ಅದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನೌಕರರ ಸಂಘಟನೆ ಏರ್ಪಡಿಸಿದ್ದ ಒತ್ತಡ ನಿರ್ವಹಣಾ ಕಾರ್ಯಾಗಾರ. ‘ಸರ್, ನಮ್ಮ ಇಲಾಖೆಯಲ್ಲಿ ಕೆಲಸದ ಒತ್ತಡ ತುಂಬಾ ಜಾಸ್ತಿ. ನಿರಂತರ ಒತ್ತಡದಿಂದ ನೌಕರರ ಆರೋಗ್ಯ ಹಾಳಾಗುತ್ತಿದೆ. ಅದಕ್ಕೇ ಹೀಗೊಂದು ಕಾರ್ಯಕ್ರಮವನ್ನು ನಡೆಸುತ್ತಿದ್ದೇವೆ.
ನಮ್ಮ ಇಲಾಖೆಯ ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸುತ್ತಾರೆ’ ಎಂದು ಸಂಘಟನೆಯ ಅಧ್ಯಕ್ಷರು ತಿಳಿಸಿದಾಗ, ಆ ತಾಲ್ಲೂಕು ಸಂಘದ ಕಾರ್ಯದ ಬಗ್ಗೆ ಅಭಿಮಾನ ಮೂಡಿತ್ತು!

ಹೌದು, ಅತಿಯಾದ ಕೆಲಸದ ಹೊರೆಯಿಂದ ಬಳಲುವ ಸರ್ಕಾರಿ ಇಲಾಖೆಗಳಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯೂ ಒಂದು. ಗ್ರಾಮ ಪಂಚಾಯಿತಿ ವ್ಯವಸ್ಥೆ ಎಂಬುದು ಆ ಗ್ರಾಮದ ಸ್ಥಳೀಯ ಸರ್ಕಾರ, ಅಲ್ಲಿನ ಎಲ್ಲಾ ಆಗುಹೋಗುಗಳ ಜವಾಬ್ದಾರಿ ಹೊತ್ತಿರುವಂಥದ್ದು. ಸಾರ್ವಜನಿಕರೊಂದಿಗೆ ನೇರ ಸಂಪರ್ಕ ಹೊಂದಿರುವ ಕಾರಣದಿಂದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಅವರ ಸಿಬ್ಬಂದಿಗೆ ಕೆಲಸದ ಒತ್ತಡ ಹೆಚ್ಚು. ಇಂತಹ ಕಾರ್ಯಾಗಾರದಲ್ಲಿ ಭಾಗವಹಿಸಿದಾಗ ಮನಸ್ಸು ಹಗುರವಾಗುತ್ತದೆ, ಒತ್ತಡಗಳನ್ನು ಸಮರ್ಪಕವಾಗಿ ನಿಭಾಯಿಸುವ ಕೌಶಲಗಳನ್ನು ಕಲಿತುಕೊಳ್ಳುವು ದರಿಂದ ಕಾರ್ಯದಕ್ಷತೆ, ಗುಣಮಟ್ಟದ ಜೊತೆಗೆ ಉತ್ಪಾದಕತೆಯೂ ಹೆಚ್ಚುತ್ತದೆ.

ಅತಿಯಾದ ಒತ್ತಡಕ್ಕೆ ಕಾರಣಗಳು, ಅಂತಹ ಒತ್ತಡವನ್ನು ನಿರ್ವಹಿಸುವ ವಿಧಾನಗಳ ಕುರಿತು ಮನದಟ್ಟು ಮಾಡಿಸುತ್ತಿದ್ದೆ. ಶಿಬಿರದಲ್ಲಿ ಭಾಗವಹಿಸಿ ದ್ದವರು ತಮ್ಮ ತಮ್ಮ ಸಮಸ್ಯೆಗಳನ್ನು ಬಿಚ್ಚಿಡುತ್ತಾ ಉತ್ತಮವಾಗಿ ಸ್ಪಂದಿಸುತ್ತಿದ್ದ ಹೊತ್ತಿನಲ್ಲೇ ಮೇಲಧಿಕಾರಿಗಳು ಬಂದು ‘ಈ ಕಾರ್ಯಕ್ರಮ ಮುಗಿದ ಮೇಲೆ ಪ್ರಗತಿ ಪರಿಶೀಲನಾ ಸಭೆ ಇದೆ. ಎಲ್ಲರೂ ಕಡ್ಡಾಯವಾಗಿ ಭಾಗವಹಿಸಬೇಕು’ ಎಂದಾಗ
ಸಭೆಯಲ್ಲಿದ್ದವರ ಮುಖ ಕಪ್ಪಿಟ್ಟಿತು. ತರಬೇತಿಯ ಮುಂದಿನ ಹಂತದಲ್ಲಿ ಅವರಿಂದ ನಿರೀಕ್ಷಿಸಿದ್ದ ಸ್ಪಂದನ ಸಿಗಲೇ ಇಲ್ಲ. ಮೀಟಿಂಗ್ ವಿಚಾರ ತಂದಿತ್ತ ಒತ್ತಡವು ತೆರೆದ ಮನಗಳನ್ನು ಮತ್ತೆ ಮುದುಡಿಸಿತ್ತು.

‘ಸ್ಟ್ರೆಸ್’ ಎಂದು ಎಲ್ಲರೂ ಗೊಣಗುವ ಈ ಒತ್ತಡ ಒಂದು ಸಾರ್ವತ್ರಿಕ ಸಮಸ್ಯೆಯಾಗಿದೆ. ಹಾಗಂತ ಒತ್ತಡ ಗಳೆಲ್ಲಾ ಅಪಾಯಕಾರಿಯಲ್ಲ. ಹಿತಮಿತವಾದ ಒತ್ತಡ ಕಾರ್ಯಕ್ಷಮತೆ ಸುಧಾರಿಸಿಕೊಳ್ಳಲು, ಕೆಲಸಗಳನ್ನು ಸಕಾಲಿಕವಾಗಿ ಮಾಡಿ ಮುಗಿಸಲು ಸಹಕಾರಿ. ಇದು ಪ್ರೇರಕವೂ ಹೌದು. ಅದೇ ದೀರ್ಘಕಾಲದ ಅತಿ ಒತ್ತಡ ಅನಾರೋಗ್ಯಕಾರಿ. ಇದರ ಒಟ್ಟಾರೆ ಪರಿಣಾಮವು ವೈಯಕ್ತಿಕವಾಗಷ್ಟೇ ಅಲ್ಲ, ಕೌಟುಂಬಿಕವಾಗಿಯೂ ಸಾಮಾಜಿಕವಾಗಿಯೂ ಹಲವು ಸಮಸ್ಯೆಗಳನ್ನು ತಂದೊಡ್ಡುತ್ತದೆ. ವ್ಯಕ್ತಿಗೆ ತನ್ನ ನಿಭಾಯಿಸುವ ಸಾಮರ್ಥ್ಯ ವನ್ನು ಮೀರಿದ ಬೇಡಿಕೆಗಳನ್ನು ಎದುರಿಸುವಾಗ ಒತ್ತಡದ ಸ್ಥಿತಿ ನಿರ್ಮಾಣವಾಗುವುದು ಹೌದಾದರೂ ಹಲವು ಕಾರಣಗಳಿಂದ ಇಂತಹ ಸಾಮರ್ಥ್ಯ ಕುಸಿಯುತ್ತಿರುವುದು ಆತಂಕಕಾರಿ ವಿದ್ಯಮಾನವೇ ಸರಿ.

ನಿರಂತರ ಒತ್ತಡ ವ್ಯಕ್ತಿಯ ಮನಸ್ಸು, ದೇಹ ಮತ್ತು ನಡವಳಿಕೆಯ ಮೇಲೆ ಪರಿಣಾಮ ಬೀರುತ್ತದೆ. ಏಕಾಗ್ರತೆಯ ತೊಂದರೆ, ಮರೆವು, ನಿರ್ಧಾರ ತೆಗೆದು ಕೊಳ್ಳುವಲ್ಲಿ ಹಿನ್ನಡೆಯ ಜೊತೆಗೆ ಗಂಭೀರ ಶಾರೀರಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ತೀವ್ರ ಒತ್ತಡ ಅನುಭವಿಸುವವರು ಸಾಮಾಜಿಕ ಸಂಪರ್ಕ, ಚಟುವಟಿಕೆ ಗಳಿಂದ ದೂರವಿರುವುದು, ಒತ್ತಡದ ಉಪಶಮನ ಕ್ಕಾಗಿ ಧೂಮಪಾನ, ಮದ್ಯಪಾನ, ಮಾದಕದ್ರವ್ಯಗಳ ಮೊರೆ ಹೋಗಿ ಮುಂದೆ ವ್ಯಸನಿಗಳಾಗಬಹುದು.

ಬಹುತೇಕ ಸಂದರ್ಭಗಳಲ್ಲಿ ಸಮಯದ ಸರಿಯಾದ ನಿರ್ವಹಣೆಯಲ್ಲಿ ವಿಫಲರಾಗುವುದೇ ಒತ್ತಡ ಹೆಚ್ಚಲು ಪ್ರಮುಖ ಕಾರಣ. ಮುಖ್ಯವೂ ಅಲ್ಲದ ತುರ್ತೂ ಅಲ್ಲದ ಚಟುವಟಿಕೆಗಳಿಂದ ದೂರವಿದ್ದಾಗ ಸಮಯದ ಉಳಿತಾಯವಾಗಿ, ಅಗತ್ಯ ಕೆಲಸಗಳನ್ನು ಮಾಡಿಕೊಳ್ಳಲು ವೇಳೆ ದೊರೆಯುತ್ತದೆ. ದೂರವಾಣಿಯಲ್ಲಿ ಸಮಯದ ಪರಿವೆಯೇ ಇಲ್ಲದೆ ಹರಟುವುದು, ಸಾಮಾಜಿಕ ಜಾಲತಾಣಗಳಲ್ಲಿ ತಾಸುಗಟ್ಟಲೆ ಜಾಲಾಡುವಂತಹ ಚಟುವಟಿಕೆಗಳು ಎಲ್ಲರ ಸಮಯವನ್ನೂ ನುಂಗುತ್ತಿರುವುದು ಸದ್ಯದ ವಾಸ್ತವ. ಸಮಯ ನಿರ್ವಹಣೆಯ ಕೌಶಲ ಕರಗತವಾದಾಗ ಒತ್ತಡಗಳನ್ನು ಸರಾಗವಾಗಿ ನಿಭಾಯಿಸಬಹುದು. ಇದರಿಂದ ಮಾಡುವ ಕೆಲಸದ ಗುಣಮಟ್ಟದ ಜೊತೆಗೆ ಉತ್ಪಾದಕತೆಯೂ ಹೆಚ್ಚುತ್ತದೆ, ಸರಿಯಾದ
ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಕೌಟುಂಬಿಕ ಬದುಕು ಮತ್ತು ವೃತ್ತಿ ಬದುಕಿನ ನಡುವೆ ಸಮತೋಲನ ಸಾಧಿಸಲು ಸಾಧ್ಯವಾಗುತ್ತದೆ.

ಸರಿಯಾದ ಯೋಜನೆ, ಕೆಲಸಗಳನ್ನು ಆದ್ಯತೆಗೆ ಅನುಸಾರವಾಗಿ ವಿಂಗಡಿಸಿಕೊಂಡು ಗಡುವಿನೊಳಗೆ ಪೂರ್ಣಗೊಳಿಸುವುದು, ಒತ್ತಡ ಉಂಟು ಮಾಡಬಲ್ಲ ದೊಡ್ಡ ಕೆಲಸಗಳನ್ನು ನಿರ್ವಹಿಸಬಹುದಾದ ಸಣ್ಣ ಸಣ್ಣ ಹಂತಗಳನ್ನಾಗಿ ವಿಂಗಡಿಸಿಕೊಂಡು ಕಾರ್ಯ ಮುಗಿಸುವುದು, ವ್ಯಾಯಾಮ, ನಡಿಗೆಯಂತಹ ದೈಹಿಕ ಚಟುವಟಿಕೆಗಳು, ಉತ್ತಮ ಹವ್ಯಾಸಗಳನ್ನು ಬೆಳೆಸಿ ಕೊಳ್ಳುವುದು, ಅಗತ್ಯದಷ್ಟು ನಿದ್ರೆ, ಸಕ್ಕರೆ, ಕೊಬ್ಬು, ಸಂಸ್ಕರಿತ ಆಹಾರದ ಮಿತ ಬಳಕೆ, ಉತ್ತಮ ಸಾಮಾಜಿಕ ಸಂಪರ್ಕಗಳು ಒತ್ತಡವನ್ನು ಮೆಟ್ಟಿ ನಿಲ್ಲಲು ಸಹಕಾರಿ.

ಮೊದಲೇ ಸರ್ಕಾರಿ ಇಲಾಖೆಗಳು ಸಿಬ್ಬಂದಿ ಕೊರತೆಯಿಂದ ಬಳಲುತ್ತಿವೆ. ಹಾಗಾಗಿ, ಹೆಚ್ಚಿನ ಕೆಲಸದ ಹೊರೆಯನ್ನು ಹೊರುವುದು ಅನಿವಾರ್ಯ. ಇದರಿಂದ ಒತ್ತಡ ಮತ್ತಷ್ಟು ಹೆಚ್ಚುತ್ತಿದೆ. ಅತಿ ಒತ್ತಡವೆಂಬುದು ಗಂಭೀರ ಆರೋಗ್ಯ ಸಮಸ್ಯೆಗಳು, ಹಠಾತ್ ಸಾವುಗಳಿಗೆ ಮುಖ್ಯ ಕಾರಣವಾಗುತ್ತಿರುವ ಈ ಹೊತ್ತಿನಲ್ಲಿ, ಒತ್ತಡ ನಿರ್ವಹಣೆಯಂತಹ ಸ್ವಾಸ್ಥ್ಯ ಸಂಬಂಧಿ ಕಾರ್ಯಕ್ರಮಗಳು ಸರ್ಕಾರಿ ಇಲಾಖೆಗಳು, ಖಾಸಗಿ ವೃತ್ತಿ ಸ್ಥಳಗಳಲ್ಲಿ ನಿಯಮಿತವಾಗಿ ನಡೆಯಬೇಕಿದೆ. ಸಮಗ್ರ ಸ್ವಾಸ್ಥ್ಯ ಮತ್ತು ಉತ್ಪಾದಕತೆ ದೃಷ್ಟಿಯಿಂದ ಇಂತಹ ನಡೆ ಸಾರ್ವತ್ರಿಕವಾಗಬೇಕಾದ ಅಗತ್ಯ ಖಂಡಿತಾ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.