ಶನಿವಾರ, ಮೇ 8, 2021
24 °C

25 ವರ್ಷಗಳ ಹಿಂದೆ: ಸೋಮವಾರ 15.4.1996

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಯುಪಡೆ ಹೆಲಿಕಾಪ್ಟರ್‌ನಲ್ಲಿ ನಂದ್ಯಾಲ್‌ಗೆ ಹಣ: ಆರೋಪ

ನವದೆಹಲಿ, ಏ. 14 (ಪಿಟಿಐ)– ‘ಪ್ರಧಾನಿ ಪಿ.ವಿ.ನರಸಿಂಹ ರಾವ್ ಅವರ ಕ್ಷೇತ್ರವಾದ ನಂದ್ಯಾಲ್‌ಗೆ ರಕ್ಷಣಾ ಇಲಾಖೆಯ ಹೆಲಿಕಾಪ್ಟರ್‌ನಲ್ಲಿ 25 ಪೆಟ್ಟಿಗೆಗಳಲ್ಲಿ ಅಪಾರ ಪ್ರಮಾಣದ ಹಣವನ್ನು ಒಯ್ಯಲಾಗಿದೆ’ ಎಂಬ ಆರೋಪದ ಬಗ್ಗೆ ವರದಿ ನೀಡಲು ಚುನಾವಣಾ ಆಯೋಗವು ಇಂದು ಆಂಧ್ರ ಪ್ರದೇಶದ ಮುಖ್ಯ ಚುನಾವಣಾ ಅಧಿಕಾರಿಗೆ ಆದೇಶ ನೀಡಿದೆ.

ದಳಕ್ಕೆ ಅಂಬರೀಷ್; ಭವ್ಯ ಸ್ವಾಗತ

ಬೆಂಗಳೂರು, ಏ. 14– ಸುಮಾರು ಒಂದೂವರೆ ಗಂಟೆಗಳ ಅವಧಿಯಲ್ಲಿ ಕಿವಿ ಗಡಚಿಕ್ಕುವ ಪಟಾಕಿ ಸದ್ದಿನ ಮಧ್ಯೆ ರಾಶಿ–ರಾಶಿ ಗುಲಾಬಿ ಮಾಲೆಗಳ ನಡುವೆ ಚಿತ್ರನಟ ಅಂಬರೀಷ್ ಜನತಾದಳದಲ್ಲಿ ವಿಧ್ಯುಕ್ತವಾಗಿ ಸದಸ್ಯತ್ವ ಪಡೆದು ತಮ್ಮ ಹೊಸ ರಾಜಕೀಯ ಅಧ್ಯಾಯವನ್ನು ಇಂದಿಲ್ಲಿ ಪ್ರಾರಂಭಿಸಿದರು.

ಚಿತ್ರರಂಗದವರ ಪೈಕಿ ತಮ್ಮದು ದಳದಲ್ಲಿ ‘ಒಂಟಿ ದನಿ’ ಅಲ್ಲ ಎನ್ನುವುದನ್ನು ತೋರುವ ಉತ್ಸಾಹದಲ್ಲಿದ್ದ ಅವರೊಂದಿಗೆ ಚಿತ್ರನಟಿ ಜಯಮಾಲ ಮತ್ತು ಟಿ.ವಿ ಧಾರಾವಾಹಿಗಳಲ್ಲಿ ಹೆಸರು ಮಾಡಿರುವ ನಟ ರವಿಕಿರಣ್ ಜತೆಗೂಡಿದ್ದರು. ಅವರೂ ಪಕ್ಷದ ಸದಸ್ಯತ್ವವನ್ನು ಪಡೆದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು