25 ವರ್ಷಗಳ ಹಿಂದೆ: ಭಾನುವಾರ, 25–2–1996

ಚುನಾವಣೆ ವೆಚ್ಚ ಸರ್ಕಾರ ಭರಿಸಲು ಪ್ರತಿಪಕ್ಷ ಆಗ್ರಹ
ನವದೆಹಲಿ, ಫೆ. 24 (ಪಿಟಿಐ)– ಚುನಾವಣಾ ಸುಧಾರಣೆ ಕುರಿತು ದಿನೇಶ್ ಗೋಸ್ವಾಮಿ ಸಮಿತಿ ನೀಡಿರುವ ವರದಿಯನ್ನು ಸಮರ್ಪಕವಾಗಿ ಜಾರಿ ಮಾಡುವ ಬದಲು ಬಿಡಿಬಿಡಿಯಾಗಿ ಕಾರ್ಯಾಚರಣೆಗೆ ತರುತ್ತಿರುವ ಸರ್ಕಾರದ ನಿಲುವನ್ನು ಪ್ರತಿಪಕ್ಷಗಳು ಖಂಡಿಸಿವೆ. ಚುನಾವಣೆ ವೆಚ್ಚವನ್ನು ಸರ್ಕಾರವೇ ಭರಿಸಬೇಕು ಹಾಗೂ ಲೋಕಪಾಲ ಮಸೂದೆಯನ್ನು ಶೀಘ್ರ ಜಾರಿಗೊಳಿಸಬೇಕು ಎಂದು ಒತ್ತಾಯಪಡಿಸಿವೆ.
ಚುನಾವಣೆ ವ್ಯವಸ್ಥೆಗಳಲ್ಲಿನ ಲೋಪ ಗಳನ್ನು ನಿವಾರಿಸಲು ಚುನಾವಣೆ ವೆಚ್ಚ ಮಿತಿಯನ್ನು ಹೆಚ್ಚಿಸಲು ಸರ್ಕಾರ ಹಿಂದೇಟು ಹಾಕುತ್ತಿರುವುದಕ್ಕೆ ಪ್ರತಿಪಕ್ಷಗಳು ಅತೃಪ್ತಿ ಸೂಚಿಸಿವೆ.
ಸರ್ಕಾರಿ ನೌಕರರ ಸಂಘ ತನಿಖೆಗೆ ಆಗ್ರಹ
ಬೆಂಗಳೂರು, ಫೆ. 24– ರಾಜ್ಯದಲ್ಲಿನ ಸರಿ ಸುಮಾರು ಐದು ಲಕ್ಷದಷ್ಟಿರುವ ಸರ್ಕಾರಿ ನೌಕರರಲ್ಲಿ ಅನುಮಾನಕ್ಕೆ ಕಾರಣವಾಗಿರುವ ತನಿಖಾ ವರದಿಯನ್ನು ಬದಿಗೊತ್ತಿ, ರಾಜ್ಯ ಸರ್ಕಾರಿ ನೌಕರರ ಸಂಘದಲ್ಲಿ ನಡೆದಿದೆ ಎನ್ನಲಾದ ಹಣ ಮತ್ತು ಅಧಿಕಾರ ದುರುಪಯೋಗದ ತನಿಖೆ ಯನ್ನು ದಕ್ಷ–ನ್ಯಾಯ ನಿಷ್ಠುರ ಅಧಿಕಾರಿ ಯೊಬ್ಬರಿಂದ ನಡೆಸಬೇಕು ಎಂದು ಸಂಘದ ಅಧ್ಯಕ್ಷ ಕೆ.ಸಿಪ್ಪೇಗೌಡ ಇಂದು ಇಲ್ಲಿ ಒತ್ತಾಯಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.