ನಮ್ಮೆಲ್ಲರ ಮನಸ್ಸನ್ನು ಸ್ವಾರ್ಥಿಯೆಂದೇ ಹೇಳಬೇಕು. ನಮ್ಮ ಮನಸ್ಸು ನಮಗರಿವಿಲ್ಲದಂತೆಯೇ ಅದಕ್ಕೇನು ಬೇಕೆಂದು ಮೊದಲೇ ನಿರ್ಧರಿಸಿರುತ್ತದೆ. ಪ್ರತಿಯೊಂದಕ್ಕೂ ಕಾರಣ ಬೇಕು, ಇಲ್ಲವಾದರೆ ಅದಕ್ಕೆ ತನ್ನ ಕಾರ್ಯ ತನಗೇ ಒಪ್ಪಿಗೆಯಾಗುವುದಿಲ್ಲ. ಆದ್ದರಿಂದ ತನ್ನ ಮನಸ್ಸಿಗೆ (ಅಹಂಗೆ) ಒಪ್ಪಿಗೆಯಾಗುವಂತಹ ಕಾರಣಗಳನ್ನು ಹುಡುಕಿ ತಾನು ಮಾಡಬೇಕಾಗಿರುವ ಕಾರ್ಯಗಳನ್ನು ಸಮರ್ಥಿಸಿಕೊಳ್ಳುತ್ತದೆ. ಹೆಚ್ಚು ಬುದ್ಧಿಯುಳ್ಳ ಮನಸ್ಸು ನಮಗೆ ಅರಿವಿಲ್ಲದಂತೆಯೇ ನಮಗೆ ಒಪ್ಪಿಗೆಯಾಗುವಂತಹ ಕಾರಣಗಳನ್ನು ಕೊಟ್ಟು ನಮ್ಮ ಮನಸ್ಸಿನಲ್ಲುಂಟಾಗಬಹುದಾದ ತುಮುಲವನ್ನು ತಪ್ಪಿಸುತ್ತದೆ.

ಹೀಗೆ ಹೇಳಿದರೆ ಅರ್ಥವಾಗಬಹುದು ನಾನು ನಿಮ್ಮನ್ನು ನೋಡಿ ‘ನೀವು ಹೀಗಿದ್ದೀರಿ‘ ಎಂದು ಹೇಳುತ್ತೇನೆ ಅಥವಾ ಅಂದುಕೊಳ್ಳುತ್ತೇನೆ ಎಂದು ಇಟ್ಟುಕೊಳ್ಳಿ. ಅಂದ ಮಾತ್ರಕ್ಕೆ ನೀವು ಹಾಗೇ ಇದ್ದೀರೆಂದಲ್ಲ. ನಾನು ಭಾವಿಸಿದ ನೀವು ನಾ ಕಂಡ ನೀವಾಗಿರುತ್ತೀರೇ ಹೊರತು ನಿಜವಾದ ನಿಮ್ಮನ್ನಲ್ಲ. ಬೇರೆಯವರು ನಿಮ್ಮ ಬಗ್ಗೆ ಬೇರೆಯದನ್ನೇ ಹೇಳಬಹುದು. ನಾನು ಕಂಡ ‘ನೀವು’ ಬೇರೆ ಮತ್ತು ಇನ್ನೊಬ್ಬರು ಕಂಡ ‘ನೀವು’ ಸಂಪೂರ್ಣ ಭಿನ್ನವಾಗಿರಬಹುದು. ನಮ್ಮ ಗ್ರಹಣಶಕ್ತಿಯ ಮೇಲೆ ನಮ್ಮ ಮನಸ್ಸು ಪ್ರಭಾವ ಬೀರಿ, ಏನೇನೋ ಬಣ್ಣದ ಮೆರುಗನ್ನು ಕೊಟ್ಟು ತನ್ನದೇ ಆದ ರೀತಿಯಲ್ಲಿ ನೋಡುವಂತೆ ಮಾಡುತ್ತದೆ. ನಮ್ಮ ಮನಸ್ಸು ಎಷ್ಟು ಪ್ರಭಾವವುಳ್ಳದ್ದಾಗಿದೆಯೆಂದರೆ ತನಗೆ ಬೇಕಾದ್ದನ್ನು ಮಾತ್ರ ನೋಡುವಂತೆ, ಹೇಳುವಂತೆ ಮಾಡಿ ಇತರ ಎಲ್ಲದನ್ನು ಕೇಳದಂತೆ, ನೋಡದಂತೆ ತಡೆಯುತ್ತದೆ. ಅದರೊಳಗೆ ತನಗೆ ಬೇಕಾದ ವ್ಯಕ್ತಿಗಳ ಮುಖ ಮಾತ್ರ ಸಂಗ್ರಹವಾಗಿರುತ್ತದೆ. ತನಗೆ ಆಪ್ತವಾಗುವ ಸಂಗತಿ ಮಾತ್ರ ಅಚ್ಚೊತ್ತಿರುತ್ತದೆ.

ಘಟನೆಗಳ ವಿಚಾರವೂ ಹೀಗೆಯೇ, ಅದು ನೋವಿರಲೀ, ನಲಿವಿರಲಿ. ಎಲ್ಲ ಘಟನೆಗಳೂ ನಮಗೆ ನೆನಪಿನಲ್ಲುಳಿಯುವುದಿಲ್ಲ. ಎಷ್ಟೇ ಮಾಡಿದರೂ ಅದನ್ನು ಮರೆಯಲು ಯತ್ನಿಸುವುದೇ ಇಲ್ಲ. ಬೇರೆ ಘಟನೆಗಳು ಮರೆಯುತ್ತವೆ ಅಂದಾದರೆ ಇದನ್ನು ಉದ್ದೇಶ ಪೂರ್ವಕ ನೆನಪಿನಲ್ಲಿ ಇಟ್ಟುಕೊಳ್ಳುತ್ತಿದ್ದೇವೆ ಅಂತಾಯಿತಲ್ಲ.

ಇದು ಇಷ್ಟಕ್ಕೆ ಮುಗಿಯುವುದಿಲ್ಲ. ನಮ್ಮ ವರ್ತನೆ, ಸ್ವಭಾವ, ಸಾಧನೆ, ಸಾತತ್ಯ ಹೀಗೆ ಎಲ್ಲವನ್ನೂ ನಿರ್ಧರಿಸುವುದು ಮನಸ್ಸೇ. ನಾವು ಹೇಗಿರಬೇಕೆಂದು ನಿರ್ಧರಿಸುವುದೂ ಅದೇ. ಅದೊಂದು ರೀತಿಯ ಹಠಮಾರಿ. ಎಲ್ಲವೂ ತಾನು ಹೇಳಿದಂತೆಯೇ ಆಗಬೇಕು. ತಾನಿರುವ ದೇಹ, ತನ್ನ ಜೀವ ಯಾವತ್ತಿಗೂ ತನ್ನ ಮಾತನ್ನು ಮೀರಬಾರದು; ತಾನು ಹೇಳಿದಂತೆಯೇ ಕೇಳಬೇಕು ಎಂದು ಬಯಸುತ್ತದೆ. ಒಮ್ಮೆ ಕೇಳಲಿಲ್ಲ ಎಂದರೆ ಮುನಿಸಿಕೊಳ್ಳುತ್ತದೆ.

ಇಂಥ ಮನಸ್ಸಿನ ಮುನಿಸೇ ನಮ್ಮನ್ನು ದಾರಿ ತಪ್ಪಿಸುವುದು. ಮನಸ್ಸಿನ ಮಾತನ್ನು ಕೇಳಿ, ತಪ್ಪಿಲ್ಲ. ಆದರೆ ಅದು ಹೇಳುವುದರಲ್ಲಿ ನಮಗೆ ಯಾವುದು ಬೇಕು, ಯಾವುದು ಬೇಡವೆಂಬುದನ್ನು ನಿರ್ಧರಿಸುವವರು ನಾವಾಗೋಣ. ಹಾಗೆ ಮನಸ್ಸನ್ನು ನಿಯಂತ್ರಿಸಿ, ಹೇಳಿದಂತೆ ಕೇಳಿಸುವವನು ಮಾತ್ರ ಜೀವನದಲ್ಲಿ ಯಶಸ್ವಿಯಾಗುತ್ತಾನೆ, ನೆನಪಿರಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.