೀವಸಂಕುಲವನ್ನು ಕಾಯುವ ನೈಸರ್ಗಿಕ ರಕ್ಷಾಕವಚವೆಂದೇ ಓಝೋನ್ ಪ್ರಸಿದ್ಧ. ಈ ಜೀವರಕ್ಷಕ ಪದರವನ್ನು ಜತನದಿಂದ ರಕ್ಷಿಸಲು ಪಣತೊಟ್ಟು, ವೈಜ್ಞಾನಿಕ ಕ್ರಮಗಳ ಮೂಲಕ ಅದಕ್ಕೆ ರಂಧ್ರ ಬೀಳದಂತೆ ತಡೆಯಲು ಮಾಡಿದ ಕೆಲಸಗಳು ಈಗ ಫಲ ಕೊಡುತ್ತಿವೆ.

ಓಝೋನ್ ಪದರವನ್ನು ಸವಕಳಿ ಮಾಡುವ ರಾಸಾಯನಿಕಗಳ ಬಳಕೆಯನ್ನು ತಡೆಗಟ್ಟುವ ಉದ್ದೇಶದ 1987ರ ‘ಮಾಂಟ್ರಿಯಲ್ ಒಪ್ಪಂದ’ದ ಫಲವಾಗಿ, ಶಾಖವರ್ಧಕ ಅನಿಲಗಳ ಒತ್ತಡದಿಂದ ತೆಳುವಾಗುತ್ತಿದ್ದಓಝೋನ್ ಪದರವನ್ನು ಕಾಪಾಡುವ ಪ್ರಯತ್ನ ಸಾಕಷ್ಟು ಯಶಸ್ವಿಯಾಗಿದೆ. ಒಪ್ಪಂದ ಜಾರಿಗೆ ಬಂದ ನಂತರದ ಸುಮಾರು ನಾಲ್ಕು ದಶಕಗಳ ಅವಧಿಯಲ್ಲಿ ಓಝೋನ್ ಪದರವು ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಅಂಟಾರ್ಕ್ಟಿಕಾದ ಮೇಲಿನ ಓಝೋನ್ ರಂಧ್ರವು ಸಂಕುಚಿತ ಗೊಳ್ಳುತ್ತಿದ್ದು, ಇದು 2066ರ ವೇಳೆಗೆ 1980ರ ಮಟ್ಟಕ್ಕೆ ಮರಳುವ ನಿರೀಕ್ಷೆಯಿದೆ. ಆರ್ಕ್ಟಿಕ್ ಮತ್ತು ಇತರ ಪ್ರದೇಶಗಳಲ್ಲಿಯೂ ಓಝೋನ್ ಪದರವು 2040ರ ವೇಳೆಗೆ ಸಾಮಾನ್ಯ ಸ್ಥಿತಿಗೆ ಮರಳಬಹುದು ಎಂದು ಅಂದಾಜಿಸಲಾಗಿದೆ. ಓಝೋನ್ ಪದರವನ್ನು ಸಂರಕ್ಷಿಸಲು ನೆರವಾದ ವೈಜ್ಞಾನಿಕ ಕ್ರಮಗಳಿಗೆ ಕೃತಜ್ಞತೆ ಸಲ್ಲಿಸಲು ಈ ವರ್ಷದ ‘ವಿಶ್ವ ಓಝೋನ್ ದಿನಾಚರಣೆ’ಯನ್ನು (ಸೆ. 16) ‘ವಿಜ್ಞಾನದಿಂದ ವಿಶ್ವ ಪ್ರಯತ್ನದವರೆಗೆ’ ಎಂಬ ಧ್ಯೇಯ ವಾಕ್ಯದೊಂದಿಗೆ ಆಚರಿಸಲಾಗುತ್ತಿದೆ.

ಓಝೋನ್ ಪದರವು ಭೂಮಿಯ ಮೇಲೆ 20 ಕಿ.ಮೀ. ಎತ್ತರದಲ್ಲಿ ಶುರುವಾಗಿ 50 ಕಿ.ಮೀ.ವರೆಗೂ ವ್ಯಾಪಿಸಿರುವ ಅನಿಲದ ತೆಳುವಾದ ಪೊರೆ. ಇದು ಧ್ರುವ ಪ್ರದೇಶಗಳಲ್ಲಿ ತುಸು ದಪ್ಪವಾಗಿದ್ದು, ಬೇರೆ ಪ್ರದೇಶಗಳಲ್ಲಿ ತೀರಾ ತೆಳುವಾಗಿ ರುತ್ತದೆ. ಈ ಪದರವು ಭೂಮಿಯ ವಾತಾವರಣದ ಒಂದು ನಿರ್ಣಾಯಕ ಭಾಗವಾಗಿದ್ದು, ಸೂರ್ಯನಿಂದ ಬರುವ ಹಾನಿಕಾರಕ ನೇರಳಾತೀತ ಕಿರಣಗಳಿಂದ ನಮ್ಮನ್ನು ರಕ್ಷಿಸುತ್ತದೆ.

70ರ ದಶಕದ ಉತ್ತರಾರ್ಧ ಮತ್ತು 80ರ ದಶಕದ ಆರಂಭದಲ್ಲಿ, ವಿಜ್ಞಾನಿಗಳು ಓಝೋನ್ ಪದರವು ಮಾನವ ನಿರ್ಮಿತ ರಾಸಾಯನಿಕಗಳಾದ ಕ್ಲೋರೊಫ್ಲೋರೋ ಕಾರ್ಬನ್ಗಳಿಂದ ಹಾನಿಗೊಳಗಾಗುತ್ತಿದೆ ಎಂದು ಕಂಡು ಹಿಡಿದರು. ರೆಫ್ರಿಜಿರೇಟರ್, ಏರ್ ಕಂಡೀಷನರ್ ಮತ್ತು ಏರೋಜೋಲ್ ಸ್ಪ್ರೇಗಳಲ್ಲಿ ಈ ರಾಸಾಯನಿಕಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿತ್ತು. ಓಝೋನ್ ಪದರವನ್ನು ಸವಕಳಿ ಮಾಡುವ ಶಾಖವರ್ಧಕ ಅನಿಲಗಳ ಉತ್ಸರ್ಜನೆ ಯನ್ನು ವೈಜ್ಞಾನಿಕವಾಗಿ ನಿಯಂತ್ರಿಸಲು ಜಾಗತಿಕ ಸಮುದಾಯವು ಒಟ್ಟಾಗಿ ಕಾರ್ಯ ನಿರ್ವಹಿಸಿ ಓಝೋನ್ ಪದರವನ್ನು ರಕ್ಷಿಸಲು ನಿರ್ಧರಿಸಿತು.

ಸುಮಾರು ನೂರು ರಾಸಾಯನಿಕಗಳಿಂದ ಓಝೋನ್ ಪದರಕ್ಕೆ ಅಪಾಯವಿದೆ. ನಾವು ಪ್ರತಿನಿತ್ಯ ಬಳಸುವ ಬಸ್, ಕಾರು, ರೈಲುಗಳ ಡೀಸೆಲ್ ಹೊಗೆ, ರಸಗೊಬ್ಬರ, ಪೇಂಟ್ಗಳು ಹೊಮ್ಮಿಸುವ ಮಾಲಿನ್ಯ, ಏರ್ ಕಂಡೀಷನರ್, ನೋವು ನಿವಾರಕ ಸ್ಪ್ರೇ, ಸುಗಂಧ ಸೂಸುವ ತುಂತುರು ಡಬ್ಬಿ, ಫ್ರಿಡ್ಜ್ಗಳಲ್ಲಿ ಬಳಸುವ ಕ್ಲೋರೊಫ್ಲೋರೋ ಕಾರ್ಬನ್ ಮತ್ತು ಬ್ರೊಮೊ ಫ್ಲೋರೋ ಕಾರ್ಬನ್ ಗಳಿಂದ ಓಜೋನ್ ಪದರಕ್ಕೆ ತೂತು ಬೀಳುತ್ತದೆ. ಮೊದಲ ಸಲ ಅಂಟಾರ್ಕ್ಟಿಕಾದ ವಾಯುಮಂಡಲದ ಓಝೋನ್ ಪದರಕ್ಕೆ ತೂತಾಗಿದೆ ಎಂಬ ಮಾಹಿತಿ ಸಿಕ್ಕ ತಕ್ಷಣ ವಿಜ್ಞಾನಿಗಳು ವಾತಾವರಣ ದಲ್ಲಿನ ಸ್ವತಂತ್ರ ಕ್ಲೋರಿನ್ ಅಣು ಮತ್ತು ಕ್ಲೋರಿನ್ ಮೊನಾಕ್ಸೈಡ್ನಿಂದ ಆ ರಂಧ್ರ ಉಂಟಾಗಿದೆ ಎಂದು ಪತ್ತೆ ಹಚ್ಚಿ, ಹೈಡ್ರೊಕ್ಲೋರೋಫ್ಲೋರೋ ಕಾರ್ಬನ್ ಗಳ ಬಳಕೆಯಿಂದ ವಾತಾವರಣಕ್ಕೆ ಹಾನಿ ಇಲ್ಲ ಎಂಬ ಪರಿಹಾರ ಸೂಚಿಸಿದರು.

2004ರಲ್ಲಿ ಸಿಎಫ್ಸಿ ಮತ್ತು ಬಿಎಫ್ಸಿ ಉತ್ಪಾದನೆ ಮತ್ತು ಬಳಕೆಗಳನ್ನು ನಿಲ್ಲಿಸಿದ ಮುಂದುವರಿದ ರಾಷ್ಟ್ರಗಳು, ವಿಜ್ಞಾನಿಗಳು ಶಿಫಾರಸು ಮಾಡಿದ ಹೈಡ್ರೋಕ್ಲೋರೋ ಫ್ಲೋರೋಕಾರ್ಬನ್ (ಎಚ್ಸಿಎಫ್ಸಿ) ಬಳಸಲು ಪ್ರಾರಂಭಿಸಿ ದವು. ಆ ವೇಳೆಗೆ ಎಚ್ಸಿಎಫ್ಸಿಗಳೂ ಸುರಕ್ಷಿತವಲ್ಲ ಮತ್ತು ಅವು ಇಂಗಾಲದ ಡೈ ಆಕ್ಸೈಡ್ಗಿಂತ ಸಾವಿರಾರು ಪಟ್ಟು ಹೆಚ್ಚು ಭೂಮಿ ಬಿಸಿ ಮಾಡುವ ಶಾಖವರ್ಧಕಗಳು ಎಂಬುದು ತಿಳಿದುಬಂತು. ಸಂಕಟಕ್ಕೆ ಬಿದ್ದ ಮಾಂಟ್ರಿಯಲ್ ಒಪ್ಪಂದದ ರೂವಾರಿಗಳು, 2016ರಲ್ಲಿ ರುವಾಂಡಾದ ಕಿಗಳಿಯಲ್ಲಿ ಸಭೆ ಸೇರಿ ಮುಂದಿನ 30 ವರ್ಷಗಳಲ್ಲಿ ಎಚ್ಸಿಎಫ್ಸಿಗಳ ಬಳಕೆ ಯನ್ನು ಹಂತ ಹಂತವಾಗಿ ಸಂಪೂರ್ಣ ನಿಷೇಧಿಸಬೇಕು ಎಂದು ನಿರ್ಧರಿಸಿದರು.

ಶೀತಲೀಕರಣ ಉದ್ಯಮಗಳಲ್ಲಿ ಎಚ್ಸಿಎಫ್ಸಿಗಳ ಬಳಕೆ ಅತ್ಯಧಿಕವಾಗಿದ್ದು, ರೈತರ ಬೆಳೆಯನ್ನು ಸಂರಕ್ಷಿಸುವ ಕೋಲ್ಡ್ ಸ್ಟೋರೇಜ್ ಮತ್ತು ಗ್ರಾಹಕರು ಬಳಸುವ ಎಸಿ, ರೆಫ್ರಿಜಿರೇಟರ್ಗಳಿಗೆ ಅದು ಬೇಕೇ ಬೇಕು. ಎಚ್ಸಿಎಫ್ಸಿ ಸಂಪೂರ್ಣ ನಿಷೇಧಕ್ಕೆ ಇನ್ನೂ 30 ವರ್ಷ ಹಿಡಿಯಬಹುದು ಎಂಬ ಅಂದಾಜಿದೆ. ಎಚ್ಸಿಎಫ್ಸಿಗಳ ಬದಲಿಗೆ ಅತ್ಯುತ್ತಮ ಶೀತಕಾರಕಗಳು ಮತ್ತು ಕಡಿಮೆ ಶಾಖವರ್ಧಕ ಗಳಾದ ಬ್ಯೂಟೇನ್ ಮತ್ತು ಪ್ರೋಪೆನ್ಗಳನ್ನು ಬಳಸುವ ಅವಕಾಶವಿದೆ. ಆದರೆ, ಇವುಗಳನ್ನು ಬಳಸಲು ಪರವಾನಗಿ ಇಲ್ಲ. ಅಲ್ಲದೆ, ಇವು ತೀವ್ರವಾಗಿ ದಹಿಸುವ ಗುಣ ಹೊಂದಿರು ವುದರಿಂದ ಬಳಸುವಾಗ ಭಾರೀ ಎಚ್ಚರಿಕೆ ವಹಿಸಬೇಕಾಗು ತ್ತದೆ. ಮನೆಯ ರೆಫ್ರಿಜಿರೇಟರ್ಗಳಲ್ಲಿ ವಾತಾವರಣವನ್ನು ಅಷ್ಟಾಗಿ ಹಾಳು ಮಾಡದ ಐಸೋಬ್ಯೂಟೇನ್ ರಾಸಾಯನಿಕ ಬಳಕೆಯಾಗುತ್ತಿದೆ.

ಸ್ಥಳೀಯ ಉತ್ಪನ್ನಗಳ ಬಳಕೆ, ಸಾರ್ವಜನಿಕ ಸಾರಿಗೆಯ ಉಪಯೋಗ ಮತ್ತು ಏರ್ ಕಂಡೀಷನರ್ಗಳ ಬಳಕೆ ಕಡಿಮೆ ಮಾಡುವುದರಿಂದ, ಓಝೋನ್ ಪದರದ ಮೇಲಿನ ಒತ್ತಡವನ್ನು ಕಡಿಮೆ ಮಾಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.